ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದ ಗಿರಿ ರಾಯನೆ ಪಿಡಿಕೈಯ್ಯಾ | ನಾ ನಿನ್ನ ಪಾದಕ್ಕಾನಮಿಸುವೆ ಶರಣರ ಪ್ರಿಯ | ಭಕುತರ ಭವಣೆಯನೀ ನೋಡುತಲಿಹುದೊಳಿತೇನಯ್ಯ | ಬಂಧನ ಬಿಡಿಸಯ್ಯ ಪ ಮಾನದ ಮಾನ್ಯ ಭೂದಾನವ ಬೇಡ್ವನೆಕಾಣಿಸೊ ಮನದೊಳು ದೀನನ ಮೊರೆಗೇಅ.ಪ. ಕಲ್ಯಾಣ ಪುರಿಯಿಂದಲಿ ಪೋಗೀ | ಸಜ್ಜನರವೆರಸೇ ಕಲ್ಯಾದಿಗಳೆಲ್ಲ ದೂರಿದೆ ಸಾಗೀ | ಪೋಗುತ್ತಲಿರಲೂ ಬಲ್ಯಾದಿಗಳೊಡೆಯನ ಪುರಕಾಗೀ | ಮೂಡಬಾಗಿಲಲಿರುವಾ ವೇಳ್ಯಾದರು ನರಹರಿತೀರ್ಥವ |ಓಲೈಸುತ ಸರಿ ನಿರ್ಮಾಲ್ಯ ಪಡೆದೆವು 1 ನಿಟಲಾಕ್ಷನ ಬಿಂಬನು ನೆಲೆಸಿರುವಲ್ಲಿ | ಮತ್ತೊಂದು ಬೆಟ್ಟದಿ ಪಟು ಭಟ ತಾ ಯೋಗಾಸನದಲ್ಲಿ | ಕುಳಿತಿಹನಲ್ಲಿ ಚಟುಲ ವಿಕ್ರಮನ ಧ್ಯಾನಿಸುತಲ್ಲಿ | ಹನುಮಂತನಲ್ಲಿ ಘಟಕಾಚಲದೊಳು ಸೇವಿಸಿ ಭಕುತರ |ತಟಕ ಪೊರಟಿತು ವೆಂಕಟಗಿರಿಗೆ 2 ಹದಿನಾಲ್ಕು ಲೋಕಾಧಿಪನರಸಿ | ಪುರದೊಳು ಪೋಗಿಪದುಮ ಸರಸೋದಕ ಪ್ರೋಕ್ಷಿಸಿ | ಅಲ್ಲಿಂದ ಬಂದುಪದುಮಾವತಿ ಪಾದಾಬ್ಜಕೆ ನಮಿಸಿ | ಕುಂಕುಮಾರ್ಚಿಸಿ ||ಪದುಮೆ ಮನೋಹರ ಗೋವಿಂದ ಪುರಿಯಲಿವದಗಿ ವಸಿಸಿ ನಾವ್ ನಿಶಿಯನೆ ಕಳೆದೆವು 3 ಉದಯವಾಗದ ಮುಂದೇಳುತಲಾಗ | ಮಜ್ಜನವ ಗೈದೂಪದಚಾರಿಗಳಾಗುತಲೀ ಬೇಗಾ | ಒಡಗೂಡಿ ಗಿರಿಯಮುದದಿಂದಲೇರುವ ಯೋಗಾ | ಕೈ ಸೇರಲು ಬೇಗಾ ||ಪದತಲದಲಿ ಪಾಪತ್ಮಕ ತನು ಕ-ಳೆದಾತನ ನೆನೆದು ಸೋಪಾನವ ಕ್ರಮಿಸಿದೆ 4 ಗೋವಿಂದ ಗೋವಿಂದನೆಂಬುವ ನಾಮ | ಅಂಬರವು ತುಂಬೆಅವುಗಳ ಕಾವವನ ಗುಣ ನಾಮಾ | ಕೀರ್ತಿಸಿ ಮುದದಿಭಾವದೊಳ್ ಮೈಮರೆದು ಬ್ರಹ್ಮಾ | ಭವಸುರ ಪಾದ್ಯಾರ ||ಅವಾಗಲು ಅವರವಗುಣವೆಣಿಸದೆಕಾವನು ಎನುತಲಿ ಪಾವಟಿಗೇರೋ 5 ಪರಿ ತಿಳಿದೂತುಳಿದೂ ತುಳಿಯಲಿಲ್ಲವು ನೋಡಾ | ಸಲ್ಲುವುದೀದುತಿಳಿ ವಾದಿರಾಜರಿಗೆ ಗೂಢಾ| ನಾ ಬಲು ಮೂಢಾ |ಮಲವನು ಕಳೆಯುತ ಹುಲು ಮನುಜನ ಭವವಳಿದು ಸಲಹೊ ಹೇ ತಿರುಪತಿ ನಿಲಯ 6 ಮೆಟ್ಟಲು ಮೆಟ್ಟಲುಗಳನೇರುತ್ತಾ | ತಾಳಂಗಳನುತಟ್ಟಿ ಹರಿ ಹರಿ ಎಂದೊದರುತ್ತಾ | ಪಾಪಂಗಳ ತಲೆಮೆಟ್ಟಿ ತಂಬೂರಿಯ ಮೀಟುತ್ತಾ | ಕಾಲೊಳು ಗೆಜ್ಜೆಗಳ ||ಕಟ್ಟುತ ಘಲು ಘಲು ಘಲಿರೆನ್ನುತ ಜಗಜಟ್ಟಿ ಹನುಮನ ನೆನೆಯಲೊ ಮನವೆ 7 ಮೃಗ ಪಕ್ಷಿಗಳ ದಿವ್ಯಾ | ರೂಪಂಗಳ ಧರಿಸಿನಿರುತ ಗೈವರು ತವ ಸೇವೆಯು ಭವ್ಯಾ | ಅವುಗಳ ವರ್ಣಿಸಲು || ಉರಗರಾಜ ತನ್ನ ಸಾಸಿರ ನಾಲಿಗೆಸರಿಯಾಗದು ಎನೆ ಶಿರವನೆ ತೂಗುವ 8 ಏರೋ ಪಾವಟಿಗೆಗಳನು ಏರೋ | ಮೊಳಕಾಲು ಮುರಿಯನೇರೋ ಕುಳಿತೊಮ್ಮೆ ತುತಿಸುತ ಸಾರೋ | ಹರಿಯ ಮಹಿಮೆಯಸಾರೋ ಬಾರಿ ಬಾರಿಗೆ ನೀ ಸಾರೋ | ಗಾಳಿ ಗೋಪುರವ ||ಮೀರಿ ಬರಲು ದಿವ್ಯ ಗೋಪುರ ಕಾಣುತ |ಚೀರೊ ಚೀರೊ ಹರಿ ಗೋವಿಂದನೆನ್ನುತ 9 ಸ್ವಾಮಿ ಪುಷ್ಕರಣಿಯಲೀ ಮಿಂದೂ | ಶ್ರೀ ಭೂವರಹಾಸ್ವಾಮೀಯನೆ ಪ್ರಾರ್ಥಿಸಿ ಬಂದೂ | ಪ್ರಾಕಾರದೊಳಗಿಹವಿಮಾನ ಶ್ರೀನಿವಾಸನ ಕಂಡಂದೂ | ನಮಿಸುತ ಬಂದೂ |ಭೂಮಿಜೆವಲ್ಲಭ ವೆಂಕಟನನು ಕಂಡುಕಾಮಿಸೊ ಜ್ಞಾನ ವೈರಾಗ್ಯ ಭಕುತಿಯ 10 ದೇವಾದಿದೇವಾ ಜಗದ್ಭರ್ತಾ | ವೆಂಕಟನೆ ನಾನಾನಾಜನುಮದ ಸುಕೃತಾ | ಪೊಂದುತಲಿ ನಿನ್ನಸೇವಾ ದೊರಕಿದುದೆ ಪುರುಷಾರ್ಥಾ | ಹರಿಪುದು ಸುಜನಾರ್ತಾ | ಭಾವನ ಕಾಯ್ದ ಸದ್ಭಾವಕೆ ವಲಿವನೆಕಾವುದೆನ್ನ ಗುರು ಗೋವಿಂದ ವಿಠ್ಠಲ 11
--------------
ಗುರುಗೋವಿಂದವಿಠಲರು
ನೋಡೋರು ಕೃಷ್ಣನ ನಾಡಿನ ಪ್ರಜರೆಲ್ಲಮೂಡಲಗಿರಿವಾಸನ ಬೇಡಿದವರಗಳ ನೀಡುವ ದಯದಿಕೊಂಡಾಡುವರು ವೆಂಕಟರಾಯನ ಪ. ಶ್ರೀನಿವಾಸನ ಕೋಟಿ ಆನೆ ಶೃಂಗರಿಸ್ಯಾವ ನಾನಾರತ್ನಗಳಿಂದ ಭಾನು ಕೋಟಿ ತೇಜ ತಾನು ನಿರ್ಮಿಸಿದನು ಏನೆಂಬೆÉನು ಛಂದ 1 ಚಿತ್ರ ವಿಚಿತ್ರದ ಮುತ್ತಿನ ಪಲ್ಲಕ್ಕಿ ರತ್ನ ಮಾಣಿಕ ಹಚ್ಚಿಚಿತ್ತ ಜನೈಯನ ಪ್ರತ್ಯೇಕ ವಿವರಿಸಿ ಅರ್ಥಿಹೇಳುವೆನಂದ2 ಎಂಟು ದಿಕ್ಕಿಗೆ ಒಪ್ಪೊಒಂಟಿ ಸಾಲಗಳು ವೈಕುಂಠಪತಿಯ ಮುಂದೆ ಕಂಠಿ ಚಿತ್ರವÀ ಬರೆಸಿ ಕರುಣಿ ವೆಂಕಟದಿವ್ಯಗಿಲೀಟು ವಸ್ತ್ರಗಳ ಹೊಚ್ಚಿ 3 ಹೇಳಲು ವಶವಲ್ಲ ಕಾಲೊಳುಆಭರಣವ ಭಾಳ ಮುತ್ತಿನ ಕುಚ್ಚುವ್ಯಾಳಾಶಯನನು ಅವರಿಗೆ ಹೇಳಿನೇಮಿಸಿದನು ಆಳುಮಂದಿಯು ಮೆಚ್ಚ4 ವಾಹನ ಸುತ ಸತಿಯರಿಗಿತ್ತು ಅತಿ ಸೇವ್ಯರು ಮೆಚ್ಚಿ5 ಕೆಂಚೆ ಕೃಷ್ಣನ ರಥಕೆ ಗೊಂಚಲ ಮುತ್ತುಗಳೆಷ್ಟಮಿಂಚುವ ಸೂರ್ಯನಂತೆ ಮುಂದೆ ನೊಡುಣು ಬಾರೇಚಂಚಲಾಕ್ಷಿ ಕೇಳೇ ವಿರಂಚಿ ಬೆರಗಾಗೋನಂತೆ6 ಚದುರ ರಾಮೇಶನ ಕುದುರೆ ಸಾಲುಗಳಿಗೆ ಅದ್ಬುತ ರತ್ನಗಳೆ ಮದನಜನಯ್ಯನುಮುದದಿ ನಿರ್ಮಿಸಿದನು ಸುದತೆ ಹೇಳುವೆ ಕೇಳೆ 7
--------------
ಗಲಗಲಿಅವ್ವನವರು
ಬಾರಿಯ ಜಿಡ್ಡಂತೆ ದುರ್ಜನ ಸಂಗ ಬಾರಿಯ ಜಿಡ್ಡಂತೆ ಪ ತೂರಿ ಪೋಗದಂತೆ ದಾರಿಕಟ್ಟು ಮಾಡಿ ಊರು ಸುತ್ತ್ಹಚ್ಚಿದ ಅ.ಪ ತಲೆಬಾಗಿ ನೆಲವನ್ನು ನೋಡದೆ ತಿಳಿಯದಲೆ ಇದನು ತುಳಿಯಲು ಅಂಗಾಲಿ ನೊಳಗೆ ಮುರಿದು ಖಂಡ ಕೊಳೆಸಿ ಕೀವುಮಾಡಿ ಅಳಿಸಿ ಬಳಲಿಸುವ 1 ಉಡಿಗೆ ತೊಡಿಗೆಗಳನ್ನು ಅಂಟಲು ಬಿಡಿಸಲು ಬಿಡದಿನ್ನು ಅಡರಿಕೊಂಡು ಇದು ತೊಡರಿ ತೊಡರಿ ಬಲು ಮಿಡುಕಿಸುವ ಕಡು ತೊಡರಿನ ಅಂಟು2 ನಿಷ್ಠೆಯಿಂದ ಜವದಿ ಶ್ರೀರಾಮ ಪಟ್ಟಣ ಮಾರ್ಗದಿ ನೆಟ್ಟಗೆ ಪೋಗುವ ಶಿಷ್ಟರ ಕಾಲೊಳು ನೆಟ್ಟು ಕಷ್ಟ ಕೊಟ್ಟು ಬಿಟ್ಟು ಕಟ್ಟು ಮಾಡ್ವ 3
--------------
ರಾಮದಾಸರು
ಭಳಿ ಭಳಿರೆ ಬಲಭೀಮ ಭಳಿರೆ ಸದ್ಗುಣಧಾಮಭಳಿರೆ ದ್ರೌಪದಿನಾಥ ಭಳಿರೆ ಶ್ರೀಹರಿದೂತಭಳಿರೆ ಅಪ್ರತಿಚರಿತ ಭಳಿರೆ ಬಲದೇವಸುತಭಳಿರೆ ಭೂಮಿಪಲಲಾಮ ಭೀಮ ಪ.ಯೋಚಿಸಿ ಖಳರು ನೆರೆದು ಭೂಚಕ್ರವಾಕ್ರಮಿಸೆಶ್ರೀ ಚಕ್ರಿ ದಯದಿ ಅಮೃತ ರೋಚಕುಲಜಾತ ಪಾಂಡು ಚಕ್ರವರ್ತಿ ಕಮಲಲೋಚನೆಯ ಪೃಥೋದರಾಬ್ಧಿ ಚಂದ್ರನಂತೆ ಜನಿಸಿಆ ಚಕ್ಷುವಿಹೀನ ಭವಾಬ್ಧಿಚೋರರೆದೆಶೂಲಗೋಚರಿಸುವಂತಿಳೆಗೆ ಸೂಚಿಸಿ ಮುಖೋದಯವಕೀಚಕ ಹಿಡಿಂಬ ಬಕ ನೀಚಮಾಗಧಮುಖರವಾಚಿಸಗುಡದೆ ಬಡಿದೆ ಭೀಮ 1ಕೊಬ್ಬಿದ ಖಳರು ಧಾತ್ರಿಗುಬ್ಬಸವ ತೋರುತಿರೆಅಬ್ಬರದಿ ಕರದ ಗದೆಗ್ಹಬ್ಬದೌತಣವಿಡುತಒಬ್ಬೊಬ್ಬರೊಮ್ಮೆ ಹನ್ನಿಬ್ಬರನ ಕರೆದುಉಬ್ಬುಬ್ಬಿ ರಣದಿ ಕುಣಿದೆಹಬ್ಬಿ ಬಹ ನಾಗರಥನಿಬ್ಬರದ ಬಿಂಕದವರೆಬ್ಬಿಸಿ ನಭಕೆ ಚಿಮ್ಮಿ ಬೊಬ್ಬಿರಿದು ಕೌರವರನಿಬ್ಬಗೆದು ಡಾಕಿನಿಯ ಉಬ್ಬಿಸಿದೆ ನಿನಗೆಪಡಿಹೆಬ್ಬುಲಿಗಳುಂಟೆ ಜಗದಿ ಭೀಮ 2ನಿರ್ಧರ ಪರಾಕ್ರಮ ಧನುರ್ಧರರ ಬೀಳ್ಗೆಡಹಿಸ್ವರ್ಧಾಮಗರು ತುತಿಸೆ ದುರ್ಧಾರ್ತರಾಷ್ಟ್ಟ್ರರಂದುರ್ಧಾಮಕೆಬ್ಬಟ್ಟಿದುರ್ಧರ್ಷಗುರುರಥವನೂಧ್ರ್ವಕ್ಕೊಗೆದುಲಿದು ಚೀರ್ದೆದುರ್ಧರ ಖಳಾನುಜನ ಮೂರ್ಧ ಕಾಲೊಳು ಮೆಟ್ಟಿಶಾರ್ದೂಲನಂದದಿ ಕೆಡದೊಡಲಿನಅರುಣಜಲಪೀರ್ದಂತೆ ತೋರ್ದೆ ಗೋವರ್ಧನಧರನನುಜÕವಾರ್ಧೀಸ್ಯರ್ಪಿಸಿದೆ ಮಝರೆ ಭೀಮ 3ಕಡಲೊಡೆಯನೆಡೆಗೆ ಬಲುಕೆಡುನುಡಿಯ ನುಡಿದವರಪಿಡಿ ಪಿಡಿದು ಖಡುಗದಿಂ ಕಡಿಕಡಿದು ಕಡೆಗಾಲದಮೃಡಕೋಟಿಯಂದದಲಿ ಕಡುರೋಷದಡಿಗಡಿಗೆಘುಡುಘುಡಿಸಿ ಹುಡುಕಿ ತುಡುಕಿಷಡಕ್ಷೋಹಿಣಿ ಪಡೆಯ ಹುಡಿ ಹುಡಿಗುಟ್ಟಿ ಪೊಡವಿ ದಿಗ್ಗಡಣ ಜಯದಂತಿ ಧಿಮ್ಮಿಡಿಸಿ ಕರ್ಮಡು ಪೊಕ್ಕುಕಡುಗಲಿಯ ತೊಡೆಮುರಿಯೆ ನಡುಮುರಿಯೆ ಗದೆಯಿಂದಹೊಡೆದೆಶಸುಪಡೆದೆ ಜಗದಿ ಭೀಮ 4ಅಪ್ಪಳಿಸಿ ಕುರುಪತಿಯ ಚಿಪ್ಪೊಡೆಯೆ ತಲೆದುಳಿದುಬಪ್ಪುವಾರುಷವೆಂಬ ಸುಪ್ತಸೂತ್ರದಿ ಅಜನಬೊಪ್ಪ ಕೃಷ್ಣನ ಕಟ್ಟುವ ಪರಾಕ್ರಮಿಗೆನುತಸುಪ್ರಾಯಶ್ಚಿತ್ತವೆನುತತಪ್ಪುಗಳನೊಂದೊಂದ ನೆಪ್ಪೆತ್ತಿ ತನ್ಮತಿಗೆಹೆಪ್ಪೆನುವ ವಾಗ್ಬಾಣ ಕುಪ್ಪಳಿಸಿ ಕೊಂದು ಶ್ರೇಯಃಪತಿ ಪ್ರಸನ್ವೆಂಕಟಾರ್ಪಣವ ಮಾಡಿ ವೈಷ್ಣವ ಪ್ರತತಿಯನು ಪೊರೆದೆ ಭೀಮ 5
--------------
ಪ್ರಸನ್ನವೆಂಕಟದಾಸರು