ತನ್ನ ಪ್ರಾಪ್ತಿಯ ಫಲವ ತಾನರಿಯದೆ ಪ
ಇನ್ನು ನುಡಿವುದು ಮೂರ್ಖತನವಲ್ಲದೆ ಅ
ಸರಸಿಜೋದ್ಭವನು ಫಣೆಯೊಳು ಬರೆದು ನಿರ್ಮಿಸಿದತೆರನೊಂದು ಬೇರುಂಟೆ ತಾನರಿಯದೆಕೆರಕೊಂಡು ಕಂಡವರ ಕೂಡೆ ತಾನಾಡಿದರೆನೆರೆ ದುಃಖವಿದು ಬಿಟ್ಟು ಕಡೆಗೆ ತೊಲಗುವುದೆ 1
ವಿಧಿ ಬೆನ್ನ ಬಿಡಲರಿವುದೆಅಡಿಗಡಿಗೆ ಶೋಕದಲಿ ಅವರಿವರಿಗುಸುರಿದರೆಬಡತನವು ತಾ ಬಿಟ್ಟು ಕಡೆಗೆ ಕದಲುವುದೆ2
ದೆಸೆಗೆಟ್ಟು ನಾಡದೈವಂಗಳಿಗೆ ಎರಗಿದರೆನೊಸಲ ಬರೆಹವ ತೊಡೆದು ತಿದ್ದಲಳವೆವಸುಧೇಶ ಕಾಗಿನೆಲೆಯಾದಿಕೇಶವಸನಂಘ್ರಿಬಿಸಜವನು ಕಂಡು ನೀ ಸುಖಿಯಾಗು ಮನುಜ3