ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಡುವರೇಚಕ ಪೂರಕ ನಂದಿಯ | ಜೋಡಿಸಿ ಎರಡನು ಮೆರೆವಸುಷಮ್ನಿಯ | ನಾಡಿಯ ರಥಿಕರ ಹೂಡುತ ಮೆಲ್ಲನೆ | ನಿಜಮನ ಸಾರಥಿಯಾ | ಕೂಡಿಸಿ ಹರುಷಲೇರಿ ನಡೆಸುತ ಸ | ವಾಡಿಕಿಯಿಂದಲಿ ಮೇಲ್ಗುರಿಯಾತ್ರೆಯ | ಮಾಡಿ ವಿಲಾಸದಲಾಡಿದ ಮಹಿಪತಿ | ಗುರುಮೂರ್ತಿಗೆ ಶರಣು
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತನ್ನ ತಿಳಿದು ತಾ ನಿರ್ಲಿಪ್ತನಾದವಗೆ ಇನ್ನೇನಿನ್ನೇನುತನ್ನ ತನ್ನೊಳು ಕಂಡು ತಾನಾದ ಮಹಾತ್ಮಗೆ ಇನ್ನೇನಿನ್ನೇನು ಪ ನಾನು ನೀನೆಂಬ ಹಮ್ಮುಳಿದುಳಿದಾತಗೆ ಇನ್ನೇನಿನ್ನೇನುನಾನು ನೀನೇ ನಿಶ್ಚಯವೆಂದು ನಿಶ್ಚಲನಾದವಗೆ ಇನ್ನೇನಿನ್ನೇನು1 ಸರ್ವವನರಿತು ಸರ್ವವೆ ತಾನಾದವಗೆ ಇನ್ನೇನಿನ್ನೇನುಸರ್ವ ಸರ್ವವು ಆದ ಸರ್ವಾತ್ಮಗೆ ಇನ್ನೇನಿನ್ನೇನು 2 ಮನದ ಮಾಟಗಳಿಗೆ ಮರುಳಾದವಗೆ ಇನ್ನೇನಿನ್ನೇನುಮನವು ತಾನಾದವಗೆ ಮನಕೆ ನಿಲುಕದವಗೆ ಇನ್ನೇನಿನ್ನೇನು 3 ಸುಖ ದುಃಖಗಳಿಗೆ ತಾ ಸಾಕ್ಷಿಯಾದವಗೆ ಇನ್ನೇನಿನ್ನೇನುಸುಖ ದುಃಖ ತೋರದೆ ಸಮಮನನಾದವಗೆ ಇನ್ನೇನಿನ್ನೇನು 4 ಅಗಣಿತ ಮಹಿಮಗೆ ಇನ್ನೇನಿನ್ನೇನು 5 ಎರಡನುಳಿದು ಮತ್ತೆರಡನು ಮರೆತವಗೆ ಇನ್ನೇನಿನ್ನೇನುಎರಡರೊಳು ತಾನೆಡಬಿಡದಿಪ್ಪಗೆ ಇನ್ನೇನಿನ್ನೇನು6 ಮುಟ್ಟು ಚಟ್ಟುಗಳ ಮುಗಿಸಿದಾತಗೆ ಇನ್ನೇನಿನ್ನೇನುಮುಟ್ಟು ಚಟ್ಟಲಿ ಅಡಗಿರುವಾತಗೆ ಇನ್ನೇನಿನ್ನೇನು7 ಸಕಲ ವಿಧವ ನೋಡಿ ಸಂತುಷ್ಟನಾದವಗೆ ಇನ್ನೇನಿನ್ನೇನುಸಕಲದಿ ಬೆರೆತು ಸಂಶಯವಳಿದಿಪ್ಪವಗೆ ಇನ್ನೇನಿನ್ನೇನು 8 ಚಿದಾನಂದ ಗುರುವಿನ ಚಿತ್ತದಿ ಪಿಡಿದಾತಗೆ ಇನ್ನೇನಿನ್ನೇನುಚಿದಾನಂದ ಗುರುವಿನ ಚಿತ್ಸುಖಭರಿತಗೆ ಇನ್ನೇನಿನ್ನೇನು 9
--------------
ಚಿದಾನಂದ ಅವಧೂತರು
ಶ್ರೀರಂಗೇಶವಿಠಲ | ಪೊರೆಯೆನ್ನ ಹೃದಯಾ- ಧಾರನೆ ಮಾಲೋಲ | ಸ್ಮರಕೋಟಿ ಸುಂದರಾ- ಕಾರ ನತಜನಪಾಲ | ಅರಿಮಸ್ತಕ ಶೂಲ ಪ ಆರು ಅರಿಗಳ ಗೆಲಿಸಿಯೆನ್ನಿಂ- ದಾರು ಎರಡನು ಮುರಿಸಿ ನಿನ್ನೊಳು ಆರು ಮೂರನೆಯಿತ್ತು ಸರ್ವದ ಪಾರುಗೈಯ್ಯಬೇಕೆಂಬೆ ದೇವ ಅ.ಪ. ಆನೆಗೊಂದಿ ನಿವಾಸ | ಭಕುತರ ನಿರಂತರ ಮಾನದಿಂ ಪೊರೆವ ಶ್ರೀಶ | ಎಂದೆಂದಿಗು ನಾನಿನ್ನ ದಾಸರ ದಾಸ | ನೆಂದು ಕರುಣಿಸು ನೀನೆನಗೆ ಲೇಸ | ಭಾನುಕೋಟಿ ಪ್ರಕಾಶ ಮಾನ ಅವಮಾನಗಳು ನಿನ್ನಾ- ಧೀನವೆಂದೇ ನಂಬಿಕೊಂಡಿಹ ದೀನನೆನ್ನನು ದೂರ ನೋಡದೆ ಸಾನುರಾಗದಿ ಪೊರೆವುದೈಯ್ಯಾ ನಳಿನಭವ ಅಂಡದೊಳಗೆ ದಾನಿ ನೀನಲ್ಲದನ್ಯರುಂಟೆ ಏನ ಬೇಡೆನು ನಿನ್ನ ಬಳಿಯಲಿ ಜ್ಞಾನ ಭಕುತಿ ವೈರಾಗ್ಯವಲ್ಲದೆ1 ವರಾಹ ಜನ ತಾಪ | ತ್ರಯ ದೂರ ವಾಮನ ಮಾನವೇಂದ್ರರ ಪ್ರತಾಪ | ವಡಗಿಸಿದೆ ಪ್ರಬಲ ದಾನವೇಂದ್ರನ ಶಾಪ | ನೀನೆ ಕಳೆದೆಯೊ ಶ್ರೀಪಾ ವಾನರ ಬಲ ನೆರಹಿಕೊಂಡು ನೀನು ರಾವಣನನ್ನು ಕೊಂದು ಮಾನಿನಿಯ ಪೊರೆದು ಶರಣಗೆ ನಿ ದಾನ ಮಾಡದೆ ಪಟ್ಟಗಟ್ಟಿದೆ ದಾನವಾಂತಕನೆಂಬ ನಾಮವ- ನ್ಯೂನವಿಲ್ಲದೆ ಪರಸತಿಯರಭಿ ಮಾನ ಕಳುಪಿದ ಜಾಣ ಕಲ್ಕಿಯೆ 2 ಸೂರಿಜನ ಪರಿಪಾಲ ಸದ್ಗುಣಗಣನಿಲಯ ಘೋರರಕ್ಕಸಕಾಲ | ವರಶೇಷತಲ್ಪವ ನೇರಿ ನಿರುಪಮ ಬಾಲ | ನಂದದಿ ನಿರುತ ನೀ ತೋರುತಿರುವೆಯೊ ಲೀಲ | ಶ್ರೀ ರಂಗೇಶವಿಠಲ ಮಾರ ಜನಕನೆ ಮಂಗಳಾಂಗನೆ ಕ್ರೂರ ಕುಲವನದಾವ ಅನಲನೆ ಭೂರಿ ಕರುಣವ ಬೀರಿ ಎನ್ನಸು ಭಾರ ನಿನ್ನದು ವಾರಿಜಾಕ್ಷನೆ ಎನ್ನ ಹೃದಯದಿ ಚಾರು ಬಿಂಬವ ಸಾರಿ ಬೇಡುವೆ ಬಾರಿ ಬಾರಿಗೆ ಶರಧಿ ಬಡಬನೆ3
--------------
ರಂಗೇಶವಿಠಲದಾಸರು