ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಆವಗತಿ ಎನಗೆ ವೈಕುಂಠಪತಿಯೆ | ಕಾವ ಕರುಣಿಯೆ ಸರ್ವದೇವರ ದೇವ ಪ ಉದಯದಲಿ ಎದ್ದು ನಿನ್ನ ನಾಮವೆನ್ನದೆ | ಉದರಕಿನ್ನೇನು ಮಾಡಲಿ ಎನ್ನುತಾ | ಕÀದಗಳಾ ಸರಸುತ್ತ ಕಂಡಲ್ಲಿ ತಿರುಗಿದೆ | ಮದ ಗರ್ವದಲಿ ಬಾಳ್ವ ಮನುಜ ಶಿರೋಮಣಿಗೆ 1 ಧನವ ಘಳಿಸವ ವಾತ್ಸಲ್ಯವಲ್ಲದೆ ಸಾ | ಧನಕೆ ಒಮ್ಮೆ ಮನಸ್ಸು ಎರಗಲಿಲ್ಲಾ | ಮನುಜರೊಳಗೆ ಖ್ಯಾತಿಯಾಗುವೆನೆಂಬೊ | ವೇ | ದನೆ ಮಿಗಿಲಲ್ಲದೆ ಭಕುತಿ ಮತ್ತಿಲ್ಲ 2 ಒಬ್ಬರಕಿಂತಲಧಿಕನಾಗುವೆನೆಂದು | ಉಬ್ಬಿ ಪರರಾ ಸೇವೆಯನು ಮಾಡುವೆ | ಹಬ್ಬಿದ ಪಾಪದ ಸರವಿಗೆ ಉರುಲು ಬಿದ್ದು | ಸುಬ್ಬ್ಬಿದ ಸುಕೃತವ ಕಳಕೊಂಡೆನಯ್ಯಾ 3 ಪೂರ್ವದಲಿ ಉಂಡ ದು:ಖಗಳೆಲ್ಲ ಮರೆದು | ಸರ್ವದಾ ಗರ್ವದಲಿ ಸಜ್ಜನರ ಕೆಡನುಡಿದು | ಉರ್ವಿಯೊಳು ಬಲು ಬಲವಂತನೆನಸೀ | ಸರ್ವದಾ ಸರ್ವ ನರಕಂಗಳಲಿ ಬಿದ್ದು ಹೊರಳಿದೆನು4 ಇನ್ನಾದರೂ ದುರ್ಬುದ್ಧಿಯನ್ನು ಬಿಡಿಸಿ | ಕರವ ಬಿಡದೆ | ಪತಿ ವಿಜಯವಿಠ್ಠಲರೇಯಾ | ಎನ್ನ ಭಾವವು ನಿನ್ನದಲ್ಲವೇನಯ್ಯಾ5
--------------
ವಿಜಯದಾಸ
ದಯವಿರಲಿ ಎನ್ನಲ್ಲಿ ಧರಣಿಧರನೆ ಭಯಗಳನು ಪೋಗಾಡು ಭಕ್ತಜನ ಪ್ರೀಯಾ ಪ ಎರಗಿಸುವದು ಚರಣದಲಿ ಶಿರಸು ಎರಗಲಿ ನಿನ್ನ ಧ್ಯಾನದಲಿ ಮನಸು ಎರವೆರವು ಮಾಡದಲೆ ನಿನ್ನ ನಾಮಾಮೃತವ ಎರದು ಸಾಕುವದು ಸಂತತ ಎನ್ನ ಬಿಡದೆ 1 ಮತಿಗೆಟ್ಟ ಮಾನವಗೆ ಗತಿ ನೀನೆ ಆವಾವಾ ಶ್ರುತಿಗಳೊಳು ಪೇಳುತಿದೆ ವರದೊರದೂ ಕ್ಷಿತಿಯೊಳಗೆ ರವಿ ಶಶಿಯ ಗತಿ ತಪ್ಪಿದರೇನು ಪತಿತ ಪಾವನ ನಿನ್ನ ಕೃಪೆಗೆ ಎಣೆಗಾಣೆ 2 ಕೊಡುವಲ್ಲಿ ಕೊಳುವಲ್ಲಿ ಯಡಿಯಡಿಗೆ ಭಕುತಿರಸ ಕುಡಿಸುವಲಿ ಕಲಕಾಲ ಸಂತೋಷವ ಬಡಿಸಿ ಪೊರೆವಲ್ಲಿ ನಿನಗಾವಲ್ಲಿ ಸರಿಗಾಣೆ ಸಿರಿ ವಿಜಯವಿಠ್ಠಲ ತಿರುಮಲೇಶಾ 3
--------------
ವಿಜಯದಾಸ
ದೇವ ಏನು ಬೇಡುವುದಿಲ್ಲ ನಾನು ನಿನ್ನ ಬೇಡುವೆ ಭವಭವದಿದನೆ ಕೊಡು ನೀನು ಪ ಶಿರ ನಿನ್ನ ಚರಣದಿ ಎರಗಲಿ ಕರ್ಣ ಹರಿಕಥೆಕೀರ್ತನೆ ಶ್ರವಣ ಮಾಡಲಿ ಪರಮಾತ್ಮಮೂರ್ತೆನ್ನ ನೇತ್ರ ನೋಡಲಿ ನಾಸಿಕ ಘ್ರಾಣಿಸಲಿ 1 ವÀದನ ನಿನ್ನನು ಸ್ತುತಿಸಲಿ ನಿನ್ನ ಜಿಹ್ವೆ ಕೊಂಡಾಡಲಿ ಹೃದಯವು ತವನಾಮ ತುಂಬಿಕೊಳ್ಳಲಿ ಮಧುಸೂದನನ ಪ್ರಸನ್ನತೆ ಮನವು ಬಯಸಲಿ 2 ಕರ ನಿನ್ನ ಚರಣಮಂ ನಿರುತ ಪೂಜಿಸಲಿ ದ್ವಯ ಚರಣಗಳುನುದಿನ ಯಾತ್ರೆಗೈಯಲಿ ಪರಿಪರಿ ತವಲೀಲೆಯೊಳು ಬುದ್ಧಿ ನಿಲ್ಲಲಿ ಎನ್ನ ಶರೀರ ಶ್ರೀರಾಮನ ಚರಣಕೊಪ್ಪಲಿ 3
--------------
ರಾಮದಾಸರು
ರಾಘವೇಂದ್ರ ಗುರುರಾಯ ರಮಣೀಯ ಕಾಯ ಭೃಂಗ ಭವ ಭಂಗ ಪ ನೋಡಿದೆ ನಿಮ್ಮ ಮಹಿಮೆಯ ಹಾಡಿ ಪಾಡುವೆನೊ ನಿತ್ಯ ಆಡಿ ಕೊಂಡಾಡಲು ಬಲು ಗೂಢವಾಗಿದೆ ನಾಡಿನೊಳಗೆ ವೊಮ್ಮೆ ಸ್ಮರಣೆ ಮಾಡಿದವ ಧನ್ಯ ಎನ್ನು ಮೂಢ ಬುದ್ಧಿಯನು ಬಿಡಿಸು ಕೂಡಿಸು ಸಜ್ಜನರೊಳಗೆ 1 ನಾಮಾಭಿವಿಡಿದು ಉಮಾಪತಿ ಪರಿಯಂತ ಈ ಮನ ಎರಗಲಿ ಯಾಮ ಯಾಮಕೆ ಕಾಮಿಪೆ ಇದನೆ ಗುರುವೆ ವಾಮದಕ್ಷಣ ಮಾರ್ಗ ನೇಮ ತಪ್ಪುದಂತೆ ತಿಳಿಸಿ ಭ್ರಾಮ ಬುದ್ಧಿಯ ಓಡಿಸುವುದು 2 ಚಿಂತಾಮಣಿ ಕಂಡ ಮೇಲೆ ಭ್ರಾಂತಿಗೊಳಿಪÀ ವಿಷಯ ಚಿಂತಿಸಿ ಬೇಡುವುದು ಲೋಕಾಂತದ ಸುಖವು ಇಂತು ಬಾಗಿ ನಿಂತು ಕೇಳುವಂತೆ ಮಾಡದಿರು ಕರುಣಿ ಸಂತತ ನಿನ್ನ ಪಾದಕ್ರಾಂತನಾಗಿ ತುತಿಸುವೆ 3 ಸಾರಿಸಾರಿಗೆ ಈ ಚಿತ್ರ ತಾರತಮ್ಯವ ವಿಚಾರಗೈದು ನಲಿದಾಡಿ ಮೇರೆ ಇಲ್ಲದೆ ಕೋಶ ಇಂದಿರೇಶನ್ನ ಹೃ ದ್ವಾರಿಜದೊಳು ನಿಲಿಸಿ ಆರಾಧನೆ ಮಾಡುವ ವೈಕಾರಿಕ ಭಾಗ್ಯವೆ ಬರಲಿ 4 ನಮೋ ನಮೋ ಯತಿರಾಜ ಮಮತೆ ರಹಿತ ಅನುಪಮ ಚರಿತಾ ಪರಬೊಮ್ಮ ವಿಜಯವಿಠಲ ನಾ ತುಮ್ಮದೊಳಚಿನಪ ಜ್ಞಾನೋತ್ತುಮ ತುಂಗಭದ್ರವಾಸ 5
--------------
ವಿಜಯದಾಸ