ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಣು ಮಹತ್ತಾದ ದೇವ ಪ ಅಣುವಿಂಗೆ ಅಣುವು ಮಹತಿಂಗೆ ಮಹಿಮನು ಅಖಿಳಗುಣಭರಿತ ಪರಮ ಪಾವನ ಚರಿತ ಎನ್ನ ನಿರ-ಯಣ ಸಮಯದಲ್ಲಿ ಶ್ರೀಹರಿ ಹರಿಯೆ ಎಂದೆಂಬನೆನಹನೊಲಿದಿತ್ತು ಸಲಹಯ್ಯ ಅ ನೋಡಿ ನಡೆಯದೆ ಹಿಂದನೇಕ ಜನ್ಮಗಳಲ್ಲಿಮಾಡಿರುವ ಪಾತಕವು ವ್ಯಾಧಿರೂಪಗಳಿಂದಪೀಡಿಸುತ ತನುವ ತೊತ್ತಳ ತುಳಿದು ನೆಲಕಿಕ್ಕಿತೀಡಿ ಬಸವಳಿದ ಬಳಿಕನಾಡಿಗಳು ಸ್ವಸ್ಥಾನದಾಸ್ಥಾನ ಛೇದಿಸಲುಓಡಿ ಕಂಠೋಪದಲಿ ಪ್ರಾಣ ನಿಲ್ಲದಲೆ ಒ-ದ್ದಾಡುತಿಹ ಸಮಯದಲಿ ನಾಲಗೆ ಹರಿ ನಾಮವಪಾಡಿ ಪೊಗಳುವುದ ಕರುಣಿಸಯ್ಯ 1 ಕಂದ ಬಾರೆಂತೆಂದು ಶೋಕಿಪ ಜನನಿ ಜನಕನಿಂದಳುತ ಜೇಷ್ಠರು ಕನಿಷ್ಠ ಭ್ರಾತೃಪುತ್ರಬಂಧು ಮಿತ್ರರು ಬಹು ಪ್ರಳಾಪಮಂ ಗೈವ ಸತಿಅಂದವಾಗಿಹ ಮಂದಿರಹೊಂದಿಪ್ಪ ಸಂಪತ್ತು ನೋಡಿ ಹಂಬಲಿಸುತಲಿವೃಂದಾವನ ಪ್ರಿಯನೆ ನಿನ್ನ ಮರೆತಿದ್ದೆ ಗೋ-ವಿಂದ ವೈಕುಂಠ ವಿಭುವೇ ಎಂದು ತಾರಿಸಿ ಮು-ಕುಂದ ಮುಕುತಿಯನೊದಗಿಸಯ್ಯ 2 ಅಚ್ಯುತ ಮುರಾರಿ ಹರಿಯೆಂಬಮಾತನಾಡಿಸಿ ಮುಕುತಿಯೊದಗಿಸಯ್ಯ 3
--------------
ಕನಕದಾಸ
ಪಾಲಿಸೆನ್ನನು ಪದ್ಮಪತ್ರ ವಿಶಾಲಲೋಚನೆ ಜಾಹ್ನವಿಶೈಲಜಾತಾಭಗಿನಿಮಂಗಳೆ ಮೂಲಮಂತ್ರ ಸ್ವರೂಪಿಣಿ ಪ ಹರನ ಜಡೆಯಿಂದಿಳಿದು ಬ್ರಹ್ಮನ ಕರದ ಪಾತ್ರೆಯೊಳ್ನೆಲೆಸಿದೆಸುರರ ಸಂರಕ್ಷಿಸಲು ಭರದಿಂ ಸ್ವರ್ಗಲೋಕವ ಸಾರಿದೆಧರೆಯ ಭಾರವ ತೊಳೆಯಲಲ್ಲಿಂ ಭರದಿ ಸುರಗಿರಿಗೈದಿದೆಹರುಷದಲಿ ಹಿಮಗಿರಿಯ ಶೃಂಗದಿ ಪರಿದು ಪಾವನ ಮಾಡಿದೆ1 ವರ ಭಗೀರಥ ತರಲು ಕಾಶಿಯ ಪುರವರದಿ ನೀ ನೆಲಸಿದೆಥರಥರದ ಪ್ರಾಕಾರ ಮಣಿಗೋಪುರದ ಸಾಲೊಳಗೊಪ್ಪಿದೆನರರು ಮಾಡಿದ ಪಾಪರಾಶಿಯ ತೊಳೆದು ಪಿತೃಗಳ ಸಲಹಿದೆಹರಿಗೊಲಿದು ಮಣಿಕರ್ಣಿಕಾಖ್ಯೆಯ ಧರಿಸಿ ಜಗದೊಳು ತೋರಿದೆ 2 ಜಾಹ್ನವಿ ನಮ್ಮನುಅರ್ತಿಯಿಂ ಸಲಹೆಂಬ ಸ್ತ್ರೀಯರ ಮೊತ್ತವನು ನಾ ಕಂಡೆನು 3 ಚಾರುಮಣಿ ಕೋಟೀರಕುಂಡಲಿ ಹಾರಮಣಿಮಯ ನೂಪುರೆವೀರಮುದ್ರಿಕೆ ಕಡಗ ಕಂಕಣದಿಂದಲೊಪ್ಪುವ ಶ್ರೀಕರೆಹಾರ ಪದಕ ಸಮೂಹ ಕಾಂಚೀದಾಮ ವೈಭವ ಭಾಸುರೆಭೂರಿ ಮರಕತ ರತ್ನಮಾಲ್ಯ ಕೇಯೂರ ಭೂಷಣ ಭಾಸ್ವರೆ 4 ಆಣಿ ಮುತ್ತಿನ ಮೂಗುತಿಯು ಕಟ್ಟಾಣಿ ಗುಂಡಿನ ಸರಗಳುಮಾಣಿಕವು ಬಿಗಿದಿರ್ದ ರಾಗಟೆ ಚೌರಿ ಪೊಸ ಬಾವಲಿಗಳುಕ್ಷೋಣಿ ಗತಿಶಯವಾದ ಮುತ್ತಿನ ಮಲಕು ಮೋಹನ ಸರಗಳು ಕಲ್ಯಾಣಿ ಗಂಗಾದೇವಿಗೆಸೆದವು ಪರಿಪರಿಯ ಭೂಷಣಗಳು 5 ಕಾಲಸರಪಣಿ ಉಂಗುರವು ಅಣಿವೆಟ್ಟು ಪಿಲ್ಲಿಯ ಸಾಲ್ಗಳುಮೇಲೆನಿಪ ವೊಡ್ಯಾಣ ಕಿಂಕಿಣಿ ಗೆಜ್ಜೆಮೊಗ್ಗೆಯ ಸರಗಳುತೋಳಬಳೆ ಭುಜಕೀರ್ತಿ ಹಿಂಬಳೆ ಚಳಕೆಮಣಿದೋರೆಗಳು (?)ಮೇಲೆ ರಂಜಿಪ ನಿಮ್ಮ ನೋಡಿ ಕೃತಾರ್ಥವಾಯ್ತೀಕಂಗಳು 6 ಜಾಹ್ನವಿ ನಿರ್ಮಲೆರಂಗದುದ್ಘತರಂಗ ಶ್ರೀಕರ ಪಾವನೀಕೃತ ಭೂತಲೆಭಂಗಿತಾಮಯಸಂಘೆ ಮಂಗಲಸೂತ್ರಯುತ ಕಂಠೋಜ್ವಲೆಮಂಗಲಾತ್ಮಿಕೆ ಮಹಿತೆ ಕರುಣಾಪಾಂಗೆ ಶರದಿಂದೂಜ್ವಲೆ 7
--------------
ಕೆಳದಿ ವೆಂಕಣ್ಣ ಕವಿ
ಸಂತರ ನೋಡಿರೈ ಅನಂತನ ಪಾಡಿರೈ | ತಂತುವಿಡಿದು ನಿಶ್ಚಂತದಿ ಮುಕ್ತಿಯ | ಪಡೆದವರಾ ನಿಂದವರಾ ಪ ದ್ವಿತಿಯೋ ಭಾಗೀರಥಿಯೋ | ಹರಿಪ್ರಸಾದವಕೊಂಬುವ ಸಂತರ | ಉದರೋ ಶ್ರೀ ಕೇದಾರೋ | ಹೃದಯೋ ವೇದದ್ಭುಧವೋ | ಕಂಠೋ ಭೂವೈಕುಂಠೋ ಮ 1 ಕರವೋ ಕಾಶಿಪುರವೋ | ವರವೋ ರಾಮೇಶ್ವರವೋ | ಕಿವಿಯೋ ಶಾಸ್ತ್ರದ ಗವಿಯೋ | ಅಮೃತ ಸದನೋ 2 ಹರಿಪದಧ್ಯಾಯಿಸಿ ನೋಡುವ ಸಂತರ | ನಯನೋ ಸ್ವಸುಖದಯನೋ | ಹರಿನಿರ್ಮಾಲ್ಯವನಾಘ್ರಾಣಿಪನಾ | ಶಿಕವೋ ಆವಂತಿಕವೋ | ಧರೆಯೊಳು ಮತ್ತೊಂದನ್ಯಕ ಯರಗದ | ಹಣಿಯೋ ಮುತ್ತಿನ ಮಣಿಯೋ | ಶಿರವೋ ಕಂಚಿಪುರವೋ 3 ಪರರುಪಕಾರ ಬಾಳುವ ಸಂತರ | ಇರವೋ ಕಲ್ಪತರುವೋ | ಧರೆಯೊಳು ಮಾಡುವ ಸಂತರ ವ್ಯವಹಾ | ರಗಳೋ ಹರಿಶೇವೆಗಳೋ | ನುಡಿಯೋಭವದಿಕ್ಕೆಡಿಯೋ | ಹರಿಪ್ರೇಮದಿ ತುಳಕ್ಯಾಡುವ ಜಲಬಿಂ | ದುಗಳೋ ಭಕ್ತಿಯ ಮುಗಳೋ 4 ನುಡಿಯೋ ಸದ್ಗತಿಯಡಿಯೋ | ಭ್ರಮವಿಷಯಕ ಹಚ್ಚದೆ ಕುಂದದಲಿಹ | ಮನವೋ ನಂದನವನವೋ | ಕಮಲಾಕ್ಷನು ಸಂತರ ಆಜ್ಞಾ | ಧಾರಕನೋ ನೆರೆಪಾಲಕನೋ | ಕ್ರಮವರುಹಿದ ಗುರುಮಹಿಪತಿ ನಂದನ | ಪ್ರಿಯನೋ ಕರುಣಾಲಯನೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು