ಒಟ್ಟು 9 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೆಲಿಯಬಲ್ಲವರಾರು ಮೂಜಗದಿ ಪಣೆಯ ಬರಹ ಗೆಲಿಯಬಲ್ಲವರಾರು ಮೂಜಗದಿ ಪ ಗೆಲಿಯಬಲ್ಲವರಾರು ಮೂಜಗದೊಳಗೆ ಬಲ್ಲಿದರೆಂಬರೆಲ್ಲರು ಜಲಜಪೀಠನ ಲಿಪಿಗೆ ಸಿಲ್ಕಿ ತೊಳಲಿ ಬಲಳಿದರ್ಹಲವು ಪರಿಯಲಿ ಅ.ಪ ಒಂದೇ ಧರ್ಮದಿಗೂಡಿ ತಾ ನಡೆದ ವಿಕ್ರಮನೆಂಬುವ ಒಂದೆ ಕೊಡೆಲಿಡೀಭುವನವಾಳಿದ ಸದ್ಧರ್ಮ ತನದಿಂ ದೊಂದೆ ಆ ಸುಮರೂಪ ಪ್ರಜರ ಪಾಲಿಸಿದ ಉದ್ದಂಡನೆನಿಸಿದ ಒಂದು ಪಾಪಾಚರಣೆಗೈಯದೆ ಒಂದು ಬಿಡಿದಖಿಲ್ವಿದ್ಯವರಿದ ಒಂದು ಅರಿಯದೆ ತನ್ನ ಕೈಕಾಲು ಒಂದೇ ಮಾತಿಗೆ ಕಳೆದುಕೊಂಡ 1 ಎರಡುಹೊತ್ತು ಸತ್ಯಮಂ ಬಿಡದ ಸುಚಿಂತದಿರುವ ಎರಡನೇ ಗುಣ ಸ್ವಪ್ನದರಿಯದ ನಳಚಕ್ರವರ್ತಿ ಎರಡು ತಿಳಿಯದೆ ಜೂಜನಾಡಿದ ಮಹವಿಪಿನಕೈದಿದ ಎರಡು ಮಕ್ಕಳ ವನದಿ ಅಗಲಿದ ಎರಡನರಿಯದೆ ಮಲಗಿದರಸಿಯ ಎರಡನೆಬಗೆದಡವಿಯಲಿ ಬಿಟ್ಟು ಎರಡನೇರಾಯನಶ್ವ ತಿರುವಿದ 2 ಮೂರು ಜಗ ಅರೆಲವದಿ ತಿರುಗುವ ದಿನದಿನವುಬಿಡದೆ ಮೂರುಮೂರ್ತಿದರ್ಶನವ ಪಡೆಯುವ ಆ ಪರಮಪಾವನ ಮೂರು ಕಾಲದ ಜ್ಞಾನ ಬಲ್ಲವ ನಾರದನೆಂಬುವ ಮೂರುಮಂದಿ ಶಕ್ತಿಯರಿಗೆ ಮೂರು ಬಟ್ಟೆಯ ಸುದ್ದಿ ಪೇಳಿ ಮೂರು ಮೂರ್ತಿಗಳುಪಾಯನರಿಯದೆ ಮೂರಿಪ್ಪತ್ತು ಮಕ್ಕಳ್ಹಡದ 3 ನಾಲ್ಕುಯುಗ ಪ್ರಮಾಣಗಳ ತಿಳಿದ ಬ್ರಹ್ಮನುಬಿಡದೆ ನಾಲ್ಕುವೇದಗಳ್ಹಸ್ತದೋಳ್ಪಿಡಿದು ವಿಧವಿಧದಿ ಎಂಭತ್ತು ನಾಲ್ಕುಲಕ್ಷಜೀವರಾಶಿಗಳ ಬರಿದೆ ಉತ್ಪತ್ತಿಗೈದು ನಾಲ್ಕುಭುಜನ ಸುರನೆಂದೆನಿಸಿ ನಾಲ್ಕು ವಿಧ ಮತಿವಂತನಾದವ ನಾಲ್ಕು ಒಂದು ಮುಖ ಮೊದಲಿಗಿರ್ದನು ನಾಲ್ಕೆ ಮುಖದವನೆನಿಸಿಕೊಂಡು 4 ಐದುಬಾಣನಪಿತನಸಖನಾದ ಉರಿನೇತ್ರ ಬಿಟ್ಟು ಐದುಬಾಣನ ಭಸ್ಮ ಮಾಡಿದ ಅಪಾರ ಶಂಭೋ ಐದು ಒಂದು ಮುಖದವನ ತಾ ಪಡೆದ ಹರಿಕರುಣದಿಂದ ಐದು ಒಂದು ಮುಖದವನಿಂ ತಾರಕ ನೈದುವಂದುದಲ್ಲೆ ಸೀಳಿಸಿ ದೈದುತತ್ವಕಾಲಯೆನಿಸಿದ ಐದುಮುಖಸ್ಮಶಾನ ಸೇರಿದ 5 ಆರು ಎರಡೈಶ್ವರ್ಯಗಳಲೊಳ ವೈಕುಂಠನಾಯಕ ಆರು ಎಂಟುಲೋಕಗಳ ಪರಿಪಾಲ ಬಿಡದೇಳು ಇಪ್ಪತ್ತು ಆರುಕೋಟಿ ಅಮರಾದಿಗಳ ಮೂಲ ಮಹಮಂತ್ರ ಜಾಲ ಆರುನಾಲ್ಕು ಭುಜನ ಮೊರೆ ಕೇ ಳಾರುನಾಲ್ಕು ಶಿರನ ವಧಿಸಿದ ಆರುನಾಲ್ಕರಗಧಿಕನೆನಿಸಿ ಆರುನಾಲ್ಕವತಾರ ತಾಳಿದ 6 ಆರಿಗಾದರು ಬಿಡದೀ ಬರವಣಿಗೆ ಬಿದ್ದಂತೆ ಫಲಿಸಿತು ತೀರಲಿಲ್ಲದಂತಂಥ ಹಿರಿಯರಿಗೆ ಸಾಧ್ಯದಪ್ಪಿ ಮಹ ಘೋರ ಬಡಿಸಿತು ಸರ್ವ ಶಕ್ತರಿಗೆ ಬ್ರಹ್ಮನಸುಡಗಿ ವಾರಿಜನು ಬರೆದ ಬರೆಹ ಮೀರಿ ನಡೆದೇನೆಂದರಿನ್ನು ಸಾರಮೋಕ್ಷಕ್ಕಧಿಪ ನಮ್ಮ ಧೀರಪ್ರಭು ಶ್ರೀರಾಮ ಬಲ್ಲ 7
--------------
ರಾಮದಾಸರು
ತರತಮದಿ ಶರಣು ಮಾಡುವೆ ನಿಮಗೆ ಕರಣಶುದ್ಧಿಯಲ್ಲಿ ಕರುಣ ಮಾಡಿ ಎನ್ನ ಪರಿಪಾಲಿಸಬೇಕು ನಿರುತ ಬಿಡದೆ ಮನ ಸಿರಿಹರಿ ಚರಣಕ್ಕೆ ಎರಗುವಂತೆ ವರಭಕುತಿಯಲ್ಲಿ ಪ ಪರಮೇಷ್ಠಿ ವಾಯು ಸರಸ್ವತಿ ಭಾರತೀ ಉರಗ ಈಶ ಹರಿ ಸತಿಯರು ಮೂ ರೆರಡು ಜನರು ಆ ತರುವಾಯ ಸೌಪರ್ಣಿ ಸಿರಿ ಗುರು ದಕ್ಷನೆ ಶಚಿ ಮರುತ ಪ್ರವಾಹ ಮೂ ವರು ಸನಕಾದ್ಯರು ದುರಿತಶಾಸನ ಶಶಿ ತರಣಿ ಶತರೂಪ ವರುಣ ನಾರದರ 1 ಮುನಿಗಳ ಶ್ರೇಷ್ಠ ಭೃಗು ಅನಲ ಪ್ರಸೂತಗಾಧಿ ತನುಜ ವಾರಿಜಾಜನ್ನತನಯರು ವೈವಸ್ವತ ಸೂರ್ಯ ದನು ಪ್ರವಾಹವೆಂಬ ಅನಿಲನ್ನ ತಳೋದರಿ ಅನಿಲದೇವಜ ಅಶ್ವಿನಿ ದೇವತೆಗಳು ಅನಳಾಕ್ಷಸುತ ಧನಪತಿ ಪ್ರಹ್ಲಾದ ಗುಣಿಸುವೆ ವಸು ಏ ಳನು ದಶರುದ್ರರು ಇನಿತರೊಳಗೆ ಒಬ್ಬನ ಬಿಟ್ಟನು ದಿನ 2 ದಶ ವಿಶ್ವದೇವತರು ಸ್ವಶನರೊಳಗೆಗೀರ್ವರ ರಸದ್ಯುನವಕೋಟಿ ತ್ರಿದಶರೂಪ ಪಿತ್ರರೂ ಎಸವ ಸೋಮ ಪುನರ್ವಾಪಸರಿಪಶತಸ್ಥರು ನಸುನಗೆ ಕರ್ಮಜ ಋಷಿ ಈರ್ವರು ಮನು ಕುಶಲ ಸಪ್ತ್ತರಿಗೆ ತುತಿಸೆ ಕಾಲಕಾಲದಿ 3 ಮಾಂಧಾತ ಬಲಿ ಶಶಿಬಿಂದುವೆ ಪ್ರಿಯವ್ರತ ಪರೀಕ್ಷಿತ ನಂದ ಕಕುಸ್ಥ ಗಯ ಕುಂದದೆ ಯದುಕುಲದಿಂದ ಬಂದ ಹೈಹಯನು ಚಂದ್ರನ ಮಡದಿ ಏಳೊಂದನೆ ಸೂರ್ಯನು ಮಂದಹಾಸಾಂಬುಜ ಬಾಂಧವನಸತಿ ಕಲದರ್ಪನಸೂಸೆ ವೃಂದಾರಕರಿಗೆ 4 ಸದಮಲ ಸ್ವಾಹಾದೇವಿ ಬುಧಾ ಉಷಾದೇವಿ ಶನಿ ಮುದದಿಂದ ಪುಷ್ಕರ ಸಹೃದಯ ತುಂಬರರಿಂದ ಮೊದಲಾಗಿ ನೂರುಮಂದಿ ತ್ರಿದಶ ಗಂಧರ್ವರು ಚದುರೆ ಊರ್ವಸಿ ರಂಭೆ ಅದಿತಿ ಕಶ್ಯಪದಿತಿ ಹದಿನಾರು ಸಾವಿರ ಬುಧನ ಮಕ್ಕಳು ತಪೋನಿಧಿಗಳು ಎಂಭತ್ತು ತದುಪರಿ ಅಜಾನಜ ತ್ರಿದಶರು ಓಜಸ್ತರೆದರಾಗಿ ನಾನಿಂದು 5 ಹರಿಭಕ್ತರಾದ ಅಪ್ಸರ ಸ್ತ್ರೀಯರು ಕೆಲಕೆಲವು ಮರಳೆ ಚಿರಾಖ್ಯನಾಮದಿರುತಿಪ್ಪ ಪಿತೃಗಳು ಪರಿಪರಿ ನೂರುಕೋಟಿ ಪರಮಋಷಿಗಳಿಗೆ ಸುರ ಗಂಧರ್ವರ ವಿಸ್ತರ ಮನುಜ ಗಂಧರ್ವ ಧರಿಣಿಜಾಕವಿ ಮೇಲರಿದು ಜಯಂತಗೆ ಕರ ಮುಗಿವೆ ಕ್ಷಿತಿಪರನು ಕೊಂಡಾಡುತ ಇರುಳು ಹಗಲು ಉತ್ತಮರ ಮನುಜರ ಪಾಡಿ ನಿರುತ ಜಂಗಮ ಸ್ಥಾವರಗಳ ನೋಡುತ 6 ಭುಜಗಶಯನನಿಂದ ಸೃಜಿಸಿದ್ದ ಸರ್ವರಿಗೆ ನಿಜವಾಗಿ ಶಿರವಾಗಿ ಭಜಿಸುವೆ ಚನ್ನಾಗಿ ತ್ರಿಜಗದೊಳಗೆ ಎನ್ನ ರಜ ತಾಮಸ ಗುಣದ ವೃಜವೆ ಓಡಿಸಿ ನಿತ್ಯಸುಜನ ಮಾರ್ಗವ ತೋರಿ ರಜನಿ ಚರಾಂತಕ ವಿಜಯವಿಠ್ಠಲನ್ನ ಭಜಿಪೆನದಕೆ ನಿಮ್ಮ ನಿಜವ್ಯಾಪಾರದಿ ಸೃಜಿಸಿ ಕೊಡುತ ಧರ್ಮ ವೃಜಗಳೊದಗಿಸುತ್ತ ಕುಜನ ಮತದ ಮೇಲೆ ಧ್ವಜವೆತ್ತಿಸುವುದು 7
--------------
ವಿಜಯದಾಸ
ತೆರಳಿ ಪೋದರು ದಿವ್ಯ ನರಹರಿಯ ಪುರಕೆ ಶ್ರೀ ವರತಂದೆ ಮುದ್ದುಮೋಹನರೂ ಪ. ಕರಿಗಿರಿ ಕ್ಷೇತ್ರದಲಿ ತೊರದು ಭೌತಿಕ ದೇಹ ಪರಮ ಉಲ್ಲಾಸದಿಂದಾ ನಂದಾ ಅ. ಪರಿಪರೀ ಪೂಜಿಸಿದ ಪರಮ ಭಕ್ತರಿಗೆ ತಾವ್ ತೆರಳುವೋಪರಿ ತಿಳಿಸದೇ ಪರಮ ಕರುಣಾಳು ಹೆಂಗರುಳಿನಾ ಖಣಿ ಎಂಬ ತೆರವೆಲ್ಲರಿಗೆ ಮರೆಸದೇ ಪರಮಸುಜ್ಞಾನಿಯಾದಂಥ ಶಿಷ್ಯರಾ ಕರೆಸಿ ಅಗಲಿಸಿಕೊಳ್ಳದೇ ಪರಮ ಸಾಧ್ವೀಪತ್ನಿ ವರ ಪುತ್ರರಿರುತಿರಲು ಕಿರಿಶಿಷ್ಯನೊಬ್ಬನೆದುರೊಳ್ | ಜವದೊಳ್ 1 ಎಂಭತ್ತು ಮೇಲೆರಡು ವತ್ಸರವು ಧರಣಿಯೊಳು ಸಂಭ್ರಮದಿ ಧೃಡ ಕಾಯದೀ ತುಂಬಿ ತತ್ವಾಮೃತವು ಸುಜನರಾ ಹೃದಯದಲಿ ಕುಂಭಿಣಿಯೋಳ್ ದಾಸತ್ವದೀ ನಂಬಿಕೆಗಳಿತ್ತು ಸುಜ್ಞಾನಿಗಳಿಗಂಕಿತವು ಅಂಬುಜಾಕ್ಷನ ನಾಮದೀ ಒಂಭತ್ತು ವರ್ಷದಿಂ ಬೆಂಬಿಡದೆ ಕಾಯ್ದೆನ್ನ ಕುಂಭಿನಿಯ ತೊರೆದು ಈಗಾ | ಬೇಗಾ 2 ಶಾಲಿಶಕ ಸಾಹಸ್ರ ಅಷ್ಟ ಶತ ಅರವತ್ತು ಮೇಲೆರಡು ವಿಕ್ರಮದಲೀ ಕಾಲ ಮಧ್ಯಾಹ್ನ ಚೈತ್ರದ ಶುದ್ಧ ಶ್ರೀ ರಾಮ ನವಮಿ ಭೌಮವಾಸರದಲಿ ಆಲಿಸುತ ದಿವ್ಯ ಮಂತ್ರ ಶ್ರವಣ ಕೀರ್ತನವ ಶೀಲ ಶ್ರೀ ಗೋಪಾಲಕೃಷ್ಣವಿಠಲನ ಪುರಕೆ ಆಯಾಸಗೊಳದೆ ಮುದದೀ ತ್ವರದೀ 3
--------------
ಅಂಬಾಬಾಯಿ
ನಿನ್ನವನಲ್ಲವೇನೋ ಶ್ರೀಹರಿಯೆ ನೀನೆನ್ನೊಳಗಿಲ್ಲವೇನೊ ಪ ನಿನ್ನವನಲ್ಲವೆ ನೀ ನೆನ್ನೊಳಗಿಲ್ಲವೆನಿನ್ನ ಭಕುತುನೆಂದು ಮನ್ನಿಸಲೊಲ್ಲೇನೊ ಅ.ಪ. ಹೃದಯದೊಳೆಂಟುದಳ ಪದುಮವುಮುದದಿ ನೀನಿರುವ ಸ್ಥಳಹದನವನರಿತು ನಾ ಸದಾವಕಾಲದಿಸದಮಲ ಭಕುತಿಯನ್ನೊದವಿಸಿ ಸೇವಿಸೆ 1 ಎಂಭತ್ತುನಾಲ್ಕು ಲಕ್ಷ ಜೀವನರಾಶೀ-ಗಿಂಬಿತ್ತು ಕಾಯ್ವದ ಗೊಂಬೆಯ ಮಾಡುವಬಿಂಬ ಮೂರುತಿ ನಿನ್ನ ನಂಬಿದ ನನ್ನನ್ನುತುಂಬ ಮರೆತೆಯೇನೋ 2 ಗದುಗಿನನೊಳ್ಮೆರೆವ ವೀರನಾರಾಯಣಪದವ ನಂಬಿರುವೆ ಪೂರಾವಿಧವಿಧ ಪರಿಕಿಸು ಬದುಕಿಸು ಮುಳುಗಿಸುಬೆದರಿಸು ಕರುಣಿಸು ಕದಲಲೊಲ್ಲೆನು ದೇವಾ 3
--------------
ವೀರನಾರಾಯಣ
ನಿನ್ನಾಜ್ಞದವನೊ ನಾನೆನ್ನನೊಪ್ಪಿಸದೆಬಿನ್ನಹ ಚಿತ್ತೈಸಿ ಎನ್ನ ಪಾಲಿಸೊ ಕೃಷ್ಣ ಪ ಏಳು ಸುತ್ತಿನಕೋಟೆ ಯಮನಾಳು ಮುತ್ತಿಕೊಂಡುಪಾಳು ಮಾಡೇವೆಂದು ಪೇಳುತಿರಲುಆಳು ಸಾಮಗ್ರಿಯ ಅಪಾರ ಬಲಮಾಡಿಕೋಳುಹೋಗದ ಮುನ್ನ ಕೋಟೆ ರಕ್ಷಿಸಬೇಕು 1 ಆರು ಮೂರರ ಬಾಧೆ ಆರು ಎಂಟರ ಬಾಧೆಕ್ರೂರರೈವರ ಬಾಧೆ ಹೋರುತಲಿದಕೋಆರಿಂದ ನಿರ್ವಾಹವಾಗದು ಇವರನುಮೇರೆಲಿಡುವನೊಬ್ಬ ಧೀರನ್ನ ಬಲಮಾಡೊ2 ಲಕ್ಷ ಎಂಭತ್ತು ನಾಲ್ಕು ಜೀವರಾಶಿಗಳೊಳುಸೂಕ್ಷ್ಮದ ಕೋಟೆಂದುಪೇಕ್ಷಿಸದೆಪಕ್ಷಿವಾಹನ ನೀನು ಪ್ರತ್ಯಕ್ಷ ನಿಂತರೆಅಕ್ಷಯ ಬಲವೆನಗೆ ರಕ್ಷಿಸೊ ಸಿರಿಕೃಷ್ಣ 3
--------------
ವ್ಯಾಸರಾಯರು
ಪುಟ್ಟಿದೆ ಭುವಿಯೊಳು ಬಹುದಿನ ಕಳೆದೆನೊಪುಟ್ಟಿಸ ಬೇಡವೆನ್ನ ಪ ಪಟ್ಟಾಭಿರಾಮನೆ ಪರಮಘಟ್ಯಾಗಿ ನಿನ್ನ ಪಾದಗಳ ನಂಬಿದೆ ದೇವ ಅ.ಪ ಎಂಭತ್ತು ನಾಲ್ಕು ಲಕ್ಷ ಯೋನಿಯಚೀಲಗಳಲಿ ಬಂದೆನೊ ಕುಂಭಿಣಿಯೊಳು ಪುಟ್ಟಿ ಬಹು ಪಾಪಗಳ ಮಾಡಿಕುಂಭೀಪಾಕದಿ ಬೆಂದೆನೊ ಅಖಿಳ ಸುರರೊಡೆಯನೆಅರ್ತಾರ್ತಿಹರನೆಂದು ಕೇಳಿ ಬಂದೆನು ನಾನು 1 ಜನಪಾಶ ಬದ್ಧನಾದೆಮೀನು ಮಾಂಸದಾಸೆಗ್ಹೋಗಿ ಸಿಕ್ಕಿದಂತೆಮೋಸ ಹೋದೆನೊ ಬರಿದೆಏಣವು ಕಿಂಕಿಣಿಧ್ವನಿಗೆ ಮರುಳಾದಂತೆಇಳೆಯೊಳು ಮಂಕಾದೆನೊಏನೆಂಬೆ ದಾಸರಿ ಕೋಡಗದಂದದಿಕುಣಿಯುವೆ ನಾನೆಲ್ಲ ಜನಗಳ ಮುಂದೆ 2 ಕಾಯ ಪೋಷಣೆಗಾಗಿ ಹೇಯಕರ್ಮಂಗಳಕಾಲ ಕಾಲದಿ ಮಾಡ್ದೆನೊಜಾಯಾದಿಗಳ ರಕ್ಷಣೆಮಾಡೆ ಅದರಿಂದಜಾಗರೂಕನಾದೆನೊನ್ಯಾಯರಹಿತನಾಗಿ ಗುರು ಹಿರಿಯರ ಪಾದಭಜನೆ ಮಾಡದೆ ಪೋದೆನೊಕಾಯಜನೈಯನೆ ಶ್ರೀಕೃಷ್ಣರಾಯನೆಕಾಯಬೇಕೆನ್ನಪರಾಧಗಳನು ದೇವ3
--------------
ವ್ಯಾಸರಾಯರು
ಸಾಧಿಸಿ ಪಡೆದಿದ್ದೀ ನರಜನುಮ ಸಂ ಪಾದಿಸಿ ಕೊಳ್ಳೆಲೆ ಹರಿನಾಮ ಪ ಪೋದಬಳಿಕ ಇಂಥ ಮಹಜನುಮ ಮತ್ತೆ ಸಾಧನ ಸಾಧ್ಯವಲ್ಲೆಲೊ ತಮ್ಮ ಅ.ಪ ಮಡದಿಮಕ್ಕಳೆಂಬ ಒಣಭ್ರಾಂತಿ ನಿನ ಗ್ಹಿಡಿದಿದೆ ಮಾಯದ ಘನಚಿಂತಿ ಒಡೆದು ತೋರುವ ಜಗಕ್ಷಣ ಸಂತಿ ಇದು ಕಡೆಗೆ ಒಂದು ಇಲ್ಲ ನಿನ್ನ ಸಂಗತಿ1 ಅರ್ಥಇಲ್ಲದೆ ನಾನಾ ಯೋನಿಯಲ್ಲಿ ನೀ ಸತ್ತುಹುಟ್ಟುತ ಬಹು ಬಳಲುವ್ಯಲೇ ಸತ್ಯ ನಿತ್ಯಸುಖ ತಿಳಿಮರುಳೇ ಕಾಂಬ ಮತ್ರ್ಯಭೋಗವೆಲ್ಲ ಸುಳ್ಳುಸುಳ್ಳೆ 2 ತೊಳಲುತ ಎಂಭತ್ತು ನಾಲ್ಕುಲಕ್ಷ ಜನ್ಮ ತಾಳುತ ಪಡೆದಿದ್ದಿ ಬಲುಶಿಕ್ಷೆ ಚೆಲುವ ಶ್ರೀರಾಮನೊಳು ಇಡು ಲಕ್ಷ್ಯ ನಿನಗೊಲಿದು ಕೊಡುವ ಸ್ವಾಮಿ ನಿಜಮೋಕ್ಷ 3
--------------
ರಾಮದಾಸರು
ಸ್ವಾಮಿ ಬಂದನು ಸತ್ಯಭಾಮೆರುಕ್ಮಿಣಿಯರಿಂದ ಕಾಮಿತ ಫಲವ ಕೊಡುತಲೆ ಪ. ವಾಸುದೇವ ತಾಯಿ ದೇವಕಿದೇವಿಎಂಭತ್ತುಕೋಟಿ ಯಾದವರುಎಂಭತ್ತುಕೋಟಿ ಯಾದವರು ಬರುತಾರೆ ತೊಂಭತ್ತು ಮಹಲು ತೆರವಿರಲಿ 1 ಸರ್ಪಶಯನನ ಬದಿಯಲೊಪ್ಪುತ ಬಲರಾಮ ಛsÀಪ್ಪನ್ನ ಕೋಟಿ ದ್ವಿಜರಿಂದ ಛsÀಪ್ಪನ್ನ ಕೋಟಿ ದ್ವಿಜರಿಂದ ಬರುತಾರ ಎಪ್ಪತ್ತು ಮಹಲು ತರವಿರಲಿ 2 ಸೂರ್ಯ ಸೂರ್ಯ ಹೊಳೆವಂತೆ ಗರುಡನೇರಿಅಂಗಳಕ ಬಂದ ನರಹರಿ 3 ನಾಗಶಯನನು ಬಂದ ಬೇಗಆರುತಿ ತಾರೆ ನೂರು ಸೂರ್ಯರ ಬೆಳಕಿಲೆ ನೂರು ಸೂರ್ಯರ ಬೆಳಗೊ ಗರುಡನೇರಿಬಾಗಿಲಿಗೆ ಬಂದ ಯದುಪತಿ4 ಮದಗಜಗಮನೆ ಬ್ಯಾಗ ಕಡಲಾರತಿಯ ತಾರೆ ಚದುರೆ ನೀ ತಾರೆ ಫಲಗಳಚದುರೆ ನೀ ತಾರೆ ಫಲಗಳ ಐವರಿಗೆ ಎದುರಿಗೆ ಬಾರೆಂದು ಕರಿಯಮ್ಮ 5 ಕೃಷ್ಣರಾಯನು ಬಂದ ಬುಕ್ಕಿಟ್ಟು ಸೂರ್ಯಾಡೆಅಷ್ಟ ಸೌಭಾಗ್ಯ ಇವು ನೋಡಅಷ್ಟ ಸೌಭಾಗ್ಯ ಇವು ನೋಡ ಮಾಡಿದ್ದುಎಷ್ಟು ಸುಕೃತವು ಸ್ಮರಿಸಮ್ಮ6 ಮಾಧವ ರಾಮೇಶನ ಉಪಚರಿಸೆ7
--------------
ಗಲಗಲಿಅವ್ವನವರು