ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೆಂಡಿರಿಬ್ಬರನಾಳ್ವಗುಂಟೆ ಸುಖ ಕರುಣಿಸೈ ಪುಂಡರೀಕಾಕ್ಷ ತವ ಭಕ್ತಿವಧು ಒಬ್ಬಳನೆ ಪ ನರ ಬಾ ನೀ ಯೆಂದೆಳೆವಳಾಸೆ ಹೃದಯೇಶನಂ ಬರಸೆಳೆವಳಾ ಲಜ್ಜೆ ತನ್ನ ಕಡೆಗೆ ಹರಿಹರಿ ಡೋಲಾಯಮಾನವಾದುದು ಚಿತ್ತ ಸ್ಥಿರವ ಕರುಣಿಸು ಲಕ್ಷ್ಮಿಯರಸ ಶ್ರೀಕೃಷ್ಣಾ 1 ನಾಲಿಗೆಗೆ ದೈನ್ಯಮಂ ತಹಳಾಶೆ ಆ ಲಜ್ಜೆ ತಾಳಿಗೆಯನೊಣಗಿಸೀ ನುಡಿಯಲೀಯಳೋ ಪೇಳಲೇನುಭಯಸಂಕಟ ಸೀಗೆಯೊಳಗಿರ್ದ ಬಾಳೆಯಾದುದು ಚಿತ್ತ ಪರಿಹರಿಸು ಕೃಷ್ಣಾ 2 ಆಶೆಯಾ ಸವತಿಯಂ ಕೆಡಿಸಬಗೆವಳು ಲಜ್ಜೆ ಆ ಸವತಿಯಂ ಕೆಡಿಸಬಗೆವಳೆಂತೊ ಗಾಸಿಯಾದುದು ಚಿತ್ತವಿಬ್ಬರಿಂ ವೈಕುಂಠ ಕೇಶವಾ ಮನದ ಸಂಸಾರವಂ ಬಿಡಿಸಯ್ಯ 3
--------------
ಬೇಲೂರು ವೈಕುಂಠದಾಸರು
ಬಲು ಬಲು ಬೆರಗಾದ ಬಲರಾಮನು ನೋಡಿ ಹಲವು ಚಿತ್ರದ ದ್ವಾರ ವೀರ ಪ. ಕುಂದ ಮಂದಾರವು ಸುಂದರ ಉದ್ಯಾನ ಅಂದವಾಗಿ ಬೆಳೆದ ತುಳಸಿಯ ಅಂದವಾಗಿ ಬೆಳೆದ ವೃಂದಾವನ ಚಂದ ತೋರುವುದೊ ಜನಕೆಲ್ಲ1 ಕಾರಂಜಿ ಜ¯ ಹಾರಿವೆ ಗಗನಕ್ಕೆ ನೀರೆ ವರ್ಣಿಸಲು ವಶವಲ್ಲನೀರೆ ವರ್ಣಿಸಲು ವಶವಲ್ಲ ಕಲ್ಪತರು ವೀರ ಪಾಂಡವರ ವನವಿದು2 ಹಸಿರು ಪಚ್ಚದ ಕಲ್ಲು ಕುಸುರಾದ ಗಿಳಿಬೋದ ಎಸೆವೊ ಮಾಣಿಕದ ಚೌಕಟ್ಟುಎಸೆವೊ ಮಾಣಿಕದ ಕಳಸಗಳು ದೆಸೆಗೆಲ್ಲ ಬೆಳಕು ಎಸೆವೋದು 3 ಮೇಲಾದ ದ್ವಾರಕ್ಕೆ ಮ್ಯಾಲೆ ಕನ್ನಡಿಗಳು ಸಾಲು ಕಿಡಕಿಗಳು ಧ್ವಜಗಳುಸಾಲು ಕಿಡಕಿಗಳು ಒಳಗಿದ್ದಬಾಲೆರಿನೆÀ್ನಂಥ ಚಲುವರು 4 ಮುತ್ತು ಮಾಣಿಕ್ಯ ರತ್ನತೆತ್ತಿಸಿದ ಅರಮನೆಗಳುಜತ್ತು ತೋರುವ ಜನಕೆಲ್ಲಜತ್ತು ತೋರುವ ಜನಕೆಲ್ಲ ಒಳಗಿದ್ದಮಿತ್ರೇರಿನ್ನೆಂಥ ಚಲುವರು 5 ಬರಿಯ ಮಾಣಿಕದ ಗೋಡೆ ಸರಿಯಾದ ಕನ್ನಡಿಪರಿಪರಿ ರತ್ನ ಹೊಳವೋವೆಪರಿಪರಿ ರತ್ನ ಹೊಳೆವವು ಒಳಗಿದ್ದದೊರೆಗಳಿನ್ನೆಂಥ ಚಲುವರು6 ವೀರರ ಮನೆ ಮುಂದೆ ಧೀರ ರಾಮೇಶ ಇಳಿದ ನಾರಿಯರ ಸಹಿತ ಹರುಷದಿ ನಾರಿಯರ ಸಹಿತ ಹರುಷದಿ ಹೇಳಲುತೀವ್ರ ಒಬ್ಬಳನ ಕಳಿಸೆಂದ7
--------------
ಗಲಗಲಿಅವ್ವನವರು
ಯಾರು ಬಂದರೊನಮ್ಮ ದ್ವಾರಕೆಯೊಳಗಿಂದುಭೋರೆಂಬೊ ಕಾಳಿ ಹಿಡಿಸುತ ರಮಣಿ ಪ. ಮುತ್ತಿನ ತುರಾಯಿಯವರು ಹತ್ತಿವಾಜಿಮ್ಯಾಲೆ ಚಿತ್ತ ಚಲಿಸದಲೆ ಬರತಾರೆಚಿತ್ತ ಚಲಿಸದಲೆ ಬರತಾರೆರುಕ್ಮಿಣಿ ಅಚ್ಯುತನ ನೋಡೊ ಭರದಿಂದ ರಮಣಿ1 ರಥಿಕಾ ರಥಿಕರು ತಮ್ಮ ರಥವ ಮುಂದಕ್ಕೆ ಹಾಕಿ ಅತಿ ವೇಗದಿಂದ ಬರುತಾರೆ ರಮಣಿಅತಿ ವೇಗದಿಂದ ಬರುತಾರೆ ದೇವಕಿಯಸುತ ನಂಘ್ರ್ರಿನೋಡೊ ಭರದಿಂದ ರಮಣಿ2 ನಲ್ಲೆಯರು ಮುತ್ತಿನ ಪಲ್ಲಕ್ಕಿ ಮಂದಕೆ ಹಾಕಿನಿಲ್ಲದಲೆ ಬೇಗ ಬರತಾರೆನಿಲ್ಲದಲೆ ಬೇಗ ಬರತಾರೆ ಲಕ್ಷ್ಮ್ಮಿವಲ್ಲಭನ ನೋಡೊ ಭರದಿಂದ 3 ತೇರಿನ ಬೀದಿಲೆ ಭೋರೆಂಬೊ ರಭಸಿಗೆಊರಜನವೆಲ್ಲ ಬೆರಗಾಗಿಊರಜನವೆಲ್ಲ ಬೆರಗಾಗಿಉಪ್ಪರಗಿ ಏರಿ ನೋಡುವವರು ಕಡೆಯಿಲ್ಲ4 ಬೀಡುಬಿಟ್ಟಿದ್ದ ಬೈಲು ಗಾಡಿ ಏರಿದವರು ಓಡಿಸಿ ಬೇಗ ಬರತಾರೆಓಡಿಸಿ ಬೇಗ ಬರತಾರೆಹರಿಪಾದ ನೋಡಬೇಕೆಂಬ ಭರದಿಂದ5 ಮದ್ದು ಬಾಣಬಿರಸು ರಥಿಣಿರಭಸಿಗೆ ಎದ್ದು ಜನೆರೆಲ್ಲ ಬೆರಗಾಗಿಎದ್ದು ಜನೆರೆಲ್ಲ ಬೆರಗಾಗಿ ಮುಯ್ಯದ ಸುದ್ದಿ ಕೇಳುವರು ಹರುಷದಿ 6 ಮಿತ್ರಿ ತಿಲೋತ್ತಮಾ ಮತ್ತೆಮೇನಕೆಯರುಥೈ ಥೈ ಎಂದು ಕುಣಿಯುತಥೈ ಥೈ ಎಂದು ಕುಣಿಯುತ ಬರುವಾಗಹತ್ತು ದಿಕ್ಕುಗಳು ಬೆಳಗೋವೆ7 ರಂಭೆ ಊರ್ವಸಿಯರು ಸಂಭ್ರಮದಿ ಕುಣಿಯಲುತುಂಬಿತು ನಾದ ಧರೆಯೊಳುತುಂಬಿತು ನಾದ ಧರೆಯೊಳುರುಕ್ಮಿಣಿ ಬಂದವರಾರೆಂದು ಬೆರಗಾಗಿ ರಮಣಿ8 ವಜ್ರ ಹಚ್ಚಿದ ಮನೆಗಳುಜತ್ತು ದೀವಿಗೆಯ ಸೊಬಗಿನ ಜತ್ತು ದೀವಿಗೆಯ ಸೊಬಗಿನ ಮನೆಯೊಳುಮಿತ್ರೆಯರು ನೋಡಿ ಬೆರಗಾಗಿ 9 ಕುಂದಣ ರಚಿಸಿದ ಅಂದಣವನೇರಿಕೊಂಡುಸಂದಣಿಸಿ ಬೇಗ ಬರುತಾರೆಸಂದಣಿಸಿ ಬೇಗ ಬರುತಾರೆ ನಮ್ಮ ಮುಕುಂದನ ಮನೆ ಎದುರಿಗೆ 10 ಧೀರ ಧೀರರು ತಮ್ಮ ತೇರು ವಾಜಿಯ ಇಳಿದುವೀರ ರಾಮೇಶನ ಮನೆ ಮುಂದೆವೀರ ರಾಮೇಶನ ಮನೆ ಮುಂದೆ ಹೇಳಲಿನಾರಿ ಒಬ್ಬಳನ ಕಳುಹೆಂದ ರಮಣಿ 11
--------------
ಗಲಗಲಿಅವ್ವನವರು
ರಾಮ ರಾಮಾಯೆಂದು ಮಾರುತಿಯು ನಡೆದು |ಸೋಮವದನೆ ಜಾನಕಿಯನು ಹುಡುಕಾ ಪಹರಿಯಿಂದ ಗುರುತು ಪಡೆದು ತನ್ನ ಶಿಖದಲಿ |ಧರಿಸಿಕೊಂಡತಿಶಯ ಭಕುತಿಯಲಿ ||ತೆರಳಿ ಮುಂದು ಮುಂದಕೆ ಕಡಲ ಸಮೀಪದಿ ವಾ- |ನರಾಧೀಶ ಮಾಡಿದ ವಾಸವನೂ1ರವಿಜನ ಭಯದಿಂದ ಕಪಿಗಳೆ- |ಲ್ಲವು ಎದೆಯನೊಡೆದು ನಗದೊಳು ಕುಳಿತಿರಲು ||ಪವನಜನು ಬಂದು ವಿಚಾರವ ಮಾಡಲು ಸಾಗ- |ರವ ದಾಟಲೊಬ್ಬಗೊಶವಲ್ಲವೆಂದರೆಲ್ಲರಲ್ಲಿ 2ನಮ್ಮನು ರಕ್ಷಿಸೋ ಕುಲಮಣಿಯೆ ವಾಸುದೇವನ |ಮೊಮ್ಮಗನೆ ಎಂದು ಕಪಿಗಳು ಯಾಚಿಸೆ ||ಗಮ್ಮನೆ ಹಾರಿ ರಕ್ಕಸಿ ಹೊಟ್ಟೆಯ ಹೊಕ್ಕು ದಾಟಿ ಮತ್ತೇ |ಒಮ್ಮೆ ಒಬ್ಬಳನ್ನು ಸೀಳಿ ಪುರಪ್ರವೇಶ ಮಾಡಿದ3ಗಿಡಗಿಡ ಚರಿಸುತ ಸ್ಥಳ ಸ್ಥಳದಲಿ ಬಲು |ಹುಡುಕುತ ಮೂಜಗ ಪೂಜಿತನ ||ಮಡದಿಯಾಕೃತಿಯನು ಕಾಣಲಾಕ್ಷಣದೊಳು |ತಡೆದನಲ್ಲಿಯೇ ಪದಗಳ ಮುಂದಕ್ಕಿಡದಲೇ4ಋಷಿಗಳಂದದಿ ಪ್ರಾಣೇಶ ವಿಠಲನೆನುತಿರೆ |ಶಶಿಮುಖಿಯಳು ಆಂಜನೇಯ ಪದ |ಬಿಸಜಾಂಘ್ರಿಗಳಿಗೆರಗಿ ಜಯ ಜಯವೆಂದು |ಉಸಿರಿದ ರಘುಪತಿಯ ಸುದ್ದಿ ವಿಸ್ತರದಲಿ 5
--------------
ಪ್ರಾಣೇಶದಾಸರು