ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಜಬ್ಯಾಡಂಜಬ್ಯಾಡವೋ ಭೂನಂದಸೂನು ಪ ಅಂಜಬ್ಯಾಡಂಜಬ್ಯಾಡ ಕರುಣನಿಧಿಯೆಸಂಜೆ ಮುಂಜಾನಿಲ್ಲೆ ಬಾರೋ ಮಂಜುಳಾದ ಕಥೆಯ ಪೇಳ್ವೆ ಅ.ಪ. ಪಾಂಡುತನಯನಂತೆ ನಿನ್ನ ಭಂಡಿ ಬಾಹು ಕನ್ನೆಮಾಡಿಕಂಡ ಕಂಡ ಕಾರ್ಯದಲ್ಲೆ ದಂಡಿಸುವುದು ಎನ್ನೊಳಿಲ್ಲ 1 ಗೋಪಿಯಂತೆ ಸೊಂಟದಲ್ಲೆ ತ್ಯಾಪಿ ಹಗ್ಗಗಳನೆ ಕಟ್ಟಿಶ್ರೀಪತಿಯ ಒರಳಿಗ್ಹಾಕಿ ಆಪರಿಂದ ಕಟ್ಟೋಣಿಲ್ಲ2 ಜಾರ ಚೋರನಂತೆ ನಿನ್ನ ನಾರೇರಂತೆ ವ್ಯಾಸಮುನಿಯಮಾರಿಗ್ಹಾಕಿ ವಾರ್ತೆಯನ್ನು ದೂರೋಣಿಲ್ಲ ಜಗದಿ ಸ್ವಾಮಿ 3 ಮಂದಗಮನೆ ಮೋಹಕಾಗಿ ಚಂದ್ರಮೌಳಿಯಂತೆ ಬೆಣ್ಣೆಹಿಂದೆ ಮುಂದೆ ಓಡಿಸಿಂದು ದಣಿಸೋಣಿಲ್ಲ ಶ್ರೀಶಕೃಷ್ಣ 4 ಇಂದಿರೇಶ ಎನ್ನ ಹೃದಯ ಮಂದಿರದೊಳಿಟ್ಟುಕೊಂಡುಚಂದ ಚಂದ ಕಥೆಯ ಪೇಳ್ವೆ ನಂದತನಯ ನೊಂದಿಸುವೆನು 5
--------------
ಇಂದಿರೇಶರು
ಎಲ್ಲನು ನಿನಗೆ ಕೂಡಿತಯ್ಯ ಹರಿ ಪುಲ್ಲನಾಭ ದಯ ಮಾಡಯ್ಯ ಪ ಖುಲ್ಲನು ನಾಬಲು ಎಲ್ಲಿಯುಸಲ್ಲದೆ ತಲ್ಲಣಿಸುತ ನಿನ್ನ ಬಲವಂದೆ ದೇವ ದೇವ ಅ.ಪ ಧೃಢಗುಣ ಎನ್ನೊಳಿಲ್ಲಯ್ಯ ಬಲು ನುಡಿ ಹೀನ ನಾಕಡು ಪಾಪ್ಯಯ್ಯ ನಡೆ ನುಡಿ ಇಲ್ಲದೆ ಕಡುನೊಂದೀಗ ನಿಮ್ಮ ನ್ಹುಡುಕುತ ತಿರುಗುವೆ ಜಡಜಾಕ್ಷನೆ ಪೊರೆ 1 ಪರರದ್ರವ್ಯವಪಹರಿಸಿದೆನೊ ನಾ ಪರಮನೀಚನಾಗಿ ಚರಿಸಿದೆನೊ ಅಗಣಿತ ದುರಿತವನುನಾ ಜರೆಯದೆ ಪರಿಪರಿ ಮಾಡಿದೆನೊ ಮರೆವೆಲಿ ಮಾಡಿದ ಪರಮ ಎನ್ನತಪ್ಪು ಕರುಣಾಕರನೆ ನೀಕರುಣದಿ ಕ್ಷಮಿಸಯ್ಯ 2 ಶರಣಾಗತ ವತ್ಸಲನೆಂದು ನಿನ್ನ ಮರೆಯಹೊಕ್ಕೆನೆಯ್ಯ ದಯಾಸಿಂಧು ಮೊರೆಕೇಳು ಭಕ್ತರ ಪ್ರಿಯಬಂಧು ಎನ್ನ ದುರಿತದಿ ಕಡೆ ಹಾಯ್ಸಯ್ ಇಂದು ಶಿರಬಾಗಿ ನಿಮಗೆ ಸೆರೆಗೊಡ್ಡಿ ಬೇಡುವೆ ಕರಪಿಡಿ ಬಿಡಬೇಡ ಸಿರಿವರ ಶ್ರೀರಾಮ 3
--------------
ರಾಮದಾಸರು
ಏನೆಂತೊಲಿದೆ ಇಂತವರಂತೆ ಕೆಡುಬುದ್ಧಿ - ಎನ್ನೊಳಿಲ್ಲಗುಣ |ಹೀನರಲ್ಲದ ದೀನ ಜನರ ಪಾಲಿಪ ಬುದ್ಧಿ ನಿನ್ನೊಳಿಲ್ಲ ಪತರಳ ಪ್ರಹ್ಲಾದನಂದದಿ ನಿನ್ನಯರೂಪ ಕೆಡಿಸಲಿಲ್ಲನರನಂತೆ ತನ್ನ ಬಂಡಿಯ ಬೋವನ ಮಾಡಿ ಹೊಡಿಸಲಿಲ್ಲ ||ಸುರನದೀಸುತನಂತೆ ಪಣೆಯೊಳು ಬಾಣವ ಸಿಡಿಸಲಿಲ್ಲದೊರೆ ಅಂಬರೀಷನಂದದಿ ಈರೈದು ಜನ್ಮವ ಪಡಿಸಲಿಲ್ಲ 1ನಾರದನಂತೆ ಕಂಡವರ ಕೊಂಡೆಯವ ನಾ ಪೇಳಲಿಲ್ಲ |ಪರಾಶರನಂತೆ ನದಿಯೊಳಂಬಿಗ ಹೆಣ್ಣ ಕೊಡಲಿಲ್ಲ ||ಆ ರುಕುಮಾಂಗದನಂತೆ ಸುತನ ಕೊಲ್ಲಲು ಧೃಢಮಾಡಲಿಲ್ಲಮಾರುತನಂತೆ ನೀನುಣುತಿದ್ದ ಎಡೆಯ ಕೊಂಡೋಡಲಿಲ್ಲ 2ವಿದುರನಂತೆ ನನ್ನ ಸದನವ ಮುರಿದು ನಾ ಕುಣಿಯಲಿಲ್ಲಮದಕರಿಯಂತೆ ಮಕರಿಯ ಬಾಯೊಳು ಸಿಕ್ಕಿ ಒದರಲಿಲ್ಲ ||ಹೆದರದೆ ಬಲಿಯಂತೆ ಭೂಮಿಯ ಧಾರೆಯನೆರೆಯಲಿಲ್ಲಸದರ ಮಾತುಗಳಾಡಿ ಶಿಶುಪಾಲನಂತೆ ನಾ ಜರೆಯಲಿಲ್ಲ3ಸನಕಾದಿ ಮುನಿಯಂತೆಅನುದಿನ ಮನದೊಳು ಸ್ಮರಿಸಲಿಲ್ಲಇನಸುತ ಕಪಿಯಂತೆ ವಂಚಿಸಿ ವಾಲಿಯ ಕೊಲಿಸಲಿಲ್ಲ ||ಬಿನುಗು ಬೇಡತಿಯಂತೆ ಸವಿದುಂಡ ಹಣ್ಣ ನಾ ತಿನಿಸಲಿಲ್ಲಘನ ಅಜಾಮಿಳನಂತೆ ಸುತನ ನಾರಗನೆಂದು ಕರೆಯಲಿಲ್ಲ4ವರ ಶೌನಕನಂತೆನಿತ್ಯ ಸೂತನ ಕಥೆ ಕೇಳಲಿಲ್ಲಪಿರಿದು ತುಂಬುರುನಂತೆ ನಾಟ್ಯ - ಸಂಗೀತವ ಪೇಳಲಿಲ್ಲ ||ಉರಗಾಧಿಪತಿಯಂತೆ ಉದರದೊಳಿಟ್ಟು ನಾ ತೂಗಲಿಲ್ಲಪಿರಿದು ಕುಚೇಲನ ತೆರನಂತೆ ಅವಲಕ್ಕಿ ಈಯಲಿಲ್ಲ 5ಭೃಗುಮುನಿಯಂತೆ ಗರ್ವದಿ ನಿನ್ನ ಎದೆಯನು ಒದೆಯಲಿಲ್ಲಅಗಣಿತ ಮಹಿಮ ನೀನಹುದೆಂದು ಧ್ರುವನಂತೆ ಪೊಗಳಲಿಲ್ಲ ||ಖಗರಾಜನಂತೆ ನಿನ್ನನು ಪೊತ್ತು ಗಗನದಿ ತಿರುಗಲಿಲ್ಲಅಗಜೆಯರಸನಂತೆ ಮಸಣದಿ ರಾಮನ ಸ್ಮರಿಸಲಿಲ್ಲ 6ಅವಹಿತದಲಿ ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲಯುವತಿ ದ್ರೌಪದಿಯಂತೆ ಪತ್ರಶಾಕವನುಣಬಡಿಸಲಿಲ್ಲ ||ತವೆ ಪುಂಡಲೀಕನಂದದಿ ಇಟ್ಟಿಗೆಯ ಮೇಲೆ ನಿಲಿಸಲಿಲ್ಲ ದೇವಇವರಂತೆಪುರಂದರ ವಿಠಲ ನಿನ್ನಯ ಕೃಪೆಯೆನ್ನೊಳಿಲ್ಲ7ಅಂಕಿತದಲ್ಲೂ ಇವೆ.)
--------------
ಪುರಂದರದಾಸರು
ನೀ ಕಾಯ್ದರೆ ಕಾಯ್ದಾ ಬಗೆಯಲ್ಲದೆ ಬೇರೆಏಕಮತಿ ಎನ್ನೊಳಿಲ್ಲಶ್ರೀಕಾಂತ ಕರುಣಿ ನೀನಕ್ಲಿಷ್ಟ ಕಾಣಯ್ಯಬೇಕೆಂದು ಸಾಕುತಿಹೆ ಹರಿಯೆ ಪ.ವೇದ ಶಾಸ್ತ್ರ ಪುರಾಣ ಸಾರಾರ್ಥ ತಿಳಿದರಿಯೆಸಾಧನ ಸುಮಾರ್ಗವರಿಯೆಆದರದಿ ಭಕುತಿ ಬಲಿದೊಮ್ಮೆ ಪೂಜಿಸಲರಿಯೆಮಾಧವಮುರಾರಿ ಕೃಷ್ಣಾ ತುಷ್ಟಾ1ಮನ ಮರ್ಕಟವು ತನ್ನ ಮತಿಯಲ್ಲಿ ವಿಷಯ್ಯೆಂಬವನಕೆ ಮೆಚ್ಚಿದೆ ನೋಡಯ್ಯವನಚರತ್ವವನೀಗಿಕ್ಷಣವಾರೆ ತವಚರಣವನಜರಸವುಣ್ಣದಲ್ಲೈ ರಂಗಯ್ಯ 2ಜನುಮ ಜನುಮದ ತಾಯಿ ತಂದೆಗುರುಬಂಧುನನ್ನನು ಗತಿಗಾಣಿಪ ದಾತನೆಎನ್ನಭವತಪ್ಪುಗಳನರಸದಿರು ಅರಸಿದರೆನಿನಗುಚಿತೆ ಪ್ರಸನ್ವೆಂಕಟೇಶ ಶ್ರೀಶ 3
--------------
ಪ್ರಸನ್ನವೆಂಕಟದಾಸರು