ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಮನ ಕಂಡಕಡೆಗೆ ಎರಗುತಿದೆನಿನ್ನಲ್ಲಿ ನಿಲಿಸಿ ಕಾಯೊ ಪ ಚಕ್ಷುರಿಂದ್ರಿಯಗಳಿಂದ ಚದುರೆಯರಈಕ್ಷಿಸಿ ನೊಂದೆನೈಯಶಿಕ್ಷಕನು ನೀನೆ ಎನಗೆ ಸಿರಿಯರಸಭಕ್ಕುತರೊಳಿಟ್ಟು ಕಾಯೋ 1 ಶ್ರೋತ್ರೇಂದ್ರಿಯಗಳಿಂದ ಸತತ ದು-ರ್ವಾರ್ತೆಗಳ ಕೇಳಿ ಕೆಟ್ಟೆಕರ್ತೃ ಎನಗೆ ನಿನ್ನಯಾ ಕಥೆಗಳನುಅರ್ಥಿಯಿಂದೆರೆದು ಕಾಯೋ 2 ಘಾಣೇಂದ್ರಿಯಂಗಳಿಂದ ದುರ್ಗಂಧಗಳಘ್ರಾಣಿಸಿ ನೊಂದೆನೈಯಪ್ರಾಣೇಶ ನಿನಗರ್ಪಿತ ಪರಿಮಳವಮಾಣದೆ ಇತ್ತು ಕಾಯೋ 3 ರಸನೇಂದ್ರಿಯಂಗಳಿಂದ ಷಡ್ರಸಗಳನುಹಸಿದು ನಾ ಸೇವಿಸಿದೆನೋಬಿಸಜಾಕ್ಷನೇ ನಿನ್ನಯ ಪ್ರಸಾದವನುಆಸ್ವಾದಿಸೆನಗೆ ದೇವ 4 ತ್ವಚೇಂದ್ರಿಯಂಗಳಿಂದ ತಾಮಸರಸೋಕಿ ನಾ ಕೆಟ್ಟೆನೆಯ್ಯಕಾಕು ಮಾಡದೆ ಎನ್ನನು ಸಿರಿಕೃಷ್ಣಸಾಕಾರನಾಗಿ ಸಲಹೋ 5
--------------
ವ್ಯಾಸರಾಯರು
ಎಲೆ ಮನವೆ ಚಲಿಸದಿರು ಕಂಡಕಡೆಗೆ ನಿಲು ನೀನು ಸ್ಥಿರವಾಗಿ ಧ್ಯಾನ ಮಂಟಪದೊಳಗೆ ಪ ಕಲುಷಪೂರಿತವಾದ ಬಲೆಯ ದೂರಕೆ ದೂಡು ಒಲಿದು ರಕ್ಷಿಪುದೆಂದು ಜಲಜಾಕ್ಷನನು ಬೇಡು ಅ.ಪ ಆರು ಮಂತ್ರಿಗಳುಂಟು ಮೂರು ದುರ್ಗಗಳುಂಟು ಮೂರು ಮತ್ತೆರಡಶ್ವ ಸಹಿತ ನೀನು ದೂರ ದೂರದ ಸಿರಿಯ ತರುವೆ ನಾನೆಂದೆನುವೆ ಧೀರ ನೀನೇ ಎಂಬೆ ಮರುಳತನದಿಂದೆ 1 ನಡೆಯೆ ಸತ್ಪಥವೆಂಬೆ ನುಡಿಧರ್ಮವೆಂದೆಂಬೆ ಕುಡುಕನಂತತ್ತಿತ್ತ ಅಲೆಯುತಿರುವೆ ಸಿಡಿಲು ಬಡಿವುದ ಮರೆತು ದುಡುಕಿ ನಿರ್ದಯವಾಂತು ಕೆಡಬೇಡ ಮಾಂಗಿರಿಯ ಅಡಿವಿಡಿದು ಸುಖಿಯಾಗು2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದುಃಖವನೆಷ್ಟೆಂದು ಹೇಳಲಿ ಸಂಸಾರ ಶರಧಿಯಿದುದುಃಖದ ಶರಧಿಯಿಂದ ಪರಮಾತ್ಮನ ಸ್ಮರಣೆಗೆ ವಿಘ್ನವಹುದು ಪ ಮಗ ಬುದ್ಧಿವಂತನಾಗಲಿಲ್ಲವೆಂದೆಂಬಮಗಳಿಗೊದಗಲಿಲ್ಲ ಅಳಿಯ ಎಂದೆಂಬಹಗರಣವಾಯಿತು ಮನೆಯೀಗ ಎಂದೆಂಬ ದುಃಖವೊಂದುಜಗಳಗಂಟಿಯು ಎನ್ನ ಹಿರಿಯ ಸೊಸೆ ಎಂದೆಂಬ ದುಃಖವೊಂದು1 ಹೆಂಡತಿ ವ್ಯಭಿಚಾರಿಯಾದಳು ಎಂದೆಂಬ ದುಃಖವೊಂದುಉಂಡೆನೆಂದರೆ ಅನ್ನವಿಲ್ಲ ಎಂದೆಂಬ ದುಃಖವೊಂದುಕಂಡಕಡೆಗೆ ಹೋಗೆ ಕೈ ಹತ್ತದೆಂದೆಂಬ ದುಃಖವೊಂದುಮುಂಡೆಯಾದಳು ಎನ್ನ ಮೊಮ್ಮಗಳು ಎಂದೆಂಬ ದುಃಖವೊಂದು 2 ನೆಂಟರಿಗೆ ಮಾಡಲೆನ್ನೊಳಿಲ್ಲವೆಂದೆಂಬ ದುಃಖವೊಂದುಒಂಟಿ ಬಯಲಿನ ಹೊಲವು ಬೆಳೆಯದು ಎಂದೆಂಬ ದುಃಖವೊಂದುಕಂಟಕಿ ನಾದಿನಿ ಹಡೆಯಲಾರಳು ಎಂದೆಂಬ ದುಃಖವೊಂದುಎಂಟು ವರಹ ಎಮ್ಮೆ ಸತ್ತಿತು ಎಂದೆಂಬ ದುಃಖವೊಂದು3 ಎದೆ ಮೇಲೆ ಕುಳಿತಿಹರು ದಾಯಾದಿಗಳೆಂದೆಂಬ ದುಃಖವೊಂದುಮುದುಕಿಗೆ ಗೆಲುವು ತಾನಿಲ್ಲವೆಂದೆಂಬ ದುಃಖವೊಂದು ಮದುವೆಗೆ ಹಾದಿಲ್ಲ ಹಾವಳಿ ಎಂದೆಂಬ ದುಃಖವೊಂದುಸದನ ಒಳ್ಳೇದಲ್ಲ ಏಳು ಮಕ್ಕಳ ತಾಯಿ ಎಂಬ ದುಃಖವೊಂದು 4 ಜೋಡಿಪೆ ಧೈರ್ಯವೆಂದರೆ ನಿಶ್ಚಯಾಗಲಿಕೆ ಕೊಡದು ಒಂದುನೋಡುವೆ ಚಿಂತಿಸಿ ಎನೆ ಚಿಂತೆ ಹರಿಯಲು ಕೊಡದು ಒಂದುಮಾಡುವೆ ಮಂತ್ರ ಪೂಜನ ಪೂಜೆ ಮಾಡಲು ಕೊಡದು ಒಂದುಕೊಡುವೆ ಗುರು ಚಿದಾನಂದನೆನೆ ಕೂಡಗೊಡದು ಎಂದು 5
--------------
ಚಿದಾನಂದ ಅವಧೂತರು
ದೇವರ ದೇವನೆ ಕಾಯೊ ದೇವಕಿನಂದನೆ ಕಾಯೊಜೀವರಾಸಿಗಳಿಗೆ ಸಂಜೀವನ ದೇವನೆ ಕಾಯೊ ಪ . ಮಕರಿ ಕೈಗೆಸಿಕ್ಕಿ ಮಾನಭಂಗಗೊಂಡ ದೀನಪ್ರಕೃತಿ ಬಂಧನದಿಂದ ಪಾಡು ಬಡುತ್ತಿದ್ದೆನಯ್ಯ 1 ಕಾಮವೆಂಬ ಕಡುವೈರಿ ಕಂಡಕಂಡಕಡೆಗೆನ್ನಸೀಮೆಯೊಳು ಸುಳಿವಂತೆ ಶ್ರೀಧರ ಮಾಡಿದ ನೋಡು 2 ಶ್ರೀ ಹಯವದನ ನೀನು ಶ್ರಿತಜನ ಕಾಮಧೇನುಮಹಂತನೆಂಬುದ ಕೇಳಿ ಮೆಚ್ಚಿಬಂದೆನಯ್ಯ ನಿನ್ನ 3
--------------
ವಾದಿರಾಜ
ಮನವೆನ್ನ ಮಾತ ಕೇಳದು - ಮಂದಜ್ಞಾನದಿ |ತನುವಿನಾಸೆಯ ಬಿಡಲೊಲ್ಲದು ಪವನಜನಾಭನೆ ನಿನ್ನ ನಾಮ ಸಾಸಿರವ |ನೆನೆಯದೆ ಕಂಡಕಡೆಗೆ ಎರಗುತಲಿದೆ ಅ.ಪದೇಹ ಸಂಬಂಧಿಗಳಾದವರೈವರು |ಮೋಹಪಾಶದಿಕಟ್ಟಿಬಿಗಿದಿಹರೈ ||ಕಾಯಅನಿತ್ಯವೆಂಬುದನರಿಯದೆ |ಮಾಯಾಪ್ರಪಂಚದಿಂದಲಿ ಬದ್ಧನಾಗಿಹೆ1ಸಾಧುಸಜ್ಜನರ ಸಂಗವ ಮಾಡಿ ಪರಗತಿ-|ಗಾಧಾರವನು ಮಾಡಲೊಲ್ಲದಯ್ಯ ||ಕ್ರೋಧಕುಹಕದುಷ್ಟರೊಡನಾಡಿ ಕಾಲನ |ಬಾಧೆಗೆ ಒಳಗಾಗುವಂತೆ ಮಾಡುತಲಿದೆ 2ಮದಗಜ ಮೈಯ ಮರೆತು ಮುಂದುಗಾಣದೆ |ಕದುವಿನೊಳಗೆ ಬಿದ್ದಂತಾದೆನಯ್ಯ ||ಹೃದಯ ಕಮಲದಲಿ ನಿಂತ ರಕ್ಷಿಸೋ ಎನ್ನ |ಪದುಮಾಕ್ಷ ವರದ ಶ್ರೀಪುರಂದರವಿಠಲ3
--------------
ಪುರಂದರದಾಸರು