ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರುಳು ಮನವೇ ವ್ಯರ್ಥ ಚಿಂತಿಸುವಿಯಾಕೋ ಹರಿ ತಾನೇ ಕಾಯ್ವ ಮನ ದೃಢವಿರಲಿ ಬೇಕೊ ಪ ಎಲ್ಲಿ ನೋಡಿದರಲ್ಲಿ ಇರುವಾತಾ ಎಲ್ಲರನು ಪೊರೆವಾತಾ ಬಲ್ಲಿದನು ಬಲಿಯ ತುಳದಾತಾ ಸೊಲ್ಲು ಸೊಲ್ಲಿಗೆ ಬಂದು ಎಲ್ಲಿವನು ಪೇಳಿದರೆ ಕಲ್ಲಾಗುವನೇ ಸ್ವಾಮಿ ಪ್ರಲ್ಹಾದ ತಾತಾ 1 ಹಬ್ಬಿರುವ ಮಾಂಸಗಾಗರ್ಭದೊಳಿರುವಾಗ ಉಬ್ಬಸವ ಬಡುವಾಗ ಸಲಹಿದವರ್ಯಾರೋ ಅಬ್ಬರದ ನೋವಿನೊಳು ಒಬ್ಬನೇ ಬರುವಾಗ ಹೆಬ್ಬಾಗಿಲವ ನಿನಗೆ ತೋರಿದವರ್ಯಾರೋ 2 ವರದ ಹನುಮೇಶವಿಠಲನ ಚರಣವ ನಂಬು ಮೊರೆಯಾಗ್ವನಲ್ಲಾ ಹರಿ ಕರುಣ ಸಾಗರನೋ ಕರಿರಾಜ ಕರಿಯಲಾಕ್ಷಣಕೆ ಅವಸರದಲಿ ಗರುಡವಾಹನ ಕೃಷ್ಣ ಬರಲಿಲ್ಲವೇನೋ 3
--------------
ಹನುಮೇಶವಿಠಲ