ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ನವಗ್ರಹ ಸ್ತೋತ್ರ) ಸತ್ಕಟಾಕ್ಷವಿರಿಸು ದಕ್ಷನಖವಜ್ರಿರಿಪುಪಕ್ಷದಹಿಸು ವಿರೂಪಾಕ್ಷ ಶರಣು ಪಕ್ಷವೃತ್ವಯನ ಸಂವತ್ಸರಾಖ್ಯ ದಯಮಾಡು ಶರಣೆಂದು ನಮಿಪೆ ನಿನ್ನ 1 ತೇಜೊರಾಶಿಯಾಗಿ ಮೆರೆವ ಕಮಲ ಘೂಕ ತಸ್ಕರರ ಗಣವ ನಾದಿಪತಿ ಗ್ರಹರಾಜ ನಿನ್ನ ಪದವ ವ್ಯಾಧಿಗಳ ಪರಿಹರಿಸು ಪಾವನಾತ್ಮ ಸಲಹೆನ್ನ ನಿರ್ಮಲಾತ್ಮ2 ನೀರುಮರಬಳ್ಳಿಸಕಲೌಷಧಿಗಳ ತಾರೆಗೊಲಿದಾಕೆಯಲಿ ಬುಧನಪಡದೇ ರಾಶಿ ಸಂಚಾರ ಮಾಳ್ಪೆ ಮೋಹದ ಬಲೆಯ ನೀರಜಾಕ್ಷ ಸಮನೋಜ ಮಾದೇವಿಸಹಜ 3 ಗುರುಮಿತ್ರ ಸಜ್ಜನತ್ರ ವ್ಯಾಮೋಹಗೊಳಿಸದಿರು ದಂಡಪಾಣಿ ರಾಜಕರುಣಾ ಪಾತ್ರನೆ ಕಾಮಚಾರಜ ಬಹುವಿಧಾಮಯವ ಪರಿಹರಿಸಿ ನೀ ಮನೋಹರ್ಷ ಪಾಲಿಸು ಧೀರನೆ ಕಮನೀಯ ಕಾಂತಿ ಕುಹಕಜನವಾರಿ4 ಪದುಮಗಳಿಗೆರಗುವೆನು ಪಾಲಿಸೆಂದು ಮಧು ವಿರೋಧಿಯ ಮನೋಭವನಣುಗ ಮಾತಿನಲಿ ಚದುರತೆಯನಿತ್ತು ಚಾತುರ್ಯಗೊಳಿಸು ಸದಯಾವಲೋಕ ನೀನೆಂದು ತಿಳಿದೆ ಮಾತ್ಸರ್ಯವೆಲ್ಲಬಿಡಿಸು ಪಾದ ಸ್ವರ್ಣವರ್ಣ ಸುಲಲಿತಾಂಗ 5 ಮಂತ್ರಜ್ಞ ಚೂಡಾಮಣಿ ಸದುಪಾಯಗಳ ತಿಳಿಸಿ ಸುರರ ಕಾವ ಉದಿತನಾಗಿರೆ ಸಕಲ ಬುಧರಿಗನುಕೂಲ ನಿತ್ಯದಲಿ ನಿಖಿಳ ಗ್ರಹೋನ್ನತ ಶಕ್ತಿಯೇ ಸಕಲಾರ್ಥ ಪಡದೀವನೆ ನಿನ್ನ ನಮಿಸುವೆನು ನೀನೊಲಿದು ಸಲಹೊ6 ಭಾರ್ಗವನೆ ಭಜಿಪೆ ನಿನ್ನ ತಪ್ಪು ಮರತು ಮುಖ್ಯವೆಂಬರ್ಥವರಿತು ಸೇವೆಗನುಕೂಲನಾಗಿರುವೆ ಕುರಿತು ಕಾಪಾಡು ಕರುಣ ವಹಿಸು7 ಮುನಿಸದಿರು ನಮ್ಮಮೇಲೆಂದೆಂದಿಗು ನಿನ್ನ ಘನವ ತ್ಯಜಿಸು ಭಂಗ ಶಕ್ತರಹರೆ ಪೇಳು ಮನ್ನಿಸುವ ಮಮತೆ ತಾಳು ಕನಸಿಲಾದರು ಕ್ರೋಧವಿಡದೆ ಕಾಪುವುದೆಂದು ನಿರುತದಿಂ ಕೈ ಮುಗಿದು ಬೇಡಿಕೊಳುವೆ 8 ವೀರ್ಯ ವಹಿಸಿದ ರಾಹು ಕೇತುಗಳನು ಶೌರ್ಯಾದಿಗಳ ದಯ ಮಾಡಿರಿ ಧಾರವೆಂದಿತ್ತಹರ್ಯಜ್ಞೆಯಿಂದ ನಾರ್ಯತನವೇನಿವರೊಳಿದ್ದರರಿತು ಮಂಗಳವಿತ್ತು ಸೌಖ್ಯ ಪಾಲಿಸಲಿ9
--------------
ತುಪಾಕಿ ವೆಂಕಟರಮಣಾಚಾರ್ಯ
ಅಚ್ಯುತಾನಂತನೆ ನಿನ್ನ ನೆಚ್ಚಿಕೊಂಡಿಹೆನು ಇಚ್ಛಾರೂಪ ಸ್ವಚ್ಛಾಭೂಪ ಸ್ವೇಚ್ಛೋಪಾತ್ತ ಸಗುಣ ರೂಪ ಪ. ನಾಮತ್ರಯ ಮಂತ್ರ ಜಪಿಸಿ ಸೋಮಧರನು ತಾನು ಆ ಮಹಾ ಹಲಾಹಲವನು ನೇಮದಿಂದ ಜಯಿಸಿರುವನು ಕಾಮಚಾರ ಕುಮತಿ ಮನುಜರಾ ಮಾಯಾದಿಗಳನು ಶ್ರೀಮಹೀಶ ಸಿಂಧುವಾಸ ನೀ ಮನ್ನಿಸಲು ನಿಲುವದೇನು 1 ನಗಧರ ನಿನ್ನಂಘ್ರಿಕಮಲಯುಗಳ ಒಂದೆ ಸಾಕು ಎನಗೆ ತ್ರಿಗುಣ ವಿಷಯವಾದ ಸರ್ವ ನಿಗಮಕರ್ಮವ್ಯಾಕೊ ಅಗಣಿತಾತ್ಮ ಅಮೃತಾಂಧಸರ ಮಗುವಿನಂತೆ ಪೊರೆವಿ ನಗುತಲೆನ್ನ ನೀ ಕಾಯ್ದದಕೆ ಪೊಗಳಲು ನಾ ಶಕ್ತನಹುದೆ 2 ಪೋರ ಕೆಟ್ಟುಹೋದನೆಂದು ಊರಜನರು ನುಡಿದಾ ಕ್ರೂರ ಮಾತ ಕೇಳಿ ತಾಳಲಾರದೆ ನಾ ಬಂದು ವಾರಿಜಾಕ್ಷ ನಿನ್ನ ಪದಕೆ ದೂರ ಪೇಳಲಂದು ಶ್ರೀರಮಣಿಯ ಸಹಿತಲೆನಗಾಧಾರವಾದಿ ದೀನಬಂಧು 3 ಇಂದ್ರಿಯಂಗಳೆನ್ನ ವಿಷಯಬಂಧದಿಂದ ಬಿಡಲು ಒಂದು ಕರ್ಮದಲು ಸಾಂಗದಿಂದಲೆನಗೆ ನಿಲಲು ಇಂದಿರೇಶ ಈ ಕಾರಣದಿ ಕುಂದಮನಕೆ ತಾರದಿರೊ ತಂದೆ ನೀನೆ ಶರಣನೆಂದು ಹೊಂದಿರುವದನೆಣಿಸಿ ಸಲಹೊ 4 ನಾಮಸ್ಮರಣವಿತ್ತು ಕಾಯಿ ಕಾಮಿತಾರ್ಥದಾಯಿ ನೇಮ ಒಂದು ನಡೆಸದಂಥ ಪಾಮರನಾಗಿಹೆನು ಸೋಮಧರನ ಶುದ್ಧಿಕರಿಸ ಭೂಮಿತೀರ್ಥ ಜನಕರಾಮಕೃಷ್ಣ ವೇದವ್ಯಾಸ ಸ್ವಾಮಿ ಶ್ರೀನಿವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮಾಧವ ತೀರ್ಥಾ ಯತಿ ವಾಸಿಪ ವೃಂದಾವನದಲ್ಲಿ ಖ್ಯಾತಿ ಪ. ವಾಸುದೇವನ ಭಕ್ತ ಸುಜನಕೆ ಪ್ರೀತಿ ಸೂಸುತ ಪೊರೆಯುವ ಕರುಣಿ ಪ್ರತೀತಿ ಅ.ಪ. ಭದ್ರಾವತಿಯ ತೀರ ನರಸಿಂಹ ಕ್ಷೇತ್ರ ಭದ್ರಾವತೀ ಪುರ ಮಠದಿ ಸತ್ಪಾತ್ರಾ ಮುದ್ದಾದ ವೀರ ರಾಮನ ಪ್ರೀತಿ ಗಾತ್ರಾ ಪೊದ್ದಿಸಿಕೊಂಡಿಪ್ಪ ಶಿರದಿ ಪತಿತ್ರ 1 ಸ್ವಪ್ನದಿ ತೋರಿದ ಯತಿರೂಪದಿಂದ ವಪ್ಪದಿ ದರ್ಶನಕೆ ಬಾರೆಂದು ನುಡಿದಾ ಅಪ್ಪ ತಿಮ್ಮಪ್ಪನ ಸ್ತುತಿಯನಾಲಿಸಿದಾ ಬಪ್ಪ ನರ ದರ್ಶನಕೆ ಮುಂದೆ ನಿಲ್ಲಿಸಿದಾ2 ಎನ್ನಿಂದ ಸಾರೋದ್ಧಾರ ಪದವನ್ನು ಎನ್ನಲ್ಲೆ ನಿಂತು ತಾ ಬರಸಿದ ಘನ್ನ ತನ್ನ ದೇವತ್ವವ ತೋರ್ದ ಪ್ರಸನ್ನ ಇನ್ನಿಂಥ ಕರುಣಿಯ ಕಾಣೆ ನಾ ಮುನ್ನ 3 ಮಧ್ವಕರ ಸಂಜಾತ ಮಾಧವರಂತೇ ಶುದ್ಧ ಈ ಯತಿಕುಲ ಸಂಜಾತನಂತೇ ಭದ್ರಾವತೀ ಪುರದಲ್ಲಿ ವಾಸಂತೇ ಮುದ್ದು ಕೇಶವ ಮಾಧವಾತೀರ್ಥನಂತೆ 4 ಕಾಮಿತಾರ್ಥವ ನಂಬೆ ಕೊಡುತಿಪ್ಪನಂತೆ ಕಾಮಚಾರಿಗಳೀಗೆ ತೋರ್ಪನಲ್ಲಂತೆ ಸ್ವಾಮಿ ರಾಮನ ಜಪಮೌನ ವ್ರತವಂತೆ ಯೋಗಿ ಅವಧೂತನಂತೆ 5 ಭಾಗಾವತಾದಲ್ಲಿ ಬಹು ದೀಕ್ಷಾಯುತರು ಬಾಗಿದ ಜನರಿಗೆ ಪ್ರೇಮ ತೋರುವರು ಭಾಗವತವ ರಾಜಗ್ಹೇಳಿದರಿವರು ಬೇಗರಿತುಕೊಳ್ಳಿರಿ ಬಹುಗೋಪ್ಯಯುತರು 6 ನಂಬಿದ ಜನರಿಂದ ಹಂಬಲೊಂದಿಲ್ಲ ತುಂಬಿದ ಭಕ್ತಿ ಆತ್ಮಾರ್ಪಣೆ ಬಲ್ಲ ಸಂಬ್ರಹ್ಮದಿಂ ನಲಿವ ಗುರುಭಕ್ತಿ ಬೆಲ್ಲ ಕುಂಭಿಣಿ ಮೂಢರಿಗೀವನು ಬಲ್ಯಾ 7 ಎನ್ನ ಶ್ರೀ ಗುರು ತಂದೆ ಮುದ್ದುಮೋಹನ್ನ ಘನ್ನರ ಕೃಪೆಯಿಂದ ಈ ಮುನಿವರನಾ ಸನ್ನುತ ಸುಗುಣವ ಕಂಡ ನಾ ನಿನ್ನ ಚನ್ನ ಶ್ರೀ ಲಕ್ಷ್ಮೀ ನರಸಿಂಹ ತೋರ್ದರನಾ 8 ಸ್ವಾಪರೋಕ್ಷಿಯ ವೃಂದಾವನಸ್ಥಾ ಗೋಪ್ಯದಿ ವಾಸಿಪ ಮಹಿಮ ವಿಖ್ಯಾತಾ ಗೋಪಾಲಕೃಷ್ಣವಿಠಲನ ಕೃಪಾ ಪಾತ್ರಾ ಕಾಪಾಡು ತವ ದಾಸದಾಸರ ನಿರುತಾ 9
--------------
ಅಂಬಾಬಾಯಿ