ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಣಿಸೋ ನಾರದಾ ಎನ್ನ ಕುಣಿಸೋ ನಾರದಾ ಪ ಕುಣಿಸೋ ಎನ್ನ ಕಾಲಿಲಿಂದ ಕಣಕಣೆಂಭೊ ಗೆಜ್ಜೆಕಟ್ಟಿ ಅ.ಪ. ಮೋದ ವನವ ಚರಿಸುವಂತೆಮಾಡೋ 1 ವದನದಲ್ಲಿ ಹರಿಯ ಸ್ಮರಣೆ ಮುದದಿ ಪಾಡುತಾಲೆ ಕಥೆಯಗದಗದಾನೆ ರೋಮ ಉಬ್ಬಿ ಒದಗುವಂತೆ ಭಾಷ್ಯ ಮಾಡೋ 2 ಏಸು ಲೇಸು ವಿಷಯಗಳಲಿ ವಾಸಮಾಡದಂಥ ಇಂದಿರೇಶಸುಕಧಾರ್ಥಸಾರ ಲೇಶ ಬಂದು ಸತತ ಮಾಡೋ 3
--------------
ಇಂದಿರೇಶರು
ಕೇಳಿರೋ ಕೇಳಿರೋ ಆಲಿಸಿ ಜನರು | ಕಲಿಯುಗದೊಳಗ ಒಡಿಯ ನಾಟವನು ಪ ಫುಲ್ಲನಾಭನ ಭಕ್ತಿ ಎಳ್ಳೆನಿತಿಲ್ಲಾ | ಹುಲ್ಲು ಕಲ್ಲು ದೈವಕ ಎರಗಿ ನಡೆವರು | ಬೆಲ್ಲವು ಕಹಿಯಾಗಿ ಸಿಹಿ ಬೇವಾಯಿತು | ಅಲ್ಲ-ಹುದೆಂಬುದು ಬಲ್ಲವರಾರು 1 ಸಾಧು ಸಂಗಕ ಕಾಲು ಏಳುವು ನೋಡಿ | ಸಾಧಿಸಿ ದುರ್ಜನರಾ ನೆರಿಯ ಸೇರುವರು | ಮಾಧವ ನಾಮ ಉಣ್ಣಲು ಮುಖರೋಗ | ಭೂದೇವಿ ನಿಸ್ಸಾರವಾದಳು ನೋಡಿ2 ನೀಚರಿಗುದ್ಯೋಗ ಊಚರಿಗಿಲ್ಲ | ಆಚಾರ ಸದ್ಗುಣ ಆಡವಿ ಸೇರಿದವು | ಯೋಚಿಸಿ ಒಬ್ಬರಿ ಗೊಬ್ಬರು ಕೇಡಾ | ಭೂಚಕ್ರದೊಳು ಎಲ್ಲಾ ತೀರಿ ತಿಂಬುರೈಯಾ3 ಇಲಿಯು ಹೆಗ್ಗಣ ಹೆಚ್ಚಿ ತೋಳ ಬಡಿದು | ದಾಳಿಯಿಟ್ಟವು ಲಂಕಾ ಯೋಧ್ಯದ ನಡುವೆ | ಇಳಿಯೊಳು ಹತ್ತೆಂಟು ಕಾಲ-ವೀಪರಿಯಾ | ತಲಿ ತಲಿಗಿನ್ನು ನಾಯಕರಾಗಿ ಇರಲು 4 ಮ್ಯಾಲೊಬ್ಬ ನಿಂದಲಿ ಸುಖದಲಿ-ರಲಿಕ್ಕೆ | ಕುಲ ಅನ್ಯ ಇಲ್ಲದ ರಾಜೇಶನಾ | ಕಾಲಿಲಿ ಸರ್ವ ಸಂಕರ ವಾಗುತಿರಲು | ಹೊಳೆವನು ಗುರುಮಹಿಪತಿ ಸುತ ಸ್ವಾಮಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಂಗಿ ಕೊಳಲನೂದುವ ಸುಂದರನಿವನೇತಂಗಿ ಕೊಳಲನೂದುವ ಸುಂದರನಿವನೇಸುಂದರನಿವನೇ ಮಂದರಧರನೇ ಪ ಪುರುಷರೂಪದಿ ಪಯೋಧಿಯ ಕಡೆದನೆ ತಂಗಿತರುಣಿರೂಪದಿ ಸುಧೆ ಸುರರಿಗಿತ್ತನೆ ತಂಗಿ 1 ಸತಿಯು ಇಲ್ಲದೆ ಸುತರನು ಪಡೆದನೆ ತಂಗಿಪತಿಯು ಇಲ್ಲದೆ ಅಪ್ರತಿಮ ರೂಪನೆ ತಂಗಿ 2 ಅತ್ತೆಯ ಕಾಲಿಲಿಂದಲೆ ಪಡೆದನೆ ತಂಗಿಚಿತ್ರ ಚರಿತ ವೃಜದೊಳಗಾಡಿದನೆ ತಂಗಿ 3 ಮುಂಜಿಯಾಗದೆ ಮಕ್ಕಳ ಪಡೆದನೆ ತಂಗಿಸಂಜೆಯಾಗದೆ ರಾತ್ರಿಯ ಮಾಡಿದನೆ ತಂಗಿ 4 ವಾಸುದೇವನು ಇಂದಿರೇಶನಿಗನೆ ತಂಗಿಕೂಸು ತರುಣನಾಗಿ ಮೋಸಗೊಳಿಪ ತಂಗಿ 5
--------------
ಇಂದಿರೇಶರು
ನಿನ್ನ ನಾನೇನೆಂದೆ ನಿರ್ಮಲ ರೂಪನೆ | ಪನ್ನಗ ಭೂಷಣ ಪರಮ ಸದಾಶಿವ ಪ ಸುರರು ಮೊರೆಯಿಡೆ ವಿಷವ ಧರಿಸಿ ಜಗ | ಉರಿಯಹದೆನುತ ಕಂಠದಿರಿಸಿದನು || ದುರಳ ದೈತ್ಯನ ಕೊಲ್ಲಲಾಗಿ ಅರ್ಧಾಂಗವ | ಹರಿಗೆ ನೀಡಿದ ದೇವ ಶರಣೆಂದೆನಲ್ಲದೇ || ಉರಗಣ್ಣಿನವನೆಂದೇನೇ | ಪರಹೆಣ್ಣವ | ಶಿರದೊಳಿಟ್ಟವನೆಂದೆನೇ | ಜಗದೊಳು || ಅರೆ ಮೈಯ್ಯವನೆಂದೆನೇ | ನಿಜಪದ | ಶರಣರಿಷ್ಟಾರ್ಥವ ನೀವನೇ ಬಾಯಂದೆ 1 ಸದ್ಗತಿ ನೀಡಿದ ಬ್ಯಾಡಗ ಮರ ದೊಪ್ಪ | ಲುದುರಿಸವಗ ನಿಜವ ದೋರಿದ || ಮುದದಿಂದ ಪಾಶುಪತವಾನಿತ್ತ | ಸದಮಲಾ ನಂದನೇ ಶರಣೆಂದೇ ಕಾಲಿಲಿಂ || ದ್ವೋದಿಸಿ ಕೋಂಡವನೆಂದೆನೇ | ಬಾಯಿಂದುಗು | ಳಿದರೆ ತಾಳ್ದದವನೆಂದೆನೇ | ನರಕಾಳ || ಗದಿ ಸೋತವನೆಂದೆನೇ | ವರಮುನಿ | ತ್ರದಶಾಧಿಪತಿ ಮುಖ್ಯ ಸೇವಿತ ಬಾಯಂದೆ 2 ಸರಸಿಜ ಭವನ ತಲೆಯ ನೊಂದು ಶಳದುಸಾ | ವಿರಭುಜ ನೀಡಿದ ಬಲಿಸುತಗ || ಸಿರಿಯೊಳನ ಕುಟುಂಬಕ್ಕೆ ಕೈವಲ್ಯವ | ಕರುಣಿಸಿದರಸನೆ ಬಾಯಂದೆ ಕಪಾಲ || ಕರದಿ ಪಡಿದವನೆಂದೆನೇ | ನರಮಾಂಸಕ | ಹರಿದು ಪೋದವನೆಂದೆನೇ | ಬಾಗಿಲಕಾವಾ || ಸುರನ ಬಂಟನೆಂದೆನೇ | ಸಲಹುವಾ | ಗುರು ಮಹಿಪತಿ ಪ್ರಭು ನಮೋ ನಮೋ ನಿನಗೆಂದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು