ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದ್ಧಾರ ಮಾಡೆಯ್ಯಾ ಸಿದ್ಧೇಶ್ವರ | ಸದ್ಧರ್ಮದಲಿ ಸತತ ನೀಲ ಲೋಹಿತ ವಿಗತ ಚೈಲ ಭೂಷಿತ ಭನಿಸಿತ ಕಾಲಾರಿ ಶಿವ ದ್ರೌಣಿಂ ಶೂಲಪಾಣಿ ಹಾಲವಿಪುರವಾಸ | ಹಾಲಾ ಹಲವ ಮೆದ್ದು ತಾಳಲಾರದೆ ಕೊಂಡ ಮೇತೌಷಧವನಿತ್ತು 1 ವ್ಯಾಧ ರೂಪದಿ ರಣದಿ ಕಾದು ಪಾರ್ಥನೆ ಸೋತು ನೀ ದಯದಿ ದಿವ್ಯಾಸ್ತ್ರ ಪಾಲಿಸಿದೆಯೋ | ಸಾದರದಿ ನಾ ನಿನ್ನ ಪಾದಕೆರಗುವೆ | ಎನಗೆ ಮೋದದಿಂದಲಿ ಪಂಚಭೇದ ಜ್ಞಾನವನರುಹಿ 2 ಕಾಮಾರಿ ಸುಪವಿತ್ರ ಸೋಮಾರ್ಕ ಶಿಬಿನೇತ್ರ ಶಾಮಸುಂದರ ವಿಠಲಸ್ವಾಮಿ ಮಿತ್ರ | ಪ್ರೇಮಾಬ್ಧಿ ಕಳತ್ರ | ತಾಮರಸ ಭವಪುತ್ರ ಧವಳಗಾತ್ರ 3
--------------
ಶಾಮಸುಂದರ ವಿಠಲ
ನಿತ್ಯದುದಯಾಸ್ತಮಾನದಲಿ ಸ ರ್ವೋತ್ತಮ ಹರಿನಾಮ ಬರೆದೋದಿ ಭಕ್ತಿಯಿಂದಾಲಿಪರ ಭವತಾಪ ಜರೆ ಮೃತ್ಯುನೀಗಿ ನಿತ್ಯಮುಕ್ತಿ ಕೈಸೇರುತಿಹ್ಯವು ಪ ನರಿಹರಿ ಹಯವದನ ಜನಾರ್ದನ ವಾಸುದೇವ ವಾರಿಜಾಕ್ಷ ಮುರಧ್ವಂಸಿ ಮುಪ್ಪುರಾಂತಕ ಮುಕ್ಕುಂದ ಹರಿ ಸರ್ವೇಶ ಉರಗಪರ್ಯಂಕ ನಿರಂಜನ ನಿರ್ಜರೇಶ ಶರಣಜನಮಂದಾರ ಸಿರಿಯರಸ ಪರಮಪ್ರಕಾಶ ಪರತರೇಶ ಪರಮಪುರುಷ ಪರಾತ್ಪರನೆಂದು 1 ಮಾಧವ ದೇವದೇವೇಶ ದನುಜರಸಂಹರ ಶ್ಯಾಮಸುಂದರ ಘನಮೇಘಶ್ಯಾಮ ಸಚ್ಚಿದಾನಂದ ಚಿನುಮಯಾತ್ಮ ತಚ್ಚೈತನ್ಯರೂಪ ವೇಣುಧರ ಗೋಪಾಲ ಗೋವ ರ್ಧನೋದ್ಧಾರ ಗಾನಾಂದಧೋಕ್ಷಜಪಿತ ಧ್ಯಾನಗಮ್ಯ ತ್ರಿಭುವನೇಶ ತ್ರಿವಿಕ್ರಮನೆಂದು 2 ನಿತ್ಯಗುಣಾರ್ಣವ ನಿಜಗುಣ ನಿಷ್ಕಲಂಕ ನಿತ್ಯಾತ್ಮ ನಿರುಪಮ ಪರಂಜ್ಯೋತಿ ನಿತ್ಯನಿರ್ಮಲ ಸತ್ಯಭಾಮಾಕಾಂತ ಚಿದ್ರೂಪ ಚಿತ್ಕಳಂಕ ಕಮಲಾಕ್ಷ ಲಕುಮೀಶ ಶೌರಿ ಸೂತ್ರಧಾರಿ ಭಕ್ತವತ್ಸಲ ಭಯನಿವಾರ ನರಸಿಂಹ ಮುಕ್ತಿದಾಯಕ ಮಧುಸೂದನ ರಮಾರಮಣ ಮೃತ್ಯುಂಜಯ ವಿಶ್ವೇಶ ವಿಶ್ವವ್ಯಾಪಕನೆಂದು 3 ಕಾಲಾರಿ ಚಕ್ರಿ ಚತುರ್ಭುಜ ಭವನಾಶ ನೀಲಾಂಗ ರಂಗ ರಾಘವ ಭುವನೇಶ ನೀಲಲೋಚನ ನಗಧರ ಜಗಮೋಹ ಮೇಲುನಿಲಯ ನಿಗಮಾತೀತ ಪದ್ಮನಾಭ ಕಾಲೀಮರ್ದನ ಕೌಸ್ತುಭಾಂಬರ ವಿಷ್ಣು ಪಾಲಸಾಗರಕನ್ನಿಕಾಪ್ರಿಯನಾಥ ಲೀಲಜಾಲ ಜಾಹ್ನವೀಜನಕ ಕೇಶವ ಶೂಲಪಾಣಿಸಖ ಶಾಂತಾಕಾರನೆಂದು4 ಪರಮಾನಂದ ಗೋವಿಂದ ಗಜರಕ್ಷ ಶರಧಿಮಥನ ಕೂರ್ಮಮತ್ಸ್ಯ ಕರುಣಾಂಗ ವಾಮನ ಧ್ರುವಪಾಲ ದುರಿತಾರಿ ಕೃಷ್ಣ ವೆಂಕಟ ವಿಠಲ ಶರಣಾಗತವರದ ನುತಪಾಲ ವರದಾತ ವೇದಾಂಗ ಸುಖಧಾಮ ವರ ಶ್ರೀರಾಮ ಪರಮ ಪುಣ್ಯನಾಮ ಧರೆಮೂರರೊಳತ್ಯಧಿಕಮೆಂದು 5
--------------
ರಾಮದಾಸರು
ಪಾಲಿಸೆನ್ನನು ಪಂಪಾಕ್ಷೇತ್ರವಾಸ ಫಾಲಲೋಚನ ಶಂಭೋ ವ್ಯೋಮಕೇಶ ಪ ನೀಲ ಲೋಹಿತ ವೀತ | ಚೈಲ ಭೂಷಿತ ಭಸಿತ ಕಾಲಾರಿ ಶಿವ ದ್ರೌಣಿ | ಶೂಲ ಪಾಣಿ || ಕಾಲ ಕೂಟವ ಮೆದ್ದು ಕೊಂಡ ಮೇತೌಷಧವನಿತ್ತು 1 ವ್ಯಾಧರೂಪದಿ ರಣದಿ ಕಾದು ಪಾರ್ಥಗೆ ಸೋತು ನೀದಯದಿ ದಿವ್ಯಾಸ್ತ್ರ ಕರುಣಿಸಿದೆಯೋ ಮೇದಿನೀಶಗೆ ಶಾಸ್ತ್ರ ಬೋಧಿಸಿದ ಮುನಿವರ್ಯ ವೇದನಂದನ ನಿನ್ನ ಪಾದಕ್ಕೆ ನಮಿಸುವೆನು 2 ಕಾಮಾರಿ ಸುಪವಿತ್ರ | ಸೋಮಾರ್ಕಶಿಖಿ ನೇತ್ರ ಶಾಮಸುಂದರವಿಠಲ ಸ್ವಾಮಿ ಮಿತ್ರ ಭೀಮ ಪಾವನಗಾತ್ರ ಪ್ರೇಮಾಬ್ಧಿ ಸುಚರಿತ್ರ ಕಳತ್ರ | ಮಹಿಮ ಚಿತ್ರಾ 3
--------------
ಶಾಮಸುಂದರ ವಿಠಲ
ಸಲಹೋ ಜಡಚೇತನನಿಲಯಶ್ರೀ ಹನುಮಂತ |ಕಲುಷವಿದೂರ ಶಾಂತ ಪಕುಲಿಶಬಾಧೆಗೆ ನೀನೆ ಗತಿಯೆಂದು ಮರೆಹೊಕ್ಕೆ |ಕುಲಜ ಪಾಲಕ ಹರಿಕುಲಜ ದಯಾಂಬುಧೇ ಅ.ಪ.ಕಂಜಚರಣಗದಾ ಕಂಜಧರನಪಾದಕಂಜಮಧುಪಮುನಿಪ |ಕಂಜವದನನಭಕಂಜಸುರಪರವಿಕಂಜವಿನುತವಿಚಿತ ||ಕಂಜಕೇತನ ಕಂಜಪಕ್ಷ ಖಳಸೂದನಕಂಜನಾಶನ ಭಾವೀಕಂಜದಯಾಂಬುಧೇ 1ಕಾಲನೇಮಿಹನಿಚ್ಛೆ ಹೀಗೆಂದು ತಿಳಿದು ಆಕಾಲಜನನುಸರಿಸಿ |ಕಾಲಕಳೆದು ವಿಪಿನಾಜ್ಞಾತವಾಸದಿಕಾಲಾರಿ ಪಾಲಿಸಿದೆ ||ಕಾಲು ಪಿಡಿದವನ ಶಾಪವ ಕಳೆದೆ ಆವ |ಕಾಲಕು ನೀನೇಗತಿಜಗಕೆ ದಯಾಂಬುಧೇ 2ಪ್ರಾಣಾಪಾನ ವ್ಯಾನೋದಾನ ಸಮಾನ ಹೇ ಜಗ-ತ್ಪ್ರಾಣಸಮೀರಜ್ಞಾನ |ಪ್ರಾಣಾಧಿಪೂರ್ಣಾಧಿ ಪ್ರಾಣ ನಂದನ ತಿರಸ್ಕøತಪಾಂಚಾಲಸುತಾ ||ಪ್ರಾಣದೊಡೆಯ ನೀನೊಲಿಯದೆ ಎಂದಿಗೂ |ಪ್ರಾಣೇಶ ವಿಠಲನ ಕಾಣೆ ದಯಾಂಬುಧೆ 3
--------------
ಪ್ರಾಣೇಶದಾಸರು