ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವ ಎನಗೆ ಹಿಂಗಿತು ಪ ಪದುಮನಾಭನ ಪಾದದೊಲುಮೆ ಎನಗಾಯಿತು ಅ ಹರಿತೀರ್ಥ ಪ್ರಸಾದ ಎನ್ನ ಜಿಹ್ವೆಗೊದಗಿತುಹರಿಯ ನಾಮಾಮೃತ ಕಿವಿಗೊದಗಿತುಹರಿಯ ದಾಸರು ಎನ್ನ ಬಂಧು ಬಳಗವಾದರುಹರಿಯ ಶ್ರೀಮುದ್ರೆ ಆಭರಣವಾಯ್ತು 1 ಮುಕುತರಾದರು ಎನ್ನ ನೂರೊಂದು ಕುಲದವರುಮುಕುತಿ ಮಾರ್ಗಕೆ ಯೋಗ್ಯ ನಾನಾದೆನೊಅಕಳಂಕ ಶ್ರೀಹರಿ ಭಕುತಿಗೆನ್ನ ಮನ ಬೆಳೆದುರುಕುಮಿಣಿಯರಸ ಕೈವಶನಾದನೆನಗೆ 2 ಇಂದೆನ್ನ ಜೀವಕ್ಕು ಸಕಲ ಸಂಪದವಾಯ್ತುಮುಂದೆನ್ನ ಜನ್ಮ ಸಫಲವಾಯಿತುತಂದೆ ಶ್ರೀ ಕಾಗಿನೆಲೆಯಾದಿಕೇಶವರಾಯಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ 3
--------------
ಕನಕದಾಸ
ಬದುಕಿದೆನು ಬದುಕಿದೆನು ಭವದುರಿತ ಹಿಂಗಿತುಪದುಮನಾಭನ ಪಾದದೊಲಿಮೆ ಎನಗಾಯಿತು ಪಹರಿಯ ತೀರ್ಥ ಪ್ರಸಾದವು ಎನಗೆ ದೊರೆಕಿತು |ಹರಿಕಥಾಮೃತವೆನ್ನ ಕಿವಿಗೊದಗಿತು ||ಹರಿದಾಸರುಗಳೆನ್ನ ಬಂಧು ಬಳಗವಾದರು |ಹರಿಯ ಶ್ರೀ ಮುದ್ರೆಯೆನಗೆ ಆಭರಣವಾಯ್ತು 1ಮುಕ್ತರಾದರು ಎನ್ನ ನೂರೊಂದು ಕುಲದವರು |ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು ||ಸುಕೃತಿದೇಹಕ್ಕೆನ್ನ ಮನವು ತಾನೆಳಸಿತ್ತು |ಅಕಳಂಕ ಹರಿನಾಮ ದಿವ್ಯಕೊದಗಿತ್ತು 2ಇಂದೆನ್ನ ಸಂತತಿಗೆ ಸಕಲ ಸಂಪದವಾಯ್ತು |ಮುಂದೆನ್ನ ಜನ್ನ ಸಾಫಲ್ಯವಾಯ್ತು ||ತಂದೆ ಶ್ರೀಹರಿಪುರಂದರವಿಠಲ ರಾಯನೇ |ಬಂದೆನ್ನ ಹೃದಯದೊಳು ನೆಲೆಯಾಗಿ ನಿಂತ 3
--------------
ಪುರಂದರದಾಸರು