ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈತನೆ ಗತಿಯೆಂದು ನಂಬಿದೆನೆ ನಾ ನೀತನಂಥ ನಿಷ್ಕರುಣನ ಕಾಣೆ ಪಾತಕಹರ ಅ ನಾಥರಕ್ಷಕ ಮಹದಾತ ಪರಮಭಕ್ತ ಪ್ರೀತನೆಂಬುದ ಕೇಳಿ ಪ ಮರುಳಾಗಿವನ ಬೆನ್ಹತ್ತಿದೆನೆ ಮನೆ ಮಾರುಗಳೆಲ್ಲವ ತೊರೆದೆನೆ ಕರುಣವಿಲ್ಲ ತುಸು ಹೊರಳಿ ನೋಡುವಲ್ಲ ತಿರುತಿರುಗಿ ಮನಕರಗಿ ಸಾಕಾಯಿತು 1 ಜಾತಿಹೀನನೆಂಬುವೆನೇನೆ ಲೋಕ ನಾಥನಿಗೆ ಕುಲ ಅದೇನೆ ಈತನ ಹೊರ್ತು ಮತ್ತಾರಾಸೆನಗಿಲ್ಲ ನೀತಿಯೆ ಈತಗೆ ಜಾತಿಭೇದವೆಂಬ 2 ಹೊಲೆಯರ ಮನೆಯಲ್ಲುಂಡನೆ ಇವ ಗೊಲ್ಲರ ಕುಲದಲ್ಹುಟ್ಟಿದನೆ ಗೊಲ್ಲರ ನಲ್ಲೆಯರಲ್ಲಿ ಹೋಗಿ ಈತ ಗುಲ್ಲುಮಾಡಿ ಬೆಣ್ಣೆಗಳ್ಳನೆನಿಸಿಕೊಂಡ 3 ಪಾತರದವಳಲ್ಲಿಗ್ಹೋದನೆ ತಾ ನೀತಿವಂತನ ಕಟ್ಟೊಡ್ಹೆಸಿದನೆ ನೀತಿವಂತರು ಕೇಳಿರೀತನ ರೀತಿಯ ದಾತ ಜಗನ್ನಾಥ 4 ನಿಲ್ಲದು ಮನ ಘಳಿಗಿವನಲಿ ನಾ ಸಲ್ಲದ್ಹಾಂಗ್ಹೋದೆ ಮತ್ತೆಲ್ಲ್ಹೋಗಲಿ ಬಲ್ಲಿದ ಶ್ರೀರಾಮನೆಲ್ಲ್ಹೋದರು ಬಿಡೆ ಕಲ್ಲೆದೆಯವಗಾಗಿ ಪ್ರಾಣಹೋಗಲಿನ್ನು 5
--------------
ರಾಮದಾಸರು
ವಿಶೇಷ ಸಂದರ್ಭದ ಹಾಡುಗಳು 250 * ಅಡಗಿದೇತಕೊ ರಜತ ಕವಚದೊಳಗೆ ಅಡಿ ಭಕ್ತರಾಡುವೋ ಬಿಡಿ ನುಡಿಗೆ ಪ. ಗೇಣು ಪ್ರಮಾಣದಾ ಪ್ರಾಣರಾಯನೆ ಛಿದ್ರ ಕಾಣುತಿರೆ ಶಿಲೆರೂಪದಲ್ಲಿ ನಲಿದು ಆನಂದದಿಂ ನುಡಿದ ಆನತರ ವಚನಕ್ಕೆ ನೀ ನಾಚಿ ಜಗಕಿನ್ನು ಕಾಣಬಾರದು ಎಂದು 1 ದುರುಳ ಸೀತೆಯ ಕದ್ದು ತೆರಳುತಿರೆ ನಿಮ್ಮ ಕಂ ಡರವಿಂದನಯನೆ ಆಭರಣ ಕಟ್ಟೊಗೆಯೇ ಸಿರಿಚರಣ ಸ್ಪರ್ಶವೆನಗಿರಲೆಂದು ಪೈಜಣವ ಮುರಿಸಿ ಕವಚವ ಮಾಡಿ ಮೆರೆವ ವೈಖರಿಯೇ 2 ರಜತಗಿರಿ ವಾಸ ರಣದಲ್ಲಿ ಬ್ರಹ್ಮಾಸ್ತ್ರವನು ಭುಜಬಲದಿ ಬಿಡಲು ಲೆಕ್ಕಿಸದೆ ಮೂದಲಿಸೀ ನಿಜವಾಸ ಸ್ಥಳವಿಲ್ಲದಲೆಯಲೆಂದೆನ್ನುತಲಿ ರಜತಗಿರಿ ಕವಚ ಮಾಡಿರುವ ವೈಭವವೋ 3 ಕುನ್ನಿ ಮತಗಳ ಮುರಿದು ಘನ್ನ ಶಾಸ್ತ್ರವನೊರೆದು ಚನ್ನಕೃಷ್ಣನ ರಜತ ಪೀಠದಲಿ ನಿಲಿಸೀ ಎನ್ನೊಡೆಯನಾಸನವು ಎನಗೆ ಭೂಷಣವೆಂದು ಚನ್ನಾಗಿ ಮೈಗೆ ಸುತ್ತಿರುವ ವಿಸ್ಮøತಿಯೋ 4 ನಿನ್ನಲ್ಲಿ ವಡಕಿರಲು ಪೂಜಿಸುವ ಜ್ಞಾನಿಗಳಿ ಗಿನ್ನೊಂದು ನುಡಿ ಅಜ್ಞರಿಂ ಬೇಡವೆಂದೂ ಚನ್ನಾಗಿ ಹಿಂದೆ ಮುಂದೆಡಬಲದಿ ಮೇಲ್ ಕೆಳಗೆ ಇನ್ನು ತೋರದ ತೆರದಿ ಮರೆಮಾಡಿಕೊಂಡೂ5 ವಡೆಯ ಈರೇಳು ಲೋಕದಿ ವ್ಯಾಪ್ತನಾಗಿ ನೀ ನುಡಿದು ಶ್ರೀಮಂತ್ರ ಜೀವರ ಕಾಯೊ ಎನಲೂ ವಡೆಯಗುತ್ತರ ಪೇಳಲಾರದಲೆ ಬ್ಯಾಸತ್ತು ಪರಿ ಏನೋ 6 ಕಂಡವರು ಬಿಡುವರೇ ಆಡದಲೆ ನಿನ ಚರಿತೆ ಚಂಡ ವಿಕ್ರಮನಹುದೊ ಮುನಿಯದಲೆ ಸಲಹೋ ಕರ ಪೂಜ್ಯ 7
--------------
ಅಂಬಾಬಾಯಿ
ಬುತ್ತಿಯ ಕಟ್ಟೊ - ಮನುಜಾ ||ಬುತ್ತಿಯ ಕಟ್ಟೊ ಪ.ಬುತ್ತಿಯನ್ನು ಕಟ್ಟಿದರೆ |ಎತ್ತಲಾದರುಣ್ಣಬಹುದು ಅಪಧರ್ಮವೆಂಬ ಮಡಿಕೆಯಲ್ಲಿ |ನಿರ್ಮಲ ಗಂಗೆಯನುತುಂಬಿ ||ಸುಮ್ಮಾನದಿಂದಲಿ ಬೇಗ |ಒಮ್ಮನಕ್ಕಿಯ ಅನ್ನಬಾಗಿ 1ಅರಿವು ಎಂಬ ಅರಿವೆಯ ಹಾಸಿ |ಗರಿಮೆ ಹಾಲ - ಮೊಸರ ತಳಿದು ||ಪರಮವೈರಾಗ್ಯದಿಂದ |ಸಿರಿಹರಿಗರ್ಪಿತವೆಂದು 2ಕರ್ತು ಪುರಂದರವಿಠಲನ |ತತ್ತ್ವವೆಂಬ ಬುತ್ತಿಯನ್ನು ||ಹತ್ತಿರ ತಂದಿಟ್ಟುಕೊಂಡು |ನಿತ್ಯವುಂಡು ತೃಪ್ತಿಪಡೆಯೊ 3
--------------
ಪುರಂದರದಾಸರು
ಸ್ಥಿರವಲ್ಲೀಕಾಯಸ್ಥಿರವಲ್ಲ ಹೀಗರಿವಿದ್ದು ಹರಿಪಾದ ಮರೆವರೆ ಪ್ರಾಣಿ ಪ.ಅಟ್ಟಡಿಗೆಎರವುಉಟ್ಟುಡುಗೆಎರವುಇಟ್ಟರೆ ಸಂತತಿಸಿರಿಎರವುಕಟ್ಟೊಡೆದು ಬೆಮರಿಡಿಸಿ ಜವನವರೊಯ್ಯೆಇಟ್ಟಿರುವ ಧಾನ್ಯ ಧನವೆಲ್ಲೊ ಪ್ರಾಣಿ 1ಕೃಪಣತೆಯೊಳಗಿನ ನಿಪುಣತೆ ಬಾರದುಸ್ವಪನ ಸುಖ ಭೋಗಕೆ ಬಾರದುವಿಪಿನದಹನ ಮೃಗದಂತಾಪ್ತರು ಬರರುನೃಪನಾರಾಧನೆ ಫಲವು ಸ್ಥಿರವೆಲೊ ಪ್ರಾಣಿ 2ಹರಿಕೊಟ್ಟಾಗಲೆ ಧರ್ಮ ದೊರಕಿಸಬೇಕುಸರಕಿದ್ದು ತಿರುಕಬುದ್ಧಿಯನು ಬಿಡುಅರಿವುಳ್ಳವರ ಕೂಡಿ ಕೋಟೆಜತನಮಾಡುಮರುಗಲಿ ಬೇಡ ಮುತ್ತಿಗೆ ಬಂತು ಪ್ರಾಣಿ 3ಹವಳ ಮುತ್ತಿನಂಥ ಅವಳಿ ಮಕ್ಕಳ ನಂಬಿಕುವಲಯೇಶನ ಪ್ರಿಯಕುಲೇಶನ ಪುರದಲವಲವಿಕೆಯಲಿ ನಿರಯವಾರ್ತೆ ಜರೆವರೆ ತನ್ನವಳೆ ತನಗೆ ಓಕರಿಸುವಳೊ ಪ್ರಾಣಿ 4ಫಣಿತಲ್ಪಗೊಪ್ಪಿಸಿ ಹಣ ತೃಣ ಮಾಡದಹೆಣ ತನ್ನ ತಾನೆ ಹೊಗಳಿಕೊಂಡರೆಎನಿತುಕಾಲಕೆ ಮೆಚ್ಚ ಪ್ರಸನ್ವೆಂಕಟಪತಿಘನತಪ್ಪ ಕಾಯೆ ತನ್ನವರನು ಪ್ರಾಣಿ5
--------------
ಪ್ರಸನ್ನವೆಂಕಟದಾಸರು