ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ ಕಾಮಿತಾರ್ಥವನೀವ ಕರುಣಿ ಭೂದೇವಿ ಪ ಹರಿಯ ಪಾದದಲುದಿಸಿ ಹರಿಗೆ ವಧುವೆನಿಸಿ ಹರಿಗೆ ಸುತೆಯನು ಇತ್ತು ಹಿರಿಯಳಾದೆ ಹರಿನಾಮ ಕೀರ್ತನೆಯ ಹೊರೆವ ಧಾರುಣಿ ನಿನ್ನ ಮೊರೆಹೊಕ್ಕೆ ಮರೆಯದಿರು ಕರುಣದೋರೆನಗೆ 1 ಕ್ಷಮೆ ದಮೆಯು ಶಾಂತ ಸದ್ಗುಣವೊಪ್ಪುವಳೆ ನಿನಗೆ ಭ್ರಮೆಬಟ್ಟು ಭೂಭುಜರು ಕಡಿದುಕೊಳುತಿಹರು ಅಮಿತ ಮಹಿಳೆ ನಿನ್ನ ನಿಜವ ಬಲ್ಲವರಾರು ತಮಗೆ ಋಣವಿದ್ದುದನು ಕೊಂಡೊಯ್ವರಲ್ಲದೆ 2 ಚಿನ್ನ ಭಂಡಾರಗಳು ನಿನ್ನೊಡಲೊಳೊಪ್ಪಿದವು ಉನ್ನಂತ ರತುನಗಳು ನಿನ್ನೊಳಡಗಿಹವು ಅನ್ನ ಪಾನಂಗಳಿಗೆ ಬೀಜ ಮೂಲವೆ ನೀನು ನಿನ್ನ ಮರೆತಿಹ ಜನಕೆ ಮುನ್ನ ಸುಖವುಂಟೆ 3 ಒಬ್ಬ ರಾಯನ ಗೆಲುವೆ ಒಬ್ಬ ರಾಯನಿಗೊಲಿವೆ ಒಬ್ಬನಿಗೆ ಮೈಯ ನೀನು ಕೊಡುವೆ ಒಬ್ಬರಾದರು ನಿನ್ನ ನಿಜದಿ ಬಾಳ್ದಪರಿಲ್ಲ ಗರ್ಭಜಾತನ ಹರಿಯ ಕೈಯ ಕೊಲಿಸಿದೆಲಾ 4 ಅಂಬುಧಿಯೆ ವಸನಗಳು ಕುಂಭ ಕುಚಗಳೆ ಗಿರಿಯು ಸಂಭ್ರಮದ ನದಿ ಕಾಲುವೆ ನಿನ್ನ ಬೆವರುಗಳು ಎಂಭತ್ತನಾಲ್ಕು ಲಕ್ಷ ಜೀವರಾಶಿಗಳೆಲ್ಲ ತುಂಬಿಕೊಂಡಿರುತಿಹುದು ಅಂಗೋಪಾಂಗದಲಿ 5 ಮೂಢನಾದೆನು ನಿನ್ನ ಬೇಡಿಕೊಂಬರೆ ಮನದಿ ರೂಢಿ ದೇವತೆಯೆ ಮಾಡು ದಯವನು ನೀನು ಮನದಭೀಷ್ಟವನೆಲ್ಲ ಪಾಡು ಪಂಥವು ಬೇಡ ಪಡೆದ ಮಗನೊಡನೆ 6 ನಂಬಿದೆನು ನಾ ನಿನ್ನ ಕುಂಭಿನಿಯೆ ಕೈವಿಡಿದು ಇಂಬಾದ ಪದವಿಯನು ಸಂಭ್ರಮದಿ ಕೊಡುತ ಬೆಂಬಡದೆ ವರಾಹತಿಮ್ಮಪ್ಪ ಕರುಣದಲಿ ಹಂಬಲಿಪ ತೆರದಿಂದ ಸಲಹುವುದು ಜಗದಿ 7
--------------
ವರಹತಿಮ್ಮಪ್ಪ
ಜಯಮಂಗಳಂನಿತ್ಯಶುಭಮಂಗಳಂ ||ಪ.ಶ್ರೀ ವತ್ಸಲಾಂಛನಗೆ ಕ್ಷೀರಾಬ್ಧಿ ವಾಸಗೆ |ಗೋವರ್ಧನೋದ್ಧಾರ ಗೋವಿಂದಗೆ ||ಮಾವ ಕಂಸನ ಕೊಂದುಮಕರಕುಂಡಲ ಧರಿಸಿ |ಜೀವಾತ್ಮನಾದ ಚಿನ್ಮಯರೂಪಗೆ 1ಅಂಬುಧಿಯ ಶಯನಗೆ ಅಖಿಲ ಭೂತೇಶಗೆ |ತುಂಬುರ - ನಾರದ ಮುನಿವಂದ್ಯಗೆ ||ಎಂಭತ್ತನಾಲ್ಕು ಲಕ್ಷ ಯೋನಿಗಳ ರಾಶಿಯನು |ಗೊಂಬೆಯನು ಮಾಡಿ ಕುಣಿಸುವ ದೇವಗೆ 2ಕಂದರ್ಪನಯ್ಯನಿಗೆ ಕೋಟಿ ಲಾವಣ್ಯನಿಗೆಸುಂದರ ಮೂರುತಿಹರಿ ಸರ್ವೋತ್ತಮನಿಗೆ ||ಕಂದ ಪ್ರಹ್ಲಾದನ ಕಾಯ್ದ ದೇವನಿಗೆಅರ |............................................. 3ಪನ್ನಂಗಶಯನಗೆಪಾವನ್ನ ಚರಿತೆಗೆ |ಸನ್ನುತರಾದ ಸಜ್ಜನ ಪಾಲಿಗೆ ||ಎನ್ನೊಡೆಯ ಸಿರಿದೇವಿಯರಸು ಮುದ್ದುರಂಗಗೆ |ತನ್ನ ನಂಬಿದವರನು ಸಲಹುವವಗೆ 4ಕರಿರಾಜವರದಗೆ ಕರುಣಾಸಮುದ್ರಗೆ |ಗರುಡ ಗಮನನಿಗೆ ವೈಭವಹಾರಗೆ ||ವರಪುರಂದರವಿಠಲ ಕಂಬುಕಂದರನಿಗೆ |ಅರವಿಂದನಾಭನಿಗೆ ಅಜನ ಪಿತಗೆ 5
--------------
ಪುರಂದರದಾಸರು
ಶ್ರೀ ಗುರುವಿನ ನೆನದು ಸುಖಿಯಾಗು ಮನವೇ ನೀನುದುರ್ಗುಣ ಪಾಪಹರಿದು ಛೇದಿಸು ಜನನವಪನಾನಾ ಜನ್ಮದಿ ತೊಳಲಿ ನೀ ಬಂದುನರಮನುಷ ಜನ್ಮವ ತಾಳಿ ಮರತ ಕಂಡ್ಯಾ ತನುವಿನಲಿಧ್ಯಾನಿಸುಸದಾಕಾಲದಿ ದುರ್ಜನ ಬುದ್ಧಿಮಾಣಿಸು ಪರಂಜ್ಯೋತಿಯನೆನೆದು ನೆನೆದು ದೃಷ್ಟಿಸಿ ಕಾಣುಗುಣಜÕನ ಕರುಣಪ್ರಾಜÕನ ಜ್ಞಾನ ಸಿದ್ಧನ ಗುರುವ ಸಿದ್ಧನಮಾನಸ ರೂಪನ ಮೂಜಗ ವ್ಯಾಪನದೀನರನಾಥನ ವಾಙ್ಮಯಾತೀತನ1ಸುಜನರ ಸಂಗವ ಮಾಡದೆ ಸಾಯುತಲಿಹೆಕುಜನರ ಸಂಗದಿಂದ ಕರುಣವೆಂಬುದು ಮರೆತೆತ್ಯಜಿಪುದು ನಿನಗೆ ನೀತಿಯೆ ಥೂ ನಿನಗೆ ಬುದ್ಧಿಯೇಭಜಿಸು ಪರಾತ್ಪರವ ನೆನೆದು ದೃಷ್ಟಿಸು ಮನವೇತ್ರಿಜಗವಂದ್ಯನ ತ್ರಿಗುಣಕೆ ಮಾನ್ಯನೆಸುಜನವ್ರಾತನ ಸುಪ್ರಭಾತೀತನಭಜಕರ ಭಾಗ್ಯನ ಬಹುಗುಣ ಯೋಗ್ಯನಸರ್ವಬೇಧಜÕನ ನಯಸರ್ವಜÕನ2ಇರುವೆ ಮೊದಲುಗಜಕಡೆಯಾದ ಎಂಭತ್ತನಾಲ್ಕುತಿರುವಿನ ಲಕ್ಷಜೀವದಿ ಜನಿಸಿ ಜನಿಸಿ ಪುಟ್ಟುವಪರಿಯನೆಲ್ಲವ ಛೇದಿಪ ಉಪಾಯವ ತಿಳಿವಚಿರಕಾಲ ನೆನೆಯೋ ಕಂಡ್ಯಾ ಚಿದಾನಂದಾವಧೂತನಪರಮಪರೇಶನಪಂಡಿತಪುರುಷನ ಶರಣು ಜನಾಂಗನ ಸುಗುಣ ಕೃಪಾಂಗನಕರುಣಾ ಕಟಾಕ್ಷನ ಕಾರಣ ಮೋಕ್ಷನಮರಣ ವಿದೂರನ ಮುನಿಯತಿ ವರನ3
--------------
ಚಿದಾನಂದ ಅವಧೂತರು