ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಳಲಕೃಷ್ಣ ಬಂದು ನಿಲ್ಲೊ ಹೃದಯ ಕಮಲದಿ ನಳಿನನಾಭ ನಿನ್ನ ದಿವ್ಯ ಚಲುವ ರೂಪದಿ ಪ. ಶಿರದಿ ಮಕುಟ ಫಣೆಯ ತಿಲುಕ ಒಲಿವ ಮುಂಗುರುಳು ನಾಸಿಕ ಗಲ್ಲ ಹೊಳೆಯುತ 1 ಕರ್ಣದಲಿ ಕುಂಡಲಗಳು ಸ್ವರ್ಣ ಕಂಠವು ನಿನ್ನ ದಂತ ಹೊಳೆಯುತಿರಲು ಚನ್ನ ಶ್ರೀಹರಿಯೆ 2 ಅಧರ ಉರದಿ ಲಕ್ಷಿಯು ನಳಿತೋಳಿನಲಿ ಶಂಖ ಚಕ್ರ ವೇಣು ಪಿಡಿದಿಹ 3 ಕಮಲ ಮಾಲೆ ಮೇಲೆ ತುಳಸಿಯು ಮಾರಜನಕ ಹೊಳೆವೊ ಜರಿಯ ಪೀತ ವಸನವು 4 ರಕ್ತವರ್ಣ ವಸನ ಉಟ್ಟು ಕಟ್ಟಿ ಕಿರುಗೆಜ್ಜೆ ಮುಕ್ತರೊಡೆಯ ಮುಕ್ತಿಕೊಡುವ ಪಾದಕಮಲವು 5 ಕ್ಲೇಶ ಕಳೆಯುತ ದಾಸ ಜನರ ಕಾಯ್ವ ಕೃಷ್ಣ ಘಾಸಿಗೊಳಿಸದೆ 6 ಗುರುಗಳಲ್ಲಿ ನಿಂತು ಎನ್ನ ಹರುಷಪಡಿಸೊ ನೀ ಪರಮಪುರುಷ ನರಹರಿಯೆ ದುರಿತದೂರನೆ 7 ನೀರೊಳಾಡಿ ಭಾರಪೊತ್ತು ಕೋರೆ ತೋರಿದೆ ಘೋರರೂಪಿ ಬ್ರಹ್ಮಚಾರಿ ಕ್ಷತ್ರಿಯಾರಿ ನೀ 8 ಶ್ರೀ ಹರಿ ರಾಮ ಕೃಷ್ಣ ಬೌದ್ಧ ಕಲ್ಕಿಯೆ ಗೋಪಾಲಕೃಷ್ಣವಿಠ್ಠಲ ರೂಪ ತೋರೊ ನೀ 9
--------------
ಅಂಬಾಬಾಯಿ
ಶೃಂಗೇರಿ ಮಂಗಳಂ ಸರಸಿಜೋದ್ಭವನರಸಿಗೆ ಪ ಭಕ್ತರಿಗೆ ತಾನೊಲಿದು ಬಂದು ಪ್ರತ್ಯಕ್ಷಳಾದ ಶಾರದದೇವಿಗೆ 1 ಶಾರದದೇವಿಗೆ 2 ಕೆತ್ತನೆ ಅಡ್ಡಿಕೆ ಮುತ್ತಿನಕಟ್ಟಾಣಿ ಹಸ್ತಕಡಗ ಹರಡಿ ವಂಕಿನಿಟ್ಟು ಕಮಲ ಗಿಣಿ ಪುಸ್ತಕಕಂಠವು ಭಕ್ತರಿಗಭಯವ ತೋರುವ ದೇವಿಗೆ 3 ಅಂದುಗೆ ಇಂದಿರೆರಮಣನಸೊಸೆ ಶಾರದೆಗೆ 4 ಶ್ರೀನಿವಾಸನಪಾದ ತೋರ್ಪ ಶಾರದೆಗೆ 5
--------------
ಯದುಗಿರಿಯಮ್ಮ
ಸಚ್ಚಿದಾನಂದಮಯಗೆಚ್ಚರಿಕೆ ಪ ನಿಶ್ಚಯದ ನಿರುಪಮಂಗೆಚ್ಚರಿಕೆ ಅಚ್ಚರಿಯ ಸಚ್ಚಿತ್ರಂಗೆಚ್ಚರಿಕೆ ಅ.ಪ ಕಾಂತೆಯರ ಮನೆಗೆ ಶ್ರೀಕಾಂತ ಪೊರಮಡುತಿಹನು ಕಾಂತೆಯರು ಕಟ್ಟುಮೆಟ್ಟದವೊಲೆಚ್ಚರಿಕೆ 1 ಸಂಚಿತಾಭರಣಗಳ ಮಿಂಚುಗುರುಚರಣಗಳ ಕುಂಚ ಕಾಳಂಜಿಯವರೆಲ್ಲವೆಚ್ಚರಿಕೆ 2 ನೀಡೆಸೆವ ಸೆಳ್ಳುಗುರು ಮೂಡುತಿಹ ಮೊಲೆಹೊಗರು ಆಡಿಸುವ ಹಡಪದವರೀಗ ಎಚ್ಚರಿಕೆ 3 ಬಿಂಬಾಧರಂ ಪೊಳೆಯೆ ಕಂಬುಕಂಠವು ಹೊಳೆಯೆ ಪೊಂಬಾಳ ದೀವಿಗೆಯ ಜನರು ಎಚ್ಚರಿಕೆ 4 ಚೆನ್ನಸಿರಿಯರಮನೆಯ ಚಿನ್ನವಾಗಿಲ ಕೊನೆಯ ರನ್ನದೋರಣ ತಡಿಯವರೆಚ್ಚರಿಕೆ 5 ಇಂದಿರಾದೇವಿಯರ ಮಂದಿರದ ಬೀದಿಯೊಳು ಸಂದಣಿಯಲತಿ ಜತನವಿರಲಿ ಯೆಚ್ಚರಿಕೆ 6 ದೇವಿಯರ ಮನೆಗೆ ವಿವಾಹ ತಾಬೇಡಿ ಬಂದ ದೇವಪುರ ಲಕ್ಷ್ಮೀಶಗೆಚ್ಚರಿಕೆ 7
--------------
ಕವಿ ಲಕ್ಷ್ಮೀಶ