ಒಟ್ಟು 6 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದಯ ಕಾಲವಿದು ನಮ್ಮ ಪದುಮನಾಭನ ಉದಯಕಾಲವಿದು ಪ ಉದಯಕಾಲವಿದು ಪದುಮನಾಭನ ದಿವ್ಯ ವಿಧವಿಧ ಸೃಷ್ಟಿಯ ಮುದದಿ ಸಾಗಿಸುವಂಥ ಅ.ಪ ಪರಮ ಕರುಣಿ ದೇವ ತನ್ನ ಚರಣದಾಸರ ಕಾವ ಮರವೆ ಮಾಯದೊಳು ಹೊರಳುತ ಒರಲುವ ನರರಿಗರಿವನಿತ್ತು ವರವ ಪಾಲಿಸುವ 1 ಅನ್ನ ಆಹಾರವಿತ್ತು ಸೃಷ್ಟಿಯ ಭಿನ್ನವಿಲ್ಲದೆ ಪೊತ್ತು ಬನ್ನಬಡುತ ಬಲು ಕುನ್ನಿಪ್ರಾಣಿಗಳ್ಗೆ ಉನ್ನತ ಸುಖವಿತ್ತು ತನ್ನಂತೆ ನೋಡುವ 2 ಮಾಧವ ಸುಜನರ ಪಾಲಿಸುವ ನಿಜಮನದೊಳು ತನ್ನ ಭಜಿಸುವ ಜನರಿಗೆ ಸಾಯುಜ್ಯ ನೀಡುವ 3 ಯೋಗಿ ಜನರ ಪ್ರಿಯ ಕ್ಷೀರಸಾಗರಕನ್ಯೆಯೊಡೆಯ ಬಾಗಿ ಸದೃಢದಿ ಸುರಾಗದಿ ಪಾಡುವ ಭಾಗವತರ ನಿಜ ಯೋಗಕ್ಷೇಮ ಕೇಳ್ವ 4 ಶಾಮಸುಂದರಾಂಗ ಪುಣ್ಯನಾಮ ಕೋಮಲಾಂಗ ಕಾಮಿತಜನಪೂರ್ಣ ಕಾಮಜನಕ ತ್ರಿ ಭೂಮಿಗಧಿಕ ಮಮಸ್ವಾಮಿ ಶ್ರೀರಾಮ 5
--------------
ರಾಮದಾಸರು
ಎಂದು ನೀ ನೀಡುವಿಯೊ ಮನಶಾಂತಿ ಗೋವಿಂದನೆ ಎನಗೆ ಒಂದೂ ತೋರದೆ ಕವಿದಿಹುದೊ ಭ್ರಾಂತಿ ಪ ಒಂದು ಘಳಿಗೆ ನಿನ್ನ ಪೊಗಳುವೆನೆಂದರೆ ಬಂದೊದಗುವುದೊ ಕುಂದು ಸಹಸ್ರವು ಅ.ಪ ಅನುದಿನ ಗಣನೆಗೆ ಬಾರದ ನುಡಿಗೆ ಕೊನೆಮೊದಲುಗಳಿಲ್ಲದೆ ದಿನಗಳು ಕಳೆದುವು ದುರ್ವಿಷಯದಲಿ ಎಣೆಯಿಲ್ಲದೆ ಎನ್ನ ಮನದಲಿ ಬೇಸರ ಜನಿಸಿ ಕೊರೆಯುತಿದೆ ಅನವರತದಿ ನಿನ್ನ ಮನನದಿ ನಲಿಯಲು 1 ಮರುಳು ಮೋಸಗಳಲಿ ಚತುರತೆಯುಳ್ಳ ದುರುಳರು ಸಂತತ ಮುಖ ವರಳುವ ತೆರದಲಿ ಸಡಗರದಿಂದ ಒರಲುವ ವಚನಗಳ ತಿರುಳುಗಳೆಲ್ಲವನರಿತು ಮನ ತೆರಳದೆ ಸಹಿಸುತ ನರಳುತಿರುವೆನೊ2 ಬಗೆ ಬಗೆ ಮಾಡುತಲಿರುವ ದುರಾಶೆಯಗಲಿದೆ ಮನವನ್ನು ಹಗರಣ ಮಾಡಿದೆನೋ ಜೀವನವ ನಗೆಗೀಡಾದೆನು ನಾ ಹಗೆ ಪಡ್ವರ್ಗವನೊಗೆದು ತವಚರಣ ಯುಗಳದಲಿ ಮನವು ಪ್ರಸನ್ನವಾಗುವಂತೆ 3
--------------
ವಿದ್ಯಾಪ್ರಸನ್ನತೀರ್ಥರು
ನಾನಾ ಯೋನಿಗಳೊಳು ಹೀನಜನ್ಮದಿ ಬಂದು ನಾನು ತಿರುಗಲಾರೆನೊ ಗೋಪಾಲ ಪ. ಶ್ರೀನಿವಾಸ ನಿನ್ನ ಸೇರಿದ ಬಳಿಕ ಉದಾಸೀನ ಮಾಳ್ಪರೇನೋ ಗೋಪಾಲ ಅ.ಪ. ಇಂದ್ರಿಯದೊಳಿದ್ದೆನೊ ಗೋಪಾಲ ಪಿಂಡವಾದೆನೊ ಗೋಪಾಲ ಮಾಸ ನಾಲ್ಕಯಿದಾಗಲ ವಯವಂಗಳಿಂದ ಬೆಳೆವುತಿದ್ದೆನೊ ಗೋಪಾಲ 1 ನರಳಿ ಕೋಟಲೆಗೊಂಡೆನೊ ಗೋಪಾಲ ಹಿರಿದು ಚಿಂತಿಸಿದೆನೊ ಗೋಪಾಲ ಕಷ್ಟಬಡುತಿದ್ದೆನೊ ಗೋಪಾಲ ಸಂದ ಧರೆಗೆ ಪತನವಾದೆನೊ ಗೋಪಾಲ2 ಘಾಸಿಯೊಳೊರಲುವೆನೊ ಗೋಪಾಲ ಘಾಸಿಸಿ ದುಃಖಿಪೆನೊ ಗೋಪಾಲ ಬ್ಯಾಸತ್ತು ಒರಲುವೆನೊ ಗೋಪಾಲ ಶ್ವಾಸ ಎತ್ತಿದೆನೊ ಗೋಪಾಲ 3 ಬಾಲತನದಿ ಬಹುವಿಧದಾಟವ ತೋರಿ ಮೇಲನರಿಯದಿದ್ದೆನೊ ಗೋಪಾಲ ಮಾರ್ಜಾಲ ಘಾತಕನಾಗಿದ್ದೆನೊ ಗೋಪಾಲ ಕೂಳಿಗೀಡಾಗಿದ್ದೆನೊ ಗೋಪಾಲ ಪಾಳೆಯಕೀಡಾದೆನೊ ಗೋಪಾಲ 4 ಆಗಿ ಬಾಳುತಲಿದ್ದೆನೊ ಗೋಪಾಲ ನೀಗಿ ಬಾಳುತಿದ್ದೆನೊ ಗೋಪಾಲ ಬಾಧೆಗೆ ಬೆಂಡಾದೆನೊ ಗೋಪಾಲ ಆಗಲು ಪುತ್ರ ಬಾಂಧವರಿಗೋಸ್ಕರ ಭವ- ಸಾಗರ ಎತ್ತಿದೆನೊ ಗೋಪಾಲ 5 ಬಾಲ್ಯಯೌವನವಳಿದು ಜರೆ ಒದಗಿ ನಾನು ಮೇಲೇನರಿಯದಿದ್ದೆನೊ ಗೋಪಾಲ ಬೀಳುತೇಳುತಲಿದ್ದೆನೊ ಗೋಪಾಲ ಹೋದಂತಿದ್ದೆನೊ ಗೋಪಾಲ ಗೂಳಿಯಂದದಲಿದ್ದೆನೊ ಗೋಪಾಲ 6 ಬಾಳುತಲಿದ್ದೆನೊ ಗೋಪಾಲ ಗಿಷ್ಟನೆನಿಸಿಕೊಂಡೆನೋ ಮುಟ್ಟರೆನಿಸಿಕೊಂಡೆನೊ ಗೋಪಾಲ ಕೊಟ್ಟು ತಿನಿಸಿದೆನೊ ಗೋಪಾಲ7 ವೇದನೆಗೊಳುತಿದ್ದೆನೊ ಗೋಪಾಲ ಕೊಂಡದಿ ಬಿದ್ದೆನೊ ಗೋಪಾಲ ಗುಹ್ಯ ಯಾತನೆಗೊಳಗಾದೆ ಗೋಪಾಲ ಬಾಧೆಯೊಳು ಒರಲುವೆನೊ ಗೋಪಾಲ 8 ನಿನ್ನ ನೆನೆಯದಿದ್ದೆನೊ ಗೋಪಾಲ ದುಷ್ಟಬುದ್ಧಿಯೊಳಿದ್ದೆನೊ ಗೋಪಾಲ ಶ್ರೇಷ್ಠಜನ್ಮದಿ ಬಂದೆನೊ ಗೋಪಾಲ ಸೃಷ್ಟಿಯೊಳು ತುರುಗೇರಿ ಗುರು ಅಚಲಾನಂದವಿಠಲ ಸಲಹೆಂದೆನೋ ಗೋಪಾಲ 9
--------------
ಅಚಲಾನಂದದಾಸ
ನೀಚಮತಿ ಎಲೆ ನೀಚಮತಿ ಊಚನೆನಿಸಿಕೊಂಬ ಯೋಚನೆ ಬಿಡುಕಂಡ್ಯ ಪ ತರಿಯದೆ ಕುಟಿಲತ್ವ ಮರೆಯದೆ ದುಶ್ಚಟ ಧರೆಯ ಭೋಗವ ನೆಚ್ಚಿ ಶರಣರ್ವೇಷÀವÀ ತಾಳಿ ಮರವೆ ಮಾಯದಿ ಬಿದ್ದು ಒರಲುವ ನರರಿಗೆ ಬರಿದೆ ಬೋಧಿಪೆನೆಂಬ ಭ್ರಮೆಯಿಂದ ಫಲವೆ 1 ಮಾಯಮೋಹಿಗಳ ಉಪಾಯದಿ ಕೂಡಿಸಿ ಸೇವಿಸದಾಹಾರ ಸೇವಿಸುತನುದಿನ ಕಾಯಬಲಿಸಿ ಕುಣಿವ ಮಾಯಮೋಹಿಯ ಬರಿ ಬಾಯ ಬ್ರಹ್ಮತ್ಯಬಂಧ ಬಯಲಪ್ಪುದೇನೆಲೆ 2 ಧರಿಸಿದ ಲಾಂಛನ ಅರಿಯದೆ ಮೇಲೆ ನೀ ಬರಿದೆ ಕಾವಿಯನ್ಹೊದ್ದು ಕರದಿ ಕಮಂಡಲ ಧರಿಸಿ ಮರುಳರಿಗೆಲ್ಲ ಪರತತ್ತ್ವವರಿಯಲು ಜರೆಮರಣದು:ಖವು ಪರಹಾರಮೆಂತೆಲೆ 3 ಭವಭವದಲಿ ಬಟ್ಟಬವಣೆಯ ಸ್ಮರಿಸಿದೆ ಭವಗೆಲಿಸುವ ಅನುಭವ ತಿಳಿಯದೆ ಸ ದ್ಭವಿಗಳ ನೆರೆಯಿಸಿ ಕವಿತೆ ಬಿಡಿಸಿ ಬಹು ಸವಿಮಾತ್ಹೇಳಲು ಮೂಲಭವಭೀಜಳಿಯುವುದೆ 4 ತನ್ನ ತನ್ನದುಯೆಂಬ ಭಿನ್ನವಿಲ್ಲದೆಸದಾ ತನ್ನ ಸ್ವರೂಪ ಪರರನ್ನು ಬಗೆದು ನಿತ್ಯ ಸನ್ನುತ ಶ್ರೀರಾಮನುನ್ನತಂಘ್ರಿಗೆ ಪೊಂದಿ ಧನ್ಯರಾಗದೆ ನರಕುನ್ನಿಯೆನಿಸುವರೇನೋ5
--------------
ರಾಮದಾಸರು
ಸುಮ್ಮನಿರು ಬೇಡಿಕೊಂಬೆ ಕಾಡದಿರು ಕೃಷ್ಣ |ಉಮಾಪತಿಯೆಂಬ ಗುಮ್ಮ ಬಂದಿದೆಕೊ ಪಐದು ಮುಖ ಐದು ಈರೈದು ಕಣ್ಣುಗಳಿಂದ |ಐದು ಪಣೆಯೊಳಗಗ್ನಿ ಕಿಡಿಯುದುರುತ ||ಐದೆರಡು ತೋಳು ಭುಜಗಳ ಒಲೆದಾಡಿಸುತ |ಐದು ಬಾಣಗೆ ಮುನಿದ ಗುಮ್ಮ ಬಂದಿದೆಕೊ 1ಬಾಲಚಂದ್ರನ ಪೊತ್ತುಕೊಂಡು ತ್ರಿಶೂಲದಿ |ಮೇಲೆ ಒರಲುವ ಭೂತಗಣ ಸಹಿತದಿ ||ಕಾಲಭೈರವನ ಕಾವಲಿಗಿರಿಸಿ ಮರುಳ್ಗಳ |ಸಾಲುಸಹಿತನಾಗಿ ಬಾಗಿಲಿಗೆ ಬಂದಿದೆಕೊ 2ಲಂಡದಾನವರ ಶಿರಗಳ ತರೆದು ಬಿರುದಿನ |ರುಂಡಮಾಲೆಯ ಧರಿಸಿ ಆರ್ಭಟಿಸುತ ||ಅಂಡಲೆದು ಅಷ್ಟದಿಕ್ಕುಗಳೆಲ್ಲ ಬೆದರಿಸುತ |ಪುಂಡರೀಕಾಕ್ಷನ ತೋರು ತೋರೆನುತ 3ಕರಿಚರ್ಮವ ಪೊದ್ದು ಕರದಿ ಒಡನೆ ಪಿಡಿದು |ಕರಿಜಡೆಗಳನೆಲ್ಲ ಕೆದರಿಕೊಳುತ ||ಹರಿವ ನೀರನು ನೆತ್ತಿಯೊಳು ಹೊತ್ತು ಹಾವುಗಳಾ-|ಭರಣಸಹಿತಾಗಿ ಬಾಗಿಲಿಗೆ ಬಂದಿದೆಕೊ4ಮುದಿಯೆತ್ತನೇರಿ ಮೈಯೆಲ್ಲ ಬೂದಿಯ ಪೂಸಿ |ಮದನಾರಿಯೆಂಬಂಥ ಬಲಭೂತವು ||ಹೃದಯದಲಿ ನಿನ್ನ ನೋಳ್ಪೆನೆಂಬ ಧ್ಯಾನದಲಿ |ಒದಗಿ ಬಂದಿಹನಿದೊ ಪುರಂದರವಿಠಲ 5
--------------
ಪುರಂದರದಾಸರು