ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಯಾ ಜಯಕೃತಿಗೆ ಮಂಗಳಂ ಶಾಂತಿ ಸ್ವರೂಪಳಿಗೆ ಮಂಗಳಂ ಭಕ್ತರ ಕಂಗಳಿಂದಲಿ ನೋಡಿ ರಂಗನ ಪಾದವ ತೋರ್ವಳಿಗೆ ಪ. ಮಂಗಳಂ ಜಯ ಮಂಗಳಂ ಅ.ಪ. ಅಲ್ಲಿ ವೈಕುಂಠದೊಳಗೆ ಇರಲು ಬಲ್ಲಿದ ಭೃಗು ಋಷಿ ತಾ ಬರಲು ವಲ್ಲಭನ ವಕ್ಷಸ್ಥಳ ಒದೆಯಲು ಹರಿ ಸೊಲ್ಲು ಕೇಳದೆ ಓಡಿ ಬಂದಳಿಗೆ 1 ಕೊಲ್ಲಾಪುರದಲಿ ನಿಂದಳಿಗೆ ಎಲ್ಲರಭೀಷ್ಟವ ಸಲಿಪಳಿಗೆ ಖುಲ್ಲರ ಮರ್ಧಿಪ ಹರಿಯ ವಕ್ಷಸ್ಥಳ ದಲ್ಲಿ ಸದಾ ನೆಲಸಿರ್ಪಳಿಗೆ 2 ಶ್ರೀ ಜಯದೇವಿಗೆ ಶ್ರೀ ಲಕ್ಷ್ಮಿಗೆ ಶ್ರೀ ರುಕ್ಮಿಣೀ ಸತ್ಯಭಾಮಳಿಗೆ ಶ್ರೀ ಪದ್ಮಾವತಿ ನಾಮಕ ನಾನಾರೂಪ ಗುಣಾನ್ವಿತೆಗೆ 3 ಮುಕ್ತಾಮುಕ್ತರಿಗೊಡೆಯಳಿಗೆ ಮುಕ್ತಿಯ ಭಕ್ತರಿಗೀವಳಿಗೆ ಮುಕ್ತಳೆನಿಸಿ ಮುಕ್ತಾಶ್ರಯನಿಗೆ ಆ- ಸಕ್ತಿಯಿಂದ ಸೇವೆ ಮಾಳ್ಪಳಿಗೆ 4 ಗೋಪಾಲಕೃಷ್ಣವಿಠ್ಠಲನ ಆಪಾದ ಮೌಳಿಯ ಗುಣಗಳನು ತಾ ಪರಿಪರಿಯಿಂದ ವರ್ಣಿಸುತ್ತಿದ್ದರು ಅಪಾರವಾಗಿಯೆ ಕಾಂಬಳಿಗೆ 5
--------------
ಅಂಬಾಬಾಯಿ
ಸಿರಿಯ ರಮಣ ನರಹರಿಯ ಚರಣಗಳ ನಿರತ ಭಜಿಪರಿಗೆ ಸ್ಥಿರ ಸುಖವಿಹುದು ಪ ದುರಳ ವಿಷಯಗಳ ತೊರೆದು ಮುದದಿ ಮೈ ಮರೆಯುವ ತೆರದಲಿ ಉರುತರ ಭಕುತಿಯಲಿ ಅ.ಪ ತನಯ ಪ್ರಹ್ಲಾದನು ಜನಕನ ವಚನವ ನನುಸರಿಸದೆ ತನ್ನ ಮನದಲಿ ಸಂತತ ನೆನೆದು ಶ್ರೀಹರಿಯನು ದಿನದಿನ ನಾರಾಯಣನ ಸುಮಂಗಳ ಗುಣಗಳ ಪೊಗಳುತ ಕುಣಿ ಕುಣಿಯುತ ತನ್ನ ಜನಕನ ಕೋಪಕೆ ಹೊಣೆಯಾಗುತಲಿರೆ ಕ್ಷಣದಲಿ ಪೊರೆದ 1 ಖೂಳನು ತನ್ನಯ ಬಾಲನ ನಡತೆಯ ತಾಳಲಾರದೆ ಕೋಪ ಜ್ವಾಲೆಯಿಂದುರಿಯುತ ಪೇಳೊ ಇಲ್ಲಿಹನೇನೊ ತಾಳೊ ನೋಡುವೆನೆಂದು ಪೇಳಿ ಕಂಬವ ತನ್ನ ಕಾಲಲಿ ಒದೆಯಲು ಸೀಳಿ ಛಟ ಛಟನೆ ತಾಳಿ ಘೋರತನು ಖೂಳ ರಕ್ಕಸನಲಿ ಧಾಳಿಯ ಗೈದ 2 ದುರುಳ ಹಿರಣ್ಯಕನ ಕರಳ ಬಗೆದು ತನ್ನ ಕೊರಳಲ್ಲಿ ಮಾಲೆಯ ಧರಿಸಿ ಸಿಡಿಯುತಿರೆ ಉರಿಯಿಂದ ಧರಣಿಯು ತರತÀರ ನಡುಗಲು ಸುರರ ಮೊರೆಯ ಕೇಳಿ ವರಲಕುಮಿಯು ನರ ಹರಿಯನು ಸ್ತುತಿಸಲು ಮರೆತು ಕೋಪವನು ವರ ಭಕುತನಿÀಗೆ ಪ್ರಸನ್ನತೆಯಿತ್ತ 3
--------------
ವಿದ್ಯಾಪ್ರಸನ್ನತೀರ್ಥರು