ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಾಹಿ ಶ್ರೀ ಗುರುನಾಥ ತ್ರಾಹಿ ಸದ್ಗುರುನಾಥ ತ್ರಾಹಿ ಕರುಣಾಳು ಗುರುಮೂರ್ತಿ ಸದೋದಿತ ತ್ರಾಹಿ ಶ್ರೀನಾಥ ಕರುಣಿಸೆನ್ನನು ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ದೀನ ನಾಥ ತ್ರಾಹಿ ಗುರು ಮನ್ನಾಥ ಕಾಯೊ ಎನ್ನನು 1 ಹಿಂದೆ ಅನೇಕ ಜನ್ಮವನು ಸೋಸಿ ಬಂದು ನಾನಾ ಹೀನಯೋನಿ ಮುಖದಲಿ ಜನಿಸಿ ಕಂದಿ ಕುಂದಿದೆ ಗರ್ಭಪಾಶದೊಳು ಅಂದಿಗಿಂದಿಗೆ ನಿಮ್ಮ ಕುರುಹು ಕಾಣದೆ ತಿರುಗಿ ಮುಂದಗಾಣದೆ ಕುರುಡನಂತಾದೆ ಧರೆಯೊಳು ಬಂದೆ ಶ್ರೀಗುರು ಪಾದವನ್ನರಿಯದೆ 2 ಇಂದೆನ್ನ ಜನುಮ ಸಾಫಲ್ಯವಾಯಿತಯ್ಯ ಗುರು ಇಂದು ಮುನ್ನಿನ ಪುಣ್ಯ ಉದಯವಾಯಿತು ಎನಗೆ ಇಂದೆನ್ನ ಜೀವ ಪಾವನವಾಯಿತು ಸಂದು ಹರಿಯಿತು ಜನ್ಮ ಮರಣ ಎನಗಿಂದು ತಾ ಮುಂದೆ ಯಮಬಾಧೆ ಗುರಿಯಾಗುವದ್ಹಿಂಗಿತು ತಂದೆ ಶ್ರೀಗುರು ಚರಣದರುಶನದಲಿ 3 ದೇಶಿಗರ ದೇವನಹುದಯ್ಯ ಶ್ರೀಗುರುಮುನಿಯೆ ಅಶೆಪೂರಿತ ಕಲ್ಪವೃಕ್ಷ ಚಿಂತಾಮಣಿಯೆ ವಿಶ್ವ ವ್ಯಾಪಕ ಆತ್ಮ ಹಂಸಮಣಿಯೆ ಈಶ ದೇವೇಶ ಸರ್ವೇಶ ಸದ್ಗುಣಮಣಿಯೆ ವಾಸುದೇವನು ತ್ರೈಲೋಕ್ಯ ತಾರಕಮಣಿಯೆ ಭಾಸಿ ಪಾಲಿಪ ಭವನಾಶ ಮಣಿಯೆ 4 ಕರುಣ ದಯದಿಂದ ನೋಡೆನ್ನ ಶ್ರೀಗುರುರಾಯ ತರಳ ಮಹಿಪತಿ ಪ್ರಾಣೊಪ್ಪಿಸಿಕೊಂಡು ಈ ದೇಹ ಹೊರೆದು ಸಲಹುವದೆನ್ನ ಇಹಪರವನು ಕರದ್ವಯ ಮುಗಿದು ಎರಗುವೆನು ಸಾಷ್ಟಾಂಗದಲಿ ತಾರಿಸುವದೆಂದು ಸ್ತುತಿಸುವೆ ಅಂತರಾತ್ಮದಲಿ ತ್ರಾಹಿ ತ್ರಾಹಿಯೆಂಬೆನು ಮನದಲಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪರಾತ್ಮಾ ಶ್ರೀಶಿವಾನಂದಾ ಪ ನಮಿಸುವೇ ಪುಣ್ಯ ವಿಚಿತಾತ್ಮಾ ಮಹಾತ್ಮಾ ಸತ್ಯ ಸರ್ವಾತ್ಮಾ ಸ್ವರೂಪಾನಂದವಾ ಪಡೆವಾ ಸನ್ಮತಿಯಾ ನೀಡು ಗುರುದೇವಾ ಚರಣಕೆ ಎರಗುವೆನು ದೇವಾ 1 ಸದಾನಂದಾ ಮನೋಹರಾ ಹೃದಯದಾವಾಸ ನಿಜಸಾರಾ ಗುರುವರಾ ಶಂಕರಸ್ವರೂಪಾ ಕರುಣಿಸೈ ಬೋಧದಾನಂದಾ ಪರಾತ್ಮಾ ಶ್ರೀಶಿವಾನಂದಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಪುರಂದರದಾಸರ ಸ್ತೋತ್ರ ಪಾದ ಪದ್ಮಕ್ಕೆ ಎರಗುವೆನು ಸಲಹೆಮ್ಮ ಪ ಸುರಮುನಿಯು ನಾರದರೆ ಹರಿಯಾಜ್ಞದಿಂದ ಶ್ರೀಪುರಂದರಾ ಗಡದಲ್ಲಿ ಅವತರಿಸಿದೆತರುಣಿ ಮಕ್ಕಳು ಕೂಡೆ ಪರಮ ಸೌಖ್ಯದಲಿರುತಹರುಷದಲಿ ಮನೆಧನವ ಭೂಸುರರಿಗರ್ಪಣೆ ಮಾಡ್ದೆ 1 ಆದಿಕಾರಣ ನೀವು ದಾಸಮಾರ್ಗಕೆ ಪ್ರ-ಹ್ಲಾದನವತಾರ ಶ್ರೀ ವ್ಯಾಸಮುನಿಯಾಪಾದಕೆ ನಮಿಸಲುಪದೇಶವನು ಕೈಕೊಂಡುಮೋದತೀರ್ಥರ ಚರಣ ನಾದದಿಂದಲಿ ತುತಿಪೆ 2 ಅದ್ವೈತ ಮತವ ಕಾಲಿಲೊದ್ದು ಶ್ರೀ ಗುರುಮಧ್ವ ಸಿದ್ಧಾಂತವನು ಮಾಡಿದಶುದ್ಧ ಭಕ್ತಿ ಜ್ಞಾನ ವೈರಾಗ್ಯ ಪರರಾಗಿಮಧ್ವ ವಲ್ಲಭನ ಪದ ಹೃದ್ಗುಹದಿ ಪೂಜಿಸುವ 3 ಪಂಚಭೇದ ಸತ್ಯವೆಂದು ಪೇಳಿಹರಿಪುರವ ಸಾರ್ದ ಶ್ರೀ ಪುರಂದರರಾಯ 4 ತತ್ತ್ವ ಶೋಧನ ಮಾಡಿ ತತ್ತ್ವೇಶರನು ತಿಳಿದುತತ್ತತ್ಕಾಲಕೆ ಮಾಳ್ಪ ಕರ್ಮಗಳನಾಉತ್ತಮ ಶ್ಲೋಕ ಪುರುಷೋತ್ತಮನಿಗರ್ಪಿಸಿಮುಕ್ತಿ ಮಾರ್ಗವ ಪಿಡಿದೆ ಅತ್ಯಂತ ಮಹಾಮಹಿಮ 5 ಸಿರಿ ಬ್ರಹ್ಮ ವಾಯುಗರುಡ ಭುಜಂಗ ಮಾರಹರ ಇಂದ್ರ ಸುರರೆಲ್ಲ ತರತಮದಿ ದಾಸರೆಂಬುವ ಜ್ಞಾನ ಕರುಣಿಸುವುದು 6 ದಾಸವರ್ಯರೆ ವಿಜಯದಾಸರಾಯರಿಗುಪದೇಶಿಸಿದ ಪುರಂದರದಾಸರಾಯಶೇಷಗಿರಿವಾಸ ವೆಂಕಟ ವಿಠ್ಠಲನ ನಿಜದಾಸರಾ ದಾಸನೆಂದೆನಿಸೆನ್ನ 7
--------------
ವೆಂಕಟೇಶವಿಟ್ಠಲ
ಮಲ್ಲೆ ಮಲ್ಲಿಗೆ ಕೋಲ ಝಲ್ಲಿ ಮುತ್ತಿನ ಕೋಲನಲ್ಲೆಯರು ನಲಿ ನಲಿದು ಚಲುವ ರಂಗನ ಪಾಡಿಉಲ್ಲಾಸ ಬಡುವ ಕೋಲ ಅಮ್ಮಯ್ಯಪ. ಚಾರು ವÀದನಳೆ ದಿವ್ಯಥೋರ ಕುಚಗಳ ಆ ಭಾರಕೆ ಬಳಕುವಳೆ ವಿಸ್ತಾರ ಜಘನಳೆ ಚಲ್ವಳೆ ಅಮ್ಮಯ್ಯ 1 ನಾರಿಕೇಲದಂತೆ ಕರಗಳೆ ಉರಗಳೆ ವರಜಾನು ಜಂಗಿಗಳ ಚರಣಗಳ ನಖಗಳಬೆರಳುಗಳಿಗೆ ಎರಗುವೆನು ಅಮ್ಮಯ್ಯ 2 ಕಟಿ ಕಂಬು ನಮ್ಮಯ್ಯ 3 ಅಂಬುಜಾಂಬಳ ಪಾದವೆಂಬೊ ಕಮಲಗಳಬೆರಳೆಂಬೊ ಹವಳಗಳ ನಖವೆಂಬೊ ಚಂದ್ರಗಳ ಸಂಭ್ರಮದಿ ಎರಗುವೆ ನಮ್ಮಯ್ಯ4 ಸಿಂಧು ಸಪ್ತದಿಗಂಧರ್ವ ಲೋಕದಲಿಲ್ಲ ಹಿಂದಿಲ್ಲ ಮುಂದಿಲ್ಲವೆಂದೆ ನಮ್ಮಯ್ಯ 5 ಮಂದಾರ ಗಿರಿಮೇರು ಮಂದಾರದÀಲೆ ಮೇಲೆಂಬೊ ಮಾರ್ಜನ ತಪ ಒಂದು ಲೋಕದಲಿಲ್ಲವೆಂದು ದ್ರೌಪತಿಗ್ಹೇಳಿ ಬಂದೆನಮ್ಮಯ್ಯ 6 ಮಿತ್ರೆಯರ ಮುಯ್ಯಕ್ಕೆ ಮತ್ತೆಲ್ಲಿ ಸರಿಯಿಲ್ಲ ಸತ್ಯಲೋಕದಲಿಲ್ಲಮೃತ್ಯು ಲೋಕದಲಿಲ್ಲ ಅತ್ಯಂತ ತೆಳಗಿಹೊ ರತ್ನ ಲೋಕದಲಿಲ್ಲಹತ್ತು ದೆಸೆಗಿಲ್ಲವೆಂದೇ ನಮ್ಮಯ್ಯ 7 ಭಕ್ತವತ್ಸಲ ಸ್ವಾಮಿ ಅತ್ಯಂತ ಪ್ರೇಮದಲೆ ಸತ್ಯಭಾಂವೆರ ಅರಸು ಅರ್ಥಿಲೆ ಬಂದದ್ದುಚಿತ್ತಕ್ಕೆ ತಾ ಎಂದೆ ನಮ್ಮಯ್ಯ 8 ವೈಭವದ ಮುಯ್ಯವು ವೈಕುಂಠದಲಿಲ್ಲ ಕೈವಲ್ಯವೆನಿಪ ಸೇತುದ್ವೀಪದೊಳಗಿಲ್ಲಭಯವಿಲ್ಲವೆನಿಪ ಅನಂತಾಸನದಲಿಲ್ಲಐವರ ಅರಸಿಗೆ ಹೇಳಿಬಂದೆನಮ್ಮಯ್ಯ 9 ಕೈವಲ್ಯಪತಿ ತಾನು ದಯಮಾಡಿ ಬಂದದ್ದುದಯವ ಬಹಳಮ್ಮ ಐವರದು ಎನುತಲೆ ಕೈಮುಗಿದು ಹೇಳಿ ಬಂದೆ ನಮ್ಮಯ್ಯ10 ನಲ್ಲೆಯರ ಮುಯ್ಯಕ್ಕೆ ಎಲ್ಲೆಲ್ಲೂ ಸರಿಯಿಲ್ಲ ಸಪ್ತದ್ವೀಪದಲಿಲ್ಲಮೇರುವಿನಲಿಲ್ಲ ಈ ಭಾಗ್ಯವೆಲ್ಲ ಸ್ವರ್ಗದಲಿಲ್ಲಚಲ್ವಿ ದ್ರೌಪತಿಗೆ ಹೇಳಿ ಬಂದೆ ನಮ್ಮಯ್ಯ 11 ಬಲ್ಲಿದ ಅತಳ ವಿತಳ ಸುತಳ ಮಹಾತಳ ತಳಾತಳ ರಸಾತಳದಲಿಲ್ಲಈ ಮುಯ್ಯಕ್ಕೆಲ್ಲಿ ಸರಿ ಹೇಳಿ ಬಂದೆನಮ್ಮಯ್ಯ12 ಬೊಮ್ಮ ಲೋಕದಲಿಲ್ಲಸುಮನ ಸಾರಿರುವೋ ಸ್ವರ್ಗಲೋಕದಲಿಲ್ಲ ಅಮ್ಮಿಳ್ಳ ಪಾತಾಳವೆಂದೆ ನಮ್ಮಯ್ಯ13 ರಮಿಯರಸನು ತಂದ ಜಮ್ಮನೇ ನಿಮ್ಮ ಭಾಗ್ಯವು ಬಹಳ ಅಮ್ಮ ದ್ರೌಪತಿ ಎಂದು ಜುಮ್ಮನೆ ಹೇಳಿ ಬಂದೆನಮ್ಮಯ್ಯ 14
--------------
ಗಲಗಲಿಅವ್ವನವರು
ಸುಂದರ ಕಾಂಡ ರಾಮಾಯಣ ಸಿರಿ ಸಿರಿ ಹನುಮನಾ ||ಮೆರೆವ ಸಚ್ಚರಿತೆ ಮಮ | ಗುರುವೆ ನುಡಿಸೀದಷ್ಟುಒರೆವೆ ಕೇಳ್ಪುದು ಸಜ್ಜನಾ ಪ ಗೃಹ ಮೇಧಿ ಇರುವ ಬಗೆ | ಬಹು ಪರೀಯಲಿ ತೋರಿಗುಹ ವನಂಗಳನೆ ಚರಿಸೀ |ಗೃಹಿಣಿಯನು ಕಾಣದಲೆ | ಬಹು ನಟಸಿ ನರರಂತೆಮಹ ಮಹಿಮ ರಾಮ ಬರಲೂ 1 ಪತಿ ದಶರಥನ | ಸುತನ ಕಂಡೆರಗಿ ರವಿಸುತಗೆ ರಾಜ್ಯವನೆ ಕೊಡಿಸೀ 2 ರಾಮನಾಣತಿ ಪೊತ್ತು | ಭೂಮಿಜೆಯ ವಾರ್ತೆಯನುನೇಮದಲಿ ತರುವೆ ನೆನುತಾ ||ಆ ಮಹಾ ಶರಧಿಯನು | ಧೀಮಂತ ಲಂಘಿಸುತಭೂಮಿಜೆಯ ಕಂಡು ಎರಗೀ 3 ಪತಿ | ರಾಮನ್ನ ಕಂಡ ಪರಿಆಮೋದದಲ್ಲಿರುತಿರೇ 4 ಶ್ರೀ ಲೋಲ ರಾಮನಿಗೆ | ಆಳಾಗಿ ಇರಲೊಂದುವಾಲುಳ್ಳ ಕಪಿಯು ಬಂದೂ ||ಕೇಳುವರು ಇಲ್ಲದಲೆ | ಪೋಲಾಗಿ ಹೋಯ್ತೆಂಬಕೀಳು ನುಡಿಗವಕಾಶ ಕೊಡದೇ 5 ವಂದೆರಡು ಹಣ್ಣಾನು | ತಿಂದ್ಹೋಗುವೇನೆಂದುಇಂದೀವರಾಕ್ಷಿಯ ಬೇಡುತಾ ||ನಂದೀಸಿ ಅಶೋಕ | ನಂದನ ವನವ ಮದಸಿಂಧೂರ ನಂತೆಸಗಿದೇ 6 ಕೋಟ್ಯಶೀತಿಯು ನಿ | ಶಾಟ ಯೂಥಪ ಸಹಸಾಷ್ಟ ಕಾಯುತ ಮುಖ್ಯರಾ ||ಖೇಟ ರಾವಣ ಸೇನೆ | ಕೂಟ ಮೂರರಲೊಂದುರೋಟಿಸುತ ನೀ ಮೆರೆದೆಯೋ 7 ಅಕ್ಷೋಹ್ಣಿ ಬಲ ಸಹಿತ | ರಾಕ್ಷಸಾಧಿಪ ಸುತನುಅಕ್ಷಯ್ಯ ಕುವರ ಬರಲೂ ||ಪಕ್ಷೀಂದ್ರ ತೆರ ಪಿಡಿದು | ಈ ಕ್ಷಿತಿಗೆ ಅಪ್ಪಳಿಸೆತಕ್ಷಣದಲಸು ನೀಗಿದಾ 8 ಮಂದಜಾಸನ ವರದಿ | ಇಂದ್ರಜಿತು ಮದವೇರಿಬಂದೆಸೆಯೆ ಬ್ರಹ್ಮಾಸ್ತ್ರವಾ ||ಛಂದದಲ್ಯೋಚಿಸುತ | ಬಂಧನಕೆ ನೀನಾಗಿನಂದದ ಲ್ವೊಳಗಾದೆಯೋ 9 ತೆತ್ತೀಸ ಕೋಟಿ ದೇ | ವತ್ತೀಗಳಿಗೆಲ್ಲಾಉತ್ತೂಮನಾದ ನೀನೂ ||ಸುತ್ತೀಸಿ ಬಾಲವನು | ಹತ್ತೂತಲೆಯವನನೆತ್ತೀಯ ಮೇಲ್ ಕುಳಿತೆಯೋ 10 ನಾರೀಯ ಚೋರ ನಿ | ನ್ನಾರೆಂದು ಕೇಳಾಲುಮಾರುತ್ತರವಿತ್ತು ಜರಿದೇ ||ಮಾರೀಚ ಮೊದಲಾದ | ನೂರಾರು ರಕ್ಕಸರದೂರೋಡಿಸೀದವನ ದೂತಾ 11 ಕೋಟಲೆಗಳ ಕೊಟ್ಟ | ತಾಟಕಾದೀ ದೈತ್ಯಕೂಟಗಳ ಸಂಹರಿಸಿದಾ ||ಕೂಟಸ್ಥ ಲೋಕಗಳ | ನೋಟದಲಿ ದಹಿಪ ವೈರಾಟ ಪ್ರಭುವಿನಾಳೂ 12 ಕೇಳೆಲೋ ರಾವಣನೇ ತಿಳಿಯಯಾ ನೀನು ನಿನ್‍ಹುಳುವೆಂದು ನಿಜ ಬಾಲದೀ |ಸಿಲುಕಿಸಿ ಜಲನಿಧಿ | ನಾಲಕ್ಕು ಮುಳುಗಿದವಾಲಿ ಪೆಸರನು ಮರೆತೆಯಾ 13 ತಾಲಮರಗಳ ಶೀಳಿ | ವಾಲೀಯನೆ ಕೊಂದರ್ಕಬಾಲಗೇ ರಾಜ್ಯ ಕೊಡಿಸೀ ||ಕೋಲಿನಿಂ ನಿಮ್ಮೆಲ್ಲ | ಹೂಳುವ ರಾಮನಆಳು ನಾನೆಂದು ತಿಳಿಯೋ 14 ರಕ್ಕಸ ಪತಿಯಾಜ್ಞೆ | ಇಕ್ಕಿ ತಲೆಯಾ ಮೇಲೆರಕ್ಕಸರೆಲ್ಲ ತವ ಪುಚ್ಛ ||ಕಿಕ್ಕಲೂ ಉರಿ ಲಂಕೆ | ಪೊಕ್ಕು ಪುರವನೆ ದಹಿಸಿಅಕ್ಕರದಿ ವನದಿ ಹಾರೀ 15 ಕಾಯ ಸಹಿತರ ನೋಡಿಪ್ರೀಯ ದ್ವಾರ್ತೆಯ ನರುಹಲೂ ||ಗೇಯ ಹನುಮನ ತುತಿಸಿ || ರಾಯಗೆರಗುವ ವನದಿಕಾಯ ಕುಪ್ಪಳಿಸುತಿರಲೂ 16 ಕಾತುರತೆಯ ಕಪಿ | ಜಾತೆಗಳ ಸಂತೈಸಿಪ್ರೀತಿಯಿಂ ಮಧುವನವನಳಿದ ||ಸೀತೆಯನು ಕಂಡಂಥ | ವಾರ್ತೆಯನು ಪೇಳೆ ರಘುಜಾತ ನಿನ್ನನು | ಅಪ್ಪಿದಾ 17 ಎರಡೇಳು ಭುವನದೊಳು | ಇರುವರೇ ನಿನ್ಹೊರತುಹರಿಗೆ ಪ್ರೀತ್ಯಾಸ್ಪದನು ಎನಿಸೀ ||ಮೆರೆವ ಭಕ್ತಾಗ್ರಣಿಯೆ | ಎರಗುವೆನು ತ್ವತ್ವದಕೆಹರಿಭಕ್ತಿ ಕರುಣಿಸಯ್ಯಾ 18 ಉದಯಕಾಲದಲೆದ್ದು | ಮುದದಿಂದಲೀ ಪದವಸದಯ ಹೃದಯರು ಪಠಿಸಲೂ ||ಬದಿಗ ಗುರು ಗೋವಿಂದ | ವಿಠಲನೋಳ್ ಸದ್ಭಕ್ತಿವದಗಿ ಪಾಲಿಪ ಹನುಮನೂ 19
--------------
ಗುರುಗೋವಿಂದವಿಠಲರು
ಹರಿದಾಟ ನಿಲಿಸು ಮನದಘದೂರ ಸುಖಸಾರ ಎರಗುವೆನು ತವಪದಕೆ ಸ್ಮರಿಸಿ ನಿಮ್ಮುಪಕಾರ ಪ ಸಂತಸವ ಕೊಡು ಎನ್ನ ಅಂತರಂಗದಿ ನಿಂತು ಕಂತುಪಿತ ಚಿಂತಿಪರ ಚಿಂತಾಮಣಿ ಪ್ರಭುವೆ 1 ಅಲ್ಪಮನಸಿನ ಕುಕಲ್ಪನೆಯ ಪರಿಹರಿಸು ಅಲ್ಪರಿವ ದೀನರಿಗೆ ಕಲ್ಪತರು ನೀನು 2 ನಾಮಾಡಿದಪರಾಧ ಪ್ರೇಮದಿಂ ಕ್ಷಮಿಸು ಶ್ರೀ ರಾಮ ಮಮಪ್ರಾಣೇಶ ಪ್ರೇಮಾಬ್ಧಿನಿಲಯ 3
--------------
ರಾಮದಾಸರು