ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದರು ಸರಿ ಬೀಳ್ವದು ನಮ್ಮ ಶ್ರೀನಿವಾಸನ ಮಹಿಮಾನುಸಂಧಾನದಿಂ ಪ. ಶಯ್ಯದಿಂದೇಳುತ ಶಾರೀರದಾಲಸ್ಯದಿಂ- ದಯ್ಯ ಅಪ್ಪ ಅಮ್ಮನೆಂಬುವರಾ- ಜೀಯನ ಗುಣನಾಮಕನುವಾಗಿ ತಿಳಿದರೆ ಕಯ್ಯ ಪಿಡಿದು ಕಾವ ಕರುಣಾಳು ರಾಜಗೆ 1 ಅಪತತ್ವದಲಿ ನಿಂತು ಅಪ್ಯಾಯನ ಮಾಳ್ಪ ತಪ್ಪನೆಂಬುದಕಿದು ಕಾರಣವು ಮುಪ್ಪುರಹರನಯ್ಯನು ಪೆತ್ತ ದೊರೆಯನು ಒಪ್ಪಲಾರದೆ ಅಮ್ಮ ಅಯ್ಯನೆಂಬುವ ನಾಮ 2 ಕುರಿಯೊ ಮರಿಯೊ ಎಂಬ ದಾತಗೆ ಭಿನ್ನ ಹ- ವರವುದು ಹರಿಗೆ ಮೂಜನವೆಲ್ಲವು ಕುರಿಯಂತೆ ವಶ್ಯವಾಗಿರುವುದು ಭವಬಂಧ ಹರಿದ ಜ್ಞಾನದ ಮುಳ್ಳಮುರಿಯೆಂಬ ಭಾವದಿಂ 3 ಮೂರಾರು ಪುರಾಣ ಮೂಲ ರಾಮಾಯಣ ಭಾರತ ಪಂಚರಾತ್ರಾದಿಗಳು ಸೇರಿ ಪೇಳುವುದೆಲ್ಲ ಸಿರಿಯರಸನ ನಾಮ ವಾರಿಧಿಯೊಳಗಿನ ತೆರೆಗಳಂದದಿ ತೋರ್ಪ 4 ನಾದ ಬಿಂದು ವರ್ಣದಾತನುದಾತ್ತ ಸ್ವ ರಾದಿ ಸಕಲ ಶಬ್ದ ವಾಚ್ಯ- ನಾದ ಶ್ರೀದೇವಿಯರಸ ವೆಂಕಟರಾಜನರಿವಂಥ ಹಾದಿಯ ತಿಳಿದರಗಾಧ ಮಹಿಮಾ ನಿನ್ನ 5
--------------
ತುಪಾಕಿ ವೆಂಕಟರಮಣಾಚಾರ್ಯ