ನಲಿಯುತ ನಲಿಯುತ ಬಂದನೆ | ವಿಶ್ವಾ - ವಳಿಯ ಪಾಲಿಪ ಶಿವನ ಕಂದನೆ ¥
ಪಾವಕನೊಳು ಬೆರೆತಿದ್ದನೆ - ದಿವಿ -ಜಾವಳಿ ನುತಿಸಲು ಎದ್ದನೆ - ನಿಗ - ಮಾವಳಿ ಪೊಗಳುವ ಸೇರಕೋದ್ಧಾರನು ನಲಿಯುತ 1
ಸೇನಾನಿ ಪದವಿಯೊಳೆದ್ದನೆ - ಸುರರ ಸೇನೆಯ ನೊಡಗೂಡಿ ಪೋದನೆ - ಧುರದಿ ದಾನವರೆರೆಯನ ಗೋಣನು ತರಿದೊಟ್ಟಿ ನಲಿಯುತ 2
ಅಘ ನಾಶ ಪಾವಂಜೆಯೊಳ್ ನಿಂದನೆ - ರವಿ ಭಾಸ ಕಾರ್ತಿಕೇಯ ದಾಸರ ಪೊರೆಯಲು ನಲಿಯುತ 3