ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುಮನಧವನೆಲ್ಲ ನಿನಗರ್ಪಿಸಿದೆನಿನ್ನು ಎನಗಾವುದಾಧೀನವಿನಿತಿಲ್ಲ ದೇವ ಪ ಜನಕ ನಾನು ಕ್ಷಣಕೆ ಕ್ಷಣಕೆ ಉಣವುದೆಲ್ಲವು ನಿನ್ನ ಪ್ರಸಾದ ಕನಸುಮನಸಿನೊಳಗೆ ನಾನು ಮಣಿವುದೆಲ್ಲವು ನಿನ್ನ ಚರಣ ಅ.ಪ ಮಡದಿಯಿಂ ಮಮತದಿ ಸಡಗರದಾಡ್ಯಾಡಿ ಕಡು ಆನಂದಿಪುದೆಲ್ಲ ಒಡೆಯ ನಿನ್ನಾಟ ಎಡೆಬಿಡದೆ ಅಡಿಗಡಿಗೆ ಕಡುಸಿರಿವಡೆದು ನಾ ಪೊಡವಿಯೋಳ್ಜೀವಿಪುದು ಕಡು ನಿಮ್ಮ ಪ್ರೇಮ ನುಡಿವುದೆಲ್ಲ ನಿನ್ನ ಮಂತ್ರವು ಕೊಡುವುದೆಲ್ಲವು ನಿನ್ನ ಅಧಿಕಾರ ನಡೆವುದೆಲ್ಲವು ನಾ ನಿನ್ನ ಯಾತ್ರೆಯು ಇಡುವತೊಡುವುದು ನಿನ್ನ ಬಿರುದು 1 ಗಳಿಸುವುದೆಲ್ಲ ನಾ ಚಲಿಸದ ತವಪಾದ ನಳಿನದಾಸರಸಂಗೀ ಇಳೆಯೊಳು ಪ್ರಭುವೇ ಬಳಸುವುದೆಲ್ಲ ನಾ ಅಳಕದ ತವಚರಿತ ಕಲಿಯುವುದೆಲ್ಲ ನಿಮ್ಮ ವಿಲಸಿತನಾಮಧ್ಯಾನ ಮಲಗುವುದೇ ನಿಮ್ಮ ಧ್ಯಾನ ಆನಂದ ನಲಿವುದಖಿಲ ನಿಮ್ಮ ಭಜನೆಯು ಅಳಿವುದೆಲ್ಲನುಭವದ ಗುಣಗಳು ತಿಳಿವುದೆಲ್ಲವು ನಿಮ್ಮ ಮಹಿಮೆ 2 ಅಮಿತ ತವಪ್ರೇಮವು ಗಮಿಸುವುದೆಲ್ಲ ನಾ ಸುಮನರ ಸಭೆಯು ಕ್ರಮದಿ ನಾ ಬೇಡುವುದು ವಿಮಲ ಸುಜ್ಞಾನವು ದಮೆ ದಯ ಭಕ್ತಿ ತವ ನಿರ್ಮಲಂಘ್ರಿಯ ಅರಿವು ನೇಮದಿಂ ನಾ ಬರುವುದೆಲ್ಲ ಸ್ವಾಮಿ ನಿಮ್ಮಯ ಮಹಿಮೆ ಖ್ಯಾತಿಯು ಕ್ಷೇಮನಿಧಿ ಶ್ರೀರಾಮ ನಿಮ್ಮೊಳು ಕಾಮಿಸುವುದೇ ನಾ ಮುಕ್ತಿಪದವು 3
--------------
ರಾಮದಾಸರು
ಬಿನ್ನಹಕೆ ಬಾಯಿಲ್ಲ ಭೂತನಾಥ ಪ ನಿನ್ನ ಪದರಜ ಸ್ನಾನ ನೀಡೆನ್ನ ಉದ್ಧರಿಸು ಅ.ಪ. ಹೀನ ಯೋಗ್ಯತೆಗಿನ್ನು ಏನು ಮಾಡಲೊ ಸ್ವಾಮಿ ಧೇನು ವತ್ಸನ ತೆರದಿ ಪಾಲಿಸೆನ್ನ ವೇಣುಗೋಪಾಲನಾ ಧ್ಯಾನ ನಿಲ್ಲದು ಮನದಿ ನಾನು ನನ್ನದು ಬಿಡದು ಎನಗಾವ ಗತಿಯಿನ್ನು 1 ನೀಲಕಂಠನೆ ನಿನ್ನ ನೀಳಪಾದದ ಧೂಳಿ ಮೂರ್ಲೋಕದಘತೂಲಕಗ್ನಿ ಸತತ ಫಾಲಾಕ್ಷ ಪತಿತ ಪರಿಪಾಲಕನು ನೀನೊಬ್ಬ ಹಾಲಲ್ಲಿ ಅದ್ದೆನ್ನ ಹರಿಭಕ್ತರ ಬಂಧು 2 ಮನಕರಣ ತನು ವಿಷಯ ಘನಪಾಶದಲಿ ಸಿಕ್ಕಿ ಉಣಿಸುವುವು ಮಹದುಃಖ ಎನ್ನ ಮೀರಿ ತುಂಬಿ ಎನಿತು ನಿನ್ನಲಿ ನಿಂದು ಪೊರೆಯೆಂದು ಮೊರೆ ಇಡಲಿ 3 ದುಷ್ಟವಾಸನೆ ಶಕ್ತಿ ಮೆಟ್ಟಿ ಆಳುವುದೆನ್ನ ವೃಷ್ಟೀಶನಲಿ ಎನ್ನ ಪೋಗಬಿಡದೊ ದುಷ್ಟನಕ್ರಗೆ ಸಿಕ್ಕ ಕರಿಯಂತೆ ಬಾಯ್ಬಿಡುವೆ ಕಷ್ಟ ಪರಿಹರಿಸಯ್ಯ ಹರಿನಿಷ್ಠಧ್ಯಾನವನಿತ್ತು 4 ಶತಕೋಟಿ ಶ್ರುತಿಯಲಿ ಜಯೇಶವಿಠಲ ನತಬಂಧು ಎಂತೆಂದು ಸಾರುತಿಹುದು ಹಿತಭಕ್ತ ನೀ ಹರಿಗೆ ಹರಿಮೀರ ನಿನ್ನುಕ್ತಿ ಪತಿತಪಾವನ ನನ್ನ ಹರಿಭಕ್ತನ ಮಾಡು5
--------------
ಜಯೇಶವಿಠಲ
ಶ್ರೀಮಾಧವ ತೀರ್ಥರ ಸ್ತೋತ್ರ ಮಾಧವ ಸುತೀರ್ಥ ಗುರು | ಭಕ್ತಜನಕಲ್ಪತರುಆದಿ ಗುರುಗಳ ಕರಜ | ಮಾಡೆನ್ನ ವಿರಜ ಪ ಸನ್ನುತ ಚರಣ | ಮೌನದಿಂ ಭಜನನೀ ಮಾಡಿ ಆನಂದ ವಾರಿಧೀಯಲಿ ಮಿಂದುಆ ಮಹಿಮೆ ಪೊಗಳಲೂ | ಎನಗಾವ ಅಳಲೂ 1 ಜ್ಞಾನಾಯು ರೂಪಕನೆ | ಪ್ರಾಣಪತಿ ಎನಿಪನ್ನನೀನಾಗಿ ತೋರುವಲಿ | ನಿನ್ನ ದಯವಿರಲಿ |ಮೌನೀಶ ಇದ ಹೊರತು | ಅನ್ಯಬೇಡೆನು ಒಳಿತುಪ್ರಾಣ ಮುಖ ತತ್ವೇಶ | ರೊಲಿಮೆ ಸಹ ಆಶ 2 ಆನಂದ ತೀರ್ಥ ಮತ | ಶಿಷ್ಟರಲಿ ಭೋಧಿಸುತದೀನಜನ ಪರಿಪಾಲ | ಹರಿಭಕ್ತ ಲೋಲಾ |ಜಾಣ ಗುರುಗೋವಿಂದ | ವಿಠಲ ಮಹಿಮಾನಂದನೀನಾಗಿ ಕೊಟ್ಟೆನ್ನ ಉದ್ಧರಿಸೊ ಘನ್ನ 3
--------------
ಗುರುಗೋವಿಂದವಿಠಲರು
ಹ್ಯಾಂಗಾದರ್ಹಾಂಗಾಗಲಿ ಎ- ನ್ನಿಂಗಿತವ ನೀ ಬಲ್ಲೆ ರಂಗಯ್ಯಪ ಮಂಗಳಾಂಗ ನೀ ಕೊಟ್ಟು ಸಲಹೋ ಶುಭಾಂಗ ಅ- ನಂಗಜನಕ ಭುಜಂಗಶಯನ ಮಾ- ತಂಗವರದ ಶ್ರೀ ರಂಗನಾಥನೇ1 ದೇವಾ ನಾ ಸದ್ಭಾವದಲ್ಲಿ ನಿನ್ನ ಪಾದ ಪದುಮ ನಿರುತ ಧೇನಿಸುವೆ ಪವಮಾನ ಜೀವೋತ್ತಮ ನೀ ಧರ್ಮೋತ್ತಮನೆನ್ನುವ ಭಾವ ಎನಗಾವಕಾಲದಿ ಇರಲಿ ಬೇಡೆನು ಇತರ ಸಂಪದವಾ 2 ಶ್ರೀಶಾ ಶ್ರೀ ವೆಂಕಟೇಶ ನಿರ್ದೋಷ ಗುಣ ವಾಸನೆ ನಿನ್ನ ದಾಸಜನಭವಪಾಶ ಕ್ಲೇಶ- ನಾಶನವ ಗೈಸಿ ಸಲಹುವುದು ಶೇಷಶಯನ ಶ್ರೀ ರಂಗಶಾಯಿ 3
--------------
ಉರಗಾದ್ರಿವಾಸವಿಠಲದಾಸರು