ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾಕರನೀತ ಕರಿಭಯ ಹರಿದಾತ ಹರಿಪರಂದೈವೀತ ಗುರುನಾಥ ಧ್ರುವ ಮೂರುಗುಣರಹಿತ ಮೂರುಲೋಕ ವಂದಿತ ಮುರಹರನಹುದೀತ ಗುರುನಾಥ 1 ಸುರಜನ ಪೂಜಿತ ಪರಮಾನಂದಭರಿತ ತಾರಕನಹುದೀತ ಗುರುನಾಥ 2 ಪತಿತಪಾವನೀತ ಪಿತಾಮಹನ ಪಿತ ದಾತನಹುದೀತ ಗುರುನಾಥ 3 ಅನುದಿನ ಸಾಕ್ಷಾತ ದೀನದಯಾಳುನೀತ ಗುರುನಾಥ 4 ಭಕ್ತವತ್ಸಲನೀತ ಶಕ್ತಸದ್ಗುರುನಾಥ ಮುಕ್ತಿದಾಯಕನೀತ ಗುರುನಾಥ 5 ಜನವನದೊಳಗೀತ ಮನೋಭಾವಪೂರಿತ ಆನಂದೋ ಬ್ರಹ್ಮನೀತ ಗುರುನಾಥ6 ಗುಹ್ಯಕೆ ಗುಹ್ಯನೀತ ಬಾಹ್ಯಂತ್ರ ಸದೋದಿತ ಮಹಾಮಹಿಮನೀತ ಗುರುನಾಥ 7 ಇಹಪರ ನಮಗೀತ ಮಹಿಪತಿ ಪ್ರಾಣನಾಥ ಸಹಾಕರನಹುದೀತ ಗುರುನಾಥ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತೇಲಿದೆ ಅಯ್ಯಾ ತೇಲಿದೆ ಪ ತೇಲಿಬಾರದಂಥ ಸುಳಿಯ ಮಡುವುಮುಳುಗಿ ನೀಲಶಾಮನ ಪಾದಕಮಲಕರುಣದಿಂದ ಅ.ಪ ಪಾರಾವಾರಿಲ್ಲದ ಮಡುವು ಕಾಲು ಜಾರಿ ಬಿದ್ದಿದ್ದೆ ತಪ್ಪಿದಡವು ಬಲು ಮೇರೆದಪ್ಪಿದ ತೆರೆ ಸೆಳವು ಉಲಿ ದ್ಹಾರಿಬರುವ ಜಲಚರವು ಆಹ ಮೀರಿದಂಧಕಾರ ನೀರಿನ ಸುಳಿಯೊಳು ಘೋರಬಡುತಲಿರ್ದೆ ಮುಳುಮುಳುಗೇಳುತ 1 ತಂಡತಂಡದಿ ಒದಗುವ ಬಲು ಗಂಡಸುಳಿಯು ತಿರುಗುವ ಒಳ ಗೊಂಡ ಮತ್ಸ್ಯಮಕರಿಭಯವ ಆಹ ಕಂಡು ಕಾಣದೆ ಬಿದ್ದು ಗುಂಡಿಗೊಡೆದು ನಾನು ಬೆಂಡಾದೆ ಕಂಗೆಟ್ಟು ಮುಳುಮುಳುಗೇಳುತ 2 ಹಿಂದಕ್ಕೆ ಏನಾದದ್ದಾಯ್ತು ಶ್ರೀಶ ಮುಂದೆ ಎನ್ನಗೆ ಇಂಥ ಹೊತ್ತು ಈಶ ಎಂದೆಂದು ತರದಿರು ಮತ್ತು ಕೇಶ ಕಂದನ ಸನ್ಮಾರ್ಗಕ್ಹೊತ್ತು ಆಹ ಸಿಂಧುಶಯನ ಎನ್ನ ತಂದೆ ಶ್ರೀರಾಮ ನಿನ್ನ ಬಂಧುರಂಘ್ರಿಯ ಕೃಪೆಯಿಂದ ನಾ ಉಳಕೊಂಡೆ 3
--------------
ರಾಮದಾಸರು
ಪಾಲಯಾ ಉರಗಾರಿ ಗಮನಾ | ಶ್ರೀ ಲಕ್ಷುಮಿ ರಮಣಾ | ಭಂಜನ ಸಾಗರ | ಕೀಲನ ಫಣಿಶಯನಾ | ಭಾಲಲೋಚನ ವಂದಿತ ಚರಣಾ | ತ್ರಿಲೋಕ ಜೀವನಾ | ವಾಲಿ ಮರ್ದನ ಶರಣಾಗತ ಜನ | ಕಮಲ ನಯನಾ 1 ವಾರಜಾನನ ವಾರಿಜ ಭ್ರಮರಾ | ಕರಿಭಯ ನಿವಾರಾ | ನೀಲ - ಶರೀರಾ | ಕೇಶವ ಕೇಯೂರ ಕೌಸ್ತುಭಧಾರ | ನೀರಜಾಸನನುತ ಯದುವೀರಾ | ಶ್ರೀರಂಗ ಗದಾಧರಾ | ಸುಜನ | ಹೃದ್ವನಜ ವಿಹಾರ ಧರಣೀಧರಾ 2 ಮಂದರೋದ್ದರ ಪತಿತ ಪಾವನ | ಕುಂದ ಕುಟುಲಮರದನಾ | ಸ್ಯಂದ ಜನಕ ಸಖಸ್ಮರಪಿತಹರಿ | ಗೋವಿಂದ ಧುರಿತ ಹರಣಾ | ನಂದಕಿಶೋರ ಶ್ರೀ ನಾರಾಯಣಾ | ಸುಂದರ ವದನಾ | ಮಂದರಕುಲರಿಸಹೋದರ ಮಹಿಪತಿ | ನಂದನ ಪ್ರಭು ಕೃಷ್ಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಬಾರನೆ ನರಹರಿ ಬಾರನೆಕರಿಭಯಹರ ಮುರಾರಿ ಬಾರನೆ ಪ. ವೃಂದಾವನದ ಗೋವಿಂದ ಬಾರನೆÉಕಂದರ್ಪನ ತಂದೆ ಮುಕುಂದ ಬಾರನೆ 1 ಎಂದು ಕಾಂಬೆವೊ ನಾವವ[ನ]ನೆಂದು ಕಾಂಬೆÀವೊಇಂದಿರೆಯರಸನನೆಂದು ಕಾಂಬೆವೊ 2 ಧನ ನಿತ್ಯವೆÉ ಯೌವನ ನಿತ್ಯವೆಜನ ನಿತ್ಯವೆ ಕರಣ ನಿತ್ಯವೆ 3 ಮಾಧವ ಒಲಿದ 4 ಇಂದುವರ್ಣದ ಹಯವದನನಾದಮಂದರಧರನ ಸಖಿ ತಂದು ತೋರೆನಗೆ 5
--------------
ವಾದಿರಾಜ