ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಶ್ರೀ ಗುರುರಾಯ ಏಳು ಪರಮಪ್ರಿಯ ಏಳು ಮಂಗಳಕಾಯ ಭಕ್ತಜನಪ್ರಿಯ ಏಳಯ್ಯ ಬೆಳಗಾಯಿತು ಪ. ಬಳಲಿ ಬಂದಿರುವಂಥ ಬಾಲ ಶಿಷ್ಯಂದಿರನು ಸುಲಲಿತದ ಪ್ರಿಯ ವಾಕ್ಯದಿಂದ ಸಂತೈಸಿ ಮಲಿನ ಮನವನೆ ತಿದ್ದಿ ಸುಜ್ಞಾನ ಬೋಧಿಸಿ ನಳಿನನಾಭನ ಪಾದಕೊಪ್ಪಿಸಲಿಬೇಕು 1 ಶುದ್ಧಾಂತಃಕರಣದಿಂ ಪೊದ್ದಿರುವ ಶಿಷ್ಯರನು ಉದ್ಧಾರಗೈಯಲಂಕಿತಗಳಿತ್ತು ಸಾರ ತತ್ವಾಮೃತವನುಣಿಸಿ ಪದ್ಮನಾಭನ ದಾಸರೆಂದೆನಿಸಬೇಕು 2 ಎದ್ದು ಸ್ನಾನವಗೈದು ತಿದ್ದಿ ನಾಮವನ್ಹಚ್ಚಿ ಪದ್ಮಾಕ್ಷಿ ತುಳಸಿ ಮಾಲೆಗಳ ಧರಿಸಿ ಗದ್ದುಗೆಯೊಳು ಕುಳಿತು ಹೃದ್ವನಜಸ್ಥಾನ ಪದ್ಮಪಾದವ ಮನದಿ ಸ್ಮರಿಸಬೇಕು 3 ಹಿಂದ್ಯಾರು ಪೊರೆದರು ಮುಂದ್ಯಾರು ಕಾಯ್ದರು ತಂದೆ ನೀವಲ್ಲದಿರೆ ಪೊಂದಿದರಿಗೆ ತಂದೆ ಮುದ್ದುಮೋಹನದಾಸವರ ಎಮ್ಮೊಳು ಕುಂದನೆಣಿಸದೆ ಕಾಯೊ ಕರುಣಾಳು ಗುರುವೆ 4 ಆಪನ್ನ ರಕ್ಷಕನೆ ಗೋಪಾಲಕೃಷ್ಣವಿಠ್ಠಲನಂಘ್ರಿ ಕಮಲ ಕೃಪಾಳು ತೋರು ನೀ ಕೃಪೆಮಾಡು ಕಣ್ತೆರದುಶ್ರೀ ಪದ್ಮಜಾತರೊಂದಿತನ ದಾಸಾರ್ಯ 5
--------------
ಅಂಬಾಬಾಯಿ
ಕರುಣಾಸಾಗರ ಬಾ ಗುರುವೆ | ಚರಣ ಕಮಲವನು ಸಾರಿದೆನೈ ಸ್ವಾಮಿ ಪ ಏನೆಂದು ಬಣ್ಣಿಪೆ | ದೀನವತ್ಸಲಪ್ರಭುವೆ | ಸಾನುರಾಗದಿ ನಿನ್ನ ಧ್ಯಾನಿಪೆನೈ ಜೀಯ1 ಗುರುರಾಘವೇಂದ್ರನೆ | ಶರಣರ ಸುರತರುವೆ | ನಿರುತ ಎಮ್ಮೊಳು ಕೃಪೆಯ ತೋರಿದಿರೈ ಸ್ವಾಮಿ 2 ಶ್ರೀ ಸುಧೀಂದ್ರಾರ್ಯರ | ಭಾಸುರಪ್ರಿಯತನಯ | ಶ್ರೀಶಕೇಶವನೊಲುಮೆ ಯಾಚಿಸುವೈ ಪ್ರಭುವೆ 3
--------------
ಶ್ರೀಶ ಕೇಶವದಾಸರು
ಕೇಳೇ ಯಶೋದೆ ನಿನ್ನ ತನಯನ ಲೀಲೆಯ ಪೇಳಲು ಅಳವಲ್ಲವೇ ಪ ಬಾಳುವ ಸತಿಯರ ಧಾಳಿ ಮಾಡುವ ಯದÀು ಮೌಳಿ ಶ್ರೀ ಕೃಷ್ಣಗೆ ಪೇಳೀ ವಿವೇಕವ ಅ.ಪ ಇಂದುವದನ ಎಮ್ಮ ಮಂದಿರಗಳ ಪೊಕ್ಕು ಪೊಂದುವ ಪಾಲ್ಬೆಣ್ಣೆಯ ಇಂದು ಸಿಕ್ಕಿದನೆಂದು ಕರಗಳಿಂ ಪಿಡಿಯಲು ಮಂದಹಾಸವ ಬೀರಿ ಮನವ ಸೋಲಿಸುವನು 1 ನೀರಿಗೆ ಪೋಗಲು ಯಾರೂ ಇಲ್ಲದ ವೇಳೆ ಸೇರುವ ಎಮ್ಮೊಡನೆ ಮೀರಿ ಪೋಗಲು ಕಾಲು ಬಾರದ ಎಮ್ಮೊಳು ಸಾರಸಾಕ್ಷ ಕೃಷ್ಣ ಸರಸವ ತೋರುವ 2 ನಿನ್ನ ತನಯ ಪ್ರಸನ್ನ ಶ್ರೀಕೃಷ್ಣನು ಅನ್ಯಾಯಕಾರನಮ್ಮ ಚನ್ನಾಗಿ ಇವನಿಗೆ ಬುದ್ಧಿ ಕಲಿಸದಿರೆ ಬೆನ್ನು ಹತ್ತುವೆವು ಕನ್ಯೆಯರೆಲ್ಲರು 3
--------------
ವಿದ್ಯಾಪ್ರಸನ್ನತೀರ್ಥರು
ಸರೋಜಲೋಚನಸುರಾರಿ ಮಥನ ಮುರಾರಿ ಮಾರಮಣ ಪುರಾರಿಮಿತ್ರಾ ನಿರೀಕ್ಷಿಸೆನ್ನ ನಿರಾಕರಿಸದಿರಿನ್ನು ಪ. ಬಲೀಂದ್ರಗೊಲಿದೆ ಬಾಗಿಲೋಳ್ನಿಂದೆ ಗೊಲ್ಲನು ನೀನಾದೆ ಬಲೀಂದ್ರ ಪೂಜಾಬಲದಿ ಜಗಮಂ ಕಳೆಯೇರಿಸಿ ಮೆರೆದೆ 1 ತಳಿರ್ದೋರಣಂಗಳ್ ಎಲೆಬಾಳೆಲೆಗಳ್ ನಳನಳಿಸುವ ಬಗೆಯೊಳ್ ಬೆಳಗುವ ದೀಪಾವಳಿಯಿಂ ಜಗಮಂ ತೊಳಗುವದೆಲ್ಲೆಡೆಯೊಳ್ 2 ಚಿತ್ತಜಪಿತ ಬಾ ಉತ್ಸವಪ್ರಿಯ ಬಾ ಸತ್ಯವಿಕ್ರಮ ನೀ ಬಾ ಬಾ ನಿತ್ಯ ತೃಪ್ತನೆ ಬಾರೈ 3 ಮದಮತ್ಸರಗಳ ಸದೆವಡೆದೇಗಳು ಸದಯನೆ ನೀ ಎಮ್ಮೊಳು ಸದನವ ಮಾಡೈ ಹೃದಯ ಪೀಠದ ಅಧಿಪತಿ ನೀನಹುದೈ 4 ಮಾಯಾಪಾಶದಿ ಗಾಯಗೊಂಡೆವು ಜೀಯ ಪಾಲಿಪುದೈ ಧೈೀಯಮಾರ್ಗದೆ ನಡೆಯಿಸು ನೀ ನಿರಪಾಯದೆ ಸತತಂ5 ಕೈಪಿಡಿದೆಮ್ಮಂ ಕಾಪಿಡು ನಲವಿಂ ತಾಪತ್ರಯ ಹರ ನೀಂ ಭೂಪಶೇಷಾದ್ರೀಶನೆ ನೋಡೈ ಶ್ರೀಪಾದದಾಸರನು 6
--------------
ನಂಜನಗೂಡು ತಿರುಮಲಾಂಬಾ
ಸಾಧನಕೆ ಸಾಧನಾಖ್ಯಾನ ವೃಂದಾವನಾ ಪ ಸೋದೆ ಪುರವಾಸಿ ಶ್ರೀ ವಾದಿರಾಜರ ಕರುಣಾ ಅ.ಪ. ಕುರುಡು ಶುನಕವು ತಾನು ನೆರೆದ ಸಂತೆಗೆ ಬಂದುಸರಕು ವಿನಿಮಯ ಮಾಡಿ ಮರಳಿ ಬರುತಿರುವಾ |ಪರಿಯ ಮಾಡದಲೆನ್ನ ಇರುವ ಸ್ವಪ್ನದಿ ತಿಳುಹಿಕರುಣಿಸಿಹೆ ಮಹ ಮಹಿಮ ಗುರು ಸಾರ್ವಭೌಮಾ 1 ಕಾರ್ಯ ವೃಂದಾವನಚಾರ್ಯರೊಡೆವೆರಸುತ್ತಧೈರ್ಯದಿಂದಲಿ ಗೈಸಿ ಭಾರ್ಯಸಹಕೃತದಿ |ಪ್ರೇರ್ಯ ಪ್ರೇರಕ ಹೃದಯ ಧಾರ್ಯಮಾರ್ಗವನರುಪಿಸ್ಥೈರ್ಯವನು ಎನಗಿತ್ತ ಆಯ್ ಲಾತವ್ಯಾ2 ಜೀವ ಅಸ್ವಾತಂತ್ರ ದೇವ ನಿಜ ಸ್ವಾತಂತ್ರನೀವೆ ಎಮ್ಮೊಳು ನಿಂತು ಸರ್ವ ಕಾರ್ಯಗಳಾ |ಓವಿ ಗೈವುತ ದೇವ ದೇವ ಹಯ ಮೊಗ ಗುರುಗೋವಿಂದ ವಿಠಲಂಗಿತ್ತು ತಾವಕನ ಸಲಹುವುದು 3
--------------
ಗುರುಗೋವಿಂದವಿಠಲರು