ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕುತರಿಗಾಗಿ ನೀ ಬಡುವ ಕಷ್ಟಗಳು ಅಕಟ ಪೇಳಲಳವೆ ( ನೋಡಲಳವೆ) ಲಕುಮಿ ಪತಿಯೆ ಯಾತಕೆ ವೃಥಾನಿಕರಕೆ ಸುಖವೀವೆಕಾವೆ ಪ ಮಂದಿಮನ ವಲಿಸಿ ಮದುವೆ ನೀನು ಮ ತ್ತೊಂದು ಮಾಡಿಕೊಳುತ್ಯಾ ಅಂದಣಾದಿ ಐಶ್ವರ್ಯವನ್ನು ಪರರಿಂದ ಕೇಳಿಕೊಳುತ್ಯಾ ನಿಂದೆ ಮಾಡುವರೆಂಬೊ ಭಯದಿ ಅವರ್ಹಿಂದೆ ಹಿಂದೆ ಇರುತ್ಯಾ ಅಂದವಾದ ಆಟಗಳೊಳಗೆ ಇದುವಂದು ಎನುತ್ಯಾದೇವ 1 ಸಡಗರದಲಿ ಕರಪಿಡಿದು ಕಾಯ್ದೆ ನೀ ಹುಡುಗರೀರ್ವರನ್ನು ಮಡುವಿನೊಳಗೆ ಆ ಮಕರಿಯಿಂದ ಕಾಲ್ಹಿಡಿಸಿಕೊಂಡವನ್ನ ಮಡದಿಗಂತು ಗಡಿತಡಿಯದೆ ನೀಡಿದಿ ಉಡುಗೆ ಅಗಣಿತವನ್ನು ಕಡಿಗೆ ನಿನ್ನ ಕರದೊಂದು ದಿನಾದರು ಬಡಿಶ್ಯಾರೆ ಸುಖವನ್ನು ಏನು 2 ಏನು ತಪ್ಪು ನಿನ್ನವರು ಮಾಡಿದರು ಕಾಣಬಾರವು ನಿನಗೆ ವೈರಿ ಪರಪ್ರಾಣಹಾರಿಗಳ ಪೊರೆದು ಕರುಣಿ ಸುರಧೇನು ಬಾರೊ ಬ್ಯಾಗ ಮಾನಸ ಮಂದಿರಕೆ ಈಗ 3
--------------
ಅಸ್ಕಿಹಾಳ ಗೋವಿಂದ
ಹೆಂಡತಿ ನೋಡಣ್ಣ ಈಕಿನ ನ್ನ್ಹೆಂಡತಿ ನೋಡಣ್ಣ ಪ ಮಂಡೆಮುಸುಕು ತೆಗೆದ್ಹಿಂಡುಜನರ ಮುಂದೆ ಬಂಡುಮಾಡಿ ಎನ್ನ ಬೈಲಿಗೆ ತರುವಳು ಅ.ಪ ಕಂಡದ್ದು ಬೇಡುವಳು ತರದಿರೆ ಗಂಡನಲ್ಲೆಂಬುವಳು ತಿಂಡಿಗಾಗಿ ಎನ್ನ ಕಂಡವರ ಕಾಲ್ಹಿಡಿಸಿ ಮಿಂಡೆ ಭಂಡ 1 ಮಾತುಮಾತಿಗಿವಳು ಎನ್ನನು ಕೋತ್ಯಂತೆ ಕುಣಿಸುವಳು ಸೋತೆನೆಂದ್ಹೇಳುತ ಪಾತಕದ್ಹಾಕೆನ್ನ ನೀತಿಗೆಡಿಸುವಳು ಭೀತಿಲ್ಲದ 2 ಒಯ್ಯಾರ ಮಾಡುವಳು ಬೈದರೆ ಬಾಯಿ ತೆರೆದಳುವಳು ಬಾಯಿ ಮುಚ್ಚೆಂದರೆ ಕೈಬಿಟ್ಟೋಡ್ವಳು ದಾಯಾದಿಗಳು ಮುಂದೆ ಹೊಯ್ಮಾಲಿ 3 ತೊಡರು ಬಿಡಳು ಒಡಲಿನ ಕೆಡಕುಗುಣವ ಕಡಿಯಳು ಅಡಿಗಡಿಗೆನ್ನನು ದುಡುಕು ನುಡಿದು ಮನ ಮಿಡುಕಿಸುವಳು ಬಾಯ್ಬಡಕಿ ಬಿಡಿಕಿ 4 ಒದಗಿಸಿ ನಾಂ ತರಲು ಅದರೊಳು ಕದಿದರ್ಧ ತಿನ್ನುವಳು ಪದುಮನಾಭ ನಮ್ಮ ಸದಯ ಶ್ರೀರಾಮನ ಪಾದ ಕೃಪೆಯ ಪಡೆಯದಧಮ 5
--------------
ರಾಮದಾಸರು