ಮದನ ಜನಕ ಮುದ್ದುರಂಗ ನಿತ್ಯ
ಹೃದಯದೊಳಗೆ ಭಜಿಸುವರಂತರಂಗ ಪ
ಅಜ ಭವನ ಮಿತ್ರ ಸರ್ವೇಶ ನಿನ್ನ
ಕ್ಲೇಶ ನಾಶ
ಮಜಡ ನೆನಗೆ ನೀ ನುಡಿಸ ಕೊಡು
ಸುಜನ ಸೇವಿತ ನರಹರಿ ಲಕ್ಷ್ಮೀಶ 1
ದಯವ ನೀ ಎನ್ನೊಳುಬೀರೋ ನಿನ್ನ
ಸ್ವಯಂ ಮೂಲ ನಿಜದ ಮೂರ್ತಿಯನೀಗ ತೊರೋ
ಭಯಗಳನೆಲ್ಲವ ತೋರೋ ಚೆಲ್ವ
ನಯವಿದ ಸರ್ವ ಸದ್ಗುಣ ನಿಧಿ ಬಾರೋ 2
ಪರಮ ಪಾವನಮೂರ್ತಿ ನಿನ್ನ ಸಿರಿ
ಚರಣ ಕೆರಗುವೆ ನಾ ಮುನ್ನ
ಕರುಣದಿ ಸಲಹೋ ನೀ ಎನ್ನ ನಿತ್ಯ
ಪೊರೆವ ಚಿಪ್ಪಳಿ ಗೋಪೀವರ ಸುಪ್ರಸನ್ನ 3