ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಡಲೇತಕೆ ಪರರ ದೇಹಿಯೆಂದು ಪ ನೀಡುವಾ ಧೊರೆ ಎನಗೆ ನೀನಿರಲು ಸರ್ವದಾ ಅ.ಪ. ಗ್ರಾಸವನು ಬೇಡೆ ದೂರ್ವಾಸ ಮುನಿಗಂದನ್ನ ಅನಾ ಯಾಸದಿಂ ತತ್ಕಾಲದಲಿ ಕಲ್ಪಿಸಿ ಆ ಸಂಯಮಿಗೆ ಉಣಿಸಿ ದಣಿಸಿದ ಮಹಾ ದಾತಾ ದಾಶರಥೆ ನಿನ್ನ ಬಿಟ್ಟನ್ಯ ದೇವತೆಗಳನು 1 ಖಳ ದುಶ್ಯಾಸನನು ದ್ರೌಪದಿಯ ಸಭೆಯೊಳು ದು ಕೂಲವನು ಸೆಳೆಯೆ ದ್ವಾರಕ ಮಂದಿರಾ ಶ್ರೀ ಲೋಲ ಶ್ರೀ ಕೃಷ್ಣ ಕರುಣಿಸು ಕರುಣಿಸೆನೆ ಪಾಂ ಚಾಲಿ ಮೊರೆ ಕೇಳಿ ದಿವ್ಯಾಂಬರ ನಿಚಯವಿತ್ತೆ 2 ಮಡದಿ ಕಳುಹಲು ಬಂದ ಬ್ರಾಹ್ಮಣನ ಪೀಡಿಸುವ ಬಡತನವ ಕಳೆದೆ ಒಪ್ಪಿಡಿಯವಲಿಗೆ ಪೊಡವಿಯನ್ನಾಳಿಸಿದೆ ಕ್ರಿಮಿಗೊಲಿದು ಕಾರುಣ್ಯದಲ್ಲಿ ಮೃಡ ಬಿಡೌಜರೀಪ್ಸಿತ ಕೊಡುವೆ 3 ತಾಪಸೋತ್ತಮ ಮೃಕಂಡಾತೃಜಗೆ ಕಲ್ಪಾಯು ನೀ ಪೂರ್ತಿ ಮಾಡಿ ಅಲ್ಪಾಯು ಕಳೆದು ಆ ಪರ್ವತೇಶ್ವರನ ಪಟ್ಟಣವ ಸಾರ್ದು ಸಾಂ ದೀಪ ತನಯನ ತಂದ ಸರ್ವಾಂತರ್ಯಾಮಿ 4 ವಿಶ್ವ ಜೀವರಿಗನ್ನ ಕಲ್ಪಕನೆ ನೀನಿರಲು ಜ್ಞಾನ ದ್ರವ್ಯ ಅಲ್ಪ ಮಾನವರಿಗಾಲ್ಪರಿರೇನಹುದು ಅಹಿ ತಲ್ಪ ಜಗನ್ನಾಥ ವಿಠ್ಠಲ ಕಲ್ಪತರುವಿರಲು 5
--------------
ಜಗನ್ನಾಥದಾಸರು
ಬೇಡುವೆನು ಇದನೊಂದ ಕರುಣಿಸೋ ಹರಿಯೇ ಬೇಡವೆಂಬುದನೆಲ್ಲ ಏಕೀವೆ ಹರಿಯೇ ಪ ಒಪ್ಪಿಡಿಯ ಅವಲಕ್ಕಿಗೊಲಿದವನು ನೀನಂತೆ ಒಪ್ಪದಿಂದೆಲೆಯ ತಿಂದು ತೇಗಿದೆಯಂತೆ ತಪ್ಪುನೂರೆಂಟುಗಳು ಮನ್ನಿಸಿದೆ ನೀನಲ್ತೇ ಸರ್ಪಶಯನನೆ ನಿನ್ನ ನಾಮಭಜನೆಯ ಮಾತ್ರ 1 ಘೋರ ಪಾಪಿಯು ಮಗನ ಕರೆದಾಗ ಕರುಣಿಸಿದೆ ನಾರಿ ಹೊರದೂಡಿದ ತರಳನನು ಕಾಯ್ದೆ ಭಾರಿ ಮಕರಿಯ ಸೀಳಿ ಕರಿಯನೊಂದನು ಕಾಯ್ದೆ ನೀರಜಾಸನಪಿತನೆ ನಿನ್ನ ಸ್ಮರಣೆಯ ಮಾತ್ರ 2 ನಿನ್ನ ನಾಮದ ಭಜನೆ ಎನ್ನ ರಸನೆಯೊಳಿರಲು ಇನ್ನಾವ ಭಾಗ್ಯಗಳ ಬೇಡಲಾರೆನೋ ದೇವ ಪನ್ನಗೇಂದ್ರ ವಿಭೂಷಣ ಪರಿಪಾಲಿಸೈ ಶ್ರೀಶಾ ನಿನ್ನ ಧ್ಯಾನವ ಮಾತ್ರ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮನಸಿಜ ಪಿತ ವಿಠಲ | ನೀನಿವನ ಸಲಹೋ ಪ ಅನುಮಾನ ವಿನ್ನಿಲ್ಲ | ಅಣುಗ ನಿನ್ನವನೋ ಅ.ಪ. ಸಿಂಧು ಮೂರುತಿಯೇ 1 ಸ್ವಪ್ನ ಸೂಚನೆಯಂತೆ | ಒಪ್ಪಿದಂಕಿತವಿತ್ತುಅರ್ಪಿಸಿಹೆ ನಿನ್ನಡಿಗೆ | ಸರ್ಪ ಶಯನಾ |ಒಪ್ಪಿಡಿಯ ಅವಲಿಗ್ಯೆ | ಅಪ್ಪಾರವಿತ್ತಿರುವೆಇಪ್ಪರಿಯ ಮಹಿಮೆಗಳು | ಇನ್ನಾರಿಗುಂಟೋ 2 ವಿಷ ಅಮೃತವಾದಂತೆ | ದುಷ್ಕರ್ಮ ಫಲರಹಿತಎಸೆಗುತ್ತ ಸಂತಾಪ | ನಶಿಸುವಂತೆಸಗೋಅಸಮ ಮಹಿಮನೆ ಭಕ್ತಿ | ಪಾಶಕ್ಕಾವಶನಾಗಿಮಿಸುಣಿ ಮೇಲ್ಮಣಿಯಂತೆ | ಭಾಸಿಸೋ ಹರಿಯೇ 3 ಮೋದ ಮೋದ ದ್ವಂದ್ವ | ಬುದ್ಧಿ ಸಮವೆನಿಸೋ 4 ಆವದೇಶವು ಇರಲಿ | ಆವಕಾಲವು ಇರಲಿನೀವೊದಗೊ ಸ್ಮøತಿ ಪಥಕೆ | ಕೋವಿದರ ಒಡೆಯಾಕಾವ ಕೊಲ್ಲುವ ಗುರೂ | ಗೋವಿಂದ ವಿಠ್ಠಲನೆಭಾವದಲಿ ಮೈದೋರೇ | ಓವಿ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ಹರಿಯೆ ಮೂಜಗದ ದೊರೆಯೆ ನಿನಗಿದು ಸರಿಯೆ ಪ. ಹರಿಯೆ ಮೂಜಗದ ದೊರೆಯೆ ನಿನ್ನನೆ ಮರೆಯಪೊಕ್ಕವರಲ್ಲಿ ಈ ಪರಿ ಬರಿಯ ಪಂಥದಿ ಮರುಗದಿರ್ಪುದು ಸರಿಯೆ ನಿನಗದು ಸರಸವಲ್ಲದುಅ.ಪ. ಉಕ್ಕಿನ ಕಂಬದಿಂದ ಉದಿಸಿ ಬಂದು ರಕ್ಕಸನುರವ ಸೀಳಿ ಕರುಳನು ಬಗೆದು ಉಕ್ಕುವ ಕೋಪದಿಂದ ರಕುತವು ಸುರಿಯೆ ಭಕ್ತ ಪ್ರಹ್ಲಾದನಾದರದಿ ಕಾಯ್ದು ಭಕ್ತ ವತ್ಸಲನೆನಿಸಲಹುದು ಶಕ್ತಿಹೀನತೆಯಿಂದ ಮರೆಹೊಕ್ಕ ಎನ್ನನು [ಕಾಯು]ವುದು 1 ಒಪ್ಪಿಡಿಯವಲಕ್ಕಿಯ ಒಪ್ಪಿಸಿನಿಂದ ವಿಪ್ರನ ನಲವಿಂದ ನೋಡುತಲಂತು ವಿಪುಲಸಂಪದವನ್ನು ಕರುಣಿಸಿದಂಥ ಅಪ್ರತಿಮ ಸಾಹಸಿಯೆನುತೆ ನಿನ್ನೊಳು ತಪಿಸಿ ಬೇಡುವ ಎನ್ನೊಳೀಪರಿ ಒಪ್ಪದೊಪ್ಪದೆನ್ನಪ್ಪ ಕೇಳಿದು ಸರಿಯೇ ಶ್ರೀನರಹರಿಯೇ 2 ಮಾನಿತÀಧ್ರುವ ಬಾಲನಂ ಮನ್ನಿಸಿ ಪೊರೆದೆ ಮಾನಿನಿ ಪಾಂಚಾಲಿಯ ಮಾನದಿ ಕಾಯ್ದೆ ಸಾನುರಾಗದಿಂ ಗಜನಂ ಉದ್ಧರಿಸಿದೆ ಕ್ಷೋಣಿಯೊಳಗತಿ ದೀನರಾದರ ಸಾನುರಾಗದಿ ಪೊರೆವ ಶ್ರೀಧರ ದಾನವಾಂತಕ ಶೇಷಗಿರೀಶನೆ ಸೂನುವೆಂಬಭಿಮಾನ ನಿನಗಿರೆ [ಮಾಣದೆನ್ನನು ಕಾಯೊ] ಹರಿಯೇ ಶ್ರೀನರಹರಿಯೇ3
--------------
ನಂಜನಗೂಡು ತಿರುಮಲಾಂಬಾ
ಏನುಚೋದ್ಯಶ್ರೀನಿಧೆಹರಿಮಾನಿನಿಶ್ರೀದೇವಿ ಭೂದೇವಿರಮಣಪಸೃಷ್ಟಿಕರ್ತನೆಂದು ಪೇಳ್ವರು ಪಾಂಡವರ ಮನೆಯಬಿಟ್ಟಿ ಬಂಡಿಬೋವನೆಂಬೋರು ಪಾಂಚಾಲಿಗೆ ಒದಗಿದಕಷ್ಟಕಳೆದÀು ಪೊರೆದನೆಂಬೊರೊಕೆಟ್ಟದಾನವರ ಅಟ್ಟುಳಿಯ ಕಳೆದುದುಷ್ಟಕಂಸನವಧೆಯ ಸ್ಪಷ್ಟ ಪೇಳುತಿಹರೊ 1ಗಜನ ಸಲಹಿ ಪೊರೆದನೆಂಬೊರೊ ನೆಗಳೆಯನು ಸೀಳಿತ್ರಿಜಗದೊಡೆಯ ಶ್ರೀಶನೆಂಬೊರೊ ಪ್ರಹ್ಲಾದ ಧೃವಗೆನಿಜಸೌಭಾಗ್ಯ ಇತ್ತೆ ಎಂಬೊರೊವಿಜಯಸಾರಥಿಯ ವಿಶ್ವರೂಪ ತೋರಿಸುಜನರನ್ನು ಪೊರೆದ ನಿಜವ ಪೇಳುತಿಹರು 2ವತ್ಸಾಸುರನ ಮಡುಹಿದೆಂಬೊರೊ ಅಡವಿಯಲಿ ಕಾಡ-ಕಿಚ್ಚನುಂಗಿ ಬೆಳೆದಿ ಎಂಬೊರೊ ತಾಯಿಗೆ ಬಾಯೋಳಹೆಚ್ಚಿನ್ವಿಷಯ ತೋರ್ದಿ ಎಂಬೊರೊಕಚ್ಚ ಬಂದ ಘಣಿಯ ಮೆಟ್ಟಿ ತುಳಿದು ಜಲವಸ್ವಚ್ಛಗೈದನೆಂದಾಶ್ಚರ್ಯ ಪೇಳುತಿಹರೊ 3ಕರಡಿ ಮಗಳು ಮಡದಿಯೆಂಬೊರೊ ಪುಷ್ಪವನು ತರಲುತೆರಳಿ ಯುದ್ಧ ಮಾಡ್ದನೆಂಬೊರೊ ದೇವೇಂದ್ರನ ಗೆಲಲುತರುಣಿ ಸಮರಗೈದಳೆಂಬೊರೊಮುರಳಿನಾದದಿಂದ ತರುಣಿಯರ ಮನವಮರುಳುಗೈದನೆಂದು ಪರಿಪರಿ ಪೇಳುವರೊ 4ಕೆಟ್ಟದ್ವಿಜನ ಪೊರೆದಿ ಎಂಬೊರೋ ವನವನವ ಚರಿಸಿಸುಟ್ಟ ದಾಸಗೊಲಿದೆ ಎಂಬೊರೋ ಒಪ್ಪಿಡಿಯ ಗ್ರಾಸವಕೊಟ್ಟದ್ವಿಜನ ಪೊರೆದಿಯೆಂಬೊರೊಅಟ್ಟಹಾಸದಿ ತಂದ ರುಕ್ಮಿಣಿಯ ತನ್ನಪಟ್ಟದರಸಿಯೆಂದು ಸ್ಪಷ್ಟ ಪೇಳುತಿಹರೊ 5ಶಿಲೆಯ ಸತಿಯಗೈದನೆಂಬರೊ ಅಡವಿಗಳ ಚರಿಸಿಬಲುಕಪಿಗಳ ಕೂಡ್ದನೆಂಬೊರೊ ಭಯ ಭಕ್ತಿಗೆ ಮೆಚ್ಚಿಫಲದ ಎಂಜಲ ಸವಿದನೆಂಬೊರೊ ಮೆಚ್ಚಿಸುಲಭದಿಂದ ದೈತ್ಯಕುಲವನೆಲ್ಲ ಸವರಿಛಲದ ದಶಶಿರನ ವಧೆಯ ಪೇಳುತಿಹರೊ 6ಪುಟ್ಟಬ್ರಹ್ಮಚಾರಿ ಎಂಬೋರೊ ಬಲಿರಾಜನ ಬೇಡಿಕೊಟ್ಟದಾನ ಕೊಂಡನೆಂಬೋರೊ ಈರಡಿಯನಳೆದುಮೆಟ್ಟಿ ಸಿರವ ತುಳಿದನೆಂಬೋರೊಎಷ್ಟು ಪೇಳಲಿ ನಿನ್ನ ಶ್ರೇಷ್ಠಗುಣಗಳನ್ನುದಿಟ್ಟ ಕಮಲನಾಭ ವಿಠ್ಠಲ ಸರ್ವೇಶ 7
--------------
ನಿಡಗುರುಕಿ ಜೀವೂಬಾಯಿ
ನಾನೇನ ಮಾಡಿದೆನೊ-ರಂಗಯ್ಯ ರಂಗನೀನೆನ್ನ ಕಾಯಬೇಕೋ ಪಮಾನಾಭಿಮಾನವು ನಿನ್ನದು ಎನಗೇನುದೀನ ರಕ್ಷಕ ತಿರುಪತಿ ವೆಂಕಟರಮಣ ಅ.¥ರಕ್ಕಸತನುಜನಲ್ಲೇ - ಪ್ರಹ್ಲಾದನುಚಿಕ್ಕ ಪ್ರಾಯದ ಧ್ರುವನು ||ಸೊಕ್ಕಿನ ಪಾಪ ಮಾಡಿದಜಮಿಳನು ನಿನ್ನಅಕ್ಕನ ಮಗನು ಮಗನು ಏನೋ -ರಂಗಯ್ಯ 1ಕರಿರಾಜ ಕರಿಸಿದನೇ - ದ್ರೌಪದಿದೇವಿಬರದೋಲೆ ಕಳುಹಿದಳೇ ||ಕರುಣದಿಂದಲಿ ಋಷಿಪತ್ನಿಯ ಶಾಪವಪರಿಹರಿಸಿದೆಯಲ್ಲವೋ -ರಂಗಯ್ಯಒಪ್ಪಿಡಿಯವಲಕ್ಕಿಯ -ನಿನಗೆ ತಂದುಒಪ್ಪಿಸಿದವಗೊಲಿದೆ ||ಒಪ್ಪುವೆ ನಿನಗೆ ಶ್ರೀಪುರಂದರವಿಠಲವರಪ್ಪಂತೆ ಎನ್ನ ಕಾಯೋ -ರಂಗಯ್ಯ 3
--------------
ಪುರಂದರದಾಸರು