ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನೋಡುವ ಇಂದಿರಾಪತಿ ಶ್ರೀಪಾದವ ಎಂದೆಂದು ಬಿಡದೆ ಮನದಲಿ ತಂದೆ ಮುಕುಂದನ ಹೊಂದಿ ಭಜಿಸುವ ಧ್ರುವ ಭಾವಭಕುತಿಗಳ ವಿಡಿವ ಭವಬಂಧನದ ಪಾಶ ಕಡಿವ ದಿವಾರಾತ್ರಿಯಲಿ ಹರುಷಬಡುವ ಕಾವಕರುಣನ ಕೃಪೆಯ ಪಡೆವ 1 ಮನಕರಗಿ ಮೈಯ್ಯಮರೆವ ಘನಸುಖದ ಸುಸ್ಮರಣಿಯಲಿರುವ ಆನಂದಮಯಸ್ವರೂಪದಿ ಬೆರೆಯುವ ತನುಮನವು ಶ್ರೀಹರಿ ಗೊಪ್ಪಿಸುವ 2 ಎರಗಿ ಏಕವಾಗಿ ನೊಡುವ ಹರಿಚರಣದಿ ಬೆರೆದು ಕೊಡುವ ಪರಮಗತಿ ಸಾಯೋಜ್ಯಪಡುವ ಧರೆಯೊಳು ನಲಿ ನಲಿದಾಡುವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇವನ ಕಂಡಿರ್ಯಾ ಕಾವಕರುಣನ ಭಾವ ಭಾವಿಸುವ ಪರಿಯಾಗುವ ದೇವನ ಧ್ರುವ ಸಗುಣಲೀಹ್ಯನಾ ಭಕುತಿಗೊಲಿವನಾ ಸುಗಮದಿಂದ ನಿಗಮನುಳುಹಿ ನಗವ ನೆಗೆದನಾ 1 ಸಿರಿಯ ಲೋಲನಾ ವರಕೃಪಾಲನಾ ಧರಿಯನುಳುಹಿ ತರಳಗೊಲಿದು ಪ್ರಿಯವಾದನಾ2 ವರವ ಬಲಿಗೆ ಇತ್ತು ದೋರಿದ ಭಾರ್ಗವರೂಪನಾ 3 ಪರಮ ಆತ್ಮನಾ ಹರಿಸರ್ವೋತ್ತಮನಾ ಸುರರ ನೆರೆಯ ಬಿಡಿಸಿ ಹೊರಟ ಪಾಂಡವಪ್ರಿಯನಾ 4 ಹೊಳೆವ ತೇಜನಾ ಮೂಲೋಕ ಪಾವನಾ ಹಳಿದು ವ್ರತವ ನೋಡಿ ಹಯವನೇರಿ ಸುಳಿದನಾ 5 ಘನ ಮಹಿಮನಾ ದಯಾ ನಿಸ್ಸೀಮನಾ ದೀನ ಮಹಿಪತಿಸ್ವಾಮಿ ಭಾನುಕೋಟೆ ದೀಪ್ತನಾ 6
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಈತ ಶ್ರೀಗುರು ಪರಬ್ರಹ್ಮನೆನ್ನಿ ಅತೀತವಾದ ಗುಣತ್ರಯ ಪರಮಾತ್ಮನೆನ್ನಿ ಧ್ರುವ ನಿರ್ಗುಣಾಂದನೆನ್ನಿ ನಿಗಮಗೋಚರನೆನ್ನಿ ಅಗಣಿತಗುಣ ಪರಿಪೂರ್ಣನೆನ್ನಿ 1 ಯೋಗಾನಂದಾತ್ಮನೆನ್ನಿ ಯೋಗಿವಂದಿತನೆನ್ನಿ ಯೋಗಿಹೃದಯವಾಸ ಯೋಗನಿಧಾನನೆನ್ನಿ 2 ಸಾಧುಸಹಕಾರನೆನ್ನಿ ಸದಾನಂದಾತ್ಮನೆನ್ನಿ ಸದ್ಬ್ರಹ್ಮಾನಂದ ಸದೋದಿತನೆನ್ನಿ 3 ಙÁ್ಞನಸಾಗರನೆನ್ನಿ ಙÁ್ಞನಾನಂದಾತ್ಮನೆನ್ನಿ ಙÁ್ಞನಿಗಳೊಂದಿಹ ಸುಙÁ್ಞನಸ್ವರೂಪನೆನ್ನಿ 4 ಪರಮಪುರಷನೆನ್ನಿ ಪರಮಪ್ರಕಾಶನೆನ್ನಿ ಪರಮಾನಂದಸ್ವರೂಪ ಪರಾತ್ಪರ ಪೂರ್ಣನೆನ್ನಿ 5 ಇಹಪರನೀತನೆನ್ನಿ ಗುಹ್ಯಗುಪಿತನೆನ್ನಿ ಬಾಹ್ಯಾಂತ್ರಪರಿಪೂರ್ಣ ತ್ರೈಲೋಕ್ಯನಾಥನೆನ್ನಿ 6 ಕಾವಕರುಣನೆನ್ನಿ ಭವಭಂಜನನೆನ್ನಿ ಜೀವಸಂಜೀವ ಮಹಿಪತಿ ಗುರುಮೂರ್ತಿಯೆನ್ನಿ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕಾಯೊ ಕರುಣಕಾರ ಗೋವಿಂದ ಕಾಯೊ ನಮ್ಮ ಕೃಪಾಸಿಂಧು ಹರಿ ಮುಕುಂದ ಧ್ರುವ ಬೊಮ್ಮನಾ ಪಡೆದ ಪರಾವರ ದೊರಿಯೆ ಸಮ್ಯಜ್ಞಾನವಿತ್ತು ಕಾಯೊ ಮುರಾರಿಯೆ ನಿಮ್ಮ ವಿನಾ ಅನ್ಯಪಥವ ನಾನರಿಯೆ ನಮ್ಮ ದೈವ ನೀನಹುದೊ ನರಹರಿಯೆ 1 ದುರಿತ ಪರಿಹರಿಸೊ ಭಾವ ಭಕ್ತಿಯೊಳೂ ಮನಪೂರ್ಣವಿರಿಸೊ ಕಾವಕರುಣನೆ ನಿಮ್ಮ ದಯ ಬೀರಿಸೊ ದಿವಾರಾತ್ರೆಯಲಿ ನಿಮ್ಮ ಸ್ಮರಣಿಲಿರಿಸೊ 2 ಕಾಯೊ ಕಾಯೊ ಕೊಟ್ಟು ನಿಮ್ಮ ನಿಜಧ್ಯಾನವ ಕಾಯೊ ಕರುಣಿಸಿ ಎನ್ನ ಜೀವನದ ಕಾಯೊ ದಯದಿಂದ ಎನ್ನ ಅಭಿಮಾನ ಕಾಯೊ ನಿಜ ದಾಸ ಮಹಿಪತಿ ಪ್ರಾಣವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು