ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವ ಹರಿಸೊ ಕರುಣಾ ಜಲಧಿ ನೆಂಟ ನೀನಾಗಿ ಹೃನ್ಮಂಟಪದೊಳಗೆ ಪ. ಎಂಟಕ್ಷರ ನುತನೆ ಎಂಟು ರೂಪಾತ್ಮಕನೆ ಎಂಟು ಮೂರು ತತ್ವ ನಿರ್ಮಿಸಿಹನೆ ಎಂಟು ದಳದಲಿ ನಿಂತು ಎಂಟು ವಿಧ ಪ್ರೇರಿಸುತ ಎಂಟು ದಿಕ್ಪತಿಗಳಿಂ ಸೇವೆ ಕೊಳುತಿಹನೆ 1 ಎಂಟು ವಿಧ ಕರ್ತೃವೆ ಎಂಟು ಭಾಗ್ಯಯುತನೆ ಎಂಟು ಬಾಹು ಎಂಟು ಆಯುಧಧರನೆ ಎಂಟು ಪತ್ನಿಯರಿಂದ ಎಂಟನೇ ಅವತಾರಿ ನೆಂಟರೊಡನೆ ಜಗದ ಕಂಟಕರ ಸದೆದನೆ 2 ಎಂಟೆರಡು ಕಲೆಪೂರ್ಣ ವೆಂಕಟರಮಣನೆ ಎಂಟು ವಿಧ ಮದಗಳನು ಭೇದಿಸುತಲಿ ಎಂಟೆರಡು ಒಂದು ಇಂದ್ರಿಯ ನಿನ್ನ ಕಡೆ ಮಾಡಿ ಭಂಟನೆನಿಸೆನ್ನ ಶ್ರೀ ಗೋಪಾಲಕೃಷ್ಣವಿಠಲ3
--------------
ಅಂಬಾಬಾಯಿ
ಹರಿಯೆ ಸರ್ವೋತ್ತಮ ಪರದೈವವೆಂತೆಂಬ ಮರುತ ಮತವ ಸಾರಿರೊ ಪ. ಗರುವಿಕೆಯನೆ ಬಿಟ್ಟು ಪರಮತವನೆ ಸುಟ್ಟು ಹರಿಯ ಸೇವಕರಾಗಿರೊ | ಈ ಜಗದೊಳು ಅ.ಪ. ಪಂಚ ಭೇಧವ ತಿಳಿದು ಪಂಚೇಂದ್ರಿಯವ ಸೆಳೆದು ಪಂಚ ಮೂರ್ತಿಯ ಭಜಿಸಿರೊ ಪಂಚ ಸಂಸ್ಕಾರದಿ ಪಂಚಯಜ್ಞವ ರಚಿಸಿ ಪಂಚ ಮಾರ್ಗವ ಸಾರಿರೊ | ವೈರಾಗ್ಯದಿ 1 ಎಂಟು ಮದಗಳನಳಿದು ಎಂಟು ಮೂರ್ತಿಯ ತಿಳಿದು ಎಂಟು ದಳದಿ ಕಾಣಿರೊ ಎಂಟು ಕರ್ತೃತ್ವವ ಎಂಟು ತತ್ವದಿ ಮಾಳ್ಪ ಎಂಟಕ್ಷರನ ಪಾಡಿರೊ | ಕೊಂಡಾಡಿರೊ 2 ಮೂರು ಗುಣಗಳಿಂದ ಮೂರು ಮಾಳ್ಪ ಜಗವ ಮೂರು ರೂಪವ ನೆನೆಯಿರೊ ಮೂರು ಮೂರು ಭಕ್ತಿ ಮೂರು ಮಾರ್ಗದಿ ರಚಿಸಿ ಮೂರು ಲೋಕವ ಸಾರಿರೊ | ಮೂರನೆ ಗೆದ್ದು 3 ಕಂಡ ದೈವಗಳಿಗೆ ಮಂಡೆಯ ಬಾಗಿಸುತ ಬೆಂಡು ಆಗಲಿ ಬೇಡಿರೊ ಹಿಂಡು ದೈವಗಳಿಗೆ ಗಂಡ ಹರಿಯ ಭಜಿಸಿ ಗಂಡುಗಲಿಯಾಗಿರೊ | ಧೈರ್ಯವ ತಾಳಿ 4 ಗುರುಗಳಿಂದಲಿ ತತ್ವ ಸರ್ವಕಾಲದಿ ತಿಳಿದು ಉರ್ವಿಯೊಳಗೆ ಬಾಳಿರೊ ಸರ್ವಾಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ಸರ್ವಬಿಂಬನೆನ್ನಿರೊ | ಮೂಲರೂಪಿ 5
--------------
ಅಂಬಾಬಾಯಿ
ನೀ ಕೊಡೆ ನಾ ಬಿಡೆ ಕೇಳಯ್ಯ-ಹರಿ-|ಗೋಕುಲಪತಿಗೋವಿಂದಯ್ಯಪನೋಡುವೆ ನಿನ್ನನು ಪಾಡುವೆ ಗುಣಗಳ |ಕಾಡುವೆ ಬೇಡುವೆ ನಾಡೊಳಗೆ ||ಮೋಡಿಯ ಬಿಡು ಕೊಡು ಮೊದಲಿಗೆ ಬಡ್ಡಿಯ |ಕಾಡೊಳು ತುರುಗಳ ಕಾಯ್ದರಸನೆಹರಿ1ಎಂಟಕ್ಷರವಿವೆ ದ್ವಯಸಾಕ್ಷಿಗಳಿವೆ |ಗಂಟಿಗೆ ಮೋಸವೆ ದಾಸರಿಗೆ ||ಎಂಟುಂಟೆನಿಸುವೆ ಬಂಟರ ಬಾಯಲಿ |ತುಂಟತನವ ಬಿಡು ತುಡುಗರರಸೆ 2ಅಪ್ಪನೆ ಅಯ್ಯನೆ ಅಮರರಿಗೊಲಿದನೆ |ಸರ್ಪನೆ ಮೇಲೆ ಮಲಗಿಪ್ಪವನೆ |ಒಪ್ಪಿಸಿಕೊಟ್ಟರೆಪುರಂದರವಿಠಲನೆ |ಒಪ್ಪವ ತೋರುವೆ ಒಡೆಯನಿಗೆ 3
--------------
ಪುರಂದರದಾಸರು