ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

2. ಶ್ರೀ ವೆಂಕಟೇಶ ಸ್ತೋತ್ರ 6 ಶರಣಾಗತರ ಕಲ್ಪತರುವೆ ವೆಂಕಟ ಧರಾ ಧರನಾಥ ನಿನ್ನ ಚರಣಾಬ್ಜ | ಚರಣಾಬ್ಜಯುಗಳ ಸಂ ದರುಶನವ ಈಯೊ ಎಂದೆಂದು 1 7 ಸ್ವಾಮಿ ತೀರ್ಥ ನಿವಾಸ ಸು ಭಯಹಾರಿ ಸುರರ ಸಾರ್ವ ಭೌಮ ನೀ ಸಲಹೆಮ್ಮೆ 2 8ವೆಂಕಟಾಚಲನಿಲಯ ಪಂಕಜೋದ್ಭವನಯ್ಯ ಕಿಂಕರನೆನಿಸೊ ಶುಭಕಾಯ 3 9 ಸತ್ಯಸಂಕಲ್ಪ ಜಗದತ್ಯಂತ ಭಿನ್ನಸ ರ್ವೋತ್ತಮ ಪುರಾಣ ಪುರುಷೇಶ | ಪುರುಷೇಶ ಸತತತ್ವ ದ್ಭೈತ್ಯನ್ನ ಕಾಯೊ ಕರುಣಾಳೊ 4 10 ದೇವಶರ್ಮನ ತುತಿಗೆ ನೀನೊಲಿದು ಪಾಲಿಸಿದೆ ದೇವಕೀಕಂದ ದಯದಿಂದ | ದಯದಿಂದ ಒಲಿದೆನ್ನ ತಾವಕರೊಳಿಟ್ಟು ಸಲಹಯ್ಯ 5 11 ಕೃತಿಪತಿಯೆ ನಿನ್ನ ಸಂಸ್ಮøತಿಯೊಂದಿರಲಿ ಜನ್ಮ ಮೃತಿ ನರಕ ಭಯವು ಬರಲಂಜೆ | ಬರಲಂಜೆ ಎನಗೆಕೃಸಂ ತತ ನಿನ್ನ ಸ್ಮರಣೆ ಕರುಣೀಸೊ 6 12ಶುಚಿಸದ್ಮನೆ ಮನೋವಚನಾತ್ಮಕೃತ ಕರ್ಮ ನಿಚಯ ನಿನಗೀವೆ ಸುಚರಿತ್ರ | ಸುಚರಿತ್ರ ಸುಗುಣಗಳ ರಚನೆ ಸುಖವೀಯೊ ರುಚಿರಾಗ 7 13ಹೃದಯದಲಿ ತವರೂಪ ವದನದಲಿ ತವನಾಮ ಉದರದಲಿ ನೈವೇದ್ಯ ಶಿರದಲ್ಲಿ | ಶಿರದಲ್ಲಿ ನಿರ್ಮಾಲ್ಯ ಪದಜಲಗಳಿರಲು ಭಯವುಂಟೆ 8 14ಸತತ ಸ್ಮರಿಸುತ ನಿನ್ನ ನುತಿಸಿ ಬೇಡಿಕೊಳುವೆ ಹಿತದಿಂದ ನಿನ್ನ ವಿಜ್ಞಾನ | ವಿಜ್ಞಾನ ನಿಜ ಭಾಗ ವತರ ಸಂಗವನ್ನೇ ಕರುಣೀಸೊ 9 15ಪ್ರಕೃತಿ ಗುಣಗಳ ಕಾರ್ಯ ಸುಖ ದುಃಖ ಮೂಲ ಜಡ ಪತಿ ನಿನ್ನ ಭಕುತ ನಾನಯ್ಯ ಎಂದೆಂದು 10 16ಪುಣ್ಯಪಾಪಾದಿಗಳು ನಿನ್ನಾಧೀನದೊಳಿರಲು ಎನ್ನದೆಂದರುಹಿ ದಣಿಸುವಿ | ದಣಿಸುವುದು ಧರ್ಮವೇ ನಿನ್ನರಿವ ಜ್ಞಾನ ಕರುಣೀಸೊ 11 17ಝಷಕೇತು ಜನಕ ದುರ್ವಿಷಯಕೊಳಗಾಗಿ ಸಾ ಹಸ ಪಡುವ ಚಿತ್ತ ಪ್ರತಿದಿನ | ಪ್ರತಿದಿನಗಳಲ್ಲಿ ನಿನ್ನ ವಶಮಾಡಿಕೊಳ್ಳೊ ವನಜಾಕ್ಷ 12 18ಇನಿತಿದ್ದ ಬಳಿಕ ಯೋಚನೆ ಯಾಕೆ ಗರುಡವಾ ಹನನೆ ಮಹಲಕ್ಷ್ಮಿ ನರಸಿಂಹ/ನರಸಿಂಹ ಬಿನ್ನೈಪೆ ಘನತೆ ನಿನಗಲ್ಲ ಕರುಣಾಳು 13 19ಸುಲಭರಿನ್ನುಂಟೆ ನಿನ್ನುಳಿದು ಲೋಕತ್ರಯದಿ ಬಲವಂತರುಂಟೆ ಸುರರೊಳು/ಸುರರೊಳು ನೀನು ಬೆಂ ಬಲವಾಗಿ ಇರಲು ಭಯವುಂಟೆ 14 20ಹಯವದನ ಸೃಷ್ಟಿ ಸ್ಥಿತಿಲಯ ಕಾರಣನುನೀನೆ ದಯವಾಗಲೆಮಗೆ ದುರಿತೌಘ / ದುರಿತೌಘರ್ಕಳು ಬಟ್ಟ ಬಯಲಾಗುತಿಹವೊ ಸುಕೃತಿಯಿಂದ 15 21ಕಲುಷವರ್ಜಿತನೆ ಮಂಗಳ ಚರಿತ ಭಕ್ತವ ತ್ಸಲ ಭಾಗ್ಯವ ಪುಷ ಬಹುರೂಪಿ /ಬಹುರೂಪಿ ಎನಗೆಚಂ ಚಲ ಬಿಡಿಸಿ ನೀ ಕರುಣೀಸೊ 16 22ಫಾಲಾಕ್ಷಪ್ರಿಯ ನಿನ್ನ ಲೀಲೆಗಳ ಮರೆಯದಲೆ ಕಾಲಕಾಲದಲಿ ಸ್ಮರಿಸುವ/ ಸ್ಮರಿಸಿ ಹಿಗ್ಗುವ ಭಾಗ್ಯ ಪಾಲಿಸೊ ಎನಗೆ ಪರಮಾತ್ಮ 17 23ಚತುರವಿಧ ಪುರುಷಾರ್ಥ ಚತುರಾತ್ಮ ನೀನಿರಲು ಇತರ ಪುರುಷಾರ್ಥ ನಾನೊಲ್ಲೆ | ನಾನೊಲ್ಲೆ ತ್ವತ್ಪಾದ ರತಿ ಭಾಗ್ಯ ನೀನೆ ಕರುಣೀಸೊ 18 24 ಜಯ ಮತ್ಸ್ಯ ಕೂರ್ಮ ವರಹ ನರಸಿಂಹ ಭೃಗುರಾಮರಘುರಾಮ ಜಯ ಬೌದ್ಧ ಕಲಿಹರ್ತಾ 19 25 ಜಯ ವಿಶ್ವತೈಜಸನೆ ಜಯ ಪ್ರಾಜ್ಞ ತುರ್ಯಾತ್ಮ ಜಯ ಅಂತರಾತ್ಮ ಪರಮಾತ್ಮ | ಪರಮಾತ್ಮ ಜ್ಞಾನಾತ್ಮ ಅನಿರುದ್ಧ ಪ್ರದ್ಯುಮ್ನ 20 26 ಜಯ ಸಂಕರುಷಣನೆ ಜಯ ವಾಸುದೇವನೆಜಯ ಜಯತು ಲಕ್ಷ್ಮೀನಾರಾಯಣಾ |ನಾರಾಯಣಾನಂತ ಜಯತು ಗೋವಿಂದಾಚ್ಯುತ ಶ್ರೀ ಕೃಷ್ಣ 21 27ಜಯ ಪೂರ್ಣ ಜ್ಞಾವಾತ್ಮ ಜಯ ಪೂರ್ಣೈಶ್ವರ್ಯ ಜಯ ಪ್ರಭಾ ಪೂರ್ಣ ತೇಜಾತ್ಮ | ತೇಜಾತ್ಮ ನಂದಾತ್ಮ ಜಯತು ಶಕ್ತ್ಯಾತ್ಮ ಕೃದ್ಧೋಲ್ಕ 22 28ಜಯ ಜಯತು ಮಹೋಲ್ಕ ಜಯತು ವೀರೋಲ್ಕ ಜಯ ಜಯತು ದ್ಯುಲ್ಕ ಸಹಸ್ರೊಲ್ಕ | ಸಹಸ್ರೊಲ್ಕ ಜಯ ಜಯ ಜಯತು ಜಗನ್ನಾಥ ವಿಠಲಾರ್ಯ 23 29 ಶ್ರೀನಿವಾಸನ ಪೋಲ್ವ ದೀನವತ್ಸಲರುಂಟೆ ದಾನಿಗಳುಂಟೆ ಜಗದೊಳು |ಜಗದೊಳು ನೀನೆ ಗತಿಯೆಂದನರರಿಗೆ ಆನಂದವೀವೆ ಅನುಗಾಲ 24 30ಒಪ್ಪಿಡಿ ಅವಲಕ್ಕಿಗೊಪ್ಪಿಕೊಂಡು ಮುಕುಂದ ವಿಪ್ರನಿಗೆ ಕೊಟ್ಟ ಸೌಭಾಗ್ಯ | ಸೌಭಾಗ್ಯ ಕೊಟ್ಟ ನ ಮ್ಮಪ್ಪಗಿಂತಧಿಕ ದೊರೆಯುಂಟೆ 25 31ಏನು ಕರುಣಾ ನಿಧಿಯೊ ಶ್ರೀನಿತಂಬಿನಿರಮಣ ತಾನುಮ್ಮನಗಲಿ ಸೈರಿಸ | ಸೈರಿಸದ ಕರುಣಿಯ ನಾನೆಂತು ತುತಿಸಿ ಹಿಗ್ಗಲಿ 26 32ಶ್ರೀನಿಧೆ ನಿನ್ನವರ ನಾನಾಪರಾಧಗಳ ನೀನೆಣಿಸದವರ ಸಲಹುವಿ | ಸಲಹುವಿ ಸರ್ವಜ್ಞ ಏನೆಂಬೆ ನಿನ್ನ ಕರುಣಕ್ಕೆ 27 33ಎನ್ನ ಪೋಲುವ ಭಕ್ತರನ್ನಂತ ನಿನಗಿಹರು ನಿನ್ನಂಥ ಸ್ವಾಮಿ ಎನಗಿಲ್ಲ | ಎನಗಿಲ್ಲವದರಿಂದ ಬಿನ್ನೈಪೆನಿನ್ನು ಸಲಹೆಂದು 28 34ಅಚ್ಯುತನೆ ನಿನ್ನಂಥ ಹುಚ್ಚು ದೊರೆಯನು ಕಾಣೆ ಕಚ್ಚಿ ಬಯದೊಡ್ಡೆ ಭಕುತರ | ಭಕುತರಪರಾಧಗಳ ತುಚ್ಛಗೈದವರ ಸಲಹೀದೆ 29 35ಎನ್ನ ಬಂಧುಗಳೆಲ್ಲ ನಿನ್ನ ದಾಸರು ಸ್ವಾಮಿ ಮನ್ನಿಸಬೇಕು ಮಹರಾಯ | ಮಹರಾಯ ನೀನಲ್ಲ ದನ್ಯರು ಸಾಕಲರಿಯರು 30 36 ತಂದೆ ತಾಯಿಯು ಭ್ರಾತ ಸಖ ಗುರು ಪುತ್ರ ಎಂದೆಂದು ನೀನೆ ಗತಿ ಗೋತ್ರ | ಗತಿಗೋತ್ರ ಇಹಪರಕೆ ಇಂದಿರಾರಾಧ್ಯ ಸಲಹೆಮ್ಮ 31 37 ಪತಿತ ನಾನಾದರೂ ಪತಿತ ಪಾವನ ನೀನು ರತಿನಾಥ ನಗಪಾಣಿ | ನಗಪಾಣಿ ನೀನಿರಲು ಇತರ ಚಿಂತ್ಯಾಕೊ ಎನಗಿನ್ನು 32 38 ನಡೆ ನುಡಿಗಳಪರಾಧ ಒಡೆಯ ನೀನೆಣಿಸಿದರೆ ಬಡವ ನಾನೆಂತು ಬದುಕಲಿ | ಬದುಕಲಿ ಕರುಣಿಯೆ ಕಡೆ ಬೀಳ್ವುದೆಂತೊ ಭವದಿಂದ 33 39ಏಸೇಸು ಜನ್ಮದಲಿ ದಾಸ ನಾ ನಿನಗಯ್ಯ ಈಶ ನೀನೆಂಬೊ ನುಡಿಸಿದ್ಧ | ನುಡಿಸಿದವಾಗಿರಲು ದಾಸೀನ ಮಾಡೋದುಚಿತಲ್ಲ 34 40ಆವ ಯೋನಿಯಲಿರಿಸು ಆವ ಲೋಕದಲಿರಿಸು ಆವಾಗ್ಯೆ ನಿನ್ನ ನೆನೆವಂತೆ | ನೆನೆವಂತೆ ಕರುಣಿಸೊ ದೇವಕೀಕಂದ ದಯದಿಂದ 35 41ಶಿಷ್ಟನೆಂದೆನಿಸೆನ್ನ ಭ್ರಷ್ಟನೆಂದೆನಿಸು ಸ ಜನರಿಂದ ನುಡಿಸಿದ್ದು
--------------
ಜಗನ್ನಾಥದಾಸರು
ಏನು ಮಾಡಿದರೇನು ಹೀನಮಾನವನು ಧಿನದಯಾಸಿಂಧು ಹರಿ ನೀನೊಲಿಯದಿರಲು ಪ ಸ್ನಾನ ಮಾಡಿದರೇನು ನಾನಾತೀರ್ಥವ ತಿರುಗಿ ಮೌನ ಮಾಡಿದರೇನು ನಯನಗಳು ಮುಚ್ಚಿ ದಾನ ಮಾಡಿದರೇನು ಧ್ಯಾನ ಮಾಡಿದರೇನು ಧ್ಯಾನದಾಯಕ ನಿನ್ನ ದಯವಾಗದಿರಲು 1 ಜಪವ ಮಾಡಿದರೇನು ಅಪರೂಪ ಮಡಿಯುಟ್ಟು ತಪವ ಮಾಡಿದರೇನು ವಿಪಿನವನು ಸೇರಿ ಗುಪಿತಶಾಸ್ತ್ರವ ಕಲಿತು ನಿಪುಣನೆನಿಸಿದರೇನು ಸುಫಲದಾಯಕ ನಿನ್ನ ಕೃಪೆಯಾಗದಿರಲು 2 ತತ್ವವನು ವಿಂಗಡಿಸಿ ಅರ್ಥಮಾಡಿದರೇನು ಪೃಥ್ವಿಬಿಡದ್ಯಾವತ್ತು ಸುತ್ತುಗಟ್ಟಿದರೇನು ಕುತ್ತಿಗೆಯ ಕೊಯ್ದಿಟ್ಟು ಮತ್ತೆ ಕಲೆಸಿದರೇನು ಚಿತ್ತಜಪಿತ ನಿನ್ನ ಚಿತ್ತಕ್ಕೆ ಬರದಿರಲು 3 ಯೋಗವನು ಕಲಿತು ಬಲುಯೋಗ ಮಾಡಿದರೇನು ಭಾಗವತವೋದಿ ಬಲು ಯಾಗ ಮಾಡಿದರೇನು ಭೋಗವನ್ನು ತ್ಯಜಿಸಿ ಬಲು ಜಾಗರಣ ಮಾಡಲೇನು ನಾಗಶಯನನೆ ನಿನ್ನ ನಿಗ ಬೀಳದಿರಲು 4 ಒಪ್ಪಿಡಿ ಅವಲಕ್ಕಿಗೊಪ್ಪಿ ಸಂಪದ ಕೊಟ್ಟು ತಪ್ಪುಗಾರನ ಕ್ಷಮಿಸಿ ಅಪ್ಪಿ ಪದವಿತ್ತಿ ಒಪ್ಪುಗಾರನೆ ನೀನು ಒಪ್ಪಿದ ಬಳಿಕಾವ ತಿಪ್ಪುಳದ ಗೋಜಿಲ್ಲೆನ್ನಪ್ಪ ಶ್ರೀರಾಮ 5
--------------
ರಾಮದಾಸರು
ಬೇಡಲೇತಕೆ ಪರರ ದೇಹಿಯೆಂದು ಪ ನೀಡುವಾ ಧೊರೆ ಎನಗೆ ನೀನಿರಲು ಸರ್ವದಾ ಅ.ಪ. ಗ್ರಾಸವನು ಬೇಡೆ ದೂರ್ವಾಸ ಮುನಿಗಂದನ್ನ ಅನಾ ಯಾಸದಿಂ ತತ್ಕಾಲದಲಿ ಕಲ್ಪಿಸಿ ಆ ಸಂಯಮಿಗೆ ಉಣಿಸಿ ದಣಿಸಿದ ಮಹಾ ದಾತಾ ದಾಶರಥೆ ನಿನ್ನ ಬಿಟ್ಟನ್ಯ ದೇವತೆಗಳನು 1 ಖಳ ದುಶ್ಯಾಸನನು ದ್ರೌಪದಿಯ ಸಭೆಯೊಳು ದು ಕೂಲವನು ಸೆಳೆಯೆ ದ್ವಾರಕ ಮಂದಿರಾ ಶ್ರೀ ಲೋಲ ಶ್ರೀ ಕೃಷ್ಣ ಕರುಣಿಸು ಕರುಣಿಸೆನೆ ಪಾಂ ಚಾಲಿ ಮೊರೆ ಕೇಳಿ ದಿವ್ಯಾಂಬರ ನಿಚಯವಿತ್ತೆ 2 ಮಡದಿ ಕಳುಹಲು ಬಂದ ಬ್ರಾಹ್ಮಣನ ಪೀಡಿಸುವ ಬಡತನವ ಕಳೆದೆ ಒಪ್ಪಿಡಿಯವಲಿಗೆ ಪೊಡವಿಯನ್ನಾಳಿಸಿದೆ ಕ್ರಿಮಿಗೊಲಿದು ಕಾರುಣ್ಯದಲ್ಲಿ ಮೃಡ ಬಿಡೌಜರೀಪ್ಸಿತ ಕೊಡುವೆ 3 ತಾಪಸೋತ್ತಮ ಮೃಕಂಡಾತೃಜಗೆ ಕಲ್ಪಾಯು ನೀ ಪೂರ್ತಿ ಮಾಡಿ ಅಲ್ಪಾಯು ಕಳೆದು ಆ ಪರ್ವತೇಶ್ವರನ ಪಟ್ಟಣವ ಸಾರ್ದು ಸಾಂ ದೀಪ ತನಯನ ತಂದ ಸರ್ವಾಂತರ್ಯಾಮಿ 4 ವಿಶ್ವ ಜೀವರಿಗನ್ನ ಕಲ್ಪಕನೆ ನೀನಿರಲು ಜ್ಞಾನ ದ್ರವ್ಯ ಅಲ್ಪ ಮಾನವರಿಗಾಲ್ಪರಿರೇನಹುದು ಅಹಿ ತಲ್ಪ ಜಗನ್ನಾಥ ವಿಠ್ಠಲ ಕಲ್ಪತರುವಿರಲು 5
--------------
ಜಗನ್ನಾಥದಾಸರು
ಬೇಡುವೆನು ಇದನೊಂದ ಕರುಣಿಸೋ ಹರಿಯೇ ಬೇಡವೆಂಬುದನೆಲ್ಲ ಏಕೀವೆ ಹರಿಯೇ ಪ ಒಪ್ಪಿಡಿಯ ಅವಲಕ್ಕಿಗೊಲಿದವನು ನೀನಂತೆ ಒಪ್ಪದಿಂದೆಲೆಯ ತಿಂದು ತೇಗಿದೆಯಂತೆ ತಪ್ಪುನೂರೆಂಟುಗಳು ಮನ್ನಿಸಿದೆ ನೀನಲ್ತೇ ಸರ್ಪಶಯನನೆ ನಿನ್ನ ನಾಮಭಜನೆಯ ಮಾತ್ರ 1 ಘೋರ ಪಾಪಿಯು ಮಗನ ಕರೆದಾಗ ಕರುಣಿಸಿದೆ ನಾರಿ ಹೊರದೂಡಿದ ತರಳನನು ಕಾಯ್ದೆ ಭಾರಿ ಮಕರಿಯ ಸೀಳಿ ಕರಿಯನೊಂದನು ಕಾಯ್ದೆ ನೀರಜಾಸನಪಿತನೆ ನಿನ್ನ ಸ್ಮರಣೆಯ ಮಾತ್ರ 2 ನಿನ್ನ ನಾಮದ ಭಜನೆ ಎನ್ನ ರಸನೆಯೊಳಿರಲು ಇನ್ನಾವ ಭಾಗ್ಯಗಳ ಬೇಡಲಾರೆನೋ ದೇವ ಪನ್ನಗೇಂದ್ರ ವಿಭೂಷಣ ಪರಿಪಾಲಿಸೈ ಶ್ರೀಶಾ ನಿನ್ನ ಧ್ಯಾನವ ಮಾತ್ರ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮನಸಿಜ ಪಿತ ವಿಠಲ | ನೀನಿವನ ಸಲಹೋ ಪ ಅನುಮಾನ ವಿನ್ನಿಲ್ಲ | ಅಣುಗ ನಿನ್ನವನೋ ಅ.ಪ. ಸಿಂಧು ಮೂರುತಿಯೇ 1 ಸ್ವಪ್ನ ಸೂಚನೆಯಂತೆ | ಒಪ್ಪಿದಂಕಿತವಿತ್ತುಅರ್ಪಿಸಿಹೆ ನಿನ್ನಡಿಗೆ | ಸರ್ಪ ಶಯನಾ |ಒಪ್ಪಿಡಿಯ ಅವಲಿಗ್ಯೆ | ಅಪ್ಪಾರವಿತ್ತಿರುವೆಇಪ್ಪರಿಯ ಮಹಿಮೆಗಳು | ಇನ್ನಾರಿಗುಂಟೋ 2 ವಿಷ ಅಮೃತವಾದಂತೆ | ದುಷ್ಕರ್ಮ ಫಲರಹಿತಎಸೆಗುತ್ತ ಸಂತಾಪ | ನಶಿಸುವಂತೆಸಗೋಅಸಮ ಮಹಿಮನೆ ಭಕ್ತಿ | ಪಾಶಕ್ಕಾವಶನಾಗಿಮಿಸುಣಿ ಮೇಲ್ಮಣಿಯಂತೆ | ಭಾಸಿಸೋ ಹರಿಯೇ 3 ಮೋದ ಮೋದ ದ್ವಂದ್ವ | ಬುದ್ಧಿ ಸಮವೆನಿಸೋ 4 ಆವದೇಶವು ಇರಲಿ | ಆವಕಾಲವು ಇರಲಿನೀವೊದಗೊ ಸ್ಮøತಿ ಪಥಕೆ | ಕೋವಿದರ ಒಡೆಯಾಕಾವ ಕೊಲ್ಲುವ ಗುರೂ | ಗೋವಿಂದ ವಿಠ್ಠಲನೆಭಾವದಲಿ ಮೈದೋರೇ | ಓವಿ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ಹರಿಯೆ ಮೂಜಗದ ದೊರೆಯೆ ನಿನಗಿದು ಸರಿಯೆ ಪ. ಹರಿಯೆ ಮೂಜಗದ ದೊರೆಯೆ ನಿನ್ನನೆ ಮರೆಯಪೊಕ್ಕವರಲ್ಲಿ ಈ ಪರಿ ಬರಿಯ ಪಂಥದಿ ಮರುಗದಿರ್ಪುದು ಸರಿಯೆ ನಿನಗದು ಸರಸವಲ್ಲದುಅ.ಪ. ಉಕ್ಕಿನ ಕಂಬದಿಂದ ಉದಿಸಿ ಬಂದು ರಕ್ಕಸನುರವ ಸೀಳಿ ಕರುಳನು ಬಗೆದು ಉಕ್ಕುವ ಕೋಪದಿಂದ ರಕುತವು ಸುರಿಯೆ ಭಕ್ತ ಪ್ರಹ್ಲಾದನಾದರದಿ ಕಾಯ್ದು ಭಕ್ತ ವತ್ಸಲನೆನಿಸಲಹುದು ಶಕ್ತಿಹೀನತೆಯಿಂದ ಮರೆಹೊಕ್ಕ ಎನ್ನನು [ಕಾಯು]ವುದು 1 ಒಪ್ಪಿಡಿಯವಲಕ್ಕಿಯ ಒಪ್ಪಿಸಿನಿಂದ ವಿಪ್ರನ ನಲವಿಂದ ನೋಡುತಲಂತು ವಿಪುಲಸಂಪದವನ್ನು ಕರುಣಿಸಿದಂಥ ಅಪ್ರತಿಮ ಸಾಹಸಿಯೆನುತೆ ನಿನ್ನೊಳು ತಪಿಸಿ ಬೇಡುವ ಎನ್ನೊಳೀಪರಿ ಒಪ್ಪದೊಪ್ಪದೆನ್ನಪ್ಪ ಕೇಳಿದು ಸರಿಯೇ ಶ್ರೀನರಹರಿಯೇ 2 ಮಾನಿತÀಧ್ರುವ ಬಾಲನಂ ಮನ್ನಿಸಿ ಪೊರೆದೆ ಮಾನಿನಿ ಪಾಂಚಾಲಿಯ ಮಾನದಿ ಕಾಯ್ದೆ ಸಾನುರಾಗದಿಂ ಗಜನಂ ಉದ್ಧರಿಸಿದೆ ಕ್ಷೋಣಿಯೊಳಗತಿ ದೀನರಾದರ ಸಾನುರಾಗದಿ ಪೊರೆವ ಶ್ರೀಧರ ದಾನವಾಂತಕ ಶೇಷಗಿರೀಶನೆ ಸೂನುವೆಂಬಭಿಮಾನ ನಿನಗಿರೆ [ಮಾಣದೆನ್ನನು ಕಾಯೊ] ಹರಿಯೇ ಶ್ರೀನರಹರಿಯೇ3
--------------
ನಂಜನಗೂಡು ತಿರುಮಲಾಂಬಾ
ಏನುಚೋದ್ಯಶ್ರೀನಿಧೆಹರಿಮಾನಿನಿಶ್ರೀದೇವಿ ಭೂದೇವಿರಮಣಪಸೃಷ್ಟಿಕರ್ತನೆಂದು ಪೇಳ್ವರು ಪಾಂಡವರ ಮನೆಯಬಿಟ್ಟಿ ಬಂಡಿಬೋವನೆಂಬೋರು ಪಾಂಚಾಲಿಗೆ ಒದಗಿದಕಷ್ಟಕಳೆದÀು ಪೊರೆದನೆಂಬೊರೊಕೆಟ್ಟದಾನವರ ಅಟ್ಟುಳಿಯ ಕಳೆದುದುಷ್ಟಕಂಸನವಧೆಯ ಸ್ಪಷ್ಟ ಪೇಳುತಿಹರೊ 1ಗಜನ ಸಲಹಿ ಪೊರೆದನೆಂಬೊರೊ ನೆಗಳೆಯನು ಸೀಳಿತ್ರಿಜಗದೊಡೆಯ ಶ್ರೀಶನೆಂಬೊರೊ ಪ್ರಹ್ಲಾದ ಧೃವಗೆನಿಜಸೌಭಾಗ್ಯ ಇತ್ತೆ ಎಂಬೊರೊವಿಜಯಸಾರಥಿಯ ವಿಶ್ವರೂಪ ತೋರಿಸುಜನರನ್ನು ಪೊರೆದ ನಿಜವ ಪೇಳುತಿಹರು 2ವತ್ಸಾಸುರನ ಮಡುಹಿದೆಂಬೊರೊ ಅಡವಿಯಲಿ ಕಾಡ-ಕಿಚ್ಚನುಂಗಿ ಬೆಳೆದಿ ಎಂಬೊರೊ ತಾಯಿಗೆ ಬಾಯೋಳಹೆಚ್ಚಿನ್ವಿಷಯ ತೋರ್ದಿ ಎಂಬೊರೊಕಚ್ಚ ಬಂದ ಘಣಿಯ ಮೆಟ್ಟಿ ತುಳಿದು ಜಲವಸ್ವಚ್ಛಗೈದನೆಂದಾಶ್ಚರ್ಯ ಪೇಳುತಿಹರೊ 3ಕರಡಿ ಮಗಳು ಮಡದಿಯೆಂಬೊರೊ ಪುಷ್ಪವನು ತರಲುತೆರಳಿ ಯುದ್ಧ ಮಾಡ್ದನೆಂಬೊರೊ ದೇವೇಂದ್ರನ ಗೆಲಲುತರುಣಿ ಸಮರಗೈದಳೆಂಬೊರೊಮುರಳಿನಾದದಿಂದ ತರುಣಿಯರ ಮನವಮರುಳುಗೈದನೆಂದು ಪರಿಪರಿ ಪೇಳುವರೊ 4ಕೆಟ್ಟದ್ವಿಜನ ಪೊರೆದಿ ಎಂಬೊರೋ ವನವನವ ಚರಿಸಿಸುಟ್ಟ ದಾಸಗೊಲಿದೆ ಎಂಬೊರೋ ಒಪ್ಪಿಡಿಯ ಗ್ರಾಸವಕೊಟ್ಟದ್ವಿಜನ ಪೊರೆದಿಯೆಂಬೊರೊಅಟ್ಟಹಾಸದಿ ತಂದ ರುಕ್ಮಿಣಿಯ ತನ್ನಪಟ್ಟದರಸಿಯೆಂದು ಸ್ಪಷ್ಟ ಪೇಳುತಿಹರೊ 5ಶಿಲೆಯ ಸತಿಯಗೈದನೆಂಬರೊ ಅಡವಿಗಳ ಚರಿಸಿಬಲುಕಪಿಗಳ ಕೂಡ್ದನೆಂಬೊರೊ ಭಯ ಭಕ್ತಿಗೆ ಮೆಚ್ಚಿಫಲದ ಎಂಜಲ ಸವಿದನೆಂಬೊರೊ ಮೆಚ್ಚಿಸುಲಭದಿಂದ ದೈತ್ಯಕುಲವನೆಲ್ಲ ಸವರಿಛಲದ ದಶಶಿರನ ವಧೆಯ ಪೇಳುತಿಹರೊ 6ಪುಟ್ಟಬ್ರಹ್ಮಚಾರಿ ಎಂಬೋರೊ ಬಲಿರಾಜನ ಬೇಡಿಕೊಟ್ಟದಾನ ಕೊಂಡನೆಂಬೋರೊ ಈರಡಿಯನಳೆದುಮೆಟ್ಟಿ ಸಿರವ ತುಳಿದನೆಂಬೋರೊಎಷ್ಟು ಪೇಳಲಿ ನಿನ್ನ ಶ್ರೇಷ್ಠಗುಣಗಳನ್ನುದಿಟ್ಟ ಕಮಲನಾಭ ವಿಠ್ಠಲ ಸರ್ವೇಶ 7
--------------
ನಿಡಗುರುಕಿ ಜೀವೂಬಾಯಿ
ನಾನೇನ ಮಾಡಿದೆನೊ-ರಂಗಯ್ಯ ರಂಗನೀನೆನ್ನ ಕಾಯಬೇಕೋ ಪಮಾನಾಭಿಮಾನವು ನಿನ್ನದು ಎನಗೇನುದೀನ ರಕ್ಷಕ ತಿರುಪತಿ ವೆಂಕಟರಮಣ ಅ.¥ರಕ್ಕಸತನುಜನಲ್ಲೇ - ಪ್ರಹ್ಲಾದನುಚಿಕ್ಕ ಪ್ರಾಯದ ಧ್ರುವನು ||ಸೊಕ್ಕಿನ ಪಾಪ ಮಾಡಿದಜಮಿಳನು ನಿನ್ನಅಕ್ಕನ ಮಗನು ಮಗನು ಏನೋ -ರಂಗಯ್ಯ 1ಕರಿರಾಜ ಕರಿಸಿದನೇ - ದ್ರೌಪದಿದೇವಿಬರದೋಲೆ ಕಳುಹಿದಳೇ ||ಕರುಣದಿಂದಲಿ ಋಷಿಪತ್ನಿಯ ಶಾಪವಪರಿಹರಿಸಿದೆಯಲ್ಲವೋ -ರಂಗಯ್ಯಒಪ್ಪಿಡಿಯವಲಕ್ಕಿಯ -ನಿನಗೆ ತಂದುಒಪ್ಪಿಸಿದವಗೊಲಿದೆ ||ಒಪ್ಪುವೆ ನಿನಗೆ ಶ್ರೀಪುರಂದರವಿಠಲವರಪ್ಪಂತೆ ಎನ್ನ ಕಾಯೋ -ರಂಗಯ್ಯ 3
--------------
ಪುರಂದರದಾಸರು
ಹಿಂದಿನ ಬವಣೆಗಳೆಲ್ಲ ಆಗಲೆ ಮರೆದೆಯೇನೊ |ಇಂದುಬಂದ ಭಾಗ್ಯವು ನಿಜವೆ ವೆಂಕಟತಂದೆ?ಪತಲೆಗೆ ಹುಲಗಲ ಹೂವಕಟ್ಟಿತುರುಗಳ ಕಾಯುತಲಿದ್ದೆ |ಹಲವು ರತ್ನದ ಮುಕುಟ ಈಗ ಇಟ್ಟಿಹೆನೆಂದು 1ಒಪ್ಪಿಡಿಅವಲಕ್ಕಿಯನು ಒಪ್ಪದಿಂದ ಸವಿದೇ ಸವಿದೆ |ತಪ್ಪದೆ ಪಂಚಾಮೃತ ಉಂಡು ಸೊಕ್ಕಿದೆನೆಂದು 2ಭಾಗ್ಯವು ಬಂದರೆ ಭಕ್ತರನು ಮರೆವರೆ ಸೌ-|ಭಾಗ್ಯವಂತ ನೀನುಪುರಂದರವಿಠಲ3
--------------
ಪುರಂದರದಾಸರು