ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟಲಿಂಗಾರ್ಚನವಾ | ಮಾಡುವರಾ | ಎಷ್ಟೆಂದ್ಹೇಳಲಿ ಭಾಗ್ಯವಾ | ಕಟ್ಟಿ ಉಡಲಾಗದೇನಟ್ಟುತ್ತ ಮಾಂಗದಿ | ಕಟ್ಟಲಿಲ್ಲದ ತೇಂಜಾಂಗುಷ್ಟದ ಲಿಪ್ಪಾ ಪ ಹೃದಯವೇ ಮಂದಿರವು | ಅಷ್ಟದಳ | ಪದುಮವೇ ಮಂಟಪವು | ವದಗಿ ಮರುಹು ಎಂಬುವದೇ ನಿರ್ಮಾಲ್ಯವ ಬಿಟ್ಟು | ಸದಮಲ ಅರುಹಿನಾ ಉದಕದ ಮಜ್ಜನದೀ 1 ಶ್ರೀ ವಿಭೂತಿಯ ನಿಟ್ಟು | ಭಾವಗಂಧ ಭಕ್ತೀವ ತಿಲಾಕ್ಷತೆ | ಸಾವಧಾನದಿ ತ್ರಿಗುಣವೇ ತ್ರಿದಳ ಬಿಲ್ವದಿ 2 ಪುಣ್ಯಗಂಧವೇ ಧೂಪವು ಸುಜ್ಞಾನದ | ರನ್ನ ಜೋತಿಯ ದೀಪವು | ತನ್ನನುಭವ ಸಂಪನ್ನ ನೈವೇದ್ಯವು | ಮುನ್ನೆ ತಾಂಬೋಲವಾನನ್ಯ ಚಿಂತನೆಯಂಬಾದಿ 3 ಕರಣ ದಾರತಿಗಳನ್ನು | ಬೆಳಗುವಾ | ಪರಿಚಾರ ಪ್ರಾಣಗಳು | ಸ್ಪುರಿತ ನಾಹತದ ವರವಾದ್ಯ ಘೋಷವು | ಪರಿಪರಿಯಾದ ಝೆಂಕರಿಸುವ - ರವದಿಂದಾ 4 ವೃಂದದಿ ಷಡ್ಡಸ್ಥಳದೀ ನುಡಿವ ಮಂತ್ರ | ವೆಂದು ಅಜಪ ಸೂತ್ರದೀ | ತಂದೆ ಮಹಿಪತಿ ನಂದನ ಪ್ರಭು ನಮೋ | ಯಂದು ನಿಷ್ಕಾವ್ಯದಾದ ಸಂದಿ ಸುಖಸುತ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ಧ್ರುವ ಬಲ್ಲೆ ಬಲ್ಲೆನೆಂಬರು ಬಲ್ಲರಿಯದಿಹದನು ಬಲ್ಲರೆ ನೀವಿನ್ನು ಹೇಳುವುದು ತಾನಾ 1 ಕಣ್ಣು ಕಾಂಬುವದೇನು ಕಣ್ಣಿನೊಳಿಹುದೇನು ಕಣ್ಣು ಕಾಂಬುವ ಗತಿ ತಿಳಿಯುವುದು ತಾನಾ 2 ಕಿವಿಯ ಕಿವಿಯೆಂಬುದೇನು ಕಿವಿಯ ಕೇಳುವುದೇನು ಕಿವಿಯ ಕೇಳುವ ಗತಿ ತಿಳಿಯುವದು ತಾನಾ 3 ಮೂಗು ಮೂಗೆಂಬುದೇನು ಮೂಗಿನೊಳಾಡುವದೇನು ಆಡುವ ಗತಿಗಳ ತಿಳಿಯುವದು ತಾನಾ 4 ಬಾಯಿ ಬಾಯೆಂಬುದೇನು ಬಾಯಿಯೊಳ ನುಡಿವದೇನು ಬಾಯಿ ನುಡಿವ ಗತಿ ತಿಳಿಯುವದು ತಾನಾ 5 ದೇಹ ದೇಹೆಂಬುದೇನು ದೇಹದೊಳಿಹುದೇನು ದೇಹದೊಳಿಹ ವಸ್ತು ತಿಳಿಯುವದು ತಾನಾ 6 ಪ್ರಾಣವೆಂಬುದೇನು ಕರಣವೆಂಬುದೇನು ತತ್ತ್ವವೆಂಬುದೇನು ತಿಳಿಯುವದು ತಾನಾ 7 ಜೀವ ಅಂಬುದೇನು ಜೀವಭಾಗಗಳೇನು ಜೀವ ಶಿವದ ಗತಿ ತಿಳಿಯುವದು ತಾನಾ 8 ಆರುವ್ಹೆಂಬುದೇನು ಮರವ್ಹುವೆಂಬುದೇನು ಇದರೊಳು ಖೂನ ಕುರುಹು ತಿಳಿಯುವುದು ತಾನಾ 9 ಕನಸುವೆಂಬುದೇನು ಕನಸು ಕಾಂಬುವದೇನು ಕನಸು ಹೇಳುವದೇನು ತಿಳಿಯುವುದು ತಾನಾ 10 ಹಗಲು ಎದ್ದಿಹದೇನು ಇರಳು ಮಲಗುವದೇನು ಇದರ ಹಗರಣವನು ತಿಳಿಯುವದು ತಾನಾ 11 ಹುಟ್ಟಿ ಬಾಳುವದೇನು ಸತ್ತು ಹೋಗುವದೇನು ಸತ್ತು ಹುಟ್ಟುವದೇನು ತಿಳಿಯುವದು ತಾನಾ 12 ಹೆಣ್ಣು ಗಂಡೆಂಬುವದೇನು ಹೆಣ್ಣು ಗಂಡು ಕೂಡುವದೇನು ಕೂಡುವದೇನೆಂದು ತಿಳಿಯುವದು ತಾನಾ 13 ಅನುಭವ ಗತಿಗಳ ತಿಳಿಯಲು ಆತ್ಮದೊಳು ತಿಳಿಯಲು ಜನ್ಮವು ಅಳಿಯುವದು ತಾನಾ 14 ಆತ್ಮ ಅನುಭವವು ತಿಳಿಯುವದು ಗುರುಕೃಪೆಯು ತಿಳಿಯಲು ಜೀವನ್ಮುಕ್ತಿಯು ತಾನಾ 15 ಮಹಿಪತೆಂಬ್ಹೆಸರನು ಕರೆದರೊ ಎಂಬುವದೇನು ಓ ಎಂಬುವದೆನಗಿನ್ನು ತಿಳಿಯಿತು ತಾನಾ 16 ಇಂತು ಪರಿಯಾಯವು ತಿಳುಹಿದ ಗುರುರಾಯ ಎನ್ನೊಳು ಭಾಸ್ಕರ ಗುರು ತಾನೆ ತಾನಾ 17
--------------
ಕಾಖಂಡಕಿ ಶ್ರೀ ಮಹಿಪತಿರಾಯರು