ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನಗಾರು ಸರಿಯಿಲ್ಲ-ಎನಗನ್ಯ ಗತಿಯಿಲ್ಲ ಪ ನಿನಗೂ ನನಗೂ ನ್ಯಾಯ ಪೇಳುವರಿಲ್ಲ ಅ.ಪ ಪಾದ ಪೊಂದಿರುವೆಬಂದ ವಿಷಯಂಗಳಿಗೆ ಎನ್ನನೊಪ್ಪಿಸಿಕೊಟ್ಟುಅಂದಗಾರನಂತೆ ನೋಡುವುದುಚಿತವೆ1 ಪರಿ ನರಕಕ್ಕೆ ಗುರಿಮಾಡುವಿಪರಸತಿಯರ ಒಲುಮೆ ನಿನಗೊಪ್ಪಿತೆಲೊ ಕೃಷ್ಣದೊರೆತನಕಂಜಿ ನಾ ಶರಣೆಂಬೆನಲ್ಲದೆ 2 ನಿನ್ನಾಜ್ಞದವನೊ ನಾ ನಿನ್ನ ಪ್ರೇರಣೆಯಿಂದಅನ್ನಂತ ಕರ್ಮವ ನಾ ಮಾಡಿದೆಎನ್ನವಗುಣಗಳನೆಣಿಸಲಾಗದೊ ಸ್ವಾಮಿಮನ್ನಿಸಿ ಸಲಹಯ್ಯ ಪರಮ ಪುರುಷ ಕೃಷ್ಣ 3
--------------
ವ್ಯಾಸರಾಯರು
ನಿನ್ನನೆ ನಂಬಿದೆ ನೀರಜನಯನ ನಿನ್ನ್ಹೊರತು ಎನಗನ್ಯ ಗತಿಯಿಲ್ಲ ಹರಿಯೆ ಪ ನಿನ್ನ ಪಾದವೆ ಎನಗೆ ಮಾತಾಪಿತೃಯೆಂಬೆ ನಿನ್ನ ಪಾದವೆ ಎನಗೆ ಬಂಧುಬಳಗವೆಂಬೆ ನಿನ್ನ ಪಾದವೆ ಎನಗೆ ಸಕಲಸಂಪದವೆಂಬೆ ನಿನ್ನ ಪಾದವೆ ಎನಗೆ ನಿಖಿಲಬಲವೆಂಬೆ 1 ನಿನ್ನ ಕರುಣವೆ ಎನಗೆ ಭವತರಿವ ಶಸ್ತ್ರೆಂಬೆ ನಿನ್ನ ಕರುಣವೆ ಎನಗೆ ಸ್ಥಿರಸುಖವುಯೆಂಬೆ ನಿನ್ನ ಕರುಣವೆ ಎನಗೆ ರಕ್ಷಿಸುವ ದೊರೆಯೆಂಬೆ ನಿನ್ನ ಕರುಣವೆ ಎನಗೆ ಪರಮ ತೃಪ್ತ್ಯೆಂಬೆ 2 ನಿನ್ನ ನಾಮವೆ ಎನಗೆ ಅಮೃತವೆಂಬೆ ನಿನ್ನ ನಾಮವೆ ಎನ್ನ ಭವರೋಗಕ್ಕ್ವೈದ್ಯೆಂಬೆ ನಿನ್ನನಾಮ ಸ್ಥಿರಕೊಟ್ಟು ಪ್ರೇಮದಿಂ ಸಲಹು ಶ್ರೀರಾಮ ನೀನೆ ಎನಗೆ ಪರದೈವಯೆಂಬೆ 3
--------------
ರಾಮದಾಸರು
ಬೇಕಿಲ್ಲ ಎನಗನ್ಯ ಏನೇನು ಸ್ವಾಮಿ ಸಾಕು ನಿನ್ನಯ ನಾಮವೊಂದೆ ನುತ ಪ್ರೇಮಿ ಪ ದುರುಳ ಸಂಹರ ನಾಮ ದುರಿತ ಪರಿಹರ ನಾಮ ಶರಧಿಮಥನ ನಾಮ ಸುರರ ಸಲಹಿದ ನಾಮ ಹರನ ಪ್ರೇಮದ ನಾಮ ಪರಮೇಷ್ಟಿಯನು ಪಡೆದ ಸ್ಥಿರನಾಮದ್ಹೊರತು 1 ಸೃಷ್ಟಿಯಾಳುವ ನಾಮ ಶಿಷ್ಟಪಾಲನ ನಾಮ ಕಷ್ಟ ಕಳೆಯುವ ನಾಮ ಇಷ್ಟಪೂರ್ಣ ನಾಮ ಮುಟ್ಟುಮುಡಿ ಹರನಾಮ ಅಷ್ಟಸಿರಿಪತಿನಾಮ (ಹುಟ್ಟುಸಾವಿ)ಲ್ಲದ ಶಿಷ್ಟನಾಮದ್ಹೊರತು 2 ವೇದ ಹೊಗಳಿದ ನಾಮ ಸಾಧುವಂದಿತನಾಮ ಬೋಧರೂಪದ ನಾಮ ಆದಿಮಹನಾಮ ಭೇದವಿಲ್ಲವ ನಾಮ ವೇದಗೋಚರ ನಾಮ ಆದಿ ಅಂತಿಲ್ಲದನಾದಿ ನಾಮದ್ಹೊರತು 3 ತರಳನ್ಪೊರೆದ ನಾಮ ಕರಿಯ ಸಲಹಿದ ನಾಮ ತರುಣಿನುದ್ಧಾರ ನಾಮ ಧರೆಪೊತ್ತ ನಾಮ ಕರುಣೆ ತುಂಬಿದ ನಾಮ ಶರಣಾಗತಪ್ರಿಯ ನಾಮ ನರನ ಬೆಂಬಲನಾದ ಹರಿನಾಮದ್ಹೊರತು 4 ಮೂರು ಕಳೆಯುವ ನಾಮ ಆರುಗೆಲಿಸುವ ನಾಮ ಆರುನಾಲ್ಕು ಸುಲಭದಿ ಹಾರಿಸುವ ನಾಮ ಸಾರ ಮುಕ್ತಿಯ ನಾಮ ಧೀರ ಶ್ರೀರಾಮ ನಿಮ್ಮಪಾರನಾಮದ್ಹೊರತು 5
--------------
ರಾಮದಾಸರು
ಶ್ರೀಶನು ತನ್ನಯ ದಾಸತ್ವ ಕೊಟ್ಟೆನ್ನ ಧ್ಯಾಸದಿ ಬಂದು ಸ್ಥಿರಮಾದ ಪ ಧ್ಯಾಸದೊಳಗೆ ಬಂದು ಸ್ಥಿರವಾಗಿ ನಿಂತಿನ್ನು ನಾಶನ ಜಗದಾಸೆ ಎನಗೇನೆ ಅ.ಪ ಸುಂದರಮಾದ ಸುಸಂಧಿಯೆನಗೆ ಫಲಿಸಿತು ಸುಕೃತ ಫಲದಿಂದೆ ಸುಕೃತ ಫಲದಿಂದ ಎನ್ನಗೆ ತಂದೆ ಗೋವಿಂದ ತಾನೆ ಗೋವಿಂದ 1 ಕೆಟ್ಟ ಬವಣೆಯಿಂದ ಕೆಟ್ಟು ಹೋಗುತಲಿರ್ದೆ ಸೃಷ್ಟೀಶ ದಯದಿ ನೋಡಿದ ಸೃಷ್ಟೀಶ ದಯದಿಂದ ನೋಡಿ ಮುಂದಕೆ ಕರೆದು ನೆಟ್ಟನ ಮಾರ್ಗಕೆ ಹಚ್ಚಿದ 2 ಸಾಧ್ಯವಲ್ಲಾರಿಗೀತಸಾಧ್ಯಮಾಗಿ ತಾನೆ ಸಾಧ್ಯವಿಲ್ಲದ ಸುದ್ದಿ ತಿಳಿಸಿದ ಸಾಧ್ಯವಿಲ್ಲದ ನಿಜ ಸುದ್ದಿ ತಿಳಿಸಿ ಪರಿ ಶುದ್ಧನ್ನ ಮಾಡಿ ನಿಲಿಸಿದ 3 ಮೂಲೆಗೆ ಬಿದ್ದ್ವೊಸ್ತು ಮೇಲಕ್ಕೆ ಎತ್ತಿ ತವ ಲೀಲೆ ನಾಲಗೆಮೇಲೆ ಬರೆದನೆ ಲೀಲೆ ನಾಲಗೆಮೇಲೆ ಬರೆದೆನ್ನಜ್ಞಾನ ಕಾಳೆಂಬ ಕತ್ತಲ ಕಳೆದನೆ 4 ಮಂತ್ರಮೂಲನು ಸರ್ವಾಂತರ್ಯಾಮಿಯು ಸ್ವ ತಂತ್ರ ತಾನೆಂಬ ನಿಜ ತಿಳಿಸಿದ ಸ್ವ ತಂತ್ರ ತಾನೆಂಬ ನಿಜ ತಿಳಿಸಿ ಎನಗನ್ಯ ಚಿಂತೆ ಭ್ರಾಂತಿಗಳೆಲ್ಲ ಬಿಡಿಸಿದ 5 ಮರವೆಯ ಹಾರಿಸಿ ಕರುಣಿಸಿ ಸ್ಥಿರಜ್ಞಾನ ಪರಿಭವ ದು:ಖ ಪರಿಹರಿಸಿದ ಪರಿಭವ ದು:ಖ ಪರಿಹರಿಸೆನಗೆ ಸ್ಥಿರವಾದ ಪರಲೋಕದರಿವು ನಿಲಿಸಿದ 6 ಆಶದಿ ಬಿದ್ದು ನಾ ದೇಶದೇಶವ ತಿರುಗಿ ಬೇಸತ್ತು ಬಾಯ ಬಿಡುತಿರ್ದೆ ಬೇಸತ್ತು ಬಾಯ ಬಿಡುತಿರ್ದೆ ಕಂಡೆನ್ನಯ್ಯ ಲೇಸಾದ ಪದವಿ ತೋರಿಸಿದ 7 ಜಗಸುಖಕೊಲತಿದ್ದೆ ಜಗದಾತ್ಮನು ಈಗ ಜಗದ್ಹಗರಣ ತೋರಿಸ ನಗಿಸಿದ ಹಗರಣ ತೋರಿಸಿ ನಗಿಸಿದಚಲಸೌಖ್ಯ ಬಗೆ ತೋರಿ ಜಗಸುಖ ಮರೆಸಿದ 8 ಏನೆಂದು ಪೇಳಲಿ ಸಾನಂದನುತ ಮಹ ದಾನಂದದಾಲಯ ಪೊಗಿಸಿದ ಆನಂದದಾಲಯ ಪೊಗಿಸೆನ್ನ ವದನದಿ ತಾ ನಿಂದು ನಿಖಿಲ ನುಡಿಸಿದ 9 ಭವಭಯಹರಿಸುವ ಸವಿನುಡಿಗಲಿಸಿದ ಭವರೋಗದ್ವೈದ್ಯ ಮಮಪಿತ ಭವರೋಗದ್ವೈದ್ಯ ಮಮಪಿತ ಮುಂದಿನ್ನು ಸಾವ್ಹುಟ್ಟೋಭೀತಿ ಎನಗಿಲ್ಲ 10 ಕರ್ತು ಸರ್ವೋತ್ತಮ ನಿತ್ಯನಿರ್ಮಲ ಎನ್ನ ಮತ್ರ್ಯದ ಗುಣವ ತೊಡೆದೆನ ಮತ್ರ್ಯದ ಗುಣ ತೊಡೆದು ಸತ್ಯ ಶ್ರೀರಾಮ ಎನ್ನ ಮುಕ್ತಿ ಸಾಮ್ರಾಜ್ಯ ತಖ್ತೆ ಏರಿಸಿದ 11
--------------
ರಾಮದಾಸರು
ನಿನಗಾರು ಸರಿಯಿಲ್ಲ ಎನಗನ್ಯ ಗತಿಯಿಲ್ಲಪರಸತಿಗಳುಪಿರೆಪರಮಪಾಪಿಷ್ಠನೆಂದುನಿನ್ನಾಜೆÕಯವ ನಾನು ನಿನ್ನ ಪ್ರೇರಣೆಯಿಂದ
--------------
ಪುರಂದರದಾಸರು