ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನಿಲ್ಲದ ಜಗವಿನಿತಿಲ್ಲ ನೀನಲ್ಲದೆ ಎನಗಾರಿಲ್ಲ ಪ ನೀನೆ ನೀನೆಯಾಗಿ ಕಾಣಿಸಿ ಜಗ ಮಾಯಮಾಣಿಸುವಿ ನಿಜ ಸುಳ್ಳಲ್ಲ ಅ.ಪ ಹೊತ್ತುಗೊತ್ತು ಎಲ್ಲ ನಿನ್ನಿಂದೇ ನಿತ್ಯ ಅನಿತ್ಯವೆಲ್ಲ ನಿನ್ನಿಂದೇ ಸತುಚಿತುಚಿದ್ವಸ್ತು ತತ್ವಸರ್ವತ್ರಸೂತ್ರವೆಲ್ಲ ನಿನ್ನಿಂದೇ 1 ಸೃಷ್ಟಿ ಕ್ಷೇತ್ರ ತೀರ್ಥ ನಿನ್ನಿಂದೇ ಅಷ್ಟಸ ಭುವಗಳ್ನಿನ್ನಿಂದೇ ಹುಟ್ಟುಸಾವು ಎಲ್ಲ ಸ್ಪಷ್ಟದಿ ನೋಡಲು ಸೃಷ್ಟಿ ಪ್ರಳಯವಷ್ಟು ನಿನ್ನಿಂದೇ 2 ನಿಖಿಲ ವೇದ ನಿನ್ನಿಂದೇ ಅಖಿಲದೇವರೆಲ್ಲ ನಿನ್ನಿಂದೇ ಸಕಲಮಂತ್ರಮೂಲ ಭಕುತಾಭಿ ಶ್ರೀರಾಮ ಮುಕುತಿಸಂಪದ ಸಿದ್ಧಿ ನಿನ್ನಿಂದೇ 3
--------------
ರಾಮದಾಸರು
ನೀ ಕರುಣಿಸೊ ವಿಠಲ ನಮ್ಮಸಾಕೊ ಪಂಡರಿ ವಿಠಲ ಪ.ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೆ ವಿಠಲಸಾಸಿವೆಯಷ್ಟು ಭಕುತಿಯನರಿಯೆನುಶೇಷಶಯನ ಶ್ರೀ ವಿಠಲ 1ಭವಸಾಗರದೊಳು ಮುಳುಗುವೆ ಸುಮ್ಮನೆಅವಲೋಕಿಸುವರೆ ವಿಠಲನವ ನವ ವಿಷಯಕೆ ಮುಗ್ಗುತಲಿಹ ಮನದವಸರ ಕಾಯೊ ವಿಠಲ 2ತನುಸಂಬಂಧಿಗಳತಿ ಕಾರ್ಯಾರ್ಥಿಗಳ್ಎನಗಾರಿಲ್ಲೊ ವಿಠಲಾಬಿನಗುಮಾನವರನುಸರಣೆಯಲಿದಣಿಸದಿರಯ್ಯ ವಿಠಲ 3ನಿಶಿದಿನಅಶನವಸನಕೆ ಹೆಣಗುವೆಹುಸಿಸಂಗ್ರಹಿಸಿದೆ ವಿಠಲನಿಶಿದ್ಧಗಳಂಜಿಕೆ ಇಲ್ಲವು ನರಕದಗಸಣೆಗೆ ಅಂಜುವೆ ವಿಠಲ 4ಜಾವಕೆ ಮಾಡುವೆ ಸಾವಿರ ತಪ್ಪನುಕಾವದಯಾಂಬುಧಿ ವಿಠಲನಾ ವಡಲ್ಹೊಕ್ಕೆನೊ ಪ್ರಸನ್ವೆಂಕಟಪತಿಜೀವಕೆ ಹೊಣೆ ನೀ ವಿಠಲ 5
--------------
ಪ್ರಸನ್ನವೆಂಕಟದಾಸರು