ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪತಿತನ್ನ ಪಾವನ ಮಾಡುವ ರಂಗಾ | ಗತಿಯಿಲ್ಲದವರಿಗೆ ಗತಿಯೇ ನೀನೇ ಗತಿ ಪ ನಿಂದಿರಲು ನೆರಳಿಲ್ಲ ನಿಲ್ಲಲು ನೆಲೆಯಿಲ್ಲ | ತಂದಿ-ತಾಯಿಯೆಂಬೋರು ಮೊದಲೆ ಇಲ್ಲ|| ಒಂದು ಸಂಗತಿ ಇಲ್ಲ ಪಡದಾನಂದನರಿಲ್ಲ | ಬಂದು-ಬಳಗದವರು ಆರಿಲ್ಲ ಹರಿಯೇ 1 ಕುಡಿಯಲು ನೀರಿಲ್ಲ ಕಾಲಿಡಲು ಇಂಬಿಲ್ಲಾ | ಪಿಡಿವೆನೆಂದರೆ ಮೇಲೆ ಕೊಡೆಯಿಲ್ಲ || ಒಡನೆ ಬರುವರಾರಿಲ್ಲ ಸಂಗಡದಿ | ಆಡಿವೆನೆಂದರೆ ವಳ್ಳಿಗಾಯಿತೊ ಹರಿಯೆ 2 ಧೈರ್ಯ ಕೊಡುವವರು ಇಲ್ಲ ದಾತರೊಬ್ಬರಿಲ್ಲ | ಕಾರ್ಯವೆಂದರೆ ಕೇಳಿ ಅರಿವರಿಲ್ಲಾ || ವೀರ್ಯವು ಎನಗಿಲ್ಲ ವಸಿಷ್ಠನು ನಾನಲ್ಲ | ಧೈರ್ಯವು ದು:ಖವು ವೆಗ್ಗಳಿಸಿತೋ ಹರಿಯೆ 3 ತನ್ನವರು ತನಗಿಲ್ಲ ತಾಳು ಎಂಬುವರಿಲ್ಲ | ಸಣ್ಣ ಮನಸ್ಸು ಅಲ್ಲದೇ ಘನವು ಯಿಲ್ಲ || ಕರ್ಮ ಬೆನ್ನ ತೊಲಗಲಿಲ್ಲ | ಇನ್ನು ಜನ್ಮ ವ್ಯರ್ಥವಾಯಿತೊ ಹರಿಯೇ 4 ಪಾದ | ಸಾಕಾರ ಮಾಡಿಕೊಂಬುವರ ಸಂಗಡ || ಶ್ರೀಕಾಂತ ವೆಂಕಟ ವಿಜಯವಿಠ್ಠಲರೇಯ | ನೀ ಕರುಣಸಿದರೆ ಸಕಲಾರ್ಥವಹುದು 5
--------------
ವಿಜಯದಾಸ
ಯಾರೊಡನುಸುರವೆನೋ ಕಡಲಶಾಯಿ ಬಿಡದೆ ನಿನ್ನನು ಅಡಿಗಡಿಗೆ ಕೊಂಡಾಡುವ ಹುಡಗನ ಮೇಲಿಷ್ಟು ಕರುಣವಿಲ್ಲದರಿಂದ ಪ ಪೊಡವಿಯೊಳಗೆ ಜನಿಸಿರುವರೊಳಗೆ ನಾನೆ ಕಡೆ ಈಗ ಬಸುರಿನೋಳ್ ಪಡೆದ ಮಗನು ತನ್ನ ಮಡದಿ ಮಕ್ಕಳನು ಎನ್ನೊಡನಿತ್ತು ನಾಕಕೆ ನಡೆದನೆನಗೆ ನಡುಮರಣವ ಹೊರಸಿ 1 ಕೆಟ್ಟ ಬದುಕ ಕಾಣಲಾರೆ ಮಾಳ್ಪರೆ ಎನ್ನ ರಟ್ಟೆ ಬಲವು ತಗ್ಗಿ ಹೋಯ್ತು ಮೊಮ್ಮಕ್ಕಳ ಅಟ್ಟುಳಿ ಬರಿಸನ್ನವಸ್ತ್ರಾಭರಣಕೆಂದು ಕುಟ್ಟಿ ಕೊಂಬರು ಎನಗಿದಿರಾಗಿ ಶಿವನೇ 2 ನಾನು ಎಂಬುವರಿಲ್ಲ ಗೃಹಕೃತ್ಯದೊಳಗೆನ್ನ ಮಾನಿನಿಯೊರ್ವಳುಂಟಿದರೊಳು ಸೊಸೆಯಷ್ಟು ಏಕೆಂದ ರೇನು ಸಂಸಾರವಿದನು ಪವಮಾನ ಸುತನ ಕೋಣೆ ಲಕ್ಷ್ಮೀಶ ನಡೆಸು 3
--------------
ಕವಿ ಪರಮದೇವದಾಸರು
ಕರುಣಿಸಿ ಕೇಳು ಕಂದನ ಮಾತನುಗರುಡವಾಹನಗಂಗಾಜನಕಶ್ರೀಹರಿಯೇಪಇತ್ತ ಬಾ ಎಂಬರಿಲ್ಲ ಇರವ ಕೇಳುವರಿಲ್ಲಹತ್ತಿರ ಕುಳ್ಳಿರಿಸಿ ಆದರಿಪರಿಲ್ಲ ||ತತ್ತರ ಪಡುತಿಹೆ ತಾವರೆಲೆಯ ನೀರಂತೆಹತ್ತು ನೂರು ನಾಮವ ಪೊತ್ತ ಶ್ರೀ ಹರಿಯೇ 1ಇಂದಿಗಶನವಿಲ್ಲ ನಿಂದಿರೆ ನೆರಳಿಲ್ಲಒಂದೆ ಸುತ್ತಿಗೆ ತುಂಡು ಅರಿವೆಯಿಲ್ಲ ||ಬೆಂದೊಡಲಿಗೆ ಒಬ್ಬರಯ್ಯೋ ಎಂಬುವರಿಲ್ಲಬಿಂದು ಮಾತ್ರದ ಸುಖಕಾಣಿನಾ ಹರಿಯೇ2ಎಲ್ಲಿದ್ದರೆನಗೊಂದು ನೆಲೆಯಿಲ್ಲ ಶ್ರೀಹರಿಅಲ್ಲ ತಿಂದಿಲಿಯಂತೆ ಬಳಲುವೆನೊ ||ಘುಲ್ಲಲೋಚನ ಪೂರ್ಣ ದಯದಿ ಸಲಹೊ ಎನ್ನಸಲ್ಲದ ನಾಣ್ಯವ ಮಾಡುವರೆ ಹರಿಯೇ 3ನಖಶಿಖ ಪರ್ಯಂತ ನಾನಾ ಹಿಂಸೆಯ ಪಟ್ಟೆಸುಖವೆಂಬುದನು ಕಾಣೆ ಸ್ವಪ್ನದಲುಮುಖವರಿಯದ ರಾಜ್ಯಕ್ಕೆನ್ನನು ಎಳತಂದುಕಕಮಕ ಮಾಡುವುದುಚಿತವೆ ಹರಿಯೇ 4ಇಷ್ಟುದಿವಸ ನಿನ್ನನೆನೆಯದ ಕಾರಣಕಷ್ಟ ಪಟ್ಟೆನು ಸ್ವಾಮಿ ಕಾಯೊ ಎನ್ನ ||ಮುಟ್ಟಿ ಭಜಿಸಲಿಲ್ಲ ಮುರವೈರಿ ನೀ ದಯವಿಟ್ಟು ಸಲಹೊ ಶ್ರೀಪುರಂದರವಿಠಲ5
--------------
ಪುರಂದರದಾಸರು