ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಕಜನಯನ ಪಾವನ್ನ ಸುಖ ಸಂಕೂಲ ಮೂರುತಿ ಲಾಲಿಸು ಚಿನ್ನಾ ವೆಂಕಟ ನಿಲಯಾ ಹಸೆಗೇಳು ಪ ಕಮಲ ಸಂಭವಗಿತ್ತ ಕಮನೀಯ ಕಾಯ ಸುಮನಸ ಜನತೆ ಸುಧೆಯನುಣಿಸಿ ಭೂಮಿ ಚೋರನ ಕೊಂದ ಮುನಿಗಳೊಡೆಯ ವಿಮಲ ಮೂರುತಿ ಹಸೆಗೇಳೋ 1 ನರಹರಿ ರೂಪದಿ ಬಂದು ದೈತ್ಯ ನುರವ ಬಗೆದು ವಟು ರೂಪದಿ ನಿಂದ್ಯೋ ದುರುಳ ರಾಯರನೆಲ್ಲ ಕೊಂದು ಲಂಕಾ ಪುರದಾಧಿಪತಿಯ ಸದೆದ ದಯಸಿಂಧೋ ಕರುಣಾಸಾಗರನೆ ಹಸೆಗೇಳೋ 2 ಯದುಜನೆನಿಸಿ ಎಲ್ಲಾ ಖಳರ ಜಯಿಸಿ ಸುದತೇರ ವ್ರತವ ಕೆಡಿಸಿದತಿ ಧೀರ ಕುದುರೆನೇರಿದ ಮಾಧಾರಾ ನಿನ್ನ ಅದುಭೂತ ಬಲ್ಲಿದಕ್ಕೆಣೆಗಾಣೆನುದಾರಾ ಉದಧಿ ಶಯನನೆ ಹಸೆಗೇಳು 3 ಅಪ್ರತಿಮಲ್ಲ ಅನಂತಾ ಸುಹಜ ನ ಪ್ರೀಯಾ ಸುರಪತಿ ಸಿರಿದೇವಿ ಕಾಂತಾ ಸ್ವ ಪ್ರಕಾಶಿತನೆ ಧೀಮಂತಾ ಅತಿ ಕ್ಷಿಪ್ರದಿ ಭಕ್ತರ ಪೊರೆವತಿ ಶಾಂತಾ ಸುಪ್ರದಾಯಕನೆ ಹಸೆಗೇಳೋ 4 ಪರಮ ಪುರುಷ ಪುಣ್ಯನಾಮಾ ಪರ ಪುರಷೋತ್ತಮ ಪರಿಪೂರ್ಣ ಕಾಮಾ ಶರಣರ ಭವವನ ಧೂಮಾ ಕೇತು ಕರಿಯ ಬಲ್ಲೆನೆ ಕಾಮಿತರ ಕಲ್ಪದ್ರುಮಾ ಕರಿರಾಜವರದಾ ಹಸೆಗೇಳೋ 5 ನಿತ್ಯ ಅತ್ಯಂತ ಮಹಿಮನೆ ಆಪ್ತ ಜನರ ಕ್ಲೇಶ ಕಳೆವ ಸುಕೀರ್ತೀ ಚಿತ್ತಜ ಜನಕ ಹಸೆಗೇಳೋ 6 ಕ್ಷೀರಾಬ್ಧಿವಾಸಾ ಚಿನ್ಮಯನೆ ನಿನ್ನ ಪಾರ ಮಹಿಮೆ ತಿಳಿವವನಿಹನೆ ಮೂರು ಗುಣ ರಹಿತನೆ ದೋಷ ದೂರ ವಿದೂರ ಶಿರಿದೇವಿಯೊಡನೆ ಬಾರಯ್ಯ ಹಸೆಯ ಜಗುಲಿಗೆ7 ವ್ಯಾಳಮರ್ದನನೆ ವಿಗಮನಾ ತ್ರಿ ಶೂಲ ಪಾಣಿಯ ಓಡಿಸಿದ ಖಳನಾ ಸೋಲಿಸಿದಪ್ರತಿಸುಗುಣ ಹೇಮ ಲಲಿತಾಂಗ ಹಸೆಗೇಳೋ 8 ಅಗಣಿತ ಜೌದಾರ್ಯ ಸಾರಾ ನಿನ್ನ ಪೊಗಳ ಬಲ್ಲೆನೆ ಪಾತಕದೂರಾ ನಗರಾಜನುತ ನಿರಾಧಾರ ಭವಾದಿಗಳಿಂದ ವಂದ್ಯನೆ ನವನೀತ ಚೋರ ಜಗನ್ನಾಥ ವಿಠಲ ಹಾಸೆಗೇಳೋ9
--------------
ಜಗನ್ನಾಥದಾಸರು
ಜಯ ಜಯತು ಹನುಮಂತ ಪವಿತ ಸಿಖ ಸಹಜಾತಜಯತು ಕಪಿರಾಜ ಯುವರಾಜ ಯತಿರಾಜ ಜಯತು ಪ.ಸುರರಿಗುತ್ತಮ ಜಗದಾಭರಣ ಶಿರೋಮಣಿ ಜಯತುಪರಮಅದ್ಭುತಚರಿತ ಸುವಟು ಜಯತುಧರಜೆಶೋಧಕ ನಿಶಾಚರಪುರದಹಕ ಜಯತುಜಯತು ವೈರಾಗಿ ಮಹಭೋಗಿ ಶುಭಯೋಗಿ ಜಯತು 1ಸುರರಿಪುಮಥÀನ ರಾಮಕಾರ್ಯಧುರಂಧರ ಜಯತುಚಿರಪ್ಲವಗ ಭವರೋಗಭೇಷಜ ಜಯತುಕರಿರಕರ್ಣ ದಶಮುಖಾಂಗ ಗಿರಿವರಕುಲಿಶ ಜಯತುಜಯತು ಅಕ್ಷಹರ್ತಾ ಕ್ರತುಕರ್ತಸುಖತೀರ್ಥಜಯತು2ತ್ರಿಕೋಟಿ ಪವನಾಖ್ಯರೂಪ ಪ್ರಕಟಾಪ್ರಕಟ ಜಯತುಅಕಳಂಕಾಮಿತರೂಪ ಮುಖ್ಯೇಶ ಜಯತುಶ್ರೀಕರ ಪ್ರಸನ್ವೆಂಕಟ ರಘುವೀರಾನುಮತ ಮತ ಜಯತುಜಯತು ಪರಸಿದ್ಧ ಬಕಮರ್ದ ಗುರುಮಧ್ವ ಜಯತು 3
--------------
ಪ್ರಸನ್ನವೆಂಕಟದಾಸರು
ಬಾರೋ ಬಾರೋ ಭಯನಿವಾರಣ ಕೃಷ್ಣ |ಬಾರೋ ಬಾರೋ ದಯಸಾಗರನೇ ದೇವಾ ಪನಳಿನೋದರ ಮೋಹನ ಕಾಮಿತರೂಪ |ನಳಿನದಳಾಯತ ನಯನ ಗೋವಳರಾಯ 1ನಿತ್ಯಾನಂದ ನೀಲಾಂಗ ನಿರ್ಮಲಚಿತ್ತ |ಧಾತ್ರಿಜಾಂತಕವಾಸುದೇವದೇವಕಿ ಪುತ್ರ 2ನಂದಾನಂದ ಮುಕುಂದ ಸುಂದರಕಾಯ|ಇಂದಿರೆಯರಸಗೋವಿಂದದಾಸನ ಪ್ರೀಯ 3
--------------
ಗೋವಿಂದದಾಸ