ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅಕ್ರೂರನ ಒಸಗೆ) ರಥವೋಗದಾ ಮುನ್ನ ಗೋಕುಲಕೆ ಮನ್ಮನೋ- ರಥ ಹೋಗಿರುವುದೇನೆಂಬೇ ಪ ಅತಿ ಕೌತುಕವದಾಯ್ತು ಖಳರಾಯನೊಲಿದು ಯದು- ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ ಅ.ಪ. ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ- ಪತಿ ಸೇವೆ ತಾನಾಗಿ ದೊರೆತೂ ಶತಸಹಸ್ರಾನಂತ ಜನುಮಗಳ ಸು- ಕೃತಕೆ ಫಲವಾಯಿತೆಂದರಿತೂ ಗತ ಕಿಲ್ಬಿಷನಾದೆನೆಂಬುದಕಿದೇ ಸಾಕ್ಷಿ ಪಥದೊಳಗೆ ತಾವೆ ಮುಂದುವರಿದೂ ಮಿತಿಯಿಲ್ಲದಲೆ ಮಹಾ ಶಕುನಂಗಳಾಗುತಿವೆ ಪ್ರತಿ ಇಲ್ಲವೀ ಶುಭೋದಯಕೆ ಸೂರ್ಯೋದಯಕೆ 1 ಶ್ರೀ ಪದ್ಮಜಾದಿಗಳು ಸೇವಿಸುವ ಚರಣ ಯಮು- ನಾಪುಳಿನದಲಿ ಮೆರೆವ ಚರಣಾ ಗೋಪೀಯರ ಪೀನ ಕುಚಕುಂಕುಮಾಂಕಿತ ಚರಣಾ ತಾಪತ್ರಯಾವಳಿವ ಚರಣಾ ಗೋಪುರದ ಶಿಲತೃಣಾಂಕುರುಹ ತೋರುವ ಚರಣಾ ಆಪದ್ಬಾಂಧವನ ಚರಣಾ ಣಾ ಪೂರ್ಣಾ ಎನಗಭಯಕೊಡುವಾ ಪಿಡಿಲಾ 2 ನೋಡುವೆನು ನೀರದಶ್ಯಾಮಸುಂದರನ ಕೊಂ- ಡಾಡುವೆನು ಕವಿಗೇಯನೆಂದೂ ಮಾಡುವೆನು ಸಾಷ್ಟಾಂಗದಂಡ ಪ್ರಣಾಮ ಕೊಂ- ಡಾಡುವೆನು ಕೈ ಮುಗಿದು ನಿಂದೂ ಬೇಡುವೆನು ಭುವನೈಕದಾತನೆಂದಲ್ಲಿ ಕೊಂ ಡಾಡುವೆನು ದಾಸ್ಯ ಬೇಕೆಂದೂ ಈಡಿಲ್ಲದಿಂದಿನಾ ಮನಕೆನ್ನ ಬಯಕೆ ಕೈ- ಗೂಡುವುದು ನಿಸ್ಸಂದೇಹ ದೈವ ಸಹಾಯ 3 ಇರುವನೋ ಏಕಾಂತದೊಳಗಿರುವ ಕೇಳದಿರು ಬರುವನೋ ಬಂದವನ ಕಂಡೂ ಕರೆವನೋ ಕಿರಿಯಯ್ಯ ಬಾರೆಂದು ಬಿಗಿದಪ್ಪಿ ಬೆರೆವನೋ ಬೆರಸಿಯದನುಂಡೂ ಒರೆವನೋ ಒಡಲ ಧರ್ಮವನೆಲ್ಲ ವರಗಿನೇ ಜರಿಯನೋ ಜಗದೀಶ ಹಗೆಯವನೆನುತ ಬಗೆಯ 4 ಗೋಧೂಳಿಲಗ್ನಕೆ ಗೋಕುಲಕೆ ಬಂದು ಬೆರ- ಗಾಗಿ ಹೆಜ್ಜೆಗಳ ನೋಡಿ ಭೂದೇವಿಗಾಭರಣವೆನುತ ತೇರಿಳಿದು ಶ್ರೀ ಪಾದರಜದೊಳಗೆ ಪೊರಳಾಡೀ ಗೋದೋಹನದೊಳಿದ್ದ ರಾಮಕೃಷ್ಣರ ಕಂಡು ನಾ ಧನ್ಯ ಧನ್ಯನೆಂದಾಡೀ ಶ್ರೀದವಿಠಲ ಎರಗುವನಿತರೊಳು ಬಿಗಿದಪ್ಪಿ ಸಾದರಿಸಿದನು ಇದೆ ಸದನದಲಿ ಸ್ವಪ್ನದಲಿ 5
--------------
ಶ್ರೀದವಿಠಲರು
ಶ್ರೀನಿವಾಸ ಗುರು ಗುಣಾಧೀಶ | ಪಾಲಿಸೊ ಭಕ್ತರ ತೋಷ ನಾ ನಿನ್ನ ದಾಸ ಪ ಏನಾದರು ಎನ್ನ ಹೀನತೆ ಎಣಿಸದೇಸಾನುರಾಗದಿ ನಿನ್ನ ಅಧೀನದೊಳಗಿರುವುದು ಅ.ಪ. ನಿತ್ಯ 1 ಅಗ್ನಿಹೋತ್ರವ ನಡೆಸುವ ತೆರದಿ | ಆಗ್ಯನ್ನನು ಮುದದಿಸುಜ್ಞಾನಿ ನೀನೇ ಕರಗಳ ಪಿಡಿದೀ | ಅಜ್ಞಾನವ ಬಿಡಿಸೀವಿಘ್ನವಗೊಳಿಸದೆ ಸರ್ವಜ್ಞ ಪಾದದೀಮಗ್ನನ ಮಾಡು ಪ್ರಾಜ್ಞ ಶಿರೋಮಣಿ2 ನಿನ್ನ ನಂಬಿದ ಪಾಮರ ನಾನು | ಪಾವನ್ನ ನೀನುಎನ್ನ ಗುಣ ದೋಷಗಳನ್ನು | ಮನ್ನಿಸುವಾದೇನು ಅನ್ನಂತ ಪಾಪಿ ನಾನು ನೀನಾದರೊ ದಯವನ್ನು ಮಾಡುನಿನ್ನ ಪೊಂದಿದೆ ಮಹಾನುಭಾವ 3 ಪಾತಕಿ ನಾನಾದರೂ ನಿನ್ನಚರಣಕ್ಕೆ ಸುತ್ತಿದ ಬಿರಿದು ಬಿಡುವುದುಂಟೇ4 ಅನ್ಯರಿಗಾನು ಎರಗುವನಲ್ಲ | ನೀ ಬಲ್ಲಿ ಎಲ್ಲಮನ್ನಿಸಿ ದಯದಿ ಎನ್ನಯ ಸೊಲ್ಲ ಶಿರಿ ಲ-ಕ್ಷ್ಮೀ ನಲ್ಲ ಎನ್ನ ಪಿಡಿಯೊ ಮೋ-ಹನ್ನ ವಿಠಲನ್ನ ತೋರಿ ಪಾವನನೆನಿಸುವುದು 5
--------------
ಮೋಹನದಾಸರು
ಎಂತಹುದೊ ನಿನ್ನ ಭಕುತಿ ? |ಸಂತತ ನಿನ್ನ ದಾಸರ ಸಂಗವಿರದೆನಗೆ ಪ.ವೃಣವನಾಶಿಪ ಕುರುಡು ನೊಣ ಮೊಸರ ಕಂಡಂತೆ |ಧನಿಕರ ಮನೆಗೆ ಕ್ಷಣಕ್ಷಣಕ್ಕೆ ಪೋಗಿ ||ತನುಬಾಗಿ ತುಟಿಯೊಣಗಿ ಅಣಕನುಡಿ ಕೇಳ್ವ - ಕೃ - |ಪಣ ಮನಕೆ ಎಂತಹದು ನಿನ್ನಯ ಭಕುತಿ 1ಅಡಿಯಾಡಿ ಮುಖಬಾಡಿ ನುಡಿಯಡಗಿ ಬಡವನೆಂದು |ಒಡಲ ತೋರಿಸಿದೆನೊ ಕಡುದೈನ್ಯದಿ ||ಒಡೆಯ ನೀನಹುದೆಂದು ಮಡದಿ - ಮಕ್ಕಳಿಗೆ ಹೆಸ - |ರಿಡುವ ಅವರಡಿಗೆ ಎರಗುವನ ಮನಕೆ 2ಹೋಗಿಬಾರೈ ಎಂದು ಅತಿಗಳೆದರು ತಲೆ - |ಬಾಗಿ ನಿಂತು ಅಲ್ಲಿ ಮೌನವಾಗಿ ||ಓಗರತೆ ಮನೆಮನೆ ತಪ್ಪದೆ ತಿರುಗುವ |ಜೋಗಿಯ ಕೈಯಕೋಡಗದಂಥ ಮನಕೆ 3ಅವನ ತೋರಿ ಬೆಟಿಕಿರಿಯ ಬಾಲವ ಬೀಸಿ |ಕುನ್ನಿ ಸುಳಿದಾಡಿ ಕಾಲ್ಗೆರಗುವ ತರದಿ ||ಹೆಣ್ಣಿನಾಶೆಗೆ ಬಾಯಬಿಡುವ ಸ್ತ್ರೈಣನಪರಿ - |ಘನ್ನವಯ್ಯ ಘನ್ನವಯ್ಯ ಬನ್ನಬಡುವ ಕುನ್ನಿಮನಕೆ 4ವಟುವಾಗಿ ಬಲಿಯ ದಾನವನು ಬೇಡಹೋದ |ಕಟು ಕಷ್ಟಗಳನೆಲ್ಲ ನೀನೆ ಬಲ್ಲೆ ||ವಟಪತ್ರಶಾಯಿ ಶ್ರೀಫಣಿ ವರದಪುರಂದರ - |ವಿಠಲ ನಿನ್ನ ದಾಸರ ಸಂಗಸುಖವಿರದೆ 5
--------------
ಪುರಂದರದಾಸರು