ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೊರೆಯಾಗಿ ನಾನಿಹೆನಮ್ಮ ಅಜಹರಿಹರರ್ಗಿಲ್ಲದೆ ಪದ ಸೇರಿತಮ್ಮ ಪ ಪರಿ ಪರಮಾನ್ನವಮ್ಮ 1 ಸಂಗರಹಿತ ಸತಿಯಮ್ಮ ಆಮಂಗಳವೆಂಬ ಘನಸುತರಮ್ಮಜಂಗಮವೇ ಜನವಮ್ಮ ಭೇದಂಗಳ ಪರಿದಿಹುದೇ ಅರಮನೆಯಮ್ಮ 2 ನಾದವೆಂಬುದ ವಾದ್ಯವಮ್ಮ ಸುನಾದವೆಂಬುದೇ ಗೀತಗಾಯಕರಮ್ಮಆದಿ ಬಂಧುವೇ ಮದವಮ್ಮ ತೇಜವಾದ ಚಿತ್ತವೇ ದೀವಟಿಗೆಮ್ಮ 3 ಜ್ಞಾನವೆಂಬುದೇ ಬಲವಮ್ಮ ಮಹದಾನಂದ ರಾಜ್ಯಕ್ಕೆ ಅಧಿಪತಿಯಮ್ಮತಾನೆ ಎಂಬುದೇ ಮುದ್ರೆಯಮ್ಮ ಇಂತುನ್ಯೂನವಿಲ್ಲದೆ ಸ್ಥಿರ ಸೇರಿದುದಮ್ಮ4 ಸುರವರರ್ಗಿನಿತುಂಟೆ ಅಮ್ಮಹಿರಿಯಾರಾರಾದರೇನು ದೊರಕದಮ್ಮಗುರುವಿನ ದಯದಿಂದಲಮ್ಮ ನಿಜಗುರು ಚಿದಾನಂದನೇ ತಾನಾದುದಮ್ಮ5
--------------
ಚಿದಾನಂದ ಅವಧೂತರು
ಮಕ್ಕಳಿಂದಲೆ ಗತಿಯು ಎಂಬುದೇನಿರಯ್ಯಮಕ್ಕಳಿಲ್ಲದವರಿಗೆ ಗತಿಯಿಲ್ಲವೇ ಪ ಸತ್ಯ ಶೌಚಾಚಾರ ಶಮೆದಮೆಗಳಳವಟ್ಟುನಿತ್ಯ ಕಾಲದಿ ಹರಿಯ ಮನದಿ ನೆನೆದುಅತ್ಯಂತ ಸಂತುಷ್ಟನಾದರಿಂದಲ್ಲದಲೆಹೆತ್ತವರಿಂದ ಗತಿಯು ಎಂಬುದು ನಗೆಯಲ್ಲವೇ 1 ಅಣುಮಹತ್ತಿಲಿ ಶುಚಿಯು ಅಶುಚಿಯಾಗಿಪ್ಪಂಥಎಣಿಕೆ ಎಲ್ಲವನು ತಾಯೆನಿಸಿ ತಿಳಿದುತ್ರಿಣಯನಾಗಿಹೆನೆಂದು ತಾನೆ ತಾನಾಗದಲೆಕ್ಷಣಿಕ ಸುತರಿಂ ಗತಿಯು ಎಂಬುದು ನಗೆಯಲ್ಲವೆ 2 ಸ್ನಾನ ಜಪತಪ ತಿಲೋದಕ ಶ್ರಾದ್ಧ ತರ್ಪಣದಕ್ಷೀಣ ಕರ್ಮಗಳಿಂದ ಮುಕುತಿಯಹುದೇಮಾನನಿಧಿ ಚಿದಾನಂದ ಗುರುಪಾದ ಪದ್ಮವನುನ್ಯೂನವಿಲ್ಲದೆ ನಂಬಿ ಸುಖಿಯಾದರಲ್ಲವೆ3
--------------
ಚಿದಾನಂದ ಅವಧೂತರು
ಎನ್ನ ಕಡೆಹಾಯಿಸುವುದು ನಿನ್ನಭಾರ|ನಿನ್ನ ಸ್ಮರಣೆ ಮಾಡುವುದು ಎನ್ನ ವ್ಯಾಪಾರ ಪಎನ್ನಸತಿಸುತರಿಗೆ ನೀನೆಗತಿ|ನಿನ್ನವರು ಎಂಬುದೇ ಎನ್ನ ನೀತಿ 1ಎನ್ನನಿತ್ಯಸಾಕುವುದು ನಿನ್ನ ಧರ್ಮ |ನಿನ್ನ ಮರೆತು ಬದುಕುವುದು ಎನ್ನಕರ್ಮ2ಎನ್ನ ತಪ್ಪ ಎಣಿಸುವುದು ನಿನಗೆ ಸಲ್ಲ |ನಿನ್ನ ಮರೆತು ತಿರುಗುವುದು ಎನ್ನದಲ್ಲ 3ಎನಗೆ ಪಡಿಯಿಕ್ಕುವುದು ನಿನ್ನಮಾನ|ನಿನ್ನ ಮರೆತು ತಿರುಗುವುದು ಎನ್ನ ಅಪಮಾನ 4ನೀನಲ್ಲದೆ ಇನ್ನಾರಿಗೆ ಮೊರೆ ಇಡುವೆ |ಎನ್ನ ಪುರಂದರವಿಠಲ ನಿನಗೆ ಪೇಳುವೆ 5
--------------
ಪುರಂದರದಾಸರು