ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಮಾಡಿದರೇನು ಹೀನಮಾನವನು ಧಿನದಯಾಸಿಂಧು ಹರಿ ನೀನೊಲಿಯದಿರಲು ಪ ಸ್ನಾನ ಮಾಡಿದರೇನು ನಾನಾತೀರ್ಥವ ತಿರುಗಿ ಮೌನ ಮಾಡಿದರೇನು ನಯನಗಳು ಮುಚ್ಚಿ ದಾನ ಮಾಡಿದರೇನು ಧ್ಯಾನ ಮಾಡಿದರೇನು ಧ್ಯಾನದಾಯಕ ನಿನ್ನ ದಯವಾಗದಿರಲು 1 ಜಪವ ಮಾಡಿದರೇನು ಅಪರೂಪ ಮಡಿಯುಟ್ಟು ತಪವ ಮಾಡಿದರೇನು ವಿಪಿನವನು ಸೇರಿ ಗುಪಿತಶಾಸ್ತ್ರವ ಕಲಿತು ನಿಪುಣನೆನಿಸಿದರೇನು ಸುಫಲದಾಯಕ ನಿನ್ನ ಕೃಪೆಯಾಗದಿರಲು 2 ತತ್ವವನು ವಿಂಗಡಿಸಿ ಅರ್ಥಮಾಡಿದರೇನು ಪೃಥ್ವಿಬಿಡದ್ಯಾವತ್ತು ಸುತ್ತುಗಟ್ಟಿದರೇನು ಕುತ್ತಿಗೆಯ ಕೊಯ್ದಿಟ್ಟು ಮತ್ತೆ ಕಲೆಸಿದರೇನು ಚಿತ್ತಜಪಿತ ನಿನ್ನ ಚಿತ್ತಕ್ಕೆ ಬರದಿರಲು 3 ಯೋಗವನು ಕಲಿತು ಬಲುಯೋಗ ಮಾಡಿದರೇನು ಭಾಗವತವೋದಿ ಬಲು ಯಾಗ ಮಾಡಿದರೇನು ಭೋಗವನ್ನು ತ್ಯಜಿಸಿ ಬಲು ಜಾಗರಣ ಮಾಡಲೇನು ನಾಗಶಯನನೆ ನಿನ್ನ ನಿಗ ಬೀಳದಿರಲು 4 ಒಪ್ಪಿಡಿ ಅವಲಕ್ಕಿಗೊಪ್ಪಿ ಸಂಪದ ಕೊಟ್ಟು ತಪ್ಪುಗಾರನ ಕ್ಷಮಿಸಿ ಅಪ್ಪಿ ಪದವಿತ್ತಿ ಒಪ್ಪುಗಾರನೆ ನೀನು ಒಪ್ಪಿದ ಬಳಿಕಾವ ತಿಪ್ಪುಳದ ಗೋಜಿಲ್ಲೆನ್ನಪ್ಪ ಶ್ರೀರಾಮ 5
--------------
ರಾಮದಾಸರು