ಒಟ್ಟು 6 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆ ನಾನಿನ್ನ ಚರಣವನಂಬಿಗ ಅಂಬೆಗಳ ಸುತನೆ ಕೋ ಬ್ಯಾಗಂಬಿಗ ಪ ಇಂಬಾಗಿ ದಡ ಸೇರಿಸೆನ್ನನೇನಂಬಿಗ ತುಂಬಿ ನದಿ ಸೂಸುತಲಿದೆ ನೋಡಂಬಿಗ ಅ.ಪ. ಕರ್ಮವೆಂಬ ಪ್ರವಾಹವ ನೀ ನೋಡಂಬಿಗ ಚರ್ಮದಿಂದೇಳು ಹೊದ್ದಿಕಿ ಅಂಬಿಗ ಮರ್ಮ ಒಂಭತ್ತು ರಂಧ್ರ ಉಂಟಂಬಿಗ ಶರ್ಮವಿದಕೆ ಕಾಯದ್ಹರಿಗೋಲಂಬಿಗ 1 ಆಳ ಬಹಳ ಗೊತ್ತಾಗದಂಬಿಗ ಶೆಳವು ಘನ ಉಳ್ಳುಹುದು ನೋಡಂಬಿಗ ಸುಳಿಗಾಳಿಗೆ ಸಿಗಿಸದಿರೊ ಅಂಬಿಗ ಬಳಸಿ ಕೊಂಡೊಯ್ಯೋದು ಒಳ್ಳೇದೆ ಅಂಬಿಗ 2 ಸಂಚಿತಾಪ್ತಿ ಇವರೊಳುಂಟಂಬಿಗ ಭಾರ ಜಡಿಯೋದು ನೀ ನೋಡಂಬಿಗ ವಂಚಕ ಮಾತು ರಾಗವು ಹೆಚ್ಚಂಬಿಗ ಚಂಚಲಗೊಂಡು ಭ್ರಮಿಸೋದು ಕಾಣಂಬಿಗ 3 ಆಶಾಜಲ ಮೇಲೆ ಮೇಲೆ ಬರುವುದಂಬಿಗ ಮೋಸ ಮಾಡುವುದೇನೊ ಕೊನೆಗೆ ಅಂಬಿಗ ಪೊಸ ಪೊಸ ಕಾಮತೆರೆ ತುಂಬಾಯಿತಂಬಿಗ ಲೇಶವಾದರು ಬತ್ತದು ನೋಡಂಬಿಗ4 ಅಷ್ಟ ಆನೇ ಒಳಗಿಟ್ಟುಕೊಂಡಿಹುದಂಬಿಗ ಹುಟ್ಟು ಹಾಕೋದು ಬಿಟ್ಟು ಜಲ್ಲೆ ಕೊಳ್ಳಂಬಿಗ ಬೆಟ್ಟ ಆರಕ್ಕೆ ಸಿಕ್ಕಿಸದೆ ನೋಡಂಬಿಗ ನೆಟ್ಟ ನಡುವಿನ ಪಥದಿ ಒಯ್ಯೋ ಅಂಬಿಗ 5 ಸುತ್ತ ಕಾರ್ಮುಗಿಲು ಬಂತಲ್ಲೊ ಅಂಬಿಗ ಹತ್ತು ಹನಿಗಳು ಬಿತ್ತು ನೋಡಂಬಿಗ ಎತ್ತಿ ನಡೆಸೋದು ಶಕ್ತಿ ನಿನ್ನದು ಕಾಣಂಬಿಗ ಹತ್ತಿಸೊ ಭಕ್ತಿದಡಕಿನ್ನಂಬಿಗ 6 ಮರಕಟಿ ಸೇರಿಹದಿದರೊಳಗಂಬಿಗ ಕರೆಕರೆಗೆ ಗುರಿ ಮಾಡೊದಿದೆ ಅಂಬಿಗ ಸರಿಯಾಗಿ ನಡೆಸೊ ಇನ್ನಾದರಂಬಿಗ ವರದವಿಜಯ ರಾಮಚಂದ್ರವಿಠಲ ನೀನಂಬಿಗ 7
--------------
ವಿಜಯ ರಾಮಚಂದ್ರವಿಠಲ
ಮುಯ್ಯ ಒಯ್ಯೋಣು ಬಾರೆ ಮಾನಿನಿಯರೆಲ್ಲರು ನೀರೆಮೈ ಮರೆದೇನೆ ನಾರಿ ಮಾರನಯ್ಯನ ತೋರೆ ಪ. ಹರದಿ ಸುಭದ್ರಾ ತಮ್ಮ ದೊರೆಗಳಿಗೆ ಅರುಹಲು ಪರಮ ಹರುಷರಾಗಿ ಐವರು ಚಪಲಾಕ್ಷಿ ಪರಮ ಹರುಷರಾಗಿ ಐವರು ಮುಯ್ಯಕ್ಕದುರದಿಂದ ಭೇರಿ ಹೊಯ್ಸಿದರ ಚಪಲಾಕ್ಷಿ1 ಹಸ್ತಿನಾಪುರದರಸು ಮತ್ತೆ ಜೋಯಿಸರ ಕರೆಸಿ ಮುತ್ತು ತುಂಬಿಡಿಸಿ ಮರದಾಗ ಚಪಲಾಕ್ಷಿಮುತ್ತು ತುಂಬಿಡಿಸಿ ಮರದಾಗ ಮುಯ್ಯಕ್ಕಉತ್ತಮ ತಿಥಿಯು ಬರಬೇಕು ಚಪಲಾಕ್ಷಿ 2 ಧರ್ಮನ ಪ್ರಶ್ನೆಯ ಪ್ರೇಮದಿಂದಲೆ ಕೇಳಿ ಅಮ್ಮಯ್ಯ ಶ್ರೀ ರಮಣನ ನೆನೆಯುತ ಚಪಾಲಾಕ್ಷಿ ಶ್ರೀ ರಮಣನ ನೆನೆಯುತ ಬೃಹಸ್ಪತಿಜಮ್ಮನೆ ತೆಗೆದಾ ಶುಭತಿಥಿಚಪಲಾಕ್ಷಿ3 ಈಗಿನ ವ್ಯಾಳ್ಯಕ್ಕ ಜಾಗು ಮಾಡದೆ ಕೃಷ್ಣಿಹೋಗ ನೀಗೆದ್ದು ಬರತೀಯೆ ಚಪಲಾಕ್ಷಿಹೋಗ ನೀಗೆದ್ದು ಬರತೀಯೆ ಎನುತಲೆ ಆಗಬೃಹಸ್ಪತಿಯು ನುಡಿದಾನೆ ಚಪಲಾಕ್ಷಿ 4 ಇಂದಿನ ದಿವಸÀಕ್ಕ ಸಂದೇಹ ಬ್ಯಾಡವ್ವಾ ತಂದೆರಾಮೇಶನ ಮಡದೇರ ಚಪಲಾಕ್ಷಿತಂದೆ ರಾಮೇಶನ ಮಡದೇರ ನಾಚಿಸಿ ಬಂದಿಯೆಕೃಷ್ಣಿ ನಗುತಲೆ ಚಪಲಾಕ್ಷಿ5
--------------
ಗಲಗಲಿಅವ್ವನವರು
ವಿಸ್ತರಿಸಿ ಬರುವನೊ ರುಕ್ಮಿಣಿಗೆ ಹಸ್ತಕಳ ಕಳಹುವನೊಮಿತ್ರೆ ದ್ರೌಪತಿ ಸುಭದ್ರೆ ಮುಯ್ಯಾಒಯ್ಯೋ ವರ್ತಮಾನವೆಲ್ಲ ಅರುಹೋನು ವಿಸ್ತರಿಸಿ 1 ಹೇಳದೆ ಹೋಗುವನೊ ಅಥವಾ ಸುದ್ದಿತಿಳಿಯದೆ ಕಳುಹುವನೊಭಾಳ ಚರ್ಚೆಯ ಮಾತು ಭಾಮೆಯಕಿವಿಗೆ ಬೀಳದಂತೆ ಕಾಳಿ ಹಿಡಿಸುವನೊ2 ಮೊದಲಿಗೆ ಅರುಹುವನೊ ಅಥವಾಬೆದರದೆ ನಗುವನೊಮದಗಜಗಮನೆಯರ ಎದೆ ಧಿಗಿಲೆಂಬಂತೆಚದುರ ಚರ್ಚೆಯ ಡಂಕಿ ಹೊಯ್ಸುವನೊ 3 ಎಚ್ಚರ ಕಳಹುವನೊ ಅಥವಾನಿದ್ರೆ ಬೆಚ್ಚಲಿ ಹೋಗುವನೊಮತ್ತÀನೇತ್ರಿಯರ ಮನಕೆ ನಡುವಂತೆಚರ್ಚೆಮಾತಿನ ಭೇರಿ ಹೊಯ್ಸುವನೊ4 ದಾಸಿಯ ಕಳಹುವನೊ ಅಥವಾಕಂಡು ಹಾಸ್ಯವ ಮಾಡುವನೊಮೋಸಗೊಳಿಸಿ ಆಭಾಸ ಉಕ್ತಿಗಳಿಂದ ಆಕಾಶವಾಣಿಯಿಂದ ನುಡಿಸುವನೊ5 ಅರಿಯದೆ ಹೋಗುವನೊ ಅಥವಾಮೈಮರೆಯದೆ ನಗುವನೊಶ್ರೀಶರಾಮೇಶನರಸನ ಸತಿಯರ ಚರ್ಚಿಸಿ ಹರುಷಮಾಡಿ ಹರಿಯು ಬರುವನೊ 6
--------------
ಗಲಗಲಿಅವ್ವನವರು
ಅಂಬಿಗ ನಾ ನಿನ್ನ ನಂಬಿದೆ - ಜಗದಂಬಾರಮಣ ನಿನ್ನ ಹೊಂದಿದೆ ಪತುಂಬಿದ ಹರಿಗೋಲಂಬಿಗ - ಅದಕೊಂಬತ್ತು ಛಿಧ್ರಗಳಂಬಿಗ ||ಸಂಭ್ರಮದಿಂದಲಿಅಂಬಿಗ ಅದರಿಂಬನರಿತು ನಡೆಸಂಬಿಗ 1ಹೊಳೆಯ ಅಬ್ಬರ ನೋಡಂಬಿಗ ಅಲ್ಲಿಸೆಳವು ಬಹಳ ಕಾಣೋಅಂಬಿಗ ||ಸುಳಿಗೊಳಗಾದೆನುಅಂಬಿಗ - ಎನ್ನಸೆಳೆದುಕೊಂಡು ಒಯ್ಯೋಅಂಬಿಗ 2ಹತ್ತು ಬೆಂಬಡಿಗರು ಅಂಬಿಗರು - ಅಲ್ಲಿಒತ್ತಿ ಬರುತಲಿಹರಂಬಿಗಹತ್ತುವರೆತ್ತಲುಅಂಬಿಗ ಎನ್ನಎತ್ತಿಕೊಂಡು ಒಯ್ಯೋಅಂಬಿಗ 3ಆರು ತೆರೆಯ ನೋಡಂಬಿಗ ಸುತ್ತಿಮೀರಿ ಬರುತಲಿವೆಅಂಬಿಗ ||ಆರೆನೆಂತಿಂತುಅಂಬಿಗ ಮುಂದೆದಾರಿಯ ತೋರಿಸುಅಂಬಿಗ 4ಸತ್ಯವೆಂಬುವ ಹುಟ್ಟುಅಂಬಿಗ ಓದುಭಕ್ತಿಯೆಂಬುವ ಪಾತ್ರಅಂಬಿಗ ||ನಿತ್ಯಮುಕ್ತ ನಮ್ಮ ಪುರಂದರವಿಠಲನಮುಕ್ತಿಮಂಟಪಕೆ ಒಯ್ಯೋ 5
--------------
ಪುರಂದರದಾಸರು