ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ತ್ರಾಣವು ಎನ್ನೊಳಿನಿತಿಲ್ಲವಯ್ಯ ಭಾವಜಪಿತ ನೀನೆ ದಯಮಾಡಬೇಕೊ ಪ ಗುಡಿಯ ಕಟ್ಟಿಸಲೆ ನಾ ಒಡುಕುಕವಡೆನಗಿಲ್ಲ ಬಡವರಿಗೆ ಅನ್ನಿಟ್ಟಿಲೆ ಹಿಡಿಧಾನ್ಯವಿಲ್ಲ ಕೊಡುವೆನೆನೆ ಧರ್ಮವ ಪಡೆದು ನಾ ಬಂದಿಲ್ಲ ಬಿಡುವೆನೇ ದು:ಸ್ಸಂಗ ಅಡರಿಹ್ಯರು ರಿಣವು 1 ದೃಢಧ್ಯಾತ್ಮಗೈವೆನೆನೆ ನಡೆವ ಶಕ್ತ್ಯೆನಗಿಲ್ಲ ಮಡಿಮಾಡ್ವೆನೆನೆ ಮನವು ತಡೆವಶಕ್ತಿಲ್ಲ ಸುಡಲೆ ಕಾಮಾದಿಗಳು ತೊಡರಿಹ್ಯದು ಸಂಸಾರ ನುಡಿಯಲೆ ಸತ್ಯ ಸದಾ ಬಡವನಾಗಿಹೆನು 2 ಒಡೆಯ ಶ್ರೀರಾಮ ನಿನ್ನಡಿಯ ಗುರುತರಿಯೆ ಕಡುಮೂರ್ಖ ಜನ್ಮವನು ಪಡೆದಿಹೆನು ಜಗದಿ ಒಡೆಯ ಸರ್ವಕೆ ನೀನೆ ಜಡಮತಿಯು ಗಡ ಕಡಿದು ದೃಢಭಕ್ತಿ ಸುಖವಿತ್ತು ಪಿಡಿದು ಸಲಹಯ್ಯ 3
--------------
ರಾಮದಾಸರು
ವನಜಾಕ್ಷ ನೀನೀಗ ಘನ ಕನಿಕರದಿ ಕಾಯಭವ ಘನತರದ ಗುಣ ಎನ್ನೊಳಿನಿತಿಲ್ಲ ದೇವ ಪ ಮನ ತುಸು ಗಟ್ಟಿಲ್ಲ ತನುಮೋಹ ಸುಟ್ಟಿಲ್ಲ ಧನದಾಸೆ ಬಿಟ್ಟಿಲ್ಲ ಬಿನುಗುಗುಣಟ್ಟಿಲ್ಲ 1 ಪರಮಮದ ಮುರಿದಿಲ್ಲ ಪರನಿಂದೆ ತೊರೆದಿಲ್ಲ ಶರಣರಿಗೆ ಎರಗಿಲ್ಲ ಹರಿಪಾದವದರಿವಿಲ್ಲ 2 ಏನು ಅಪರಾಧವಿರೆ ನೀನೆ ಕ್ಷಮಿಸೆನಗೆ ಜ್ಞಾನದಿಂ ಸಲಹಯ್ಯ ಪ್ರಾಣೇಶ ಶ್ರೀರಾಮ 3
--------------
ರಾಮದಾಸರು