ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂತಿದೆ ಬ್ರಹ್ಮ ಇಂತಿದೆ ಅದುಎಂತೋ ಇಹುದು ಎಂದು ಚಿಂತೆ ಮೂಡಲದೇಕೆ ಪ ಎರಡು ಕೈಗಳಿವೆ ಎರಡು ಕಾಲ್ಗಳಿವೆಎರಡು ಕಣ್ಣುಗಳು ಮತ್ತು ಎರಡು ಕಿವಿಗಳಿವೆಎರಡಕ್ಕೆ ಠಾವಿಲ್ಲ ಏಕವೇ ತಾನಿದೆಎರಡು ಎಂಬುದು ಮಾತಿನಿಂದೆರಡಾಗಿದೆ 1 ತಾನೆ ಬೇಡುತಲಿದೆ ತಾನೆ ಉಣ್ಣುತಲಿದೆತಾನೆ ತನ್ನ ಬಾಯ ತೊಳೆದುಕೊಳ್ಳುತಿದೆತಾನೆ ನಡೆಯುತಿದೆ ತಾನೆ ಮಲಗುತಿದೆತಾನೆ ಕುಳ್ಳಿರ್ದು ಹಾಡಿ ಪಾಡಿ ನಗುತಲಿದೆ 2 ಒಬ್ಬನೇ ಎನಿಸಿದೆ ಒಬ್ಬನೇ ತೋರಿದೆಒಬ್ಬನೇ ಆಗಿ ಆಡುತ್ತಲಿದೆಒಬ್ಬ ಚಿದಾನಂದ ಗುರುವರ ತಾನಿದೆಒಬ್ಬನೇ ಒಬ್ಬನೇ ಒಬ್ಬನೇ ಇದೆ ಇದೆ 3
--------------
ಚಿದಾನಂದ ಅವಧೂತರು
ಯೋಗ ಯೋಗಗಳೆಂದು ಕಸಿವಿಸಿ ತಾನೇಕೆಯೋಗವು ತಾನದೆ ಬಂಧಯೋಗವ ಬಿಟ್ಟು ತನ್ನನೆ ಬ್ರಹ್ಮನೆಂದೆನೆಯೋಗವೆ ರಾಜಯೋಗವೆಂದಪವ್ರತನೇಮ ಶೌಚದಿ ಮುಕ್ತಿಯು ಎಂದನೆವ್ರತನೇಮ ಶೌಚವು ಬಂಧಪ್ರತಿಯಿಲ್ಲದಾ ವಸ್ತು ತಾನೆಂದು ಚಿಂತಿಸೆಅತಿರಾಜಯೋಗವೆಂತೆಂದ1ಮೂರ್ತಿಧ್ಯಾನಷ್ಟಾಂಗದಲಿ ಮುಕ್ತಿಯೆಂದನೆಮೂರ್ತಿಧ್ಯಾನಷ್ಟಾಂಗ ಬಂಧಕರ್ತೃನಾ ಸರ್ವ ಕಾರಣವೆಂದು ಚಿಂತಿಸೆಕರ್ತೃರಾಜಯೋಗವೆಂದ2ಲಯ ಲಕ್ಷದಿಂದ ಮುಕ್ತಿ ಎಂದೆನೆಲಯ ಲಕ್ಷ ತಾನದು ಬಂಧಸ್ವಯಂ ಬ್ರಹ್ಮವೆಂದು ತಾನೆ ಚಿಂತಿಸಿನಿಯಮವು ರಾಜಯೋಗವೆಂದ3ಖೇಚರಿ ಭೂಚರಿಯಲಿ ಮುಕ್ತಿ ಎಂದೆನೆಖೇಚರಿ ಭೂಚರಿ ಬಂಧವಾಚಾತೀತ ವಸ್ತು ತಾನೆಂದು ಚಿಂತಿಸೆಗೋಚರ ರಾಜಯೋಗವೆಂದ4ಎರಡಕ್ಕೆ ತಾವಿಲ್ಲ ಇಹನೊಬ್ಬನೇ ತಾನೇಎರಡಾಗಿ ಕಾಂಬುದೊಂದೇ ಬಂಧಗುರುಚಿದಾನಂದನ ಸಾಕ್ಷಾತ್ಕಾರವೆಂದೆನೆಗುರಿಯದು ರಾಜಯೋಗವೆಂದ5
--------------
ಚಿದಾನಂದ ಅವಧೂತರು
ರೊಕ್ಕ ಎರಡಕ್ಕೆ ದುಃಖಗಕ್ಕನೆ ಹೋದರೆ ಘಾತ ಕಾಣಕ್ಕ ಪ.ಚಿಕ್ಕತನಕೆ ತಂದು ಕೆಡಿಸುವುದುರೊಕ್ಕಮಕ್ಕಳ ಮರಿಗಳಮಾಳ್ಪದು ರೊಕ್ಕಸಕ್ಕರೆ ತುಪ್ಪದ ಸಲಿಸುವುದು ರೊಕ್ಕಕಕ್ಕುಲಾತಿಗೆ ತಂದು ಕೆಡಿಸುವುದು ರೊಕ್ಕ 1ಕುಂಟರ ಕುರುಡರ ಕುಣಿಸುವುದು ರೊಕ್ಕಗಂಟು ಮಾಡಲಿಕ್ಕೆ ಕಲಿಸುವುದು ರೊಕ್ಕಬಂಟರನೆಲ್ಲ ವಶ ಮಾಡುವುದು ರೊಕ್ಕತುಂಟತನಕೆ ತಂದು ನಿಲಿಸುವುದು ರೊಕ್ಕ 2ಇಲ್ಲದ ಗುಣಗಳ ಕಲಿಸುವುದು ರೊಕ್ಕಸಲ್ಲದ ನಾಣ್ಯವ ಸಲಿಸುವುದು ರೊಕ್ಕಬೆಲ್ಲದಹಿಕ್ಕಿಂತಲೂ ಸವಿಯಾದ ರೊಕ್ಕಕೊಲ್ಲಲಿಕ್ಕೆ ಕಾರಣವಾಯಿತು ರೊಕ್ಕ 3ಉಂಟಾದ ಗುಣಗಳ ಬಿಡಿಸುವುದು ರೊಕ್ಕನಂಟರ ಇಷ್ಟರ ಮಾಡುವುದು ರೊಕ್ಕಒಂಟೆ - ಆನೆ -ಕುದುರೆ ತರಿಸುವುದು ರೊಕ್ಕಕಂಟಕಗಳನೆಲ್ಲ ಬಿಡಿಸುವುದು ರೊಕ್ಕ 4ವಿದ್ವಜ್ಜನರ ವಶ ಮಾಡುವುದು ರೊಕ್ಕಹೊದ್ದಿದವರನು ಹೊರೆವುದು ರೊಕ್ಕಮುದ್ದು ಪುರಂದರವಿಠಲನ ಮರೆಸುವಬಿದ್ದು ಹೋಗುವ ರೊಕ್ಕ ಸುಡು ನೀನಕ್ಕ 5
--------------
ಪುರಂದರದಾಸರು