ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಬ್ರಹ್ಮಾಂಡ ಪುರಾಣದ ಕರುಣಾಕರ ಸ್ತೋತ್ರದ ಅನುವಾದ) ಶ್ರೀ ರಮಣನೆ ನಮೋ ಎಂದು ನುತಿ ಪೇಳ್ವೆನಿಂದು ಪ. ನಿನ್ನನು ದೂಡದಿರನ್ಯರ ಬಳಿಗೆ ಪಾದ ಕಾಪಾಡು ದೇಹವ ದಾಢ್ರ್ಯದೊಳಗೆ 1 ಈಶನು ನೀ ಎನಗೆಂದಿಗು ನಿನ್ನ ದಾಸನಾದುದರಿಂದ ಪೋಷಕರನು ಕೃಪೆಯಿಂದ 2 ಎನ್ನ ಭರಣಕನ್ಯರಸಡ್ಯೆಯೇನು ಕಂಬುರುಹಾಕ್ಷಾಶ್ರಿತ ಕಾಮಧೇನು 3 ಫಣಿರಾಜಶಯನ ಶ್ರೀಕಾಂತ ಎನಗೆ ಸಿದ್ಧಾಂತ 4 ಕಲ್ಕಿರುವ ಸ್ವಾಪಲ್ಕಿವರದ ನಿನ್ನ ಶುಲ್ಕದಾಸಗೆ ಭಯವಿಲ್ಲ ಫಲ್ಕಸ ಪಾವನ ಮನದಿ ನೀಯಿರಲನ್ಯ ಕಲ್ಕಗಳುಂಟೆ ಭೂನಲ್ಲ 5 ಹೆಚ್ಚಾದರ್ಥಗಳುಂಟೆ ಪೇಳು ತಡಮಾಳ್ಪದಾಶ್ಚರ್ಯ ಕೇಳು ದಯಾಳು 6 ತಾಯೆ ತನ್ನಣುಗಗೆ ಗರವನಿಕ್ಕೆ ಬೇರೆ ಕಾಯುವರುಂಟೆ ಬೇಗದಲಿ ಲೋಕದಲಿ 7 ದಾತ ಪರಿತ್ರಾತ ಜ್ಞಾತದಯಾನ್ವಿತನೆಂದು ಪಾಲಿಸು ಗುಣಸಿಂಧು 8 ನೀ ನಿರ್ವಹಿಸುವಿಯೆಂದು ತಿಳಿದೆ ಎನ್ನಯ ವಾರ್ತೆಗೊಳದೆ9 ನೀ ಬಿಡದಿರು ಹರಿಯೆ ಸರ್ವಾರ್ಥದಾಯಕ ಎನ್ನ ದೊರೆಯೆ 10 ಎಂದು ಪೇಳ್ದೆದು ಶ್ರುತಿ ನಿಂದು ಭವ ಬೇಗ ಓಡಿ ಬಂದು 11 ಎನ್ನೊಳ್ಯಾಕೆ ನಿರ್ದಯವು ಬೇಗ ಪರಿಹರಿಸಾಧ್ಯಾತ್ಮಿಕಾರ್ತಿ 12 ಶಕುತಿಯದ್ಭುತವಲ್ಲ ಸ್ವಾಮಿ ಬಹುದು ಸುಪ್ರೇಮಿ 13 ಪಂಡಿತಜನರು ಲೋಕದಲಿ ಪುಂಡರೀಕಾಕ್ಷ ನೀನರಿವಿ 14 ದಯೆದೋರು ಭೃಂಗಾಳಕಾಂತ ದಿನಕಾಂತ ದಯೆದೋರೊ ಬೇಗ ನಿಶ್ಚಿಂತಾ 15 ಕರಗಳ ಮುಗಿದು ಸ್ವೀಕರಿಪುದು ಬುಧುರರಿದು. 16
--------------
ತುಪಾಕಿ ವೆಂಕಟರಮಣಾಚಾರ್ಯ
ಗೋದಾ ಎನ್ನೊಳ್ವಿನೋದದಿಂದ ಪಾದ ಪ ಸಾಧು ಸಜ್ಜನರಿಗೆ ಸ್ನಾನದಫಲ ಕೊಟ್ಟು ಬೋಧಿಸಿ ಹರಿದಯ ಸಾಧಿಸಿ ಕೊಡಿಸುವಿ 1 ಅಕ್ಕ ತಂಗೇರು ಕೂಡಿ ಉಕ್ಕೋ ಉಲ್ಲಾಸದೆ ಲಕ್ಕುಮೀಶನ ಮುದ್ದು ಮಕ್ಕಳ ಮನೆಗೊಯ್ವೆ 2 ದೂರದಿ ಬಂದೆ ನಾ ಗೋದಾವರಿಯೆ ನೀನು ತೋರೆ ಭೀಮೇಶಕೃಷ್ಣನ್ನೂರು ದಾರಿಗಳ 3
--------------
ಹರಪನಹಳ್ಳಿಭೀಮವ್ವ
ತೊಂಡನು ಕಂಡುದ ಬಿನ್ನೈಸುವೆನುಪಾಂಡವ ಪ್ರಿಯ ಎನ್ನ ತಪ್ಪು ಕಾಯಯ್ಯ ಪ ಹರಿ ನಿನ್ನ ನಾಮ ಕಾಮಧೇನುವಿಗೆದುರಿತದೊಟ್ಟಿಲು ಮೇವು ಭವಾಂಬುಧಿಯುಅರಸಿ ಕುಡಿವ ನೀರೆರೆವಡೆನ್ನಲ್ಲಿಭರಿತವಾಗಿರೆ ಒಲಿದು ಎನ್ನೊಳ್ಯಾಕಿರಿಸೆ 1 ಮುನಿಗಳ ಮನದ ಮೊನೆಯಾದ ಕೊನೆಯಲ್ಲಿಘನಭಕ್ತಿ ಪಾಶದಿ ಸಿಲುಕಲ್ಯಾಕೆಎನ್ನ ಚಿತ್ತ ಚಂಚಲದುಯ್ಯಾಲೆಯಲಿನಿನ್ನ ಮನಬಂದಂತೆ ಓಲ್ಯಾಡಲಾಗದೆ 2 ಕರ್ಣರಂಧ್ರದಿ ಮನವನು ಪೊಕ್ಕು ಪಾಪವನಿನ್ನವರಲಿ ತಳವರಸಲ್ಯಾಕೆಎನ್ನೊಳ ಹೊರಗೆ ಪಾಪರಾಸಿಗಳಿವೆನಿನ್ನ ಮನಬಂದಂತೆ ಸೊರೆಗೊಳ್ಳೆಲೊ ಕೃಷ್ಣ3
--------------
ವ್ಯಾಸರಾಯರು
ದಾಸನು ನಾ ನಿನ್ನಯ ಬೇಸರಿಸದ ಸೇವಾ ವಾಸುದೇವನೆ ಮಾಡುವ ಮನವಾ ವಾಸುಕಿಶಯನ ನೀ ನೀಡು ದೃಢವಾ ಪ ಭಾಸುರಾಂಗಿಯ ಶ್ರೀಶನೆ ಬಡ ದಾಸನ ಸೇವೆಯು ಮನಕ್ಹ್ಯಾಂಗೆ ಬಂತು ಶ್ರೀಶನ ಕೌಸ್ತುಭಕೆ ಆಶೆ ತಂತು ಅ. ಪ. ಅನುಗಾಲದ ನಿನ್ನ ನಾಮದ ಸ್ಮರಣೆಯಾ ಮನಸಿಜ ಪಿತಗೆ ಮೆಚ್ಚು ಬಾ ಧ್ಯಾನ ಕೇಳಲು ಕಿವಿ ನಿಮಿರಿಸಿದಾ ಘನ ಪ್ರಲ್ಹಾದನ ಸ್ಮರಣೆಗೆ ನಿಂತಿರ್ದಾ- ಘನ ಸಂಪ್ರೀತನ ಎನ್ನೊಳ್ಯಾಂಗ ಕರುಣಿಸಿದಾ ಮೇಣ್ ಕರಣದಿಂದ ಗಾಯನ ಎನ್ನಯ ಕಾಯಜ ಪಿತಾ ನಿನಗೆ ಶ್ರಾವ್ಯವಾದುದು ಅರಿಯೆನು ನಾ 1 ಮೇಣ್ ಪ್ರೀಯವಾದುದು ಹರಿಯೇ ಸುರ ಮಾನಿಯೆ ಮಾಯೆಯ ಹರಿದು ರಕ್ಷಿಸೇಯಾ ನಿನ್ನ ಮನಕಾನಂದವಾಗುವುದಯ್ಯಾ 2 ಮತಿವಂತನೆ ನೀ ಮಾಡುವ ಹರಿಪೂಜೆ ಚಿತ್ತಜಪಿತ ಹರಿಗಾಯ್ತು ಕೇಳ್ ಮುದದಿ ಹೃದಯ ತುಂಬೀತು ಅತಿ ಮಾನಿನಿಯೆ ವಿಧಿಪೂಜಿತನಿಗೆ ಸರಿ ಪಾತೆನ್ನ ಪೂಜೆಯಾಯ್ತು ಶ್ರೀ- ಪತಿ ಶ್ರೀಹರಿಯ ಮನಕೆ ಬಂದೀತು 3 ಮಾನವ ನಿನ್ನಯ ಹರಿಧ್ಯಾನವ ರಮಾಧ- ವನು ತಾ ಕೈಕೊಂಡಾ ತನ್ನ ಹೃದಯಾರವಿಂದದೆಡೆಗೆ ಸೆಳೆಕೊಂಡಾ ಮುನಿಶುಕ ಮುಖ್ಯರ ಧ್ರುವಾದಿ ಭಕ್ತರಾ ಮನಗೊಂಡ ಹರಿಯೆನ್ನ ಧ್ಯಾನಕಿಂಬುಗೊಂಡಾ ಮನದೊಳಗೆಂತು ಆತುಕೊಂಡಾ 4 ಪುರುಷೋತ್ತಮ ಹರಿ ಪರಮ ದಯಾರ್ಣವ ಕರುಣದಿ ನಿನ್ನ ಕೈಪಿಡಿದಾ ನಿಜದಾಸನೆಂದೊಡಬಡಿದಾ ವರಮಹಾಲಕುಮಿಯೆ ಸಿರಿಹರಿಸತಿಯೆ ಅನುದಿನ ಎನ್ನ ಮನದಿ ನೆಲೆಸೆ 5
--------------
ನರಸಿಂಹವಿಠಲರು
ಪೊರೆದ್ಯಾಕೋ ಸೀತಾನಾಥ ತಂದೆ ಮಂದರಧರ ಎನ್ನೊಳ್ದಯ ಮಾಡಲೊಲ್ಲ್ಯಾಕೋ ಸೀತಾನಾಥ ಪ ಕರಿರಾಜ ನಿಮ್ಮಯ ಚರಣ ಸರೋಜಕ್ಕೆ ಸೀತಾನಾಥ ಹರಿ ಬರೆದೋಲೆ ನಿನ್ನನು ಕರೆಕಳುಹಿದನೇನೊ ಸೀತಾನಾಥ ತರುಣಿ ದ್ರೌಪದಿ ತನ್ನ ಅವಮಾನಕಾಲಕ್ಕೆ ಸೀತಾನಾಥ ಸಿರಿವರ ನಿನ್ನ್ವೊಯ್ಕುಂಠಕೆ ತಾರು ಕೊಟ್ಟಿರ್ದಳೇ ಸೀತಾನಾಥ 1 ಕಂಬದಿ ಬಾರೆಂದಂಬುಧಿಗೆ ಬಂದ್ಹೇಳ್ದನೇ ಸೀತಾನಾಥ ಡೊಂಬೆ ಮಾಡುವ ದೂರ್ವಾಸಮುನಿಯಂದು ಸೀತಾನಾಥ ನಿನ್ನ ಬೆಂಬಲಿಟ್ಟು ಅಂಬರೀಷ ವ್ರತಗೈದನೇ ಸೀತಾನಾಥ 2 ವರಧ್ರುವ ಧರೆಯೊಳು ಜನಿಸುವ ಕಾಲಕ್ಕೆ ಸೀತಾನಾಥ ದೇವ ಕರವ ಪಿಡಿದು ನಿಮ್ಮ ಜೊತೆಲಿ ಕರೆತಂದನೇ ಸೀತಾನಾಥ ಪರಮಪಾಪಿ ಅಜಮಿಳನಗೆ ಪದವಿಯು ಸೀತಾನಾಥ ದೇವ ಕರುಣಿಸಿದವನಿನಗೆ ನೆರವಾಗಿರ್ದನೇನೊ ಸೀತಾನಾಥ 3 ಛಲದ ರಾವಣನಳಿದು ವರವಿಭೀಷಣನಿಗೆ ಸೀತಾನಾಥ ಲಂಕ ಕರುಣಿಸಿ (ದಿವೈಕುಂ) ಠ ಬಾಗಿಲೊಳಿರ್ದನೇ ಸೀತಾನಾಥ ಸೀತಾನಾಥ ಅವ ಇಳೆಯೊಳು ನಿಮಗೆ ಪಕ್ಷದ ಗೆಳೆಯನೆ ಸೀತಾನಾಥ 4 ಹಿಂದಿನ ಹಿರಿಯರವರನು ದುರಿತದಿಂ ಸಲಹಿದಿ ಸೀತಾನಾಥ ಇದು ಚೆಂದವೆ ನಿನಗೆ ಕಂದನ ಬಿಡುವುದು ಸೀತಾನಾಥ ಕಂಟಕ ಬೇಗ ಬಯಲ್ಹರಿಸಯ್ಯ ಸೀತಾನಾಥ ರಂಗ ಸಿಂಧುಶಯನ ಮಮ ತಂದೆಯೇ ಶ್ರೀರಾಮ ಸೀತಾನಾಥ 5
--------------
ರಾಮದಾಸರು
ಪೊರೆಯೊ ಪ್ರಭು ಪರಮಾತ್ಮ ಕರುಣಾಕರನೆ ಎನ್ನೊಳ್ ಕರುಣದೃಷ್ಟಿಯನಿಟ್ಟು ಪ ದಾರಿದ್ರ್ಯದೋಷಂಗಳ್ ಛಿದ್ರಛಿದ್ರ ಮಾಡಯ್ಯ ಅದ್ರಿಧರನೆ ಕೃಪಾಸಮುದ್ರ ದೊರೆಯೆ 1 ಬರುವ ಕಂಟಕದೆನ್ನ ಸೆರೆಯಬಿಡಿಸಿ ನಿನ್ನ ಚರಣಕರುಣಾರ್ಣವದಿರಿಸೊ ಮುರಾರಿ ಹರಿ 2 ಆವ ಭಯವು ಎನಗೀಯದೆ ತ್ರಿಜಗ ಜೀವ ಜನಕಜೆಪತಿ ಕಾಯೊ ಶ್ರೀರಾಮ 3
--------------
ರಾಮದಾಸರು
ಶ್ರೀ ರಘೂತ್ತಮ ಗುರು ಸ್ತೋತ್ರ ಗುರುರಾಜ ರಘೂತ್ತಮ ಗುರುರಾಜ ಗುರುರಾಜ ನಮೋ ನಮೋ ನಿನ್ನ ಪಾದ ಸರಸಿಜಯುಗಳದಿ ನಾ ಶರಣು ಅಹ ಧರಣಿಜಾಪತಿ ರಾಮ ಭದ್ರಗೆ ಪ್ರಿಯ ನೀನು ಕರುಣದಿ ಸಲಹೆನ್ನ ದುರಿತಗಳಳಿದು ಪ ನಿವ್ರ್ಯಾಜ ಕರುಣಿ ರಘುವರ್ಯ ಗುರು ವರ್ಯ ಸುಮೇಧರ ದಿವ್ಯ ಚಾರು ತೋಯಜ ಕರದಿಂದ ಉದಯನಾಗಿ ನಿಗಮ ಸಾಮ್ರಾಜ್ಯ ಅಹ ಮಾಯೇಶ ಕಾಳೀಶ ಗುರುಗಳ ಪ್ರಿಯ ಬಾಲ ವಯಸ್ಸಲ್ಲೇ ಉದ್ದಾಮ ಪಂಡಿತನಾದಿಯೋ 1 ಬದರೀಶ ನಿರ್ಣೀತತತ್ವ ಅರ್ಥ ವಿಸ್ತಾರ ಮಾಡಿದ ಮಧ್ವ ಟೀಕೆ ಜಯತೀರ್ಥ ಬರೆದ ತದ್ಭಾವ ಪೇಳಿ ಒದಗಿಸಿದೆಯೊ ಜ್ಞಾನ ಸುಖವ ಅಹ ಮುದ ಜ್ಞಾನ ಸೌಭಾಗ್ಯ ಸಾಧು ವೈಷ್ಣವತನ ಇತ್ತು ಪಾಲಿಪುದೆನ್ನ ಕುಂದುಗಳೆಣಿಸದೆ 2 ಧರೆಯಲ್ಲಿ ದಕ್ಷಿಣಕಾಶಿ ಸ್ವರ್ಗ ಧರೆಯಳದವನ ಸೇವಿಸಿ ಗಂಗಾ ಧರಷಡಾನನ ಇಲ್ಲಿ ವಾಸಿಸುವ ಈ ಕ್ಷೇತ್ರ ವೃಂದಾವನ ವಾಸಿ ಅಹ ಪರಮೇಶ ಕೇಶವ ಪ್ರಿಯಾ ಪಿನಾಕಿನಿಯಿಂದ್ರಾ ತೀರ ಮಧ್ಯದಿ ತಪಗೈದು ಭಕ್ತರ ಕಾಯ್ವಿ 3 ಸುರವೃಂದ ಶ್ರೇಷ್ಠ ನೀನಹುದು ಎನ್ನ ಪರಿ ಬಾಧೆಯ ತರಿದು ಸರ್ವ ಸಿರಿ ಇತ್ತು ಹರಿ ಗುರು ಭಕ್ತಿ ಬೆಳೆಸಿ ಪಾಲಿಪುದು ಅಹ ಹರ ಸಮೀಪಕೆ ಒಳ್ಳೆ ಸಾಧನ ಸರ್ವದಾ ಕಾರುಣ್ಯದಲಿ ಎನ್ನೊಳ್ ನಿಂತು ಮಾಡಿಸೋ ಗುರೋ 4 ರಾಮನೃಕೇಸರಿ ವ್ಯಾಸ ಸತ್ಯ ಭಾಮ ರುಕ್ಮೀಣಿ ದೇವಿ ಅರಸ ಭೂಮ ಶ್ರೀಮಂತ ಕ್ಷೀರಾಬ್ಧಿವಾಸ ಮಧ್ವ ಭೀಮಹನುಮ ವಂದ್ಯ ಶ್ರೀಶ ಅಹ ಹೇಮಗರ್ಭನ ತಾತ `ಪ್ರಸನ್ನ ಶ್ರೀನಿವಾಸ' ರಮೆಯರಸನ ಪ್ರಿಯತಮ ಜೀಯ 5 || ಶ್ರೀ ಕೃಷ್ಣಾರ್ಪಣಮಸ್ತು ||
--------------
ಪ್ರಸನ್ನ ಶ್ರೀನಿವಾಸದಾಸರು