ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊರೆಯಲು ಸರ್ವಸ್ವವನು ನುಂಗಿತು ಪ ಚಿನ್ನ ಚಿಗುರು ಕಂಚು ತಾಮ್ರವನು ನುಂಗಿತು ಮಣಿ ಮುರುಗಳ ನುಂಗಿತು ಬಣ್ಣ ಬಂಗಾರವ ನುಂಗಿತು ಹೊಟ್ಟೆಗೆ ಸಣ್ಣ ಹೆಣ್ಮಕ್ಕಳ ನೆರೆ ನುಂಗಿತು 1 ಮಡದಿ ಮಕ್ಕಳ ಮೇಲಣಾಸೆಯ ನುಂಗಿತು ಜಡದಿ ಜನರ ಸತ್ವಗಳ ನುಂಗಿತು ಬಡವ ಬಲ್ಲಿದರನು ಬಿಡದಪ್ಪಿ ನುಂಗಿತು ಪೊಡವಿ ಯೊಳಗಿರುವಾಸೆಯನು ನುಂಗಿತು 2 ಎಡಬಲದವ ರೊಡವೆಯ ಕದ್ದು ನುಂಗಿತು ಕಡಕಟ್ಟ ತಂದು ಕೊಡದೆ ನುಂಗಿತು ಕೊಡುವ ಬಿಡುವ ಧನಿಯರ ಕೈಯ ನುಂಗಿತು ಕಡಲೋಭಿ ವಿತ್ತವನೆಲ್ಲ ನುಂಗಿತು 3 ದುಡ್ಡಿಗೆ ಪಾವಕ್ಕಿಯ ತಂದು ರಾಗಿಯ ದೊಡ್ಡಂಬಲಿ ಕಾಸಿದರೆ ನುಂಗಿತು ಗುಡ್ಡದಂತವರೆಲ್ಲ ಮಣಿಗೆ ಮಂಡಿಸಿಕೊಂಡು ದೊಡ್ಡಪ್ಪಗಳಿಗೆಲ್ಲ ಸುರಿದುಂಡಿತು4 ಮುನ್ನ ಮಾಡಿದ ಹೊಲ ಮನೆಯನ್ನು ನುಂಗಿತು ಜನ್ನೆ ಆಕಳ ಮಹಿಷಿಯ ನುಂಗಿತು ಅನ್ನವೆ ನುಂಗಿತು ಜನರನ್ನು ಲಕ್ಷ್ಮಿಯನಾಳ್ದ ವನದಾಸರಿಂಗೊಲಿಯಿತು 5
--------------
ಕವಿ ಪರಮದೇವದಾಸರು
ಹಿಂದಿನ ದಿನದಂತಿದಲ್ಲಣ್ಣ ಈಗ ಬಂದಿಹ ದಿನವತಿ ಹೊಸದಣ್ಣ ಪ ಹೆಂಡಿರು ಮಕ್ಕಳ ಕರೆದರೆ ಒಳಗೆ ತಂಡುಲವಿಲ್ಲ ಗಂಜಿಗೆಶರೆ ಉಂಡೆವೆನುತ ಬಾಯ ಬಿಡುತಾರೆ ಇದ ಕಂಡು ನಾಕ್ಷಣವು ಜೀವಿಸಲಾರೆ 1 ಕಡಕಟ್ಟು ಹುಟ್ಟಿತೆಂಬುದು ಹುಸಿಯಿನ್ನು ಕೊಡುವರು ಕೊಡುವುದಿಲ್ಲವೋ ರೋಸಿ ಉಡಲು ತೊಡಲಿಕ್ಕಿಲ್ಲ ಕೈ ಬೀಸಿ ಎದೆ ನಡುಗಿ ಸಾವೆನು ನಾನು ಪರದೇಶಿ 2 ಅತಿಥಿಗಿಕ್ಕಲಿಕೆ ತನಗೇ ಇಲ್ಲ ಪ್ರತಿಮೆ ಲಿಂಗ ಪೂಜೆಗಳು ಜನ್ಮದೊಳಿಲ್ಲ ವ್ರತನೇಮ ದಾನ ಧರ್ಮಗಳಿಲ್ಲ ಪರ ಗತಿಗೇನು ಮುಂದೆ ಸಾಧನವಿಲ್ಲ 3 ಸಂಸಾರದೊಳಗೇನು ಸುಖವಿಲ್ಲ ಪರಮ ಹಂಸನಾಗಲು ಮುಂದೆ ಪಥವಿಲ್ಲ ಕಂಸಾರಿ ಸ್ಮರಣೆ ಎಂದಿಗೂ ಇಲ್ಲ ತಮ ಧ್ವಂಸಿ ಯಣುಗನ ಕೈವಶರೆಲ್ಲ 4 ಕಾಲಗತಿಯು ಬಲು ಬಿರುಸಣ್ಣ ಜನ ಬಾಳುವ ಪರಿಯಿನ್ನು ಹೆಂಗಣ್ಣ ಕೂಳಿಗೆ ಬಗೆಯಿಲ್ಲದಾಯ್ತಣ್ಣ ಲಕ್ಷ್ಮೀ ಲೋಲನ ಮೇಲೆ ಭಕ್ತಿಯಿಲ್ಲಣ್ಣ 5
--------------
ಕವಿ ಪರಮದೇವದಾಸರು