ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂತರಂಗದ ಸುಖ ಹೇಳುವುದಲ್ಲಾ ಸಂತೋಷವೆಂಬುದು ಶಿವನೊಬ್ಬ ಬಲ್ಲ ಪ ಗುರುಕೊಟ್ಟ ಮಂತ್ರದ ಪರರ್ಯಾರು ಅರಿಯದಂದದಲಿ ಈ ಪ್ರಾಣ ಪರಮನೊಳಾಡುವುದು ಆತನ ದಿವ್ಯ ಚರಣನೋಡುವುದು ಆಂತರ್ಯದ ಸ್ವಾನುಭವ ಅರಿಯದ ಜನರಿಗೆ 1 ಧ್ಯಾನಿಸಿ ನೋಡಲು ದೃಢವಿಡಿದಾಡಲು ಜ್ಞಾನ ದೀಪದ ಜ್ಯೋತಿ ಗಗನ ವೇರಿದ ಪ್ರತಿ ಭಾನುವುದಿಸಿದಂದದಿ ಪ್ರಕಾಶಮಾನ ಸದಾನಂದದಿ ಅಂತರ್ಯದ ಸ್ವಾನುಭವ ಅರಿಯದ ಜನರಿಗೆ 2 ಮೂರ್ತಿ ಪರಮನಾಗಿಹ ಅರ್ಥಿ ಎರಕವಾಗಿಹ ಲಕ್ಷಾ ಎಣಿಕೆ ಇಲ್ಲದ ಮೋಕ್ಷಾ ಶರಧಿಯೊಳಾಡುವುದು ಶಕ್ತಿಯ ಮರ್ಮ ವರಕೃಪಮಾಡುವುದು ವಿಮಲಾನಂದ ಗುರುಕಟಾಕ್ಷದ ಬಗೆ ಅರಿಯದ ಜನರಿಗೆ 3
--------------
ಭಟಕಳ ಅಪ್ಪಯ್ಯ
ನೋಡುವೆ ನೋಟದಲಿ ನೋಡುವೆ ನೋಟದಲಿ ಪ ಗಂಗೆ ಯಮುನೆಗಳ ಸಂಗಮದೀ ಮಿಂದು ಅಂಗ ಸಂಗ ರಹಿತಾಂಗನದೇ ಮಂಗಳಾಂಗ ದಿವ್ಯಾಂಗಪೂಜೆಯ ಮಾಡಿ ರಂಗ ಮಂಟಪ ಪಾಂಡುರಂಗನಿಗೆ 1 ಈಡೆ ಪಿಂಗಳೆಗಳ ಜೋಡುಗೂಡಿ ಮೂಡು ರವಿಶಶಿ ಸೂಡಿ ಮಧ್ಯಿರುವಾಗ್ನಿ ಗೂಡಿನೋಳಾಡುವಜೀವನ ವಿಚಾರೋನ್ಮೂರ್ತಿಗೆ 2 ಹೃದಯದಿ ಬೆರಿತು ಹಂಸನ ಭರದಿ ತಿರುಗಿತಲೆರಡೊಂದೊಂಕಾರದಿ ಎರಕವಾಗಿ ಸಸ್ವರದಿ ಮನ ಪರಮ ಪುರುಷ ದಿವ್ಯಾಂಗನಿಗೆ 3 ಒಳಹೊರಗೊಂದಾಗಿ ದೇವಾ ಸುಲಭದಿ ಭಕ್ತರ ಸುಖವೀವಾ ಬೆಳಗುವ ನಲಿನಲಿದಾಡಿ4 ಆರು ಚಕ್ರಗಳ ಮೀರಿ ಮುಂದಣ ಸಣ್ಣ ದಾರಿಹಿಡಿದು ಹಿಂದಕೆ ನಡೆದು ತೋರುವ ಪರಿಪೂರ್ಣ ತಾರಕ ಬ್ರಹ್ಮನ ಸೇರಿ ನಿರ್ಬಯಲಾ ಚಿದ್ರೂಪಗೆ 5 ಅಂತರ್ಯಾಮಿ ಪೂರ್ಣಾಂತರದಿ ಮೂರ್ತಿ ಹೃದಯಾಂತರದಿ ಸಂತ ಸಾಧು ನಿಜ ಶಾಂತಿ ಪಾಲಿಪ ಗುರು ಚಿಂತೆರಹಿತ ನಿಶ್ಚಿಂತದಲಿ 6
--------------
ಶಾಂತಿಬಾಯಿ
ಪಾದ ಸೇವೆಯೊಳಿರುವಂತೆ ಕಾವುದೆನ್ನಯ ಮನ ಪಾವನ ಮೂರುತಿ ಹರಿಯೇ ಪ ಒಲವಿನ ಸಂಸಾರ ಸ್ಥಿರವೆಂದು ನಂಬುತ್ತ ಬರಿದೆ ಪೋಗದೆ ನಿಜದರಿಪಿನೋಳ್ ನಿಲಿಸೆನ್ನಾ ಹರಿಯೇ 1 ಎಂದು ಕುಂದದ ನಿತ್ಯಾನಂದವಾಗಿಹ ನಿಜ ಛಂದದೊಳಿರುವತ್ಯಾನಂದದೊಳ್ ನಿಲಿಸೆನ್ನಾ ಹರಿಯೇ 2 ಮರೆಯವೆ ಇರುವಂತೆ ಎರಕವಾಗಿಸೆನ್ನಾ ಹರಿಯೇ 3 ಆ ಸ್ವಪ್ರಕಾಶದಿ ಸೂಸದೆ ನಿಲುವಂತೆ ಭಾಸುರ ಘನಸುಖವಾಸದೊಳ್ ನಿಲಿಸೆನ್ನಾ ಹರಿಯೇ 4 ಭಾವಭಾವನೆಯಲ್ಲಿ ತೀವಿ ನಾರಾಯಣಾ ಪಾವನ ಗುರುಮೂರ್ತಿ ಸೇವೆ ಶಾಂತಿಯನೀಯೋ ಹರಿಯೇ 5
--------------
ಶಾಂತಿಬಾಯಿ