ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಡಿಗೆಯನು ಮಾಡಬೇಕಣ್ಣ - ನಾನೀಗ ಜ್ಞಾನದಡಿಗೆಯನು ಮಾಡಬೇಕಣ್ಣ ಪ ಅಡಿಗೆಯನ್ನು ಮಾಡಬೇಕುಮಡಿಸಬೇಕು ಮದಗಳನ್ನುಒಡೆಯನಾಜ್ಞೆಯಿಂದ ಒಳ್ಳೆಸಡಗರದಲಿ ಮನೆಯ ಸಾರಿಸಿ ಅ ತನ್ನ ಗುರುವ ನೆನೆಯ ಬೇಕಣ್ಣತನುಭಾವವೆಂಬ ಭಿನ್ನ ಕಲ್ಮಶವಳಿಯ ಬೇಕಣ್ಣಒನಕೆಯಿಂದ ಕುಟ್ಟಿಕೇರಿ ತನಗೆ ತಾನೆ ಆದ ಕೆಚ್ಚನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ 1 ತತ್ವಭಾಂಡವ ತೊಳೆಯ ಬೇಕಣ್ಣ - ಸತ್ಯಾತ್ಮನಾಗಿಅರ್ತಿ ಅಕ್ಕಿಯ ಮಥಿಸಬೇಕಣ್ಣಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಿ ಇನ್ನುಮುತ್ತಿಕೊಂಡಿಹ ಮಮತೆಯನ್ನು ಎತ್ತಿ ಎಸರ ಹಿಂಗಿಸುತಲಿ 2 ಜನನ ಸೊಂಡಿಗೆ ಹುರಿಯಬೇಕಣ್ಣ - ನಿಜವಾಗಿ ನಿಂತುತನುವು ತುಪ್ಪವ ಕಾಸಬೇಕಣ್ಣಕನಕಗಿರಿ ಕಾಗಿನೆಲೆಯಾದಿಕೇಶವನ ದಾಸಕನಕನ ಕಟ್ಟಳೆಯೊಳು ನಿಂತು ಸುಖದ ಪಾಕವ ಚಂದದಿ ಸವಿದುಣ್ಣಲಿಕ್ಕೆ 3
--------------
ಕನಕದಾಸ
ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ ಪ ಬಹುಜನರು ನೆರೆ ತಿಳಿದು ಪೇಳಿ ಮತ್ತಿದನು ಅ ಕುಹಕ ಯುಕುತಿಹೇವವಿಲ್ಲದ ಹೆಣ್ಣು ಗಜುಗ ಬೆಳೆದ ಕಣ್ಣುಸೇವೆಯರಿಯದ ದಣಿಯು ಕಲ್ಲಿನಾ ಕಣಿಯು1 ಧರ್ಮವಿಲ್ಲದ ಅರಸು ಮುರಿದ ಕಾಲಿನ ಹೊರಸುನಿರ್ಮಲಿಲ್ಲದ ಮನಸು ಅದು ಕಜ್ಜಿ ತಿನಿಸುಶರ್ಮವಿಲ್ಲದ ಗಂಡು ಕರಿಯ ಒನಕೆಯ ತುಂಡುಮರ್ಮವಿಲ್ಲದ ಮಾತು ಒಡಕು ಮಡಕೆ ತೂತು 2 ಭೃತ್ಯ ಅವ ಕ್ರೂರ ಕೃತ್ಯ 3 ಬಂಟ ಒಡಕು ಹರವಿಯ ಕಂಠಗಂಡಗಂಜದ ನಾರಿ ಅವಳೆ ಹೆಮ್ಮಾರಿ 4 ದಾತ ಅವ ಹೀನ ಜಾತಸೃಷ್ಟಿಯೊಳು ಕಾಗಿನೆಲೆಯಾದಿಕೇಶವನಂಘ್ರಿಮುಟ್ಟಿ ಭಜಿಸದ ನರನು ಅವನೆ ವಾನರನು 5
--------------
ಕನಕದಾಸ
ಜಯಜಯ ಶ್ರೀ ರಾಮ ನಮೋ |ಜಯ ಜಯ ಶ್ರೀ ಕೃಷ್ಣ ನಮೋ ಪ.ಸಿರಿಯರಸನು ಶೃಂಗಾರವ ಮಾಡಿ |ಸಿರಿಗಂಧವನೆ ಹಣೆಗಿಟ್ಟು ||ತರುಣ ತುಳಸಿ ವನಮಾಲೆಯ ಧರಿಸಿ |ಹರಿತುರುಕಾಯಲು ಹೊರಗೆ ಹೊರಟನು1ಹೊತ್ತು ಹೋಯಿತುತುರು ಬಿಡಿಯೆನ್ನುತ |ಸಾತ್ತ್ವತ ನುಡಿದನು ಗೋಪಿಯೊಡನೆ ||ತುತ್ತುರು ತುತ್ತುರು ತುರುತುರುಯೆನ್ನುತ |ಒತ್ತಿ ಸ್ವರಗಳನು ಪೊಂಗೊಳಲೂದುತ 2ವನಿತೆ ಸಟ್ಟುಗದೊಳು ಅಕ್ಕಿಯ ತೊಳಸಿ |ಒನಕೆಯಿಂದಓಗರ ಹದನೋಡಿ ||ಮಿನುಗುವ ಸೀರೆಯ ತಲೆಗೆ ಸುತ್ತಿಕೊಂಡು |ವನಕೆ ಹೋಗಲೆಂದು ಹೊರಗೆ ಹೊರಟಳು 3ಹರಿಸ್ವರವೆನ್ನುತ ಒಬ್ಬಳುಕೇಳಿನೆರೆಮನೆಗೆ ಹೋಗಿ ಕಡ ಕೇಳಿದಳು ||ಒರಳು ಕೊಡುವಿರಾ ಅರಸಿನ ಅರೆದು |ಮರಳಿ ಬೇಗ ತಂದೀವೆನೆನುತಲಿ 4ಹಸುವಿಗೆ ಇಟ್ಟಲು ಹಾಲುಓಗರ |ಬಿಸಿಮಡ್ಡಿಯ ಗಂಡಗೆ ಚಾಚಿ ||ಸೊಸೆಯನು ಅಟ್ಟಿಸಿ ತೊತ್ತನು ಪಾಲಿಸಿಮೊಸರ ಕಾಸಿ ಹೆಪ್ಪ ಹಾಕಿದೊಳೊಬ್ಬಳು 5ಗಿಳಿಗೆ ಹಾಸಿದಳು ಹಾಸು ಮಂಚವನು |ಅಳಿಯನ ಪಂಜರದೊಳಗಿರಿಸಿ ||ತಳಿಗೆಯಲ್ಲಿ ತಮ್ಮನ ಮಲಗಿಸಿ ತೊಟ್ಟಿ - |ಲೊಳಗೆ ಎಡೆಯನು ಮಾಡಿದಳೊಬ್ಬಳು 6ಅಟ್ಟವೆಂದು ಹತ್ತಿ ಅಗಳಿಯ ಮೇಲೇಇಟ್ಟಳು ಸಾದೆಂದು ಸಗಣಿಯನು ||ಕಟ್ಟಬಾಯಿಗೆ ಕಾಡಿಗೆಹಚ್ಚಿ |ಕೃಷ್ಣನ ಸ್ಮರಿಸುತ ಹೊರಗೆ ಹೊರಟಳು 7ಅಂಗನೆ ಚೌರಿಯು ಕಾಲಿಗೆ ತಗುಲಿಸಿ |ಮುಂಗೈಯಲಿ ತಾಳಿಯ ಬಿಗಿದು ||ಸಿಂಗರ ಸರವನು ನಡುವಿಗೆಕಟ್ಟಿ |ರಂಗನ ಸ್ಮರಿಸುತ ಹೊರಟಳೊಬ್ಬಳು 8ಕಟ್ಟಿ ಮುತ್ತಿನೋಲೆ ಮೊಣಕಾಲ್ಗಳಿಗೆ |ಗಟ್ಟಿ ಕಂಕಣವ ಕಿವಿಗಿಟ್ಟು ||ತೊಟ್ಟಿಲೊಳಗೆ ಶಿಶು ಅಳುವುದ ಕಂಡು |ಕಟ್ಟಿದ ನೆಲುವನು ತೂಗಿದಳೊಬ್ಬಳು 9ತರುಣಿಯೊಬ್ಬ ಸಂನ್ಯಾಸಿಯ ಕಂಡು |ನೆರೆಮನೆ ಕೂಸೆಂದೆತ್ತ ಬರಲು ||ಅರಿದಾವ ಗಾಳಿ ಸೋಕಿತೆನುತಲಿ |ಪುರಂದರವಿಠಲನು ನಗುತಿದ್ದನು ಸಖಿ 10
--------------
ಪುರಂದರದಾಸರು
ಸುವ್ವಿ ಎಂದು ಪಾಡಿರೆ ಸುಜ್ಞಾನ ದೇವರಭವಹರಿವುದು ಭಯವಿಲ್ಲ ಸುವ್ವಿಪಂಚ ಶಕ್ತಿಗಳೆಂಬಪರಮಮುತ್ತೈದೆಯರುವಂಚನೆಗೆ ದೂರಾಗಿ ವರ್ತಿಸುತ ಸುವ್ವಿವಂಚನೆಗೆ ದೂರಾಗಿ ವರ್ತಿಪಐದೆಯರುಮುಂಚೆ ಬೇಗದಲಿ ಮಡಿಯಾಗಿ ಸುವ್ವಿ1ಕ್ಷೇತ್ರದ ಒರಳಲ್ಲಿ ಕ್ಷರನೆಂಬ ಅಕ್ಕಿಯುಕ್ಷೇತ್ರಜÕನೆಂಬ ಒನಕೆಯ ಸುವ್ವಿಕ್ಷೇತ್ರಜÕನೆಂಬ ಒನಕೆಯ ಪಿಡಿದುಪಾತ್ರನಾಗೆಂದು ಹರಸುತ ಸುವ್ವಿ2ಆರು ಮೂರಾದವನ ಐದು ಎಂಟಾದವನಬೇರೇಳು ನಾಲ್ಕೆರಡು ಬಗೆಯಾದವನ ಸುವ್ವಿಬೇರೇಳು ನಾಲ್ಕೆರಡು ಬಗೆಯಾದನೆಲ್ಲನುವಾರಣದಿ ನೀವೆಲ್ಲ ತಳಿಸಿರೆ ಸುವ್ವಿ3ವಾಸನೆಯ ಮೆರುಗನು ಒಳಿತಾಗಿ ತಳಿಸುತ್ತಸೂಸದಂತೆಲ್ಲವ ಮಗುಚುತ್ತ ಸುವ್ವಿಸೂಸದಂತೆಲ್ಲವ ಮಗಚುತ್ತ ಅಕ್ಕಿಯರಾಶಿಯನು ಮಾಡಿ ಬಿಡಿರವ್ವ ಸುವ್ವಿ4ಪರವಸ್ತುವಾದವನ ಪರಬ್ರಹ್ಮವಾದವನಪರಮಾತ್ಮನೆಂಬ ಪುರುಷನ ಸುವ್ವಿಪರಮಾತ್ಮನೆಂಬ ಪುರುಷ ಚಿದಾನಂದನಪರಮನೈವೇದ್ಯದ ಪಾಕಕ್ಕೆ ಸುವ್ವಿ5
--------------
ಚಿದಾನಂದ ಅವಧೂತರು