ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಳಲಾರೆ ರಂಗಯ್ಯ ನಾ ತಾಳಲಾರೆ ತಾಳಲಾರೆ ಕರುಣಾಳು ರಾಜೇಂದ್ರನೆ ಖೂಳ ಜನರು ಕೂಡಿ ಪೇಳುವ ನುಡಿಯನ್ನು ಪ. ದೇವ ನಿನ್ನ ಪಾದಾಂಬುಜ ಸೇವೆಯನ್ನು ಭಾವಶುದ್ಧದಿ ಮಾಳ್ವ ಭಾಗ್ಯ ಪೊಂದಿರಲು ಮೂ- ದೇವಿ ಎಂದೆನ್ನನು ಮೂದಲಿಸುವ ಮಾತ 1 ಹೇಡಿ ಜನರು ಮನಕೆ ಬಂದಂ- ತಾಡುತ್ತಿಹರು ರೂಢಿಪ ಮುಖದಿ ನೀ ಮಾಡುವ ಕೃತ್ಯದ ಪ್ರೌಢಿಮೆಯರಿಯದೆ ಮೂಢ ಜನರ ಮಾತ 2 ಹೆತ್ತ ಮಗನು ಹಸ್ತಕನಾಗಿ ಹತ್ತಲಿರಲು ಉತ್ತಮ ಪದವಿಯ ತೊತ್ತಿನ ಕುವರರಿಗಿತ್ತದು ಸರಿಯೆ ಸ- ರ್ವೋತ್ತಮ ದೊರೆಯೆ ನಾ 3 ತೋರೊ ಸೂಕ್ತಿ ತಾತ್ಸಾರವ್ಯಾಕ- ಪಾರ ಯುಕ್ತಿ ಕ್ರೂರ ಮಾನವರಹಂ- ಕಾರ ಖಂಡಿಸಿ ಮುಖ್ಯ ಧಾರುಣಿ ಪರೊಳಂತ:ಪ್ರೇರಿಸುವುದು ಶಕ್ತಿ 4 ಲೋಕನಾಥ ನೀನಹುದೆಂಬ- ದ್ಯಾಕೆ ಗಾಥಾ ಈ ಕಪಟದ ಕೃತ್ಯ ಯಿಕ್ಕಡಿವುತ ಬೇಗ ಸಾಕೆನ್ನ ಭಕ್ತ ಪ- ರಾಕು ವೆಂಕಟನಾಥ 5
--------------
ತುಪಾಕಿ ವೆಂಕಟರಮಣಾಚಾರ್ಯ
ಸರಸಿಜನಾಭನೆ ಸೆರಗೊಡ್ಡಿ ಬೇಡುವೆ,ದುರಿತಗಳೆಲ್ಲ ತರಿದು ವರವಿತ್ತು ಕರುಣಿಸೊ ಪ ಕರುಣಾಸಾಗರ ನಿನ್ನ ಚರಣವ ನಂಬಿದೆಪರಮ ಪಾವನ ನಿನ್ನ ಶರಣನ ಪೊರೆಯೆಂದು 1 ಈಶವಿನುತ ನಿನ್ನ ವಾಸಿಯ ಪೊಗಳುವೆದಾಸ ಎಂದೆನ್ನನು ಗಾಸಿಮಾಡದೆ ಕಾಯೊ 2 ಬಾರಿಬಾರಿಗೆ ಬರುವ ದಾರಿದ್ರ್ಯ ದುಃಖದದೂರಗೈಸುವಂಥ ದಾರಿ ತೋರಿಸೆಂದು 3 ಕಂತುಪಿತನೆ ಎನ್ನ ಅಂತರಂಗದಿ ನಿನ್ನಸಂತತÀ ನೆನೆವಂತೆ ಚಿಂತನೆ ನಿಲಿಸೆಂದು 4 ಮಂಗಳಾತ್ಮಕನೆ ಶ್ರೀರಂಗವಿಠ್ಠಲ ಭು-ಜಂಗಶಯನ ನಿನ್ನ ಹಿಂಗದೆ ಭಜಿಪೆನು5
--------------
ಶ್ರೀಪಾದರಾಜರು