ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪನ್ನಂಗಶಯನ ನಿನ್ನ ನಾ ಬಿಡೆನಯ್ಯ ಪ ನಿನ್ನ ಬಿಡುವೆನೆಂತು ಎನ್ನ ಮನಸಿನ ಡೊಂಕನ್ನು ಚೆನ್ನಾಗಿ ತಿದ್ದಿ ಮನ್ನಿಸಿ ಸಲಹುವನಕ ಅ.ಪ ಕಾಲಿಲ್ಲದವನಾಗಿ ತಲೆಯುದರದಡಗಿಸಿ ಜಲದಿ ಮುಳುಗಲು ನಿನ್ನ ಬಲವ ಪಡೆಯದೆ ಬಿಡೆ 1 ನೆಲವನಗೆದು ಬೇರು ಮೆಲುತ ಚರಿಸಲು ಮತ್ತೆ ಹಲ್ಲುಕಿಸಿದು ಗರ್ಜಿಸಲು ಬಿಡೆನೊಲಿಸದೆ 2 ತಿರುಕನೀನಾದರು ಕರದಿ ಕೊಡಲಿಪಿಡಿದು ಶಿರ ತರಿವೆನೆನೆ ನಿನ್ನ ಚರಣಕಾಣದೆ ಬಿಡೆನು 3 ವನವಾಸಿಯಾದರು ಘನಚೋರನಾದರು ವನತೇರೊಳ್ಬತ್ತಲೆ ಕುಣಿದರು ಬಿಡೆ ನಿನ್ನ 4 ಭವಭಯನಾಶನ ದಯಾಕರ ಶ್ರೀರಾಮ ಹಯವೇರೋಡಲು ನಿನ್ನ ಸಹಾಯ ಪಡೆಯದೆ ಬಿಡೆ 5
--------------
ರಾಮದಾಸರು
ಬಾರನೇನೆ ಭಾಗ್ಯನಿಧಿ | ಬಡವರ ಮರೆಯದೇ | ಮಾನಿನಿ ಪ ಕಾಲಿಲ್ಲದವನಂತೆ ಕುಳಿತನೇ ಮಧುರಿಲಿ | ನೀಲಾಂಗನಂಗವೆಂತು | ನಿಬ್ಬರವೇ ಮಾನಿನೀ 1 ಮುಂದಕೆ ತಿರುಗಲೊಲ್ಲ ಹಿತಗಜಪಂಚಾನನ | ಮಾನಿನಿ 2 ಮಾನಿನಿ 3 ತಂದೆ ಮಹೀಪತಿ ಪ್ರಭು | ತುರಗವೇರಿ ಬಂದನೆಂದು | ಇಂದು ಹೇಳಿದರಿಷ್ಟಾರ್ಥ ಈವನೆಲ್ಲ ಮಾನಿನಿ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮುಳ್ಳು ಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿಎರಡು ಹೂಳು, ಒಂದು ತುಂಬಲೆ ಇಲ್ಲ 1 ತುಂಬದ ಕೆರೆಗೆ ಮೇಯಾಕ ಬಂದವು ಮೂರು ಎಮ್ಮಿಎರಡು ಗೊಡ್ಡು ಒಂದು ಕಂದು ಹಾಕಿ ಕರುವೇ ಇಲ್ಲ 2 ಕರುವಿಲ್ಲದ ಎಮ್ಮಿಯ ಕೂಡಿದರ ಮೂವರು ಹೆಣ್ಮಕ್ಕಳಾಇಬ್ಬರು ಬಂಜಿಯರು, ಒಬ್ಬಾಕಿ ಹಡೆದೇ ಇಲ್ಲ 3 ಹಡೆಯದ ಹೆಣ್ಣ ಕೂಡಿಕೊಂಡರು ಮೂವರು ಕುಂಬಾರರುಇಬ್ಬರು ಚೊಂಚರು, ಒಬ್ಬಗೆ ಕೈಯೇ ಇಲ್ಲ 4 ಕೈಯಿಲ್ಲದ ಕುಂಬಾರ ಮಾಡಿಕೊಟ್ಟ ಮೂರು ಮಡಿಕಿಗಳಎರಡು ದದ್ದು, ಒಂದಕೆ ತಳವೆ ಇಲ್ಲ5 ತಳವಿಲ್ಲದ ಮಡಕಿಗಿ ಕೊಟ್ಟಾರ ಮೂರು ರೊಕ್ಕಎರಡು ನಕಲು, ಒಂದು ಸವಕಲು 6 ಸವಕಲು ರೊಕ್ಕದಾಗ ಕುಚ್ಚಲಿಕೆ ತಂದಾರ ಮೂರ ಕಡುಬಎರಡು ಕುದಿಯಲಿಲ್ಲ ಒಂದು ಬೇಯಲಿಲ್ಲ 7 ಬೇಯದ ಕಡುಬಿಗಿ ಬಂದಾರ ಮೂವರು ಬೀಗರಇಬ್ಬರು ಬೊಚ್ಚರು, ಒಬ್ಬಗೆ ಹಲ್ಲೇ ಇಲ್ಲ 8 ಹಲ್ಲಿಲ್ಲದ ಬೀಗನಿಗೆ ಕೊಟ್ಟಾರ ಮೂರು ಚಿಕಣಿ ಅಡಕಿಎರಡು ಗೋಟು, ಒಂದು ಸಿಡಿದು ಕಾಣೆಯಾಯಿತು 9 ಕಾಣೆಯಾದ ಅಡಿಕಿಯ ನೋಡಾಕಂತ ಹೋಗ್ಯಾರ ಮೂರ ಮಂದಿಇಬ್ಬರು ಒಂಚೊರಿ, ಒಬ್ಬಗೆ ಕಣ್ಣೇ ಇಲ್ಲ10 ಕಣ್ಣಿಲ್ಲದವನ ಕರೆತರಬೇಕಂತ ಹೋಗ್ಯಾರ ಮೂರ ಮಂದಿಇಬ್ಬರು ಕುಂಟರು, ಒಬ್ಬಗೆ ಕಾಲೇ ಇಲ್ಲ 11 ಕಾಲಿಲ್ಲದವನ ಹೊತ್ತು ತರಬೇಕಂತ ಹೋಗ್ಯಾರ ಮೂರು ಮಂದಿ ಇಬ್ಬರು ಲಂಡರು, ಒಬ್ಬ ಮೊಂಡ 12 ಕಾಗಿನೆಲೆ ಕನಕದಾಸ ಹಾಕಿದ ಮುಂಡಗಿಇದ ತಿಳಿದವ ಜಾಣ. ಒಡೆದು ಹೇಳಿದವ ಕೋಣ13
--------------
ಕನಕದಾಸ