ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿರಿಯು ಬರುವ ಸೊಬಗ ನೋಡಿರೆ ಭರದಿ ಬನ್ನಿರೆ ಶಿರವಬಾಗಿ ಚರಣಕೆರಗಿ ವರವಬೇಡಿರೆ ಪ. ಕಾಲೊಳಂದಿಗೆ ಗೆಜ್ಜೆ ಪಿಲ್ಲಿ ಘಲಿರುಘಲಿರೆನೆ ಬಾಲೆಯರ ಬಳಿಗೆ ಬರುವಳೊಲಿದಳೆಂಬೆನೇ 1 ಮಾತೆಗೆನಿತೋ ಪ್ರೀತಿಯೆಮ್ಮೊಳಗೈತಂದಳೀದಿನಂ ಪೂತುದರರೆ ಪೂರ್ವಪುಣ್ಯ ತರವಿದೆಂಬೆನಾಂ 2 ಪರಮಪುರುಷ ಶೇಷಶೈಲವರದನರಸಿಯಿಂ- ದರರೆ ಒಲಿದಳೆಮಗೆ ಧರೆಯೊಳರಿದುದಿನ್ನದೇನ್ 3
--------------
ನಂಜನಗೂಡು ತಿರುಮಲಾಂಬಾ
ಸುಮ್ಮನೆ ದೂರಿದರೆ ನಾನೆಂಬೆನು ರಂಗಂ ಗುಮ್ಮ ಬಂದನು ಎಂದರಂಜುವನು ಪ ಸುಳ್ಳು ಸಟೆಯನಾಡಬೇಡಿರೇ ಜಾತಿ ಗೊಲ್ಲತಿ ಯರು ನೀವಾದರೆ ಎಲ್ಲನಾರಿಯರೊಂದು ಗೂಡಿರೆ ಕಟ್ಟಿ ಕಳ್ಳ ಕೃಷ್ಣನ ತಂದು ತೋರಿರೆ 1 ಮುತ್ತಿ ಚಂಡಾಟವಾಡುವ ನಂದ ನೊತ್ತಿಲಿ ಪಾಲ್ಬೆಣ್ಣೆ ಮೆಲ್ಲುವ ಪಣಿಗೆ ವತ್ತು ಪೊಂಗಳಲ ನುಡಿಸುವ 2 ಕಾಲೊಳಂದಿಗೆ ಗಜ್ಜೆ ಧ್ವನಿ ಮಾಡುವ ತನ್ನ ತಾಳ ಗತಿಗೆ ತಾನೆ ಕುಣಿದಾಡುವ ನಂದ ನೋಲಗವನ್ನು ಕ್ಷಣ ಬಿಡದಿರುವ ಲಕ್ಷ್ಮೀ ಲೋಲ ತನ್ನೊಳು ತಾನೆ ನಲಿದಾಡುವ 3
--------------
ಕವಿ ಪರಮದೇವದಾಸರು