ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ನಡತೆಯೋ ಏಕೆ ಕೆಡುವೆಯೋಮನುಜ ಜನ್ಮವನ್ನು ವ್ಯರ್ಥಮಾಡಿಬಿಟ್ಟೆ ಮೂರ್ಖ ಪ ಹಂಡತಿ ಕದಪನು ನೀನು ಸವರಿ ನೋಡುವಂತೆ ಮೊನ್ನೆಕೊಂಡ ಸಾಲಗ್ರಾಮವನ್ನು ಮುಟ್ಟಬಾರದೇ ತಡಹಬಾರದೇರಂಡೆಯರ ವಿಷಯವಾಗಿ ಕಾಲಿಗೆರಗಿದಂತೆ ತತ್ತ್ವಪಂಡಿತರ ಚರಣಕ್ಕೆ ಬೀಳಬಾರದೆ ಹೊರಳಬಾರದೆದುಂಡು ಮುತ್ತಿನ ಸರವ ಸತಿಗೆ ಕೊಂಡು ಹಾಕಿದಂತೆಪಿಂಡಾಂಡ ವಿವರಿಪರಿಗೆ ವಂದನೆ ಮಾಡಬಾರದೇಭಂಡ ಮಾತನು ನಾರಿ ಕಿವಿಯ ಖಂಡಿ ಯೊಳು ಪೇಳ್ದ ತೆರದಿಸುವಚನ ಸಾಧುಗಳೊಳು ಉಸುರಬಾರದೇ ಅರುಹಬಾರದೆ 1 ನನ್ನ ಮಕ್ಕಳೆಂದು ನೀನು ಬನ್ನಬಟ್ಟ ತೆರದಿ ಇತರಸಣ್ಣವರ ಮೇಲೆ ನೀನು ಕರಗಬಾರದೆ ತೋರಬಾರದೆಹೊನ್ನು ಹಣವು ಬಿದ್ದುಯಿರೆ ಹೆಂಟೆಯೆನುತಲಾಗ ಎರಡುಕಣ್ಣು ತೆರೆದು ದೃಷ್ಟಿಸಿ ನೋಡಬಾರದೆ ಕಾಣಬಾರದೆಮನ್ನಣೆ ಎಂಬುದನ್ನು ಸೂಕರನ ವಿಷೈ ಸಮನುಎನ್ನುತಲಿ ಚಿತ್ತದಲ್ಲಿ ಎಣಿಸಬಾರದೆ ಹತ್ತಬಾರದೆಉನ್ನತದ ಜೀವರಾಶಿ ಎಲ್ಲ ಒಬ್ಬ ಶಿವನು ಎಂದುಭಿನ್ನ ಕಳೆದು ಆತ್ಮ ಸುಖದಿ ಮುಳುಗಬಾರದೆ ಬೆಳಗಬಾರದೆ 2 ನಾನಾ ಜನ್ಮ ಜನ್ಮ ತಿರುಗಿ ನರನ ಜನುಮ ಬಂದುನಾನಾರೋ ಎಂದು ನಿನ್ನ ತಿಳಿಯಬಾರದೆ ಅರಿಯಬಾರದೆಜ್ಞಾನಿಗಳ ಮುಖಗಳಿಂದ ನಿನ್ನ ಒಳಗೆ ನಿನ್ನ ಕಂಡುನಾನೆ ಬ್ರಹ್ಮವೆಂದು ನಿಜವ ಕಾಣಬಾರದೆ ಕೂಡಬಾರದೆನಾನಾಧ್ವನಿಯು ನಾನಾಕಳೆಯು ದೇಹದೊಳು ತೋರುತಿರಲುಆನೆಯಂತೆ ನೀನು ಈಗ ತೊನೆಯಬಾರದೆ ತೂಗಬಾರದೆತಾನಾದ ಚಿದಾನಂದ ಗುರುವು ತಾನೆ ತಾನೆಯಾಗಿನಾನು ನೀನು ಎಂಬುದನ್ನು ತಿಳಿಯಬಾರದೆ ಕಳೆಯಬಾರದೆ 3
--------------
ಚಿದಾನಂದ ಅವಧೂತರು
ಪಂಗು ಪುರವಾಸ ಶ್ರೀ ವೆಂಕಟೇಶ ನಿನ್ನ ಪಂಕಜಂಘ್ರಿಗಳಲ್ಲಿ ಸತತ ಶರಣಾದೆ ಪಂಕಜಾಲಯ ಪತಿಯೆ ಪಂಕಜೋದ್ಭವ ಪಿತ ವೃಷಾಂಕ ಸಂಕ್ರದಾದಿ ಸುಠವಿನುತ ಈಶ ಪ ಏಳು ತಗ್ಗಿದ ಗುಡ್ಡ ದಾಟಿ ನಿನ್ನಯ ಕ್ಷೇತ್ರ ಹೇಳುವರು ಮೊಂಡಿಪಾಳಯ ಎಂದು ಅಲ್ಲಿ ಮಾಲೋಲ ನಿನ್ನಾನುಗ್ರಹದಿ ಕಂಡೆ ನಿನ್ನ ಚೆಲುವ ಲಿಂಗಾಕಾರ ಶ್ರೀ ವೆಂಕಟೇಶ1 ಸರ್ವ ವೈದಿಕ ನಾಮಲಿಂಗಾತ್ಮಕ ಶಬ್ದ ಸರ್ವೋತ್ತಮ ವಿಷ್ಣುವಿಗೇವೇ ಮುಖ್ಯದಲಿ ಅನ್ವಯವು ಎಂಬುದನ್ನು ಸೂಚಿಸುವ ತೆರದಲ್ಲಿ ದಿವ್ಯ ಲಿಂಗರೂಪ ತೋರಿಸುತಿ 2 ಉತ್ಸವ ಮೂರ್ತಿಗಳೋಳ್ ಶ್ರೀ ಭೂ ಸಮೇತನೀ ಜ್ಯೋರ್ತಿಮಯ ಜ್ವಲಿಸುತಿ ಅಪ್ರತಿಮಾಂತಸ್ಥ ವೇಧ ಪಿತ ಶ್ರೀ ಪ್ರಸನ್ನ ಶ್ರೀನಿವಾಸನೇ ನಮೋ ವಿಧಿ ಶೇಷ ದೂರ್ವಾಸ ಇಂದ್ರಾದಿ ವಂದ್ಯ 3
--------------
ಪ್ರಸನ್ನ ಶ್ರೀನಿವಾಸದಾಸರು
ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವತೋರೋ ಎನಗೆ ಮುಕುಂದ ನಲಿದಾಡು ಮನದಲಿಮಾರಪಿತ ಆನಂದನಂದನ್ನ ಕಂದ ಪ ಭವ ಘೋರ ನಾಶನವಾರಿಜಾಸನ ವಂದ್ಯ ನೀರಜಸಾರ ಸದ್ಗುಣ ಹೇ ರÀಮಾಪತೆ ಅ.ಪ. ನೋಡೋ ದಯದಿಂದೆನ್ನ-ಕರಪದುಮ ಶಿರದಲಿನೀಡೋ ಭಕ್ತಪ್ರಸನ್ನ-ನಲಿದಾಡೊ ಮನದಲಿಬೇಡಿಕೊಂಬೆನೊ ನಿನ್ನ-ಆನಂದ ಘನ್ನಮಾಡದಿರು ಅನುಮಾನವನು ಕೊಂ -ಡಾಡುವೆನು ತವ ಪಾದಮಹಿಮೆಗಳನುಜೋಡಿಸುವೆ ಕರಗಳನು ಚರಣಕೆಕೂಡಿಸೊ ತವ ದಾಸಜನರೊಳು 1 ಹೇಸಿ ವಿಷಯಗಳಲ್ಲಿ-ತೊಳಲ್ಯಾಡಿ ನಾ ಬಲುಕ್ಲೇಶ ಪಡುವುದು ಬಲ್ಲಿ-ಘನಯುವತಿಯರ ಸುಖಲೇಸು ಎಂಬುದನ್ನು ಕೊಲ್ಲಿ-ಆಸೆ ಬಿಡಿಸಿಲ್ಲಿಏಸು ಜನುಮದ ದೋಷದಿಂದಲಿಈಸುವೆನು ಇದರೊಳಗೆ-ಇಂದಿಗೆಮೋಸವಾಯಿತು ಆದುದಾಗಲಿಶ್ರೀಶ ನೀ ಕೈಪಿಡಿದು ರಕ್ಷಿಸು 2 ನೀನೆ ಗತಿಯೆನಗಿಂದು ಉದ್ಧರಿಸೊ ಬ್ಯಾಗನೆದೀನ ಜನರಿಗೆ ಬಂಧು-ನಾ ನಿನ್ನ ಸೇವಕಶ್ರೀನಿವಾಸ ಎಂದೆಂದು-ಕಾರುಣ್ಯ ಸಿಂಧುಪ್ರಾಣಪತಿ ಹೃದಯಾಬ್ಜಮಂಟಪ-ಸ್ಥಾನದೊಳಗಭಿವ್ಯಾಪ್ತ ಚಿನುಮಯಧ್ಯಾನಗೋಚರನಾಗಿ ಕಣ್ಣಿಗೆಕಾಣಿಸುವೆ ಶ್ರೀರಂಗವಿಠಲ 3
--------------
ಶ್ರೀಪಾದರಾಜರು